ಹೆಸರು: ವನಜಾಕ್ಷಿ
ಊರು: ಕಿಕ್ಕೇರಿ

 

ಪ್ರಶ್ನೆ: ನನಗೆ ೨೧ ವರ್ಷ. ಮದುವೆ ಆಗಿ ವರ್ಷ ಮಕ್ಕಳಿದ್ದಾರೆ. ಈಗ ಹೆರಿಗೆಯಾಗಿ ತಿಂಗಳು ಆಯಿತು ಮಕ್ಕಳು ಬೇಡ ಅಂತ ಆಪರೇಷನ್ ಆಗಿದೆ. ಆಪರೇಷನ್ ಆಗಿ ೨೦ ದಿನದಲ್ಲಿ ನಾವು ಗಂಡ ಹೆಂಡತಿ ಒಂದು ಆದೆವು. ನನಗೆ ಈಗ ತುಂಬಾ ಭಯ ಆಗುತ್ತಿದೆ. ಆಪರೇಷನ್ ಆಗಿ ದಂಪತಿಗಳು ಆರು ತಿಂಗಳು ಒಂದಾಗಬಾರದಂತೆ. ಇದರಿಂದ ನನಗೆ ಏನಾದರೂ ತೊಂದರೆ ಇದೆಯೇ ಎಂದು ತಿಳಿಸಿರಿ ನನಗೆ ತುಂಬಾ ಭಯ ಆಗಿದೆ ನನ್ನ ಪ್ರಶ್ನೆಗೆ ಉತ್ತರ ತಿಳಿಸಿ ನಿಮ್ಮ ಉತ್ತರಕ್ಕೆ ಕಾಯುತ್ತಿರುತ್ತೇನೆ.

ಉತ್ತರ: ಮಕ್ಕಳಾಗದಂತೆ ತಡೆಯಲು ಮಹಿಳೆಯರಿಗೆ ಅಂಡನಳಿಕೆ ಕೊಯ್ತೆಗೆತ ಮಾಡಲಾಗುತ್ತದೆ. ಇದರಲ್ಲಿ ಅಂಡನಳಿಕೆಗಳನ್ನು ಮುಚ್ಚಿ ಹಾಕಲಾಗುತ್ತದೆ. ಆದ್ದರಿಂದ ಮುಚ್ಚಿ ಹಾಕಿದ ತಿಂಗಳಿಂದಲೇ ಯಶಸ್ವಿಯಾಗುತ್ತದೆ. ಆದ್ದರಿಂದ ಅದೇ ತಿಂಗಳಿಂದಲೇ ಸಂಭೋಗ ಮಾಡಬಹುದು. ಹೆದರಬೇಕಾಗಿಲ್ಲ. ಆದರೆ ಪುರುಷರಿಗೆ ಮಾಡುವ ವಿರ್ಯ ನಳಿಕೆ ಕೊಯ್ತೆಗೆತದ ನಂತರ ೩ ತಿಂಗಳವರೆಗೆ ಸಂಭೋಗ ಮಾಡುವಂತಿಲ್ಲ. ಏಕೆಂದರೆ ವಿರ್ಯಾಣುಗಳು ವೀರ್ಯಕೋಶದಲ್ಲೇ ಶೇಖರಣೆ ಆಗಿರುತ್ತದೆ. ಮೂರು ತಿಂಗಳ ನಂತರ ವೀರ್ಯ ಪರೀಕ್ಷೆ ಮಾಡಿಸಿ ವಿರ್ಯ ಪರೀಕ್ಷೆಯಲ್ಲಿ ವೀರ್ಯಾಣುಗಳು ಇಲ್ಲವೆಂದು ಖಾತರಿ ಆದ ನಂತರವೇ ಸಂಭೋಗ ಮಾಡಬೇಕು. ಅಲ್ಲಿಯವರೆಗೆ ನಿರೋಧ್ ಬಳಸಬೇಕು.