ಕೋಷ್ಠಕ; ಅಂಗನವಾಡಿ ಕೇಂದ್ರಗಳು ನಡೆಯುತ್ತಿರುವ ಸ್ಥಳ:

ಸ್ಥಳ ಸಂಖ್ಯೆ ಪ್ರಮಾಣ(%)
ಊರಿನ ಹೊರಗೆ ೧೦ ೧೭.೮
ಊರಿನ ಮಧ್ಯದಲ್ಲಿ ೩೭ ೬೬.೧
ದಲಿತರ ಕೇರಿಯಲ್ಲಿ ೦೩ ೫.೩
ದೇವಸ್ಥಾನ ೦೪ ೭.೨
ಮಸೀದಿ ೦೨ ೩.೬
ಒಟ್ಟು ೫೬ ೧೦೦.೦೦

ಮಕ್ಕಳ ಶೈಕ್ಷಣಿಕ ಕಲಿಕೆಗೆ ಶಾಲೆ ನೆಲೆಸಿರುವ ಸ್ಥಳ ಪ್ರಮುಖವಾಗುತ್ತದೆ. ಅದೇ ರೀತಿ ಮಕ್ಕಳ ಕಲಿಕಾ ಕೇಂದ್ರಗಳಾದ ಅಂಗನವಾಡಿಗಳು ಎಲ್ಲಿ ನೆಲೆಸಿವೆ ಎನ್ನುವುದನ್ನು ಮೇಲಿನ ಕೋಷ್ಠಕ ಸೂಚಿಸುತ್ತದೆ. ಊರಿನ ಹೊರಗೆ ಇರುವ ಅಂಗನವಾಡಿಗಳು ಶೇ. ೧೭.೮ ಆದರೆ ಊರ ಮಧ್ಯದಲಿ ಶೇ. ೬೬.೧ರಷ್ಟು ಇರುವುದು ತಿಳಿದುಬರುತ್ತದೆ. ಹೆಚ್ಚಿನ ಅಂಗನವಾಡಿಗಳು ಊರಿನ ಮಧ್ಯಭಾಗದಲ್ಲಿರುವುದರಿಂದ ಮಕ್ಕಳು ಕೇಂದ್ರಗಳಿಗೆ ಬರುವುದಕ್ಕೆ ಸಹಕಾರಿಯಾಗುತ್ತದೆ. ಹಾಗೆಯೇ ದಲಿತರ ಕೇರಿಗಳಲ್ಲಿ ಕಂಡುಬಂದಿರುವ ಕೇಂದ್ರಗಳ ಸಂಖ್ಯೆ ಕೇವಲ ೫.೩ ಮಾತ್ರ. ಹಾಗೆಯೇ ಶೇ. ೭.೨ರಷ್ಟು ಪ್ರಮಾಣದ ಕೇಂದ್ರಗಳು ಊರಿನ ದೇವಸ್ಥಾನಗಳಲ್ಲಿಯೂ ಶೇ. ೩.೬ರಷ್ಟು ಕೇಂದ್ರಗಳು ಮಸಿದಿಗಳಲ್ಲಿಯೂ ನಡೆಯುತ್ತಿವೆ. ಇದರಿಂದ ಮಕ್ಕಳಿಗೆ ಮತ್ತು ಕಾರ್ಯಕರ್ತೆಯರಿಗೆ ಹಲವು ಸಂದರ್ಭಗಳಲ್ಲಿ ಹಲವು ರೀತಿಯಲ್ಲಿ ತೊಂದರೆಯಾಗಬಹುದು.

ಕೋಷ್ಠಕ; ಕೇಂದ್ರದ ಕಟ್ಟಡ ಸರಕಾರಿ/ಖಾಸಗಿ/ಇತರೆ:

ವಿವರ ಸಂಖ್ಯೆ ಪ್ರಮಾಣ(%)
ಸರಕಾರಿ ೧೦ ೧೭.೮
ಖಾಸಗಿ ೩೭ ೬೬.೨
ಬಾಡಿಗೆ ೦೩ ೫.೩
ದೇವಸ್ಥಾನ/ಮಸೀದಿ ೦೬ ೧೦.೭
ಒಟ್ಟು ೫೬ ೧೦೦.೦೦

ಸುಮಾರು ೫೬ ಕೇಂದ್ರಗಳಲ್ಲಿ ಸರಕಾರಿ ಕಟ್ಟಡಗಳನ್ನು ಹೊಂದಿರುವ ಕೇಂದ್ರಗಳ ಪ್ರಮಾಣ ಶೇ. ೧೭.೮ ಆಗಿದೆ. ಅದೇ ಖಾಸಗಿ ಸ್ಥಳದಲ್ಲಿ ನಡೆಯುತ್ತಿರುವ ಕೇಂದ್ರ ಗಳು ಶೇ.೬೬.೨ರಷ್ಟಾಗಿದೆ. ಇವುಗಳು ಬಾಡಿಗೆಯನ್ನೇನು ಬಯಸುತ್ತಿಲ್ಲ. ಆದರೂ ಸರಕಾರದ ಕಟ್ಟಡಗಳು ಹೆಚ್ಚಾಗಬೇಕಾಗುತ್ತದೆ. ಅದೇ ರೀತಿ ಬಾಡಿಗೆ ಕಟ್ಟಡಗಳು ಮತ್ತು ದೇವಸ್ಥಾನ ಹಾಗೂ ಮಸೀದಿಗಳಲ್ಲಿಯೂ ಕೇಂದ್ರಗಳು ನಡೆಯುತ್ತಿರುವುದ ರಿಂದ ಮಕ್ಕಳಿಗೆ ತೊಂದರೆಯಾಗುವ ಸಂದರ್ಭಗಳು ಹೆಚ್ಚು. ಈ ತೊಂದರೆಯನ್ನು ಭಾಗ-೨ರ ಎರಡನೇ ಗೋಷ್ಠಿಯಲ್ಲಿ ಚರ್ಚಿಸಲಾಗಿದೆ.

ಕೋಷ್ಠಕ; ಕಟ್ಟಡದ ಗುಣಮಟ್ಟ:

ಗುಣಮಟ್ಟ ಸಂಖ್ಯೆ ಪ್ರಮಾಣ(%)
ಉತ್ತಮ ೨೦ ೩೫.೭
ಸಾಧಾರಣ ೨೭ ೪೮.೨
ಕಳಪೆ ೦೯ ೧೬.೧
ಒಟ್ಟು ೫೬ ೧೦೦.೦೦

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕೇಂದ್ರಗಳ ಕಾರ್ಯಕರ್ತರು ನೀಡಿರುವ ಮಾಹಿತಿಯ ಪ್ರಕಾರ ಅವರ ಕಟ್ಟಡದ ಸ್ಥಿತಿಯನ್ನು ಗಮನಿಸಿದರೆ ಉತ್ತಮ ಕಟ್ಟಡ ಗಳನ್ನು ಹೊಂದಿರುವ ಕೇಂದ್ರಗಳು ಶೇ. ೩೫.೭ರಷ್ಟು ಆಗಿದೆ. ಸಾಧಾರಣ ಮಟ್ಟದ ಕಟ್ಟಡಗಳು ಶೇ. ೪೮.೨ರಷ್ಟಿದ್ದು ಉಳಿದ ೧೬.೧ರಷ್ಟು ಕಳಪೆಯವಾಗಿವೆ. ಇವು ಚಾವಣೆ ಸರಿಯಾಗಿಲ್ಲದಿರುವುದು, ಗೋಡೆ ಸರಿಯಾಗಿಲ್ಲದಿರುವುದು, ಕಿಟಕಿ, ಬಾಗಿಲು ಸರಿಯಿಲ್ಲದಿರುವವುಗಳಾಗಿವೆ. ಇಲ್ಲಿ ಮಕ್ಕಳು ಕುಳಿತು ಅಕ್ಷರ ಕಲಿಯುವ ಸಂದರ್ಭದಲ್ಲಿ ಅಪಾಯಗಳು ಸಂಭವಿಸಬಹುದಾಗಿವೆ. ಅವಘಡ ಸಂಭವಿಸುವ ಮೊದಲು ಸುಸ್ಥಿರ ಗೊಳಿಸುವುದು ಸೂಕ್ತ

ಕೋಷ್ಠಕ; ಅಡಿಗೆ ಕೋಣೆ:

ವಿವರ ಸಂಖ್ಯೆ ಪ್ರಮಾಣ(%)
ಅಡಿಗೆ ಕೋಣೆ ಇದೆ ೨೦ ೩೫.೭
ಅಡಿಗೆ ಕೋಣೆ ಇಲ್ಲ ೩೬ ೬೪.೩
ಒಟ್ಟು ೫೬ ೧೦೦.೦೦

ಮೇಲಿನ ಕೋಷ್ಟಕದ ಪ್ರಕಾರ ಶೇ. ೩೫.೭ರಷ್ಟು ಕೇಂದ್ರಗಳಲ್ಲಿ ಮಾತ್ರ ಅಡಿಗೆ ಮಾಡಲು ಬೇರೆ ಕೊಠಡಿ ಇರುವುದಾಗಿ ತಿಳಿದುಬರುತ್ತದೆ. ಅದೇ ರೀತಿ ಶೇ.೬೪.೩ರಷ್ಟು ಕೇಂದ್ರಗಳಲ್ಲಿ ಅಡಿಗೆ ಕೋಣೆಯೇ ಇಲ್ಲ. ಅಂದರೆ ಬಹುಪಾಲು ಕೇಂದ್ರಗಳು ಅಡಿಗೆ ಕೋಣೆಯನ್ನು ಹೊಂದಿರುವುದಿಲ್ಲ. ಮಕ್ಕಳು ಕೂರುವ ಪರಿಸರ ಸ್ವಚ್ಚವಾಗಿರ ಬೇಕು. ಶುದ್ಧಗಾಳಿ ಹೊಂದಿರಬೇಕು. ಇದು ಮೂಲಭೂತ ಅಗತ್ಯವಾಗಿದೆ. ಆದರೆ ಮಕ್ಕಳು ಕೂರುವ ಸ್ಥಳದಲ್ಲಿ ಅಡಿಗೆ ಮಾಡುವುದರಿಂದ ಆ ಹೊಗೆ ಮಕ್ಕಳ ಶ್ವಾಸ ಕೋಶದ ಕಾಯಿಲೆಗಳಿಗೆ ನಾಂದಿಯಾಗಬಹುದು. ಇದರಿಂದ ಕೇಂದ್ರಗಳಿಗೆ ಅಡಿಗೆ ಕೋಣೆ ನೀಡುವುದು ಅಗತ್ಯವಾಗಿದೆ.

ಕೋಷ್ಠಕ; ಅಡಿಗೆಗೆ ಬಳಸುವ ಇಂಧನ:

ವಿವರ ಸಂಖ್ಯೆ ಶೇಕಡಾ
ಕಟ್ಟಿಗೆ ೫೬ ೧೦೦.೦೦
ಗ್ಯಾಸ್ ೦೦ ೦೦.೦೦
ಒಟ್ಟು ೫೬ ೧೦೦.೦೦

ಮೇಲಿನ ಕೋಷ್ಟಕವನ್ನು ಗಮನಿಸಿದಾಗ ಕೇಂದ್ರಗಳಲ್ಲಿ ನೂರಕ್ಕೆ ನೂರರಷ್ಟು ಅಂದರೆ ಎಲ್ಲಾ ಕೇಂದ್ರಗಳಲ್ಲಿಯೂ ಮಕ್ಕಳ ಆಹಾರ ತಯಾರಿಸಲು ಬಳಸುವ ಇಂಧನ ಕಟ್ಟಿಗೆಯಾಗಿದೆ. ಅಂದರೆ ಕೇಂದ್ರಕ್ಕೆ ಸರಬರಾಜಾಗುವುದೇ ಕಟ್ಟಿಗೆಯಾದ್ದರಿಂದ ಅದನ್ನೇ ಬಳಸಬೇಕಾಗುತ್ತದೆ. ಕೋಷ್ಠಕ-೫ರ ಪ್ರಕಾರ ಶೇ.೬೪.೩ರಷ್ಟು ಕೇಂದ್ರಗಳಿಗೆ ಅಡಿಗೆ ಕೋಣೆ ಇರುವುದಿಲ್ಲ. ಇಲ್ಲಿ ಕಟ್ಟಿಗೆಯಿಂದ ಹೊರಬರುವ ಹೊಗೆ ಮಕ್ಕಳ ಆರೋಗ್ಯದ ಮೇಲೆ ಅಂದರೆ ಶ್ವಾಸಕೋಶ ಮತ್ತು ಕಣ್ಣುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದನ್ನು ತಪ್ಪಿಸುವ ಅಗತ್ಯವಿದೆ.

ಕೋಷ್ಠಕ; ಕೇಂದ್ರ ಹೊಂದಿರುವ ಸೌಲಭ್ಯಗಳು:

ವಿವರ ಸಂಖ್ಯೆ ಶೇಕಡಾ
ನೀರು ೨೪ ೪೨.೮
ವಿದ್ಯುತ್ ೦೮ ೧೪.೨
ಪೀಟೋಪಕರಣ ೧೫ ೨೬.೮
ಆಟದ ಸಾಮಗ್ರಿ ೫೬ ೧೦೦.೦೦
ತೂಕದ ಯಂತ್ರ ೫೬ ೧೦೦.೦೦

ಕೋಷ್ಟಕ-೬ರಲ್ಲಿ ಕೆಲವು ಪ್ರಮುಖ ಮೂಲಭೂತ ಸೌಲಭ್ಯಗಳ ದೊರೆಯುವಿಕೆ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ನೀಡಲಾಗಿದೆ. ಶೇ. ೪೨.೮ರಷ್ಟು ಕೇಂದ್ರಗಳು ಮಾತ್ರ ನೀರಿನ ಸೌಲಭ್ಯಗಳನ್ನು ಹೊಂದಿವೆ. ಉಳಿದ ಶೇ.೫೭.೨ರಲ್ಲಿ ನೀರಿನ ಸೌಲಭ್ಯವೇ ಇಲ್ಲದಾಗಿದೆ. ಮಕ್ಕಳ ಶುಚಿತ್ವಕ್ಕೆ ಮತ್ತು ಕುಡಿಯಲು ಅಗತ್ಯವಾದ ನೀರು ದೊರೆಯುವಂತಾಗಬೇಕು. ಹಾಗೆಯೇ ವಿದ್ಯುತ್ ಇರುವ ಕೇಂದ್ರಗಳು ಶೇ. ೧೪.೨ರಷ್ಟಾಗಿದೆ. ಅಂದರೆ ಶೇ. ೮೫.೮ರಷ್ಟು ಕೇಂದ್ರಗಳು ವಿದ್ಯುತ್‌ನಿಂದ ವಂಚಿತ ವಾಗಿವೆ. ಇನ್ನು ಕೇಂದ್ರದಲ್ಲಿ ಪೀಠೋಪಕರಣಗಳು ಶೇ. ೨೬.೮ರಲ್ಲಿ ಕಂಡು ಬರುತ್ತವೆ. ಹಾಗೆಯೇ ಸರಕಾರವು ವಿತರಿಸುವ ಮಕ್ಕಳ ಆಟದ ಸಾಮಗ್ರಿ ಮತ್ತು ಮಕ್ಕಳ ತೂಕದ ಯಂತ್ರಗಳು ಮಾತ್ರ ಶೇ. ೧೦೦ರಷ್ಟು ಎಲ್ಲಾ ಕೇಂದ್ರಗಳಲ್ಲಿ ಇರುವುದಾಗಿ ಕಂಡುಬರುತ್ತದೆ.

ಕೋಷ್ಠಕ; ಮಕ್ಕಳ ಆರೋಗ್ಯ ತಪಾಸಣೆ:

ವಿವರ ಸಂಖ್ಯೆ ಶೇಕಡಾ
ನಡೆಯುತ್ತಿದೆ ೩೦ ೫೩.೬
ನಡೆಯುತ್ತಿಲ್ಲ ೨೬ ೪೬.೪
ಒಟ್ಟು ೫೬ ೧೦೦.೦೦

ಸರಕಾರದ ನಿಯಮದ ಪ್ರಕಾರ ಪ್ರತಿ ಮೂರು  ತಿಂಗಳಿಗೊಮ್ಮೆ ಅಂಗನವಾಡಿ ಕೇಂದ್ರಗಳಿಗೆ ಸರಕಾರಿ ವೈದ್ಯಾಧಿಕಾರಿಗಳಿಂದ ಮಗುವಿನ ಸಂಪೂರ್ಣ ಆರೋಗ್ಯ ತಪಾಸಣೆಯಾಗಬೇಕು. ಆದರೆ ಮೇಲಿನ ಕೋಷ್ಠಕವನ್ನು ಗಮನಿಸಿದರೆ ಶೇ. ೫೩.೬ರಷ್ಠು ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿರುವುದಾಗಿ ಗೊತ್ತಾಗುತ್ತದೆ. ಇವರಲ್ಲಿ ವೈದ್ಯರಿಂದ ತಪಾಸಣೆ ಯಾವಕೇಂದ್ರದಲ್ಲಿಯೂ ಆಗಿರುವುದು ವರದಿ ಯಾಗಿಲ್ಲ. ತಪಾಸಣೆ ಮಾಡುವವರು ಆರೋಗ್ಯ ಕಾರ್ಯಕರ್ತೆಯರು ಅಂದರೆ ಎ.ಎನ್.ಎಂಗಳು. ಇವರು ವೈದ್ಯರಲ್ಲ. ಆದರೂ ತಮ್ಮ ಜ್ಞಾನದ ಮಿತಿಯಲ್ಲಿ ಆರೋಗ್ಯ ತಪಾಸಣೆ ಮಾಡಬಲ್ಲರು. ಆದರೆ ಶೇ. ೪೬.೪ರಲ್ಲಿ ಆರೋಗ್ಯ ತಪಾಸಣೆಯೇ ನಡೆಯುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಅಂದರೆ ಸರಕಾರದ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿಲ್ಲದಿರುವುದು ಗೊತ್ತಾಗುತ್ತದೆ.

ಕೋಷ್ಟಕ; ಅಂಗನವಾಡಿ ಕೇಂದ್ರದ ಮಾಹಿತಿ:

ವಿವರಗಳು   ಪ್ರಮಾಣ ಶೇಕಡಾವಾರು
ಅಡಿಗೆ ಸಹಾಯಕರು ಇದ್ದಾರೆ ೫೬ ೧೦೦.೦೦
ಇಲ್ಲ ೦೦ ೦೦.೦೦
ಬಾಲವಿಕಾಸ ಸಮಿತಿ ಇದೆ ೫೬ ೧೦೦.೦೦
ಇಲ್ಲ ೦೦ ೦೦.೦೦
ಆಹಾರದ ಪ್ರಮಾಣ ಸಾಕಾಗುತ್ತದೆ ಹೌದು ೩೬ ೬೪.೩
ಇಲ್ಲ ೨೦ ೩೫.೭
ಕೆಲಸದ ಭದ್ರತೆ ಇದೆ ೦೦ ೦೦.೦೦
ಇಲ್ಲ ೫೬ ೧೦೦.೦೦
ತಿಂಗಳಿಗೆ ಸರಿಯಾಗಿ ವೇತನ ಸಿಗುತ್ತದೆ ೦೦ ೦೦.೦೦
ಸಿಗುವುದಿಲ್ಲ ೫೬ ೧೦೦.೦೦

ಮೇಲಿನ ಕೋಷ್ಟಕವನ್ನು ಗಮನಿಸಿದಾಗ ಎಲ್ಲಾ ೫೬ ಅಂಗನವಾಡಿಗಳಲ್ಲಿ ಅಡಿಗೆ ಸಹಾಯಕರು ಇದ್ದು ಮಕ್ಕಳ ಅಡಿಗೆಗೆ ಸಹಕಾರಿಯಾಗಿರುವುದು ತಿಳಿಯುತ್ತದೆ. ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರು ರಚಿಸಬೇಕಾಗಿರುವ ಬಾಲವಿಕಾಸ ಸಮಿತಿಯನ್ನು ಎಲ್ಲಾ ಕೇಂದ್ರಗಳು ರಚಿಸಿರುವುದಾಗಿ ತಿಳಿಯುತ್ತದೆ. ೬ವರ್ಷದೊಳಗಿನ ಮಕ್ಕಳು, ಗರ್ಬಿಣಿ ಮತ್ತು ಬಾಣಂತಿಯರ ಪೌಷ್ಠಿಕ ಮಟ್ಟವನ್ನು ಸುಧಾರಿಸುವ ಮತ್ತು ಅಪೌಷ್ಠಿಕತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಬಾಲವಿಕಾಸ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿರುತ್ತದೆ. ಇದರ ಪೂರ್ಣವೆಚ್ಚವನ್ನು ರಾಜ್ಯಸರಕಾರವೇ ಭರಿಸುತ್ತದೆ.

ಅದೇ ರೀತಿ ಕೇಂದ್ರಗಳಿಗೆ ಆಹಾರದ ಪ್ರಮಾಣ ಸಾಕಾಗುತ್ತಿದೆಯೆ? ಎನ್ನುವ ಪ್ರಶ್ನೆಗೆ ಶೇ.೬೪.೩ರಷ್ಟು ಕೇಂದ್ರಗಳಲ್ಲಿ ಸಾಕಾಗುತ್ತದೆ ಎಂತಲೂ ಉಳಿದ ಶೇ. ೩೫.೭ರಷ್ಟು ಕೇಂದ್ರಗಳಲ್ಲಿ ನೀಡುತ್ತಿರುವ ಆಹಾರ ಸಾಕಾಗುತ್ತಿಲ್ಲವೆಂತಲೂ ತಿಳಿಸಿರುವುದು ಕಂಡುಬರುತ್ತದೆ. ಚರ್ಚೆಯ ಸಂದರ್ಭದಲ್ಲಿಯೂ ಕೂಡ ಆಹಾರ ಸರಬರಾಜಿನಲ್ಲಿ ವ್ಯತ್ಯಾಸದಿಂದ ಕೂಡಿರುವುದನ್ನು ತಿಳಿಸಿರುತ್ತಾರೆ. ಹಾಗೆಯೇ ಕೆಲಸದ ಭದ್ರತೆ ಇಲ್ಲದಿರುವುದಾಗಿ ಎಲ್ಲರೂ ತಿಳಿಸಿರುವುದನ್ನು ನೋಡಬಹುದು. ಇದರಿಂದ ಮಾಡುವ ಕೆಲಸದಲ್ಲಿ ಆಸಕ್ತಿ ಕುಂದುವ ಸಾಧ್ಯತೆ ಮತ್ತು ಮಕ್ಕಳ ಸೌಲಭ್ಯಗಳನ್ನು ದುರ್ಬಳಕೆ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗೆಯೇ ತಿಂಗಳಿಗೆ ನೀಡುವ ಸಂಭಾವನೆಯೂ ಕೂಡ ಸರಿಯಾಗಿ ಬರುವುದಿಲ್ಲ ಎಂದು ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ತಿಳಿಸಿರುತ್ತಾರೆ.

ಒಟ್ಟಾರೆ ಗ್ರಾಮೀಣ ಭಾಗದ ಆರು ತಿಂಗಳಿಂದ ಮೂರು ವರ್ಷದ ಎಲ್ಲಾ  ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಇದನ್ನು ತಪ್ಪಿಸಲು ರೂಪಿತ ವಾಗಿರುವ ಯೋಜನೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಹಣವನ್ನು ವಿನಿಯೋಗಿಸುತ್ತಾ ಬಂದಿವೆಯಾದರೂ, ಯೋಜನೆಯ ನಿರ್ವಹಣೆಗೆ ಇನ್ನಷ್ಟು ಮಹತ್ವವನ್ನು ನೀಡಬೇಕಾಗಿರುವುದು ತಿಳಿದುಬರುತ್ತದೆ. ಕಾರ್ಯಕ್ರಮದ ನಿರ್ವಹಣೆಗಾಗಿ ರೂಪಿತವಾಗಿರುವ ವ್ಯವಸ್ಥೆಯಲ್ಲಿ ಮೇಲಿನ ಹಂತದ ಅಧಿಕಾರಿಗಳು ಖಾಯಂ ನೌಕರರಾಗಿದ್ದಾರೆ. ಕೆಳಹಂತದಲ್ಲಿ ಕಾರ್ಯನಿರ್ವಹಿಸುವ ಮತ್ತು ನಿರ್ಧಿಷ್ಟ ಕಾರ್ಯಸಾಧನೆ ಯನ್ನು ಮಾಡುವವರು(ಅಂಗನವಾಡಿ ಕಾರ್ಯಕರ್ತೆಯರು) ಖಾಯಂ ನೌಕರರಲ್ಲ. ಅವರಿಗೆ ನೀಡುವ ಸಂಭಾವನೆ ಗೌರವ ಸಂಭಾವನೆಯಾಗಿರುತ್ತದೆ ಮತ್ತು ಹೆಚ್ಚು ಕೆಲಸದ ಜವಾಬ್ದಾರಿ ಉಳ್ಳವರಾಗಿದ್ದಾರೆ. ಮೇಲಾಗಿ ಈ ಕೆಲಸವನ್ನು ನಿರ್ವಹಿಸುವವರೆಲ್ಲ ಮಹಿಳೆಯರೇ ಆಗಿರುವುದರಿಂದ ಖಾಯಮಾತಿಗೆ ಒತ್ತಾಯಿಸಿದರೆ ಇವರನ್ನು ಹ್ಯಾಗೋ ಸಂತೈಸುತ್ತಾ ಬಂದಿರುವುದು ಗೊತ್ತಾಗುತ್ತದೆ. ಅದೇ ಇವರ ಜಾಗದಲ್ಲಿ ಪುರುಷರು ಇದ್ದಿದ್ದರೆ ದಿನನಿತ್ಯ ಹೋರಾಟ ಇಲ್ಲವೇ ರಾಜಕೀಯ ಮಾಡಿ ಖಾಯಮಾತಿ ನಡದೇ ತೀರುತ್ತಿತ್ತು. ಇಲ್ಲಿಯೂ ಮಹಿಳೆಯರಿಗೆ ತಾರತಮ್ಯ ಮಾಡಿರುವುದು ಗೊತ್ತಾಗುತ್ತದೆ. ಹಾಗೇಯೇ ಅಂಗನವಾಡಿಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಸುಸಜ್ಜಿತ ಕಟ್ಟಡ, ಪ್ರತ್ಯೇಕ ಅಡಿಗೆ ಕೋಣೆ, ನೀರು, ಶೌಚಾಲಯ, ಆಟೋಪಕರಣ, ಪೀಠೋಪಕರಣ ಇತ್ಯಾದಿಗಳನ್ನು ಅಗತ್ಯಕ್ಕೆ ಸರಿಯಾಗಿ ದೊರಕಿಸಿ ಕೊಡಬೇಕಾದ ಅಗತ್ಯವಿದೆ.

೨೦೦೧ರ ಜನಗಣತಿ ಪ್ರಕಾರ ಕೆಲವು ಅಗತ್ಯ ಅಂಕಿ ಅಂಶಗಳ ಮಾಹಿತಿ:

ವಿವರಗಳು–     ಭಾರತ                ಕರ್ನಾಟಕ              ಬಳ್ಳಾರಿ                ಹೊಸಪೇಟೆ

೨೦೦೧ರ ಜನಗಣತಿ

ಪ್ರಕಾರ                

ಒಟ್ಟು ಜನಸಂಖ್ಯೆ          ೧೦೨೮೭೩೭೪೩೬          ೫೨೮೫೦೫೬೨   ೨೦೨೭೧೪೦               ೩೭೪೯೪೯

(೨೦೦೧)

ಪುರುಷರು                  ೫೩೨೧೫೬೭೭೨  ೨೬೮೯೮೯೧೮    ೧೦೨೯೭೧೪               ೧೮೯೬೭೪

ಮಹಿಳೆಯರು              ೪೯೬೪೫೩೫೫೬           ೨೫೯೫೧೬೪೪             ೯೯೭೪೨೬                  ೧೮೫೨೭೫

ಗ್ರಾಮೀಣ ಜನಸಂಖ್ಯೆ               ೭೪೨೪೯೦೬೩೯            ೩೪೮೮೯೦೩೩              ೧೩೨೦೨೯೦                ೧೫೩೪೯೯

ನಗರ ಜನಸಂಖ್ಯೆ          ೨೮೬೧೧೯೬೮೯            ೧೭೯೬೧೫೨೯              ೭೦೬೮೫೦                 ೨೨೧೪೫೦

ಜನಸಾಂದ್ರತೆ              ೩೨೪              ೨೭೬              ೨೪೦             ೪೧೫

(ಪ್ರತಿ ಚ.ಕಿ.ಮಿ.ಗೆ)

ಲಿಂಗಾನುಪಾತ            ೯೩೩              ೯೬೫             ೯೬೯              ೯೭೭

(ಮಹಿಳೆಯರು/

೧೦೦೦ ಪುರುಷರಿಗೆ)

ದಶಕವಾರು ಜನಸಂಖ್ಯಾ                     ೨೧.೫೪          ೧೭.೫            ೨೨.೪             ೧೯.೮

ಬೆಳವಣಿಗೆ ಪ್ರಮಾಣ (ಶೇ.)

(೧೯೯೧-೨೦೦೧)

ಪರಿಶಿಷ್ಠ ಜಾತಿ             ೧೬೬೬೩೫೭೦೦           ೧೬.೨             ೧೮.೫            ೨೦.೨

ಜನಸಂಖ್ಯೆ (ಶೇ.)

ಪರಿಶಿಷ್ಠ ಪಂಗಡದ                   ೮೪೩೨೬೨೪೦             ೬.೬              ೧೮.೦            ೧೬.೧

ಜನಸಂಖ್ಯೆ (ಶೇ.)

ಸಾಕ್ಷರತೆ (ಮಹಿಳೆಯರು)           ೫೪.೧೬          ೫೬.೯             ೪೫.೩            ೫೦.೦

(ಶೇ.)

ಸಾಕ್ಷರತೆ (ಪುರುಷರು)               ೭೫.೮೫          ೭೬.೧             ೬೯.೨             ೭೧.೬

(ಶೇ.)

ಒಟ್ಟು ಸಾಕ್ಷರತಾ                    ೬೫.೩೮           ೬೬.೬            ೫೭.೪            ೬೦.೯

ಪ್ರಮಾಣ(ಶೇ.)

ಮುಖ್ಯ ಕೆಲಸಗಾರರು (ಶೇ.)                  ೭೭.೮             ೩೬.೬             ೩೯.೫             ೩೮.೪

ಅಂಚಿನ ಕೆಲಸಗಾರರರು (ಶೇ.)     ೨೨.೨             ೭.೯               ೫.೯               ೪.೧

ಒಟ್ಟು ಹಳ್ಳಿಗಳ ಸಂಖ್ಯೆ                 –                  ೨೯೪೦೬                   ೫೫೪             ೭೪

ಕಚ್ಚಾ ಜನನ ಪ್ರಮಾಣ              ೨೪.೮            ೨೨.೧೦           ೨೬.೪               –

ಕಚ್ಚಾ ಮರಣ ದರ                   ೮.೯               ೭.೫              ೭.೨                 –

ಆಧಾರ:          ೧.       ಸೆನ್ಸಸ್ ಆಫ್ ಇಂಡಿಯಾ ೨೦೦೧, ಡಿಸ್ಟ್ರಿಕ್ಟ್ ಪಾಪುಲೇಶನ್ ಬುಕ್‌ಲೆಟ್,                     ಬಳ್ಳಾರಿ

೨.       ಕರ್ನಾಟಕ ಮಾನವ ಅಭಿವೃದ್ಧಿ ವರದಿ ೨೦೦೫

೩.       ವಿಮೆನ್ ಆಂಡ್ ಮೆನ್ ಇನ್ ಇಂಡಿಯಾ-೨೦೦೪, ಮಿನಿಸ್ಟ್ರಿ ಆಫ್                                      ಸ್ಟ್ಯಾಟಿಸ್ಟಿಕ್ಸ್ ಆಂಡ್ ಪ್ರೋಗ್ರಾಂ ಇಂಪ್ಲಿಮೆಂಟೇಷನ್, ಗೌರ‍್ನಮೆಂಟ್                                       ಆಫ್ ಇಂಡಿಯಾ, ನ್ಯೂಡೆಲ್ಲಿ

೪.       ಫ್ಯಾಮಿಲಿ ವೆಲ್‌ಫೇರ್ ಸ್ಟ್ಯಾಟಿಸ್ಟಿಕಲ್ಸ್ ಇನ್ ಇಂಡಿಯಾ-೨೦೦೬, ಮಿನಿಸ್ಟ್ರಿ                            ಆಫ್ ಹೆಲ್ತ್ ಆಂಡ್ ಫ್ಯಾಮಿಲಿ ವೆಲ್‌ಫೇರ್, ಗೌರ‍್ನಮೆಂಟ್ ಆಫ್                                ಇಂಡಿಯಾ, ನ್ಯೂಡೆಲ್ಲಿ