ಅಂಬಾರದೊಳಗೊಂದು ಇಂಬಾದ ಗುಡಿಯುಂಟು ಶಂಬು ಲಿಂಗನ ಪೂಜೆ ನಡೆವುದಮ್ಮ || ಸ್ಥಂಭ ಒಂದರ ನಡುವೆ ಶೃಂಗಾರ ವಾದಾಂಥ ಜಂಗಮರ ಮಠಕ್ಕೆರಡು ದಾರ‍್ಯಾವುದಮ್ಮ ದಾರೀಲಿ ಹೋಗುವಾಗ || ವಿರಾರೂ ಮಂದಿ ಪಾರದಿಂದಿರುವರು ನೋಡಿರಮ್ಮಾ || ಅವರನ್ನು ಏರಿಮೇಲ್ ಬಿಟ್ಟೇರುವಾಗ | ತುಮಬಾರೆಂಟು ಮಂದಿ ತಡೆವಾರಮ್ಮಾ || ಮುತ್ತಿನಾ ಮಂಟಪದಾ || ಸುತ್ತಲಿರುವುದೊಂದು ರತ್ನದ ಕೊಳವಿದು || ನೋಡಿರಮ್ಮ || ಸತ್ಯಾವಂತರು ಬಂದು ನಿತ್ಯ ಸ್ನಾನವ ಮಾಡೆ | ನಿತ್ಯಾ ಅಮೃತವನ್ನೇ ಪಡೆವರಮ್ಮಾ | ರತ್ನ ಮಂಟಪದೊಳು ರಂಭಾಮೇನಕೆಯರು ನಾಟ್ಯಾವನಾಡುವರ ನೋಡಿರಮ್ಮ ಕದರು ಪಾದರು ದಾರಿ ವಿಧವನೀ ತಿಳಿಯದೇ ಹದಗೆಟ್ಟು ಹೋಗಬೇಡಿರಮ್ಮ || ಎಚ್ಚರಿಕೆ || ಎಚ್ಚರಿಕೆ || ಎಚ್ಚರಿಕೆ ||