ಶಾಂತಿಯ ನೋಡಿದಿರಾ ಜ್ಞಾನಿಗಳೆಲ್ಲಾ ಮೂರರ
ಕೂಸಿಯೊಳು ಇರುವುದು ಶಾಂತಿ ರಾಗಾದ್ವೇಷವ
ಬಿಡಿಸುವ ಶಾಂತಿ || ಈದಾ ಹುಲಿಯಂತೆ ಮನಸು
ಸಂದ ಮಾಡುವ ಶಾಂತಿ ಶಾಂತರ ಹೃದಯದೊಳು
ಅಂತರದೊಳಿರ್ಪುದು ಸಂತೆ ಅಳಿಯುವುದು ಕಾಂತಿ
ಬಸವನ ಮನದೊಳು ನೆನೆದಿಹ ಶಾಂತಿ
ಗುರುಗುಹೇಶ್ವರನ ಆತ್ಮದೊಳಿಹ ಶಾಂತಿ
|| ಶಾಂತಿಯ ನೋಡಿದಿರಾ || || ಶಾಂತಿಯ ನೋಡಿದಿರಾ ||
|| ಶಾಂತಿಯ ನೋಡಿದಿರಾ ||