ಹೆಸರು: ಲೀಲಾವತಿ
ಊರು: ಚಾಮರಾಜನಗರ

 

ಪ್ರಶ್ನೆ: ನನಗೆ ೨೯ ವರ್ಷ, ನನ್ನ ಸಮಸ್ಯೆ ಏನೆಂದರೆ ಡಾಕ್ಟರ್ ನನ್ನ ಎರಡನೇ ಹೆರಿಗೆ ಆದ ನಂತರ ಮಕ್ಕಳು ಬೇಡ ಅಂತ ಆಪರೇಷನ್ ಮಾಡಿಸಿಕೊಂಡೆ (ಹೆರಿಗೆ ಆಗಿ ದಿನದ ನಂತರ) ಮಗುವಿಗೆ ತಿಂಗಳಾಗುವಾಗ ಹಾರ್ಟ್ ಪ್ರಾಬ್ಲಂನಿಂದ ತೀರಿ ಹೋಯಿತು. ನನಗೆ ಈಗ ಮತ್ತೆ ಮಗು ಬೇಕೆಂಬ ಆಸೆನಾನು ಮತ್ತೆ ಆಪರೇಷನ್ ಮಾಡಿಸಿಕೊಂಡರೆ ನನಗೆ ಮಕ್ಕಳಾಗುತ್ತದೆಯೇ?

ಅದಕ್ಕೆ ತಗುಲುವ ಖರ್ಚು ಎಷ್ಟುಹೇಗೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಇದರಿಂದ ಮುಂದೆ ನನ್ನ ಜೀವನಕ್ಕೆ ಏನಾದರೂ ತೊಂದರೆ ಇದೆಯೇ ತಿಳಿಸಿ.

ಉತ್ತರ: ನಿಮಗೆ ಅಂಡನಾಳಿಕೆಗಳ ಮರು ಜೋಡಣೆ ಶಸ್ತ್ರ ಕ್ರಿಯೆ ಮಾಡಬೇಕು.(Tubal Recanalization) ಇದಕ್ಕೆ ಸುಮಾರು ೧೫ ರಿಂದ ೨೦ ಸಾವಿರ ರೂ. ಖರ್ಚು ಆಗುತ್ತದೆ. (ನೀವು ಮಾಡಿಸಿಕೊಳ್ಳುವ ಆಸ್ಪತ್ತೆಯ ಮೇಲೆ ಅವಲಂಬಿಸುತ್ತದೆ) ಶಸ್ತ್ರ ಚಿಕಿತ್ಸೆಯ ನಂತರ ಒಂದು ವಾರ ವಿಶ್ರಾಂತಿ ತೆಗೆದಕೊಳ್ಳಬೇಕು. ಜೀವಕ್ಕೆ ಏನೂ ತೊಂದರೆ ಇಲ್ಲ. ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಮಕ್ಕಳಾಗಿಯೇ ಆಗುತ್ತವೆ ಎನ್ನುವ ಗ್ಯಾರಂಟಿ ಇಲ್ಲ. ಶಸ್ತ್ರ ಚಿಕಿತ್ಸೆಯ ಸಫಲತೆ ಶೇ. ೫೦ ರಿಂದ ೬೦ ಮಾತ್ರ. (ಬೇರೆ ಓದುಗರ ಗಮನಕ್ಕೆ ಎರಡನೇ ಮಗು ೩-೫ ವರ್ಷ ಆಗುವವರೆಗೂ ಗರ್ಭ ನಿರೋಧಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಡಿ. ಅಲ್ಲಿಯವರೆಗೆ ಕಾಪರ‍್-ಟಿ ನಿರೋದ್ ಮಾತ್ರೆಗಳನ್ನು ಉಪಯೋಗಿಸಿ.)