ಪ್ರಮುಖ ಘಟನಾವಳಿಗಳು:
1737: ಭಾರತದ ಕಲ್ಕತ್ತಾದಲ್ಲಿ ಭೂಕಂಪದಿಂದ ಸುಮಾರು 3 ಲಕ್ಷಜನ ಮೃತಪಟ್ಟು ಕಲ್ಕತ್ತಾ ನಗರದ ಬಹುಭಾಗ ನಾಶವಾಯಿತು.
1811: ಜೂಲಿಯಾನ, ಮೊದಲ ಹಬೆ ಚಾಲಿತ ಫೆರ್ರಿ ದೋಣಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು.
1852: ಅತ್ಯಂತ ಹಳೆಯ ವಿಶ್ವವಿದ್ಯಾಲಯವಾದ ಸಿಡ್ನಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.
1864: ಮೇರಿ ಲ್ಯಾಂಡಿನಲ್ಲಿ ಗುಲಾಮಗಿರಿಯನ್ನು ನಿಷೇಧಿಸಲಾಯಿತು.
1864: ಕಂಪಿನಾ ಗ್ರಾಂಡನ್ನು ಬ್ರಜಿಲ್ಲಿನ ಒಂದು ನಗರವೆಂದು ಸ್ಥಾಪಿಸಲಾಯಿತು.
1869: ಮತಗಳ ಎಣಿಕೆ ಮಾಡಲು ವಿದ್ಯುತ್ ಯಂತ್ರಕ್ಕೆ ಥಾಮಸ್ ಎಡಿಸನ್ ಪೇಟೆಂಟ್ ಪಡೆದರು.
1881: ಕ್ಯಾಮೆರಾಗಳಿಗೆ ಫಿಲ್ಮ್ ರೋಲುಗಳಿಗೆ ಡೇವಿಡ್ ಹೆಂಡರ್ಸನ್ ಹೌಟ್ಸನ್ ಪೇಟೆಂಟ್ ಪಡೆದರು.
1918: ಪ್ರಮುಖ ಟ್ಸುನಾಮಿ ಕ್ಯಾರಿಬಿಯನನ್ನು ಅಲುಗಾಡಿಸಿತು.
1922: ಎಫ್.ಬಿ.ಐ.ಯ ಮೊದಲ ಮಹಿಳಾ ತನಿಖಾಧಿಕಾರಿಯನ್ನು ನೇಮಿಸಲಾಯಿತು.
1987: ಶ್ರೀಲಂಕಾದಲ್ಲಿ ಭಾರತೀಯ ಪೀಸ್ ಕೀಪಿಂಗ್ ಫೋರ್ಸ್ ಆಪರೇಷನ್ “ಪವನ್” ಕಾರ್ಯಾಚರಣೆಆರಂಭಿಸಿದರು.
1990: ನ್ಯೂಯಾರ್ಕಿನಲ್ಲಿ ನಗರ ಪುರಾತತ್ವಶಾಸ್ತ್ರ ಕೇಂದ್ರ ತೆರೆಯಲಾಯಿತು.
ಪ್ರಮುಖ ಜನನ/ಮರಣ:
1902: ಭಾರತೀಯ ಕಾರ್ಯಕರ್ತ ರಾಜಕಾರಣಿ ಜಯಪ್ರಕಾಶ್ ನಾರಾಯಣ್ ಜನಿಸಿದರು.
1916: ಭಾರತೀಯ ಶಿಕ್ಷಣ ತಜ್ಞ ಮತ್ತು ಕಾರ್ಯಕರ್ತ ನಂಜಿ ದೇಶ್ ಮುಖ್ ಜನಿಸಿದರು.
1942: ಭಾರತವು ಹಿಂದೆಂದೂ ಕಾಣದ ಶ್ರೇಷ್ಠ ಹಿಂದಿ ಚಿತ್ರ ನಟ ಅಮಿತಾಬ್ ಬಚ್ಚನ್ ಜನಿಸಿದರು.
1945: ಬಹುಭಾಷಾ ನಟಿ ಕನ್ನಡದ ಚಲನಚಿತ್ರ ತಾರೆ ಜಯಂತಿ ಜನಿಸಿದರು.
1946: “ಪರಂ” ಸರಣಿಯ ಸೂಪರ್ ಕಂಪ್ಯೂಟರ್ ಗಳ ವಿಜ್ಞಾನಿ ಡಾ.ವಿಜಯ್ ಪಿ. ಭಕ್ತಾರ್ ಜನಿಸಿದರು.
1968: ಹಿಂದಿ ನಟ ಚಂದ್ರಚೂಡ ಸಿಂಗ್ ಜನಿಸಿದರು.
1984: ಟೆಸ್ಟ್ ಕ್ರಿಕೆಟ್ ಆಟಗಾರ ಖಂಡು ರಂಗ್ನೇಕರ್ ನಿಧನರಾದರು.
2002: ಖ್ಯಾತ ಹಿರಿಯ ಹಿಂದಿ ಮತ್ತು ಗುಜರಾತಿ ನಟಿ ದೀನಾ ಪಾಟಕ್ ನಿಧನರಾದರು.
Leave A Comment