ಅಂಬಾರದೊಳಗೊಂದು ಗುಡಿಯುಂಟು
ಶಂಭುಲಿಂಗನ ಪೂಜೆ ನಡೆಯಿತು ತಮ್ಮ ಅಲ್ಲಿ || ಶಂಭು ||

ಸ್ತಂಭವೊಂದರ ಮೇಲೆ ಶೃಂಗಾರವಾಗಿರ್ಪ
ಜಂಗಮರ ಮಠಕೆರಡು ದಾರಿಯಮ್ಮ || ದಾರಿಲೀ
ಹೋಗುವಾ ದೀರ ಆರು ಮಂದಿ ಪಾರವ ಅವರಲ್ಲಿ
ಇರುವರಮ್ಮ || ಅಂಬಾರ ||

ಮೀರಿ ಅವರನು ಬಿಟ್ಟು ಏರಿಹೋದ ಮೇಲೆ
ಗೊರರು ಎಂಟು ಮಂದಿ ಬರುವರಮ್ಮ || ಕರೆದು
ಭೋದಿಸುವವರೇ ದುರ್ಗುಣ ಮಂತ್ರವ
ತೊರೆಯ ಅವುಗಳನ್ನೆಲ್ಲಾ ನೀ ನೋಡಮ್ಮಾ || ಅಂಬಾರ ||

ಗುರುವು ಹೇಳಿದಂತ ಅರುಹಿದ ಮಂತ್ರವಾ
ಮರೆಯದೇ ಮನದೊಳು ಜೋಪಾನವ್ವ || ಅಂಬಾರ ||

ಕದರುಗಾತರ ಹಾದಿ ವಿಧವನು ತಿಳಿಯದೇ
ಹದಗೆಟ್ಟು ಹೋಗುತ್ತೀಯೆ ಎಚ್ಚರಮ್ಮಾ
ಪದು ಮಾಧವನ ಪಾದ ಬೆರೆಯ ಬೇಕಾದರೇ
ಪದೇ ಪದೇ ಮೆಲ್ಲನಾದರೇನು ಹೇಳಮ್ಮಾ || ಅಂಬಾರ ||

ಮುತ್ತಿನ ಮಂಟಪದ ಸುತ್ತಲೂ ಇರುತಿಹ
ಚಿತ್ರದ ಕೊಳವೊಂದು ನೀ ನೋಡಮ್ಮಾ
ಸತ್ಯ ಶರಣರು ಬಂದು ನಿತ್ಯಸ್ನಾನವ ಮಾಡಿ
ಮುಕ್ತಿಕಾಂತೆಯೊಳು ಸೇರರಮ್ಮ || ಅಂಬಾರ ||

ಶಂಭುಲಿಂಗದ ಕೊಳದಿ ರಂಭೆ
ಮೇನಕೆಯರು | ತುಂಬಿದ ಅಮೃತವ ಕೊಡರವ್ವ
ಡಂಭ ಮಾಡದೆ ನೀನು ತುಂಬಿದ ಕೊಳದ
ಶಂಭುಲಿಂಗ ಜ್ಞಾನ ತೀರ್ಥವವ್ವ || ಅಂಬಾರ ||

ಭಕ್ತಿ ರಥವ ಮಾಡಿ ಯುಕ್ತಿ ಕುದುರೆಯ ಮಾಡಿ
ಸತ್ಯಸಾರಥಿ ಮಾಡಿ ನೀ ನೋಡವ್ವ | ಸತ್ಯಶರಣರ
ಸೇವೆ ಬಿಡದೆಲೆ ನೀ ಮಾಡಿ ಮುಕ್ತಿ ಕಾಂತೆಯೊಳು
ನೀ ಸೇರವ್ವ || ಅಂಬಾರ ||

ಭೋಗದ ಭ್ರಮೆಗಳಾ ತ್ಯಾಗ ಮಾಡುವ ತನಕ
ಆಗದಯ್ಯ ಮುಕ್ತಿ ಆಗದಯ್ಯ ತೋರಣ್ಣ ಸುಖ || ಭೋಗ ||

ಜಾತಿಜಾನವಾಗಿ ಜ್ಯೋತಿಯೊಳಗೆ ಕಂಡು ಪಾತಕ
ಹಿರಿಸುವ ಗುರು ಪುತ್ರನಾಗೊತನಕ ಆಗದುತ್ತೆ || ಭೋಗದ ||

ಹೊಲಗೇರಿ ಸ್ಥಳದಲ್ಲಿ ಈ ಎಂಬುನಂಜುರ ಹಾಕಿ
ಕುಲವಿಲ್ಲದವರೊಡನೆ ಕೂಡಿ ಉಣ್ಣೆತನಕ
ಆಗದಯ್ಯ ಮುಕ್ತಿ || ಭೋಗದ ||

ದೇಹದ ದೇವರು ನುಂಗಿ ದೇವರ ಗುಡಿ ನಿಂಗಿದೇವ
ಚಿದಾನಂದ ತಾನಾಗೊ ಎರೆವಿಗು ಆಗದಯ್ಯ || ಭೋಗದ ||

* * *

ಗೋವಿಂದ ಭಜೆ ಗೋವಿಂದ ಭಜೆ
ಗೋವಿಂದ ನಾರಾಯಣ ಗೋವರ್ಧನ
ಗಿರಿಯನೆತ್ತಿದ ಗೋವಿಂದ ನಮ್ಮ
ರಕ್ಷಿಸೋ ಗೋಪಾಲ ನಮ್ಮ ಸೊಲ್ಲು || ಗೋವಿಂದ ||

ಮಂಚ ಬಾರದು ಮಡದಿ ಬಾರಳು
ಕಂಚು ಕನ್ನಡಿ ಬಾರದು ಕಿಂಚಿತಾರ್ತದ
ದ್ರವ್ಯ ಬಾರದು ಮುಂಚೆ ಮಾಡಿರಿದರ್ವವ || ಗೋವಿಂದ ||

ಅಧ್ಯವರಿಗೆ ಪುತ್ರಗಾರಿಗೆ ಮಿತ್ರಭಾಂಧವ್ಯ
ವಾಗಿ ಕರ್ತುಯಮನರು ಬಂಧು ಎಳೆದಾಗ
ಅರ್ಥಪುತ್ತರು ಕಾಯ್ವರೆ || ಗೋವಿಂದ ||

ತಂದು ಬಂದರೆ ತನ್ನ ಗಂಡನು ಚೆಲುವ
ಚೆನ್ನಾಗ ಎನ್ನುವ ಒಂದು ದಿನವು ತಾರದಿದ್ದರೆ
ಹಂದಿ ನಾಯಂತೆ ಕರೆವಳು || ಗೋವಿಂದ ||

ಒಡವೆ ಅರಸಿಗೆ ಒಡಲು ಅಗ್ನಿಗೆ ಮಡದಿ
ಮತ್ತೊಬ್ಬ ಚಲುವೆಗೇ ಬಡಿದು ಯಮನರು
ಎಳೆದು ಹೊಯ್ವಾಗ ಕೊಡರಿ ಬಿತ್ತು ನಾಲಿಗೆ || ಗೋವಿಂದ ||

ದಿಟ್ಟತನದಿಂ ಪಟ್ಟವಾಳುವ ಕೆಟ್ಟು ಹೋಯಿತು
ಪದವಿಯ ಮುಟ್ಟಿ ಭಜಿಸಿರಿ
ವಂಗಪುರಂದರ ವಿಠಲೇಶನ ಪಾದವ || ಗೋವಿಂದ ||

* * *

ಮೇಲೆ ಮಂಟಪದಲ್ಲಿ ನೋಡಣ್ಣ
ಪಾಲಾಕ್ಷಪಾರ ಬ್ರಹ್ಮ ತನ್ನೊಳಗಿಹನು ಕಾಣಣ್ಣ
ಕೀಳು ಮೇಲು ಮಾಡುತೈತೆ ಮೇಲೆ
ಜ್ಯೋತಿ ಬೆಳಗುತೈತೆ ಗಾಳಿ ಗೋಪುರ ಗಗನದಲ್ಲಿ
ಬಾಲಕೃಷ್ಣ ಲೀಲೆಯಲ್ಲಿ || ಮೇಲೆ ||

ಎಷ್ಟು ದಿನ ಎಲ್ಲಿದ್ದರೇನಣ್ಣ ಈ ಲೋಕದೊಳಗೆ
ಕಷ್ಟವೇಕೆ ತಿಳಿಯೊ ನಮ್ಮಣ್ಣ
ಅಷ್ಟದಳದ ಕಮಲದಲ್ಲಿ ಇಷ್ಟಲಿಂಗನ
ಕೋಣೆಯಲ್ಲಿ ಮುಟ್ಟಿ ಪೂಜೆ ಮಾಡುವಂತೆ || ಮೇಲೆ ||

ಯೋಗ ಎಂಟನು ನೆಚ್ಚಬೇಡಣ್ಣ ನಿರ್ಗೂಣರಾಜ
ಯೋಗಿ ತನ್ನೊಳಗಿಹನು ಕಾಣಣ್ಣ ನಾಗಕೂರ್ಮ
ದೇವದತ್ತ ಕ್ರುಕುರ ಧನಂಜಯರಿವಣ್ಣ
ಬಾಗಿಲು ಒಂಭತ್ತನು ಮುಚ್ಚಿ ಯೋಗಿಶಯಣ ಸೇವಿಸಣ್ಣ || ಮೇಲೆ ||

ಧ್ಯಾನ ಧ್ಯಾನ ಪ್ರಾಣ ಅಪನಾ ನಿನ್ನೊಳಗೆಯಿಹವು
ಕಾಣಣ್ಣ ಪ್ರಾಣಕಾಂತನ ಪಟ್ಟದಲ್ಲಿ
ಪ್ರಾಜ್ಞಾರಿರುವೋ ಸ್ಥಾನದಲ್ಲಿ ನಾನು ನೀನು
ಎಂಬ ಬೇಧ ಏನು ಕಾರಣ ಬಂದಿತಣ್ಣ || ಮೇಲೆ ||

ಜೀವಸ್ಥಾನವು ಯಾವುದೇಳಣ್ಣ ಈ ದೇಹದೊಳಗೆ
ಜೀವಸಾಕ್ಷಿಯು ಎಲ್ಲಿ ಇಹನಣ್ಣ ಜೀವ
ರಿಗೂ ಸರ್ವಸಾಕ್ಷಿ ಒಬ್ಬನಣ್ಣ ಜೀವಶಿವಯೊಳು
ಐಕ್ಯವಾಗುವ ಸ್ಥಾನವದು ಬಹು ಗೋಪ್ಯವಣ್ಣ || ಮೇಲೆ ||

ಜ್ಞಾನವಂತನಾಗಬೇಕಣ್ಣ | ಕೇಳಣ್ಣ
ಕೇಳು ಅಜ್ಞಾನವನು ಅಳಿಯಬೇಕಣ್ಣ |
ಜ್ಞಾನವೆಂಬೊ ಖಡ್ಗ ಪಿಡಿದು ಅಜ್ಞಾನಿ
ವೆಂಬೊ ಕುರಿಯ ಕಡಿದು ಜ್ಞಾನಗುರು
ವಿನ ಪಾದ ಪಿಡಿದು ತಾನು ಧನ್ಯನಾಗಬೇಕು || ಮೇಲೆ ||

ಕರ್ಮಕಾಂಡವ ಕಳಿಯಬೇಕಣ್ಣ | ಹರಿಭಕ್ತ
ನಾದರೆ ಗುರುವು ಸ್ಮರಣೆ ಮಾಡಬೇಕಣ್ಣ |
ಗುರುವು ಸ್ಮರಣೆ ಮಾಡಬೇಕು ಗುರುತು
ತನ್ನಲ್ಲಿ ಅರಿಯಬೇಕು ಅರಿವು ತೋರಿದ
ಗುರುತು ಮುಕುಂದನ ಮರೆಯದಿರುವುದ
ಮರ್ಮವಣ್ಣ || ಮೇಲೆ ||

* * *

ಒಂದು ದಳದ ಕಮಲದಲ್ಲಿ ಅಂದವಾದ
ಲಿಂಗವೇ ಮಧ್ಯಪ್ರಾಣ ಲಿಂಗವೇ
ಸತ್ಯಶಾಂತಿ ಲಿಂಗವೇ ಓಂ ನಮಃ
ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ||

ಎರಡು ದಳದ ಕಮಲದಲ್ಲಿ ಎದ್ದು ಬಂದ ಲಿಂಗವೇ
ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ || ಓಂ ನಮಃ ||

ಮೂರು ದಳದ ಕಮಲದಲ್ಲಿ ಮೂಡಿ ಬಂದ |
ಲಿಂಗವೇ ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ || ಓಂ ನಮಃ ||

ನಾಲ್ಕು ದಳದ ಕಮಲದಲ್ಲಿ ನಾಗಜ್ಯೋತಿ ಲಿಂಗವೇ
ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ || ಓಂ ನಮಃ ||

ಐದು ದಳದ ಕಮದಲ್ಲಿ ಐಕ್ಯವಾದ ಲಿಂಗವೇ
ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ || ಓಂ ನಮಃ ||

ಆರು ದಳದ ಕಮಲದಲ್ಲಿ ಹಾರಿ ಬಂದ ಲಿಂಗವೇ
ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ || ಓಂ ನಮಃ ||

ಏಳು ದಳದ ಕಮಲದಲ್ಲಿ ಎದ್ದು ಬಂದ ಲಿಂಗವೇ
ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ || ಓಂ ನಮಃ ||

ಎಂಟು ದಳದ ಕಮಲದಲ್ಲಿ ಘಂಟನಾದ ಲಿಂಗವೇ
ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ || ಓಂ ನಮಃ ||

ಒಂಭತ್ತು ದಳದ ಕಮಲದಲ್ಲಿ ಒಡೆದು
ಬಂದ ಲಿಂಗವೇ ಮಧ್ಯಪ್ರಾಣ ಲಿಂಗವೇ
ಸತ್ಯಶಾಂತಿ ಲಿಂಗವೇ || ಓಂ ನಮಃ ||

ಹತ್ತು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ |
ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ || ಓಂ ನಮಃ ||

* * *

ಜಯ ರಘುರಾಮನೇ ಜಾನಕಿ ಪ್ರೇಮನೇ ಜಗ
ದೊಳು ಮೆರೆಯು ಶ್ರೀರಾಮ ಚಂದ್ರನೆ || ಜಯ ||

ಹತ್ತು ಅವತಾರವನ್ನೆತ್ತಿದ ಸ್ವಾಮಿ ಭಕ್ತರನ್ನು ಸಲಹುದೆ ||
ಮರ್ತ್ಯವತಾರವನ್ನೆತ್ತಿದ ಸ್ವಾಮಿ ವೇದವನು ತರುವುದಕ್ಕೆ
ಕೂರ್ಮಾವತಾರವನ್ನೆತ್ತಿದ ಸ್ವಾಮಿ ಪರ್ವತವನ್ನು ತರುವುದಕ್ಕೆ || ಜಯ ||

ವರಾವತಾರವನ್ನೆತ್ತಿದ ಸ್ವಾಮಿ ಹಿರಣ್ಯಕ್ಷನ ಮರಣಕ್ಕೆ ||
ನರಸಿಂಹಾವತಾರವನೆತ್ತಿದ ಸ್ವಾಮಿ ಕಶ್ಯಪನ ಮರಣಕ್ಕೆ ||

ವಾಮಾವತಾರವನ್ನೆತ್ತಿದ ಸ್ವಾಮಿ ಬಲಿಯನ್ನು
ಭೂಮಿಗೆ ತುಳಿಯುವುದಕ್ಕೆ || ಜಯ ||

ರಾಮಾವತಾರವನ್ನೆತ್ತಿದ ಸ್ವಾಮಿ ವಾಲಿಯ ಸಂಹಾರಕೆ || ಜಯ ||
ರಾಮಾವತಾರವನ್ನೆತ್ತಿದ ಸ್ವಾಮಿ ರಾವಣನ ಸಂಹಾರಕೆ ||
ಕೃಷ್ಣಾವತಾರವನ್ನೆತ್ತಿದ ಸ್ವಾಮಿ ಕಂಸಾಸುರನ ಮರಣಕ್ಕೆ ||
ಕಲಿಯವತಾರವನ್ನೆತ್ತಿದ ಸ್ವಾಮಿ ಭಕ್ತರನ್ನು ಸಲುಹುದಕ್ಕೆ || ಜಯ ||

* * *

ಮುತ್ತು ಕಂಡೆನವ್ವ ತಂಗಿ ನಾನೊಂದು
ನಾಸಿಕ ತುದಿಯಲ್ಲಿರುವ ನತ್ತೊಂದು ||
ಒಂದು ವರ್ಣದ ಮುತ್ತು ಓಂಕಾರದೊಳಗಿತ್ತು |
ಎರಡು ವರ್ಣದ ಮುತ್ತು ಎಡಬಲದೊಳಗಿತ್ತು || ಮುತ್ತು ||

ಮೂರು ವರ್ಣದ ಮುತ್ತು ಮೂಲಬಲ್ಲವರಿಗೆ ಗೊತ್ತು
ನಾಲ್ಕು ವರ್ಣದ ಮುತ್ತು ನಾಸಿಕದೊಳಗಿತ್ತು || ಮುತ್ತು ||

ಐದು ವರ್ಣದ ಮುತ್ತು ಐಕ್ಯಬಲ್ಲವರಿಗೆ ಗೊತ್ತು |
ಆರು ವರ್ಣದ ಮುತ್ತು ಆರೂಢದೊಳಗಿತ್ತು || ಮುತ್ತು ||

ಏಳು ವರ್ಣದ ಮುತ್ತು ವೇದ ಬಲ್ಲವರಿಗೆ ಗೊತ್ತು |
ಎಂಟು ವರ್ಣದ ಮುತ್ತು ಮಂಟಪದೊಳಗಿತ್ತು || ಮುತ್ತು ||

ಒಂಭತ್ತು ವರ್ಣದ ಮುತ್ತು ತುಂಬಿ ತುಳುಕಾಡುತ್ತಿತ್ತು |
ಹತ್ತು ವರ್ಣದ ಮುತ್ತು ತತ್ವ ಬಲ್ಲವರಿಗೆ ಗೊತ್ತು || ಮುತ್ತು ||

ಹನ್ನೊಂದು ವರ್ಣದ ಮುತ್ತು ಆನಂದದೊಳಗಿತ್ತು |
ಹನ್ನೆರಡು ವರ್ಣದ ಮುತ್ತು ಗುರುಪಾದದೊಳಗಿತ್ತು || ಮುತ್ತು ||

* * *

ಮಾತಾಡು ಮಾತಾಡು ಲಿಂಗವೇ ನೀನು
ಮಾತಾಡ ಬೇಕಯ್ಯ ಲಿಂಗವೇ ನೀನು
ಮಾತಾಡದಿದ್ದರೆ ನಾ ತಾಳಲಾರೇನು
ಮಾತಾಡು ಕಾಶಿಯ ಲಿಂಗವೇ || ಮಾತಾಡು ||

ಮನವು ಮಜ್ಜನವೆಂಬೋ ಬಾವಿಗೆ
ಈ ತನುವನು ಕೈಲಾಸವೆಂಬೋ ನೀರಿಗೇ
ಈ ಮನದೊಳಗಿರುವಂತೆ ಗೊನೆ ಬಾಳೆಹಣ್ಣು
ತಂದು ನಿನಗರ್ಪಿಸುವೆ ಕಾಶಿಲಿಂಗವೇ || ಮಾತಾಡು ||

ಅಂಗೈಲಿ ಆರತಿ ಲಿಂಗವೇ ಎನ್ನ ಮುಂಗೈಲಿ
ಶಿವ ಗಂಟೆ ಲಿಂಗವೇ ಈ ಕಣಗಳವರ ಮಧ್ಯ
ತಂಬೂರಿ ಪುಷ್ಪ ತಂದು ನಿನಗರ್ಪಿಸುವೆ
ಕಾಶಿಲಿಂಗವೇ || ಮಾತಾಡು ||

ಯಾರಿಗೆ ಯಾರಿಲ್ಲ ಲಿಂಗವೇ ನನಗೆ ಹಿಡಿಯಲು
ರಂಭೆಯಿಲ್ಲ ಲಿಂಗವೇ
ಈ ಭವದ ಸಮುದ್ರದೊಳು ಮುಳುಗಿ ನಾ ತೇಲುತಿರುವೆ
ದಡವ ಸೇರಿಸಯ್ಯ ಲಿಂಗಯ್ಯ || ಮಾತಾಡು ||

ಅಣ್ಣಯ್ಯ ಯಾರಿಲ್ಲ ಲಿಂಗವೇ
ಮತ್ತೆ ತಮ್ಮಯ್ಯ ಯಾರಿಲ್ಲ ಲಿಂಗವೇ
ನನ್ನ ಹೊಟ್ಟೆಲಿ ಹುಟ್ಟಿದ ಮಕ್ಕಳಿಲ್ಲದ ಮೇಲೆ
ಮೊಮ್ಮಕಾಳಾರಿಗೆ ಲಿಂಗವೇ || ಮಾತಾಡು ||

ಅಡವಿ ಅರಣ್ಯದಲ್ಲಿ ಲಿಂಗವೇ
ಅಲ್ಲಿ ಎಣ್ಣೆ ಮಜ್ಜನ ಬಾವಿ ಲಿಂಗವೇ
ಈ ಆರು ಮೂರು ಒಂಭತ್ತು ನಿನಗೆ ತರ
ಮಾತಾಡು ಕಾಶಿಯ ಲಿಂಗವೇ || ಮಾತಾಡು ||

ಹೊತ್ತು ಮುಳುಗಿತಯ್ಯ ಲಿಂಗವೇ
ಮತ್ತೆ ವೇಳೆಯಾಯಿತಯ್ಯ ಲಿಂಗವೇ
ಇಂಥ ನೂರೆಂಟು ಶಿವಶರಣರು ಶಿವಪೂಜೆ
ಮಾಡುವಾಗ ತತ್ವದೊಳು ಇರಿಸಯ್ಯ ಲಿಂಗವೇ || ಮಾತಾಡು ||

ಹಾಸಿಗೆ ಹಾಸಿವ್ನಿ ಲಿಂಗವೇ
ಅಲ್ಲಿ ಪರಂ ಜ್ಯೋತಿ ಉರಿತೈತೆ ಲಿಂಗವೇ
ಈ ಹಾಸಿಗೆ ತಕ್ಕಂತೆ ಶಿವನು ಇಲ್ಲದ ಮೇಲೆ
ಪರದೇಶಿ ನಾವಾದೋ ಲಿಂಗವೇ || ಮಾತಾಡು ||

* * *

ಅಂಜಿಕೆಯಾತಕಯ್ಯ ಸಜ್ಜನರಿಗೆ ಭಯವು ಇನ್ಯಾತಕಯ್ಯಾ
ಕನಸಲಿ ಮನಸಲಿ ಕಳವಳವಾದರೆ
ಅನುಮಾನ ನಡೆದರೆ ಹಾರಿವೋಪುದು
ಪಾದ || ಅಂಜಿಕೆ ||

ರೋಮ ರೋಮಕೆ ಕೋಟಿಲಿಂಗವ ಧರಿಸಿದ
ಭೀಮನ ನೆನೆದರೆ ಬಿಟ್ಟು ಪೋಪುದ ಪಾಪ || ಅಂಜಿಕೆ ||

ಪುರಂದರ ವಿಠಲನ ಪೂಜೆಯ ಮಾಡುವ
ಮಾಧವರಾಯನ ಸ್ಮರಿಗೆ ಮಾಡಿದ ಮೇಲೆ || ಅಂಜಿಕೆ ||

* * *

ತಂದೆ ತಾಯಿ ದೇವರೆಂದು ನಂಬಿ ಪಾದ
ಪೂಜೆ ಮಾಡೋ ನೀತಿ ತಪ್ಪಿ ನಡೆದರೆ ನಮಗೆ
ನರಕ ತಪ್ಪದು ತಮ್ಮಾ ನರಕ ತಪ್ಪದು || ತಂದೆ ||

ಉದಯದೊಳೆದ್ದು ಮುಖವ ತೊಳೆದು
ಸದಾ ಮುದದಿ ಬಸ್ಮವ ಹರಿಯೋ
ಮದನ ವೈರಿಯ ಜ್ಞಾನ ಮಾಡೋ ಮಾತಾಪಿತರ
ಪಾದಕೆ ನಮಿಸೋ || ತಂದೆ ||

ಕ್ರೋಧಗೊಂಡು ಬೈಯವರು ಜನರು
ವಾದ ಮಾಡಬೇಡ ಕಂದಾ
ವಾದಾಕ್ವದ ಬೆಳೆದ ನಿನ್ನ
ದಾರಿ ತಪ್ಪಿಸುವರು ಮನುಜ || ತಂದೆ ||

ಹೆತ್ತಿದವರ ಕೀರ್ತಿಯ ಗಳಿಸೋ
ಉತ್ತಮರ ಮಗನೆಂದೆನಿಸೋ
ಸತ್ಯವಾದ ಕೀರ್ತಿಯ ಬೆಳೆಸೋ
ನಿತ್ಯನಾಮ ಬಸವನ ಸ್ಮರಿಸೋ || ತಂದೆ ||

* * *

ಯಾರು ಕೈ ಬಿಟ್ಟರು ನೀ ಕೈಬಿಡಬೇಡ
ನಾರಾಯಣ ಲಕ್ಷ್ಮಿ ನಾರಾಯಣ ನೀ ಕೈ ಬಿಟ್ಟರೇ
ಯಾರ ಸೇರಲಿ ನಾನು ನಾರಾಯಣ ಲಕ್ಷ್ಮಿನಾರಾಯಣ || ಯಾರು ||

ಕರಿಯ ಹಿಂಟೆಯ ಮೇಲೆ ಬಿಳಿಯ ಬೀಜವ ಬಿತ್ತಿ
ನಾರಾಯಣ ಬೀಜದ ಮಹಿಮೆಯ ಯಾರಿಗು
ತಿಳಿಯದು ನಾರಾಯಣ ಲಕ್ಷ್ಮಿ || ಯಾರು ||

ತುಂಬಿದ ಹೊಳೆಯಲ್ಲಿ ಅರಿಗೋಲು ಮುಳುಗಿತ್ತು
ನಾರಾಯಣ ಅಲ್ಲಿ ಗಂಬಲಿಸಿದರೆ ತೆಗೆದುಕೊಳ್ಳುವ
ರ‍್ಯಾರು ನಾರಾಯಣ ಲಕ್ಷ್ಮಿ || ಯಾರು ||

ಮೂರು ಕಾಲಿನ ಪಕ್ಷಿ ನೀರೊಳು ನಿಂತಿದೆ
ನಾರಾಯಣ ಪಕ್ಷಿ ರೆಕ್ಕಿಲ್ಲ ಹಾರಿತು ಗಗನಕ್ಕೆ
ನಾರಾಯಣ ಲಕ್ಷ್ಮಿ ನಾರಾಯಣ || ಯಾರು ||

ದೊಡ್ಡಮರವನ್ನೇರಿ ಕೈಬಿಟ್ಟಂತಾಯಿತು
ನಾರಾಯಣ ಕೊಂಬೆಯೇ ಗತಿ ಎಂದು
ಬಾಚಿ ತಬ್ಬಿದೆನಯ್ಯ ನಾರಾಯಣ ಲಕ್ಷ್ಮಿ || ಯಾರು ||

ಗಜರಾಜ ವರದಾನೆ ಅಜಮಿರಿ ರಕ್ಷಕ ನಾರಾಯಣ
ಸುಜಸೋವಿನುದ್ಧಾರ ಸುಗುಣ ಗಂಭೀರನೇ
ನಾರಾಯಣ ಲಕ್ಷ್ಮಿ || ಯಾರು ||

ರಾಮ ಎನ್ನಿ ಈ ಜನ್ಮ ಸ್ಥಿರವಿಲ್ಲ ನಾರಾಯಣ
ರಾಮಹಿತಲಿ ಸೋಮ ಕರುಣದಿಸುಹಯ್ಯ
ನಾರಾಯಣ ಲಕ್ಷ್ಮಿ || ಯಾರು ||