ಪ್ರಮುಖ ಘಟನಾವಳಿಗಳು:
1845: ಅಮೇರಿಕಾದ ನೇವಲ್ ಅಕಾಡೆಮಿಯನ್ನು ಅನ್ನಾಪೋಲಿಸಿನಲ್ಲಿ ಸ್ಥಾಪಿಸಲಾಯಿತು.
1857: ಅಮೇರಿಕನ್ ಚೆಸ್ ಅಸೋಸಿಯೇಷನ್ ಸ್ಥಾಪನೆಯಾಯಿತು.
1865: ಬಿಲಿಯರ್ಡ್ ಆಟದ ಚಂಡಿಗೆ ಜಾನ್ ಹ್ಯಾಟ್ಸ್ ಪೇಟೆಂಟ್ ಪಡೆದರು.
1899: ಐಸಾಕ್ ಆರ್ ಜಾನ್ಸನ್ ಬೈಸೈಕಲ್ ಫ್ರೇಂ ಗೆ ಪೇಟೆಂಟ್ ಪಡೆದರು.
1903: ಬ್ರಿಟನ್ನಿನಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಡಲು ಎಮ್ಮಿಲೀನ್ ಪಂಕರ್ಸ್ಟ್ ಮಹಿಳಾ ಸಮಾಜ ಮತ್ತು ರಾಜಕೀಯ ಒಕ್ಕೂಟವನ್ನು ರೂಪಿಸಿದರು.
1911: ಪನಾಮಾ ಕಾಲುವೆಯನ್ನು ತೆರೆಯಲಾಯಿತು.
1964: ಜಪಾನಿನಲ್ಲಿ ಬೇಸಿಗೆ ಒಲಂಪಿಕ್ಸ್ ಆರಂಭವಾಯಿತು.
1967: ಅಂತರರಾಷ್ಟ್ರೀಯ ಬಾಹ್ಯಾಕಾಶ ಕಾನೂನಿನ ಮೂಲಭೂತ ಕಾನೂನಿನ ಚೌಕಟ್ಟಾದ ‘ಔಟರ್ ಸ್ಪೇಸ್ ಟ್ರೀಟಿ’ಯನ್ನು ಜಾರಿಗೊಳಿಸಲಾಯಿತು.
1992: ಹೂಗ್ಲಿ ನದಿಯ ಅಡ್ಡಲಾಗಿ ನಿರ್ಮಿಸಿದ ಎರಡನೇ ಸೇತುವೆಯಾದ ವಿದ್ಯಾಸಾಗರ ಸೇತುವೆಯನ್ನು ಉದ್ಘಾಟಿಸಲಾಯಿತು.
1999: ಮಿಲೇನಿಯಂ ಫೆರ್ರಿಸ್ ವೀಲ್ ಲಂಡನ್ನಿನ ಐ ಎಂದೇ ಖ್ಯಾತಿ ಪಡೆದುದನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದರು.
ಪ್ರಮುಖ ಜನನ/ಮರಣ:
1902: ಸಾಹಿತಿ, ಪತ್ರಕರ್ತ, ಚಿಂತಕರಾ ಜ್ಞಾನಪೀಠ ಪುರಸ್ಕೃತ ಕೆ.ಶಿವರಾಮ ಕಾರಂತ ಜನಿಸಿದರು.
1906: ಖ್ಯಾತ ಲೇಖಕ ಆರ್.ಕೆ.ನಾರಾಯಣ್ ಜನಿಸಿದರು.
1912: ಭಾರತೀಯ ಕವಿ, ವಿಮರ್ಶಕ ರಾಮ್ ವಿಲಾಸ್ ಶರ್ಮ ಜನಿಸಿದರು.
1923: ಸ್ಪಟಿಕಶಾಸ್ತ್ರ ಕ್ಷೇತ್ರದ ವಿಜ್ಞಾನಿ ಎಸ್.ರಾಮಸೇಸನ್ ಜನಿಸಿದರು.
1954: ಖ್ಯಾತ ಹಿಂದಿ ಚಿತ್ರರಂಗದ ನಟಿ ರೇಖ ಜನಿಸಿದರು.
1960: ತಮಿಳು ಭಾಷೆಯ ಹಾಸ್ಯ ನಟ ವಡಿವೇಲು ಜನಿಸಿದರು.
1964: ಖ್ಯಾತ ನಟ ಗುರುದತ್ ನಿಧನರಾದರು.
1973: ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ಜನಿಸಿದರು.
1997: ಭಾರತೀಯ ಮೂಲದ ಅಮೇರಿಕನ್ ರಸಾಯನ ಶಾಸ್ತ್ರಜ್ಞ ಮತ್ತು ಡೆವರ್-ಚಾಟ್-ಡುನ್ಕಾನ್ಸನ್ ಮಾದರಿಯನ್ನು ಪ್ರತಿಪಾದಿಸಿದ ಮೈಕಲ್ ಎಸ್. ಡೆವಾರ್ ನಿಧನರಾದರು.
2011: ಖ್ಯಾತ ಹಿನ್ನೆಲೆ ಗಾಯಕ ಜಗಜೀತ್ ಸಿಂಗ್ ನಿಧನರಾದರು.