ಮರೆಯಲಾರೆನಮ್ಮಾ ತಾತನ ಮರೆಯಲಾರೆನಮ್ಮಾ |
ಮರೆಯಲಾರೆನಮ್ಮಾ ಕೈವಾರ ತಾತನ || ಬೇಡಿದ
ವರಗಳ ಕೊಡುವ ಮಹಾತ್ಮನಾ || ಮರೆಯಲಾರೆ ||

ಕನಸಿನಲ್ಲಿ ಬಂದಾ || ಚಿಂತೆಯ ಮಾಡುವುದೇನೆಂದ
ಬಲ್ಲನು ಭಕ್ತರ ಭಾವದ ಹರಿಕೆಯಾ ||
ಅಂಜಲೇಕೆ ಎಂದು ಅಭಯವ ಕೊಟ್ಟ || ಮರೆಯಲಾರೆ ||

ಕಿವಿಯಲ್ಲಿ ಹೇಳಿದ ಬ್ರಹ್ಮಾಂಡದ ಪಟ್ಟಣದ
ಹಾದಿಯ ತೋರಿದನು ಸಾಧಿಸಿ ಸಾಧಿಸಿ ಸಕಲ
ಚರಾಚರಾ ಭೇದಿಸಿ ಮಸ್ತಕ ಬೆಟ್ಟವನೇರಿದ || ಮರೆಯಲಾರೆ ||

ಸಹಜಾ ಸಮಾಧಿಯ ಮಾಡಿ ಪರಂ
ಜ್ಯೋತಿಯ ಬೆಳಕನು ನೋಡಿ || ಎಲ್ಲಿ ನೋಡಿದರಲ್ಲೇ
ಪುಷ್ಪವು ಪೂಜೆಯ ಮಾಡುವರುಪಾಯ ಕಲಿಸುವರು || ಮರೆಯಲಾರೆ ||

ಹೃದಯದಲ್ಲಿದ್ದಷ್ಟು ಕೂಡುವ ಮೋಹ ಪಾಶವನೇ
ಸುಟ್ಟು ನಾಲಿಗೆಯಲ್ಲಿದ್ದ ಗಂಟೆಯ ನಾದವ
ಕೇಳುತ || ರವಿಶಶಿ ತೋರಿದೆ ಒಡೆಯನಾ || ಮರೆಯಲಾರೆ ||

ಧರೆಯೊಳು ದಾಸರನಾ ಪಾಲಿಸು ಕೇಶವ ವಿಠಲನಾ
ನರಸಿಂಹ ಅಚ್ಚುತ ನಾರಾಯಣ ಗುರಿ
ದಾಮೋದ ದಂತಕ ಜಾತಕ ರಂಗನಾ || ಮರೆಯಲಾರೆ ||

* * *

ಶಿವನ ಭಜನೆ ಮಾಡಿ ಓಂ ಶಿವ ಶರಣರ ಕೊಂಡಾಡಿ ||
ಭವದ ಮಾತಾ ಕೇಳಿ ಈ ಭುವನಾ ಸ್ಮರಣೆಯ ಮರೆಯಬೇಡಿ || ಶಿವನ ||

ಮಂಗಳ ಮಾರುತಿ ಓಂ ಶಿವ ಲಿಂಗಮ್ಮ ಪ್ರಭುರಾಯ
ಲಿಂಗಮ್ಮ ಪ್ರಭುರಾಯ ಸಾಧು ಶರಣರಿಗಾಗಿ || ಶಿವನ ||

ಅಕ್ಕಿಯ ಮಾರಯ್ಯ || ಓಂ ಶಿವ || ಅಂಬಿಗರ
ಚೌಡಯ್ಯ || ಅಂಬಿಗರ ಚೌಡಯ್ಯ ಸಾಧು ಶರಣರಿಗಾಗಿ || ಶಿವನ ||

ಮಡಿವಾಳ ಮಾಚಯ್ಯ || ಓಂ ಶಿವ || ಮಾದಿಗರ
ಹರುಳಯ್ಯ || ಮಾದಿಗರ ಹರುಳಯ್ಯ ಸಾದು ಶರಣರಿಗಾಗಿ || ಶಿವನ ||

ಕುಂಬಾರ ಗುಂಡಯ್ಯ || ಓಂ ಶಿವ || ಶರಣರ ಕಕ್ಕಯ್ಯ |
ಶರಣರ ಕಕ್ಕಯ್ಯ ಸಾಧು ಶರಣರಿಗಾಗಿ || ಶಿವನ ||

ಒಕ್ಕಲಿಗರ ಮುದ್ದಯ್ಯ || ಓಂ ಶಿವ || ಚಿಕ್ಕಚನ್ನಬಸವಯ್ಯ
ಚಿಕ್ಕ ಚನ್ನಬಸವಯ್ಯ ಸಾಧು ಶರಣರಿಗಾಗಿ || ಶಿವನ ||

ಅಕ್ಕಮಹಾದೇವಿ || ಓಂ ಶಿವ || ಶರಣೆ ನಂಬಕ್ಕ
ಶರಣೆ ನಂಬಕ್ಕ ಸಾಧು ಶರಣರಿಗಾಗಿ || ಶಿವನ ||

ಇನ್ನುಳಿದ ಶರಣು || ಓಂ ಶಿವ || ಶರಣು ರಕ್ಷೆಯ ಪಡೆದು
ಕರ್ಮದ ಭೋಗದಲ್ಲಿ ಬರುವ ಪರಿಣಾಮವೆಂತಹುದು || ಶಿವನ ||

ಸಿದ್ಧಾರೂಢರ ಜೋಳಿಗೆ || ಓಂ ಶಿವ || ಜಗತ್ತಿಗೆಲ್ಲಾ
ಹೋಳಿಗೆ ಸಿದ್ಧಾರೂಢರ ಶಿವಪೂಜೆ ಓಂ ಶಿವ ||
ಜಗತ್ತಿಗೆಲ್ಲಾ ಶಿವರಾತ್ರಿ || ಶಿವನ ||

* * *

ಏಕೆ ಚಿಂತೆ ಮಡುತಿಯ್ಯೋ ಎಲೆ ಮನವೇ
ನಿನಗೇತರ ಸುಖವಿದು ಎಲೆ ಮನುವೇ
ಲೋಕನಾಥನಪಾದ ಬೇಕಾದರೆ ನೀನು ಸಾಕಷ್ಟು
ಸಹಕಾರ ಪಡೆ ಮನವೇ || ಏಕೆ ||

ಯಾರಿಗೆ ಯಾರಿಲ್ಲ ಎಲೆ ಮನವೇ ಇದು
ಮೂರು ದಿನದ ಸಂತೆ ಎಲೆ ಮನವೇ
ಸೇರಿದವರ ಮುಂದೆ ಜಾರಿ ಬಿದ್ದಂತೆ ನೀನು
ಹರಟೆಗೆ ಹೋಗಬೇಡ ಎಲೆ ಮನವೇ || ಏಕೆ ||

ಹೇಸಿಗೆ ಸಂಸಾರ ಎಲೆ ಮನವೇ || ಇದ
ಲೇಸೆಂದು ತಿಳಿಬೇಡ ಎಲೆ ಮನವೇ
ಈಶನ ಪಾದಪೂಜೆ ಲೇಸಾಗಿ ಮಾಡಿದರೆ
ವಾಸುದೇವನೆ ಕಾಯನು ಎಲೆ ಮನವೆ || ಏಕೆ ||

ಕಳತನ ಮಾಡಬೇಡ ಎಲೆ ಮನವೇ |
ನೀನು ಸುಳ್ಳೊಂದು ಹೇಳಬೇಡ ಎಲೆ ಮನವೇ
ಬಲ್ಲಂತ ಹಿರಿಯರು ಹೇಳಿದ ಈ ಮಾತು
ಅಲ್ಲಂತ ಹೇಳಬೇಡ ಎಲೆಮನವೇ || ಏಕೆ ||

* * *

ಒಕ್ಕಲಿಗರು ನಾವು ಒಕ್ಕಲಿಗರು ಸೈ ಒಕ್ಕಲಿಗರು ನಾವು ಒಕ್ಕಲಿಗರು
ತೆಕ್ಕಲು ಬಿದ್ದ ಹೊಲಗದ್ದೆ ಎಲ್ಲವನ್ನು ಮಟ್ಟ ಮಾಡಿ
ಬೆಳಸ ಒಡ್ಡಿ ಒಕ್ಕಲುತನ
ಮಾಡುವವರು ನಾವು ಮಾಡುವವರು || ಒ ||

ಅರುಣೋದಯದ ಮುಂಚೆ ಎದ್ದು
ಶಿವನ ಜ್ಞಾನ ಮಾಡಿಕೊಂಡು ಗದ್ದೆ ಹೊಲಕೆ
ಏರನ್ನು ಕಟ್ಟುವವರು ನಾವು ಕಟ್ಟುವವರು || ಒ ||

ಏರು ಕಟ್ಟಿ ಹಾಕಿ ಹಾಡೋದು ಹಿಂಟೆ ತವಡೆ
ಎಲ್ಲಾ ಮುರಿದು ತೆವರು ಹಾಡಿ ಅಚ್ಚು ಕಟ್ಟು
ಮಾಡುವವರು ನಾವು ಮಾಡುವವರು || ಸೈ || || ಒ ||

ಮಟ್ಟ ಮಾಡಿದ ಗದ್ದೆ ಹೊಲಕೆ ರಾಗಿ ಬಿತ್ತನೆ ಭತ್ತ
ತಂದು ಒಟ್ಟಲುಹಾಕಿ ಆ ಒಡ್ಡು ಮಾಡುವ
ನಾವು ಮಾಡುವವರು || ಸೈ || || ಒ ||

ನಾಟಿಗೆ ಬಂದ ಪೈರುಕಿತ್ತು ಗದ್ದೆಹೊಲಕೆ
ನಾಟಿ ಮಾಡಿ ಸಂತೋಷದಿಂದ ಭಜನೆ
ಹಾಡುವರು ನಾವು ಹಾಡುವೆವು || ಸೈ || || ಒ ||

ನಾಟಿ ಗದ್ದೆ ದಿವಸ ನೋಡಿ ಉಪ್ಪು ಗೊಬ್ಬರ
ಹಾಕಿ ಮಕ್ಕಳೆಂದು ಚೆನ್ನಾಗಿ ಸಾಕುವರು
ನಾವು ಸಾಕುವವರು || ಒ ||

ಭತ್ತ ರಾಗಿ ಹೊಡೆ ಕಿತ್ತು ಹೂವು ಉದುರಿ
ಬಂದ ಮೇಲೆ ಕೊಯ್ದ ಕಟ್ಟೆ ಗಟ್ಟಿ ಕಾಳು ಕೇರುವವರು
ನಾವು ಕೇರುವವರು || ಸೈ || || ಒ ||

ಕಣದಲ್ಲಿ ಕುಟ್ಟಿ ಕೇರಿ ಜೊಳ್ಳುಗಟ್ಟಿ
ಬೇರೆ ಮಾಡಿ ರಾಶಿ ಹಾಕಿ ಮೇಟಿ ಪೂಜೆ ಮಾಡುವವರು
ನಾವು ಮಾಡುವವರು || ಒ ||

ಭತ್ತ ಕುಟ್ಟಿ ಅಕ್ಕಿ ಮಾಡಿ
ಮಾರ‍್ಲಾಮಿ ಹಬ್ಬ ಮಾಡಿ ನೆಂಟರಿಷ್ಟರೆಲ್ಲ ಕರೆದು
ಊಟಕ್ಕೆ ಹಾಕುವವರು ನಾವು ಹಾಕುವವರು || ಒ ||

ಇರುವಿ ಎಂಬತ್ನಾಲ್ಕು ಜೀವರಾಶಿಗಳಿಗೆಲ್ಲಾ
ಹೊಟ್ಟೆ ತುಂಬಾ ಅನ್ನ ಹಾಕೊ ಅನ್ನದಾತರು
ನಾವು ಅನ್ನದಾತರು || ಒ ||

ಬೊಪ್ಪೆಗೌಡನ ಪುರದಲ್ಲಿ ನೆಲೆಸಿರುವ ಸ್ವಾಮಿಯ
ತಪ್ಪದೆ ಮನದಲ್ಲಿ ನೆನೆಯಣ್ಣ | ಅಣ್ಣಾ ಸರ್ಪ
ಭೂಷಣರಿಗೆ ಕರ್ಪೂರದಾರತಿ ಒಪ್ಪದಿಂದ
ಅರ್ಪಿತ ಮಾಡಣ್ಣ || ಬೊಪ್ಪೆ ||

ಕೆಂಡಗಣ್ಣ ಸ್ವಾಮಿಯ ಕೊರಳೊಳಗಿರುವಂಥ
ರುದ್ರ ಮಾಲೆಯ ನೋಡಣ್ಣ | ಅಹಿದು
ಮಾರಿಗೆ ಗಂಡನಾಗಿರುವಂಥ ಕೆಂಚಪ್ಪ
ಜ್ಯೋತಿಯ ಬೆಳಗಣ್ಣ || ಬೊಪ್ಪೆ ||

ಶೂಲಕ್ಕೆ ಪಾಲಬರ್ಸದೂಳಿಯ ಮೂಲ ವಿನೋದವ
ನೋಡಣ್ಣ ಬಾಲನ ಪಡೆದು ಪೂಜೆಗೆ
ನಿಲ್ಲಿಸದೆ ನಿಟಿಸಿದ್ಧಪ್ಪನ ಬೇಡಣ್ಣ || ಬೊಪ್ಪೆ ||

ಹಗುರವಾಗಿಹ ಸಾಧನೆಯನ್ನು ಹಿಮ್ಮೆದೆಸಿ ಗೌ
ದೊರೆ ಕಾಣಣ್ಣ | ಕಾದ ಗಟ್ಟಿಯ ಮೇಲೆ ಕುಳಿತ
ಪುಣ್ಯಾತ್ಮನ ಪಾದ ಪೂಜೆಯ ಮಾಡಣ್ಣ || ಬೊಪ್ಪೆ ||

ಭಕ್ತರಿಗೆಲ್ಲಾ ಮುಕ್ತಿಯ ಕೊಡುವಂತ
ವೀರತ್ವ | ಪ್ರಭು ನೀ ಕಾಣಣ್ಣ ಭಕ್ತಿಗೂ
ಮುಕ್ತಿಗೂ ಒಲಿಸುವಂತಹ ನಿಟಿ ಸಿದ್ಧಪ್ಪನ ಬೇಡಣ್ಣ || ಬೊಪ್ಪ ||

* * *

ಹಂಸನಾಗಲು ಪರಮ ಹಂಸನಾಗಲು || ಪಲ್ಲವಿ ||

ಹಂಸೋ ಹಂಸೋ ಹಂಸೋ ಎನ್ನುತ್ತಾ ಧ್ವಂಸಗೈದು
ದೈತ ಭಾವ ಹಂಸನಾಗಲು ಪರಮ
ಹಂಸನಾಗಲು | ಮಾಯೆ ಮೂಲವನು ತಿಳಿದು || ಹಂಸ ||

ಗುಣಗಳನ್ನಳಿದು ಮಾಯೆ ಕಳೆದು ಸಳವಾಯು
ಧರೆ ಮಾಯೆ ಕಳೆಗತಿತನಾಗಿ || ಹಂಸ ||

ನೀರನುಳಿದು ರಾಜಹಂಸ | ಶ್ರೀರಸವೀಯುವಂತೆ
ಜಗರಿ || ಮೂರು ವೇದವುಳಿದು ಕೊಳೆವ |
ಸಾರತತ್ತ್ವ ಸಾರ ಸವಿವ || ಹಂಸ ||

ನಿರುಪಾಪ ಪುಣ್ಯವೆಂಬಿ | ಮರೆವ ಕಮಲ
ವನದ ಮೇಲುತಾ ಸರಿಪ ಜ್ಞಾನವೆಂಬ ಬನದಿ
ಪರಮ ಸುಖದಿ ಚರಿಸುವಂತೆ || ಹಂಸ ||

ಪೂರ್ಣಬ್ರಹ್ಮದಲ್ಲಿ ಹಾಡಿ ಪೂರ್ಣಭೋಧನಾಗಿ
ಉಂಡ | ಅನ್ನ ಅಮೃತ ಮಾಡಿ ಸವಿದ ಚೆನ್ನ
ಶ್ರೀಗುರುರಂಗನೆಂಬ ಹಂಸನಾಗಲು || ಹಂಸ ||

* * *

ಕೋತಿ ಮನವ ನಂಬಬಹುದೆ | ಇಂತಕೋತಿ
ಮನದ ಚೇಷ್ಟೆಗೊಳಗಾಗಬಹುದೆ ಕೋತಿ ಮನವ || ಕೋಡಿ ||

ತನುವೆಂಬ ವೃಕ್ಷದೊಳಿಯದು ದುಷ್ಟ ಗುಣವೆಂಬ
ಕೊಂಬೆಗಳಿಗೆ ಹಾರುತಿಹದು | ಅನುಮಾನಗಳ
ರೂಪಾಗಿದುದು ಒಂದು ಕ್ಷಣದಿ ಈರೇಳು
ಲೋಕವ ಸುತ್ತುತ್ತಿಹುದು || ಕೋತಿ ||

ದಿಶದಿಕ್ಕುಗಳ ನೋಡುತಿಹುದು
ಬಿಸಜಾಕ್ಷಿಯರ ನೋಡಿ ಪಲೆಕಿಸಿಯುವುದು
ವೃಕ್ಷನವರೇಳರ ಪಾಲಾಗಿಹುದು ಕೆಟ್ಟ
ವಿಷಯಗಳಂಜಿ ಪಣೆಗಳ ಮೇಲುತಿಹುದು || ಕೋತಿ ||

ಹೊರ ಜ್ಞಾನಧರ ಮನೆ ಸೇರದ | ನಿತ್ಯದುರಿತರರ್ಮದ
ಬಲದೊಳಾಡುತಿಹುದು | ನರಕದಿ ಬಿದ್ದು
ಹೋಗುವುದು ನಮ್ಮ ಗುರು ಮಹಾಲಿಂಗನ
ಮರೆತುಕೊಂಡಿಹುದು || ಕೋತಿ
ಮನವೇ ನಂಬಬಹುದೇ || ಕೋತಿ ||

* * *

ರತ್ನ ಬಂದಿದೆ ನೋಡಿರೋ ಉನ್ನತ ಜೀವ |
ಬಂದಿದೆ ನೋಡಿರೋ || ಪ || ಪೃಥ್ವಿಗಧಿಕ
ಬ್ರಹ್ಮಪುರದಿಂದ ಬಂದಿದೆ | ರತ್ನ ಪರೀಕ್ಷೆಯ
ಬಲ್ಲ ಸತ್ಪುರುಷರು ರತ್ನ ಬಂದಿದೆ ನೋಡಿರೋ ||

ಉನ್ನತ ಶಿರದೊಳಡಗಿದೆ ಯಾವಾಗಲೂ ಕರದಲ್ಲಿ
ಕಾಣುತಿದೆ ಹೊರಚಂದ್ರ ಸೂರ‍್ಯ ಬೀದಿಗೊಳಗೊಟ್ಟಿದೆ
ದುರಿತ ಕರ್ಮಗಳಳಿದವಗ ಕಾಣುತಲಿದೆ || ರತ್ನ ||

ಅಷ್ಟ ದಳಗಳಿಂದ | ಆ ರತ್ನವು ದಿಟ್ಟವಾಗಿರುಹುದ
ದೃಷ್ಟಿಯನ್ನಗಲದೆ ನೋಡಿದ ಪುರಹಿನ
ದಿವ್ಯ ಪ್ರತಾಪನಾಗಿ ಶ್ರೇಷ್ಠನಾಗುವನು || ರತ್ನ ||
ಕಳ್ಳರ ಭಯವಿಲ್ಲವೋ ಈ ರತ್ನಕ್ಕೆ ಸುಳ್ಳಾರ
ಸುಳ್ಳು ಇಲ್ಲವು || ಎಲ್ಲೆಲ್ಲಿ ನೋಡಲಪ್ಪ ಕಾಣದು
ತಾನು ಒಲ್ಲೆನೆಂದರೂ ಬಿಡದೆ ದೂರಿಗೆ ನಿಲ್ಲದು || ರತ್ನ ||

ಶಿರದೊಳು ರತ್ನವನು ಧರಿಸಿರುವಂತ
ಉರಗನ ಹೃದಯವನ್ನು ಉರಗಭೂಷಣ
ಪಕ್ಷಿ ಹಂಸವಾಹನ ಮುಖ್ಯ | ಸುರಮುನಿ
ಹೃದಯಡಿ ನಿತ್ಯ ಬೆಳಗುವಂಥ || ರತ್ನ ||

ದೊರೆದ ಸಾಯಿಗಳ ಇಲ್ಲಯ್ಯ ನವಕೋಟಿಯ
ವರನಾರಾಯಣನಲ್ಲಿಯೂ ನೆರೆಚಕ್ರವರ್ತಿ
ಬೊಕ್ಕಸದೊಳಗಿಲ್ಲ | ಶ್ರೀಗುರು ಮಹಾಲಿಂಗನ
ಭಂಡಾರದೊಳಿದು || ರತ್ನ ||

* * *

ಎಷ್ಟು ಮಾತ್ರ ಭವದ ಕಡಲದು |
ಗುರು ಕೃಪೆಯೊಳು ದಾಂಟಲೊಂದು ಗೋಷ್ಟದ
ವೆನಿಪುದು || ಪ || ಅಷ್ಟ
ಭೋಗದಾಸೆ ಬಿಟ್ಟು | ಅಷ್ಟಪಾಶಗಳನ್ನು ಸುಟ್ಟು
ಅಷ್ಟದಳದ ಕಮಲ ಮಧ್ಯ | ದಿಟ್ಟ ಒಲದೀಶ್ವರನಿಗೆ
ಎಷ್ಟು ಮಾತ್ರ ಯೋಗಸೂತ್ರವೆಂದು ಸಾಧಿಸಿ |
ಕಾಯವೆಂಬ | ಯೋಗಮಂಟಪವನು ಶೋಧಿಸಿ |
ನಾಗಸರ್ಪದೆಡೆಯ ತುಳಿಯೆ | ನಾಗರತ್ನ
ಕ್ರಾಂತಿ ಪೊಳೆಯೆ | ನಾಗಸ್ವರದಿ ಮನವು ಮುಳುಗಿ
ರಾಗವಳಿದ ಯೋಗಿವರಗೆ || ಎಷ್ಟು ||

ಆರು ಬಾಗಿಲನ್ನು ಮುಚ್ಚಲುದ್ದಿದವಳ ಬೇರೆ
ಆರು ಮೂರು ಕಮಲ ಬಿಚ್ಚಲು ಮೂರು ನದಿಯ
ಮಧ್ಯದಲ್ಲಿ ಮೂರು ಕಾಲಿನ ಹಂಸ ಸಣ್ಣ ದ್ವಾರ
ತೆಗೆದು ಬಡಿವ ಘಂಟೆ |
ಭೇರಿರವವ ಕೇಳ್ವೆಗೆಯುತ || ಎಷ್ಟು ||

ದುರುಳು ಸಂತತಿ ದೂರಗೈಯುತ | ನಮ್ಮ ಶಿವನ |
ಶರಣ ಸಂತತಿಯಲ್ಲಿ ಸೇರುತ | ಧರೆಯೊಳಧಿಕವೆನಿಸಿ
ಮರೆವ | ಪರಮ ಶ್ರೀಗುರು ರಂಗಲಿಂಗನ ಚರಣ
ಕಮಲ ಬೆರೆತು ಜಗವೇ ಮರತು ಮುಕ್ತನಾದ
ಯತಿಗೆ || ಎಷ್ಟು ||

* * *

ಓದಬಾರದೇ ತರಳ | ಓದಬಾರದೆ || ಪ ||
ಓದಿನೊಳಗಣೋದು ಶ್ರೀಗುರು ಭೋಧಿಸಿರುವ
ಅರ್ಥವರಿತು ಓದಬಾರದೇ || ಮೂರು
ನದಿಯ ನಡುವೆ ಮಿಂದು ಚಾರುಬ್ರಹ್ಮ
ಗಿರಿಯ ಮಠದ | ಆರು ಮೆಟ್ಲುಯೇರಿ ಸಣ್ಣ |
ದ್ವಾರವನ್ನು ತೆರೆದು ನೋಡಿ || ಓದ ||

ಜಲಜವಾರು ಕಂಡು ಒಳಗೆ ಪೊಳೆವಕಾವಾದಿಯಾಗಿ
ಸಲೆಕ್ಷ ಕಾರ‍್ಯದಂತವರಿತು ದಳದೊಳಕ್ಷರೈವತ್ತನ್ನು || ಓದ ||

ಈಡಪಿಂಗಳಯಂಬುವಂಥ ನಾಡಿಯರಡು
ತಡೆವ ಬ್ರಹ್ಮ | ನಾಡಿ ಮಧ್ಯ ಕುಳಿತು ಮುದದಿ |
ನೋಡಿ ಸೋನಂ ಸೋಹಮೆನ್ನುತ || ಓದ ||

ಚಾರುಪಟ್ಟೆ ಹಲಿಗೆ ಮೇಲೆ ಸಾರಬ್ರಹ್ಮ | ಸೂತ್ರ
ಪಿಡಿದು ಮೂರು ಮುಖದ ಕಂಠದಿಂ | ಸಾರ
ಮಂತ್ರ ಪ್ರಣದವ ಬರೆದು || ಓದ ||

ಚಟಲ ಶ್ರೀಗುರು ಮಹಾಲಿಂಗ ಸ್ಫಂಟದಿ ವರದಿ
ಮಂತ್ರರಾಜ | ಕುಟಿಲವಳಿದು ಭಕ್ತಿಯಿಂದ |
ಘಟವು ಎಂಬ ಮಠದಿ ನಿತ್ಯ || ಓದ ||

* * *

ಬಸವಣ್ಣನ ಭಕ್ತಿ ಚೆನ್ನಾ ಬಸವಣ್ಣನ
ಧ್ಯಾನ ಚೆನ್ನ ಬಸವಣ್ಣನ ಭಕ್ತಿ ||
ಮಡಿವಾಳಯ್ಯನ ನಿಷ್ಠೆ ಪ್ರಭುದೇವರ
ಜಂಗಮಸ್ತ | ಅಜಗಣ್ಣನ ಐಕ್ಯಸ್ಥಳ
ನಿಜಗಣನ ಆರೋಢ ಸ್ಥಳ || ಬಸವಣ್ಣ ||

ಸಿದ್ಧರಾಮಯ್ಯನ ಸಮಾಧಿ ಸ್ಥಳ
ಇಂತವರ ಕರುಣ ಪ್ರಸಾದವೆನಗೆ
ಆಯಿತು ಚೆನ್ನ ಮಲ್ಲಿಕಾರ್ಜುನ || ಬಸವಣ್ಣ ||

* * *

ದೇಹವನು ದಂಡಿಸದೆ ಮೋಹವನು ಖಂಡಿಸದೆ
ಉಂಡುಂಡು ಸ್ವರ್ಗವೇರುವುದಕೆ ಇವೇನು
ರಂಡೆಯೊಳುವಳೆ ಈ ಅದ್ವೈತವನು ಗುರುವೆ || ತತ್ತ್ವ ||

ಎಂಥಾ ಕುದುರೆನಾ ಕೊಂಡುಕೊಂಡೆ ಕರ್ಮಕುಂತು
ನೋಡದಿದ್ರೆ ಅದರ ಗುಣವ – ಕಂಡೆ || ಎಂತಾ ||

ಇಕ್ಕಿದಷ್ಟು ಉರುಳಿನಾದರೂ ಮುಕ್ಕುತೈತೆ ತೆಕ್ಕೆ
ಹುಲ್ಲು ತಿಂದು ನೆಲವ ನೆಕ್ಕುತೈತೆ || ಎಂತಾ ||

ತಕ್ಕ ತಕ್ಕ ತೈ ತೈ ಕುಣಿಯುತೈತೆ ಅದು ಪಕ್ಕ
ಲದ್ದಿಯಾದರೂ ಅದು ಹಾರುತೈತೆ || ಎಂತಾ ||

ಅಡ್ರಾಗಾಲ ಹಾಕಿ ನಾನು ಕೂತುಕೊಂಡ್ರೆ
ಅದು ತೊಡ್ರಗಾಲ ಕೊಟ್ಟಿ ನನ್ನ ಕೆಡಗುತ್ತಲ್ಲ || ಎಂತಾ ||

ಬೀಸಿ ಬೀಸಿ ಬಾಲದಲ್ಲಿ ಮುಖಕೆ ಹೊಡೆಯಿತಲ್ಲ
ಊರ ಮುಂದಕೆ ಹೋಗಿ ಕುದುರೆಯೇರಬೇಕು
ಸೂರ‍್ಯ ಮುಳುಗೊ ಹೊತ್ತಿಗು ಊರ ಸೇರಬೇಕು
ಸೇರದಿದ್ದರೆ ಕಣ್ಣಿಗೆ ತಾಳಿಮಾಡಬೇಕು || ಎಂತಾ ||

ಕಂತು ಹರನ ಭಜನೆಯನು ಕಲಿತುಕೊಂಡೆ
ಶಾಂತಮಲ್ಲೇಶನ ಕೂಡಿಕೊಂಡೆ || ಎಂತಾ ||