ಬೋದವ ಕೂಡು ಗುರುದೇವ ಈ ಮನಕೆ
ಮಾಯಕವಿಧ್ರಭವ ಬಾಧೆಯೊಳ ದುಡಿಯುವೆ
ಮೋಕ್ಷದ ಮಾರ್ಗವ ತೋರಿಸೊ ಗುರುವೆ
ಶಿವಯೋಗದ ಸಾರವ ಸವಿಯುವೆ ಮೋಕ್ಷದ
ಮಾರ್ಗವ ತೋರಿಸೊ ಗುರುದೇವ ಶಂಭುಲಿಂಗನ
ಅನುಭವ ಪಡೆದು ಶಿವಯೋಗಿಗಳ ಚರಣವ
ಸ್ಮರಿಸುವೆ ಮೋಕ್ಷದ ಮಾರ್ಗವ ತೋರಿಸೋ ಗುರುವೆ
ಶಿವಶರಣರ ಪಾದವ ಸ್ಮರಿಸುವೆ ಮೋಕ್ಷದ ಮಾರ್ಗವ
ತೋರಿಸೋ ಗುರುದೇವ
ಧರೆಯೊಳು ಮೆರೆಯುವ ಗುರುಮಲ್ಲೇಶನ
ಅಂಗವಾ ಲಿಂಗದೊಳ್ ಬೆರಸೋ ಗುರುದೇವ || ಬೋದವ ||