ಪಲ್ಲವಿ : ಅಂಬೆಗಾಲ ಕೃಷ್ಣನನ್ನು ಎತ್ತಿ ಮುದ್ದಾಡುವಾ
ಕಣ್ಣು ಮುಚ್ಚಾಲೆ ಆಟ ಆಡುವಾ ಆಡುವಾ

ಚರಣ :  ಮರಕೋತಿ ಆಟ ಆಡಿ ಮರಸೇಬು ಕದ್ದು ತಿಂದು
ಕೃಷ್ಣನನ್ನು ಕೂಡಿಕೊಂಡು ಎದ್ದುಬಿದ್ದು ಓಡುವಾ

ಯಶೋದಮ್ಮ ನೋಡಿದರೆ ಅಂಬೆಗಾಲ ಇಕ್ಕುವ
ಅಮ್ಮನಿರದ ಸಮಯದಲ್ಲಿ ಎದ್ದು ನಿಂತು ಓಡುವ

ಆಟವನ್ನು ನೋಡ ಬನ್ನಿ ಕೃಷ್ಣನಿಗೆ ಜಯವೆನ್ನಿ
ಜಯ ಜಯ ಕೃಷ್ಣಾ ಜಯ ಹರಿ ಕೃಷ್ಣಾ