ಹೆಸರು: ಲೋಕೇಶ್ವರಿ
ಊರು: ನಂಜನಗೂಡು.

ಪ್ರಶ್ನೆ: ನೆಚ್ಚಿನ ಆಕಾಶವಾಣಿಗೆ ಅನಂತ ಅನಂತ ಧನ್ಯವಾದಗಳು. ಕಾರ್ಯಕ್ರಮ ನಡೆಸಿಕೊಡುವ ಸುಬ್ರಹ್ಮಣ್ಯರವರಿಗೆ ಮತ್ತು. ಡಾ.ಶರತ್ ಕುಮಾರ ರವರಿಗೂ ಹೃದಯ ಪೂರ್ವಕ ಅಭಿನಂದನೆಗಳು. ಡಾಕ್ಟರ ನನ್ನ ವಯಸ್ಸು ೨೯ ವರ್ಷ. ತೂಕ ೬೨ ಕೆ.ಜಿ. ಎತ್ತರ ೧೫೩ ಸೆಂ.ಮೀ. ನಾನು ದೊಡ್ಡವಳ್ಳಾಗಿದ್ದು ೧೪ನೇ ವಯಸ್ಸಿನಲ್ಲಿ. ಅಂದಿನ ದಿನಗಳಲ್ಲಿ ೨೧/ ತಿಂಗಳಿಗೆ ಮುಟ್ಟಾಗುತಿದ್ದೆ. ತುಂಬಾ ಹೊಟ್ಟೆನೋವು, ವಾಂತಿ ಇರುತ್ತಿತ್ತು. ದಿನದ ಬಳಿಕ ಸರಿಯಾಗುತ್ತಿತ್ತು.

ಸುಮಾರು ವರ್ಷಗಳಿಂದ ನನಗೆ ಮುಟ್ಟಾದಾಗ ೧೫೨೦ ದಿನ ಕೆಲವು ಸಲ ಒಂದು ತಿಂಗಳ ಕಾಲ ರಕ್ತಸ್ರಾವವಾಗುತ್ತಿತ್ತು. ವೈದ್ಯರ ಬಳಿ ತೋರಿಸಿದರೆ ರಕ್ತ ಸ್ರಾವ ನಿಲ್ಲಲು ಔಷಧಿ ನೀಡುತ್ತಿದ್ದರು. ಮತ್ತೆ ನಾನು ತಿಂಗಳಾದರೂ ಮುಟ್ಟಾಗುತ್ತಿರಲಿಲ್ಲ. ಮತ್ತೆ ತೋರಿಸಿದರೆ ಮುಟ್ಟಾಗುವುದಕ್ಕೆ ಮಾತ್ರೆ ಕೊಡುತ್ತಿದ್ದರು. ಮುಟ್ಟಾದರೆ ಮತ್ತೆ ಅಧಿಕ ರಕ್ತಸ್ರಾವ. ವೈದ್ಯರನ್ನು ಕೇಳಿದರೆ ಮದುವೆಯಾದ ಬಳಿಕ ಸರಿಯಾಗುತ್ತದೆ ಎನ್ನುತ್ತಿದ್ದರು. ನಾನು ಆಯುರ್ವೇದ ಔಷಧಿಯನ್ನು ತೆಗೆದು ಕೊಂಡಿರುತ್ತೇನೆ. ಆದರೂ ಗುಣವಾಗಲಿಲ್ಲ. ಮತ್ತೇ ವೈದ್ಯರ ಬಳಿ ತೊರಿಸಿದೆ.

ಈಗ ನನಗೆ ಮದುವೆಯಾಗಿ. ವರ್ಷಗಳಾಗಿವೆ. ಮದುವೆಯಾಗಿ ಆರಂಭದ ದಿನಗಳಲ್ಲಿ ಸರಿಯಾಗಿ ಮುಟ್ಟಾಗುತ್ತಿದ್ದೆ. ರಕ್ತ ಸ್ರಾವ ಅಧಿಕವಾಗಿ ಆಗುತ್ತಿರಲಿಲ್ಲ. ತಿಂಗಳು ಚನ್ನಾಗಿದ್ದೆ. ಮತ್ತೆ ತಿಂಗಳು ತಿಂಗಳಾದರೂ ಮುಟ್ಟಾಗುತ್ತಿರಲಿಲ್ಲ. ಮಾತ್ರೆ ತಿಂದರೆ ಆಗುತ್ತದೆ. ೧೫೨೦ ದಿನ ರಕ್ತಸ್ರಾವವಾಗುತ್ತಿತ್ತು.

ನಿಮ್ಮ ಕಾರ್ಯಕ್ರಮ ಕೇಳಿ ಧೈರ್ಯದಿಂದ ಡಾ.ಪ್ರಸಾದ್ರವರ ಬಳಿ ತೋರಿಸಿದೆ. ಅವರು ಎಲ್ಲಾ ತರಹದ ಪರೀಕ್ಷೆ ಮಾಡಿಸಿದರು. ಅವರ ಪ್ರತಿಯೊಂದು ವರದಿಗಳನ್ನು ಕಳುಹಿಸಿರುತ್ತೇನೆ. ಮುಟ್ಟಾದ ೧೦ನೇ ದಿನದಿಂದ ಸ್ಕ್ಯಾನಿಂಗ್ ಮಾಡಿಸುತ್ತಿದ್ದರು ಮತ್ತು ಇಂಜೆಕ್ಷನ್ ನೀಡುತ್ತಿದ್ದರು. ತಿಂಗಳು ದೇಹ ಚಿಕಿತ್ಸೆ ನೀಡಿದರು ಈಗ ಆಪರೇಷನ್ ಮಾಡಬೇಕು ಎನ್ನುತ್ತಿದ್ದಾರೆ. ಯಾವುದಕ್ಕಾಗಿ ಆಪರೇಷನ್ ಎಂದು ಕೇಳಿದ್ದಕ್ಕೆ ಟ್ಯೂಬ್ ಟೆಸ್ಟ್ ಮಾಡುವುದಕ್ಕೆ ಎಂದರು. ಇದಕ್ಕೆ ೧೫ ರಿಂದ ೨೦ ಸಾವಿರ ಖರ್ಚಾಗುತ್ತದೆ ಎಂದಿದ್ದಾರೆ.

ನಮಗೆ ಆರ್ಥಿಕವಾಗಿ ಇಷ್ಟು ಹಣ ಖರ್ಚುಮಾಡಲಾಗುತ್ತಿಲ್ಲ. ಈಗ ನಮ್ಮ ಮನೆಯಲ್ಲಿ ಎಲ್ಲರೂ ನಿಮ್ಮ ಬಳಿ ತೋರಿಸೋಣ ಎನ್ನುತ್ತಿದ್ದಾರೆ. ಆಪರೇಷನ್ ಇಲ್ಲದೆ ಟ್ಯೂಬ್ ಟೆಸ್ಟ್ ಮಾಡಲು ಸಾಧ್ಯವಿಲ್ಲವೇ? ಟ್ಯೂಬ್ ಟೆಸ್ಟ್ ಎಂದರೇನು ಹೇಗೆ ಮಾಡುತ್ತಾರೆ? ಇದರ ಬಗ್ಗೆ ಪೂರ್ಣ ಮಾಹಿತಿ ತಿಳಿಸಿ ಸರ್.

ಉತ್ತರ: ಟ್ಯೂಬ್‌ಟೆಸ್ಟ್ ಎಂದರೆ ಕ್ಷ-ಕಿರಣಗಳ ಮುಖಾಂತರ ಅಂಡನಳಿಕೆಗಳು ಸರಿಯಾಗಿವೆಯೇ ಎಂದು ಪರೀಕ್ಷಿಸುವುದು. ಇದನ್ನು HSG (Hysterosalpingogram) ಎಂದು ಕರೆಯುತ್ತಾರೆ.  ಇದೊಂದು ಸುಲಭ ಚಿಕಿತ್ಸಾ ವಿಧಾನವಾಗಿದೆ.  ಈ ತಪಾಸಣಾ ವಿಧಾನದಿಂದ ಗರ್ಭನಾಳದ ಆರೋಗ್ಯ ಹಾಗೂ ಅವುಗಳ ಕ್ರಿಯೆಯನ್ನು ತಿಳಿಯಬಹುದಾಗಿದೆ.  ಇದರಿಂದ ಗರ್ಭಕೋಶದಲ್ಲಿ ಗರ್ಭನಾಳಗಳಲ್ಲಿ ಏನಾದರೂ ಸೋಂಕು, ಹುಣ್ಣುಗಳಾಗಿವೆಯೇ ಎಂಬುದನ್ನು ತಿಳಿಯಬಹುದಾಗಿದೆ. ಈ ವಿಧಾನ ಗರ್ಭಕೋಶದ ಕ್ಷ-ಕಿರಣ ಪರೀಕ್ಷೆಯಾಗಿದ್ದು, ಕ್ಷ-ಕಿರಣದಲ್ಲಿ ಕಂಡುಹಿಯ ಬಹುದಾದ ಬಣ್ಣವನ್ನು ಗರ್ಭಕೋಶದೊಳಗೆ ಸೇರಿಸಿ ಅದು ಹರಿಯುವ ರೀತಿಯಿಂದ ಗರ್ಭನಾಳ ಗಳಲ್ಲಿ ಏನಾದರೂ ದೋಷವಿದೆಯೇ, ಗರ್ಭನಾಳಗಳು ಮುಚ್ಚಿಕೊಂಡಿವೆಯೇ? ಅಥವಾ ಅಂಟಿಕೊಂಡಿದೆಯೇ ಎಂದು ಸುಲಭವಾಗಿ ಈ ವಿಧಾನದಿಂದ ತಿಳಿಯಬಹುದಾಗಿದೆ.  ಈ ಪರೀಕ್ಷೆಯ ನಂತರ ಕೆಲವರಲ್ಲಿ ಸುಲಭವಾಗಿ ಗರ್ಭಧಾರಣೆಯಾಗಿರುವುದಾಗಿಯು ತಿಳಿದುಬಂದಿದೆ. ಇದಕ್ಕೆ ಕಾರಣ ಈ ಪರೀಕ್ಷೆಯಿಂದ ಗರ್ಭನಾಳಗಳು ತೆರೆಯಲ್ಪಡುವುದರಿಂದ ಗರ್ಭಧಾರಣೆಗೆ ಸುಲಭವಾಗುತ್ತದೆ.

ಪರೀಕ್ಷೆಗೆ ಬರುವ ಮುನ್ನ ರೋಗಿಗಳು ತೆಗೆದುಕೊಳ್ಳಬೇಕಾದ ಕ್ರಮಗಳು:

೧. ರೋಗಿಗಳು ಈ ತಪಾಸನಾ ವಿಧಾನಕ್ಕೆ ಬರುವ ಮುನ್ನ ದೇಹದ ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು.

೨. ಜನನಾಂಗವನ್ನು ಸ್ವಚ್ಛಗೊಳಿಸಬೇಕು. ಕೂದಲನ್ನು ತೆಗೆದಿರಬೇಕು.

೩. ಪರೀಕ್ಷೆಗೆಮುನ್ನ ಯಾವುದೇ ರೀತಿಯ ಸೋಡಾ ಮಿಶ್ರಿತ ಆಹಾರವನ್ನು ಸೇವಿಸಿರಬಾರದು.

ಉದಾ: ಇಡ್ಲಿ, ದೋಸೆ, ಇದರಿಂದ ಗ್ಯಾಸ್ ಹೆಚ್ಚಾಗುವ ಸಂಭವವಿರುತ್ತದೆ.

೪. ಈ ಪರೀಕ್ಷೆ ಮಾಡುವಾಗ ಕೆಲವೊಂದು ಸಾರಿ ರಕ್ತಸ್ರಾವವಾಗುತ್ತದೆ.  ಆದುದರಿಂದ ಪರೀಕ್ಷೆಗೆ ಬರುವ ಮುನ್ನ ಶುದ್ಧವಾದ ಸ್ಯಾನಿಟರಿ ಪ್ಯಾಡ್ (Sanitary Pad)ಗಳನ್ನು ತೆಗೆದುಕೊಂಡು ಬರುವದು ಅತ್ಯವಶ್ಯಕ.