Categories
e-ದಿನ

ಅಕ್ಟೋಬರ್-14

 

ಪ್ರಮುಖ ಘಟನಾವಳಿಗಳು:

1773: ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಚಹಾ ಹಡಗುಗಳ ಸರಕನ್ನು ಸುಡಲಾಯಿತು.

1773: ಪೋಲ್ಯಾಂಡಿನಲ್ಲಿ ಮೊದಲ ದಾಖಲಿತ ಶಿಕ್ಷಣ ಸಚಿವಾಲಯ ಸ್ಥಾಪನೆಯಾಯಿತು.

1834: ಕಾಳು ಬಿತ್ತನೆ ಯಂತ್ರಕ್ಕೆ ಹೆನ್ರಿ ಬ್ಲೇರ್ ಪೇಟೆಂಟ್ ಪಡೆದರು.

1879: ಥಾಮಸ್ ಆಲ್ವಾ ಎಡಿಸನ್ ಇನ್ಕಾಂಡೀಸೆಂಟ್ ಲೈಟ್ ಬಲ್ಬುಗಳಿಗೆ ಪೇಟೆಂಟ್ ಪಡೆದರು.

1882: ಪಂಜಾಬ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1884: ಜಾರ್ಜ್ ಈಸ್ಟ್ಮ್ಯಾನ್ ಪೇಪರ್-ಸಟ್ರಿಪ್ ಛಾಯಾಗ್ರಹಣದ ಚಲನಚಿತ್ರಕ್ಕೆ ಪೇಟೆಂಟ್ ಪಡೆದರು.

1922: ಮೊದಲ ಸ್ವಯಂಚಾಲಿತ ಟೆಲಿಫೋನ್ ಎಕ್ಸ್ಚೇಂಜ್ ನ್ಯೂಯಾರ್ಕಿನಲ್ಲಿ ಸ್ಥಾಪಿಸಲಾಯಿತು.

1956: ಬಿ.ಆರ್.ಅಂಬೇಡ್ಕರ್ 3,65,000 ಬೆಂಬಲಿಗರೊಂದಿಗೆ ಬೌಧ್ಧ ಧರ್ಮಕ್ಕೆ ಮತಾಂತರ ಮಾಡಿಕೊಂಡರು.

1991: ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ವಾಯುಮಂಡಲದ ಪ್ರಾಧಿಕಾರದಿಂದ ವಿಜ್ಞಾನಿಗಳು ಭೂಮಿಯ ರಕ್ಷಿತ ಓಜೋನ್ ಪದರವು ಶೇ 4% ಹಾಳಾಗಿದೆ ಎಂದು ಘೋಷಿಸಿದರು.

1997: ಅರುಂಧತಿ ರಾಯ್ ಅವರ ಪುಸ್ತಕ “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಗೆ ಬುಕ್ಕರ್ ಪ್ರಶಸ್ತಿ ನೀಡಲಾಯಿತು.

1999: ಪರಮಾಣು ಪರೀಕ್ಷೆ ನಿಷೇಧ ಒಪ್ಪಂದವನ್ನು ಅಮೇರಿಕಾದ ಸೆನೇಟಿನಲ್ಲಿ ನಿರಾಕರಿಸಲಾಯಿತು.

ಪ್ರಮುಖ ಜನನ/ಮರಣ:

1542: ಭಾರತದ 3ನೇ ಮುಘಲ್ ಸಾಮ್ರಾಜ್ಯದ ರಾಜ ಅಬ್ದುಲ್-ಫತ್-ಜಲಾಲ್-ಉದ್ದಿನ್ ಜನಿಸಿದರು.

1643: ಮುಘಲ್ ಸಾಮ್ರಾಜ್ಯದ ರಾಜ ಬಹಾದುರ್ ಶಾಹ್-I ಜನಿಸಿದರು.

1931: ಸಿತಾರ್ ವಾದಕ ನಿಖಿಲ್ ಬ್ಯಾನರ್ಜಿ ಜನಿಸಿದರು.

1961: ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ಕಿರುತೆರೆ ನಟ ಪರ್ಮೀತ್ ಸೇಠಿ ಜನಿಸಿದರು.

1969: ಲೇಖಕ, ನಿರ್ದೇಶಕ, ನಿರ್ಮಾಪಕ, ನಟ, ಚಲನಚಿತ್ರ ವಿತರಕ, ಛಾಯಾಗ್ರಾಹಕ ಅರ್ದೇಶಿರ್ ಇರಾನಿ ನಿಧನರಾದರು.

1978: ಭಾರತದ ಕಾರ್ನಾಟಿಕ್ ಶಾಸ್ತ್ರೀಯ ಕೊಳಲು ವಾದಕ ಶಶಾಂಕ್ ಸುಬ್ರಮಣ್ಯಂ ಜನಿಸಿದರು.

1981: ಭಾರತೀಯ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಜನಿಸಿದರು.

1998: ಹಿಂದಿ ಭಾಷೆಯಲ್ಲಿ ಪತ್ತೆದಾರಿ ಕಾದಂಬರಿ ಬರಹಗಾರ ಓಂ ಪ್ರಕಾಶ್ ಶರ್ಮ ನಿಧನರಾದರು.

2011: ತೆಲುಗು ಚಿತ್ರರಂಗದ ಗೀತ ರಚನೆಕಾರ ಜಲಧಿ ರಾಜಾರಾವ್ ನಿಧನರಾದರು.