ಪ್ರಮುಖ ಘಟನಾವಳಿಗಳು:
1855: ಬೆಸ್ಸಿಮರ್ ಸ್ಟೀಲ್ ತಯಾರಿಸುವ ಪ್ರಕ್ರಿಯನ್ನು ಪೇಟೆಂಟ್ ಮಾಡಲಾಯಿತು.
1888: ನ್ಯಾಷನಲ್ ಜಿಯೋಗ್ರಫಿಕ್ ನಿಯತಕಾಲಿಕೆಯನ್ನು ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
1907: ಅಟ್ಲಾಂಟಿಕ್ ಮಹಾಸಾಗರದ ಮೇಲೆ ಮೊದಲ ವಾಣಿಜ್ಯ ವಯರ್ ಲೆಸ್ ಟೆಲಿಗ್ರಾಫ್ ಅನ್ನು ಕಳುಹಿಸಲಾಯಿತು.
1919: ರೇಡಿಯೋ ಕಾರ್ಪೋರೇಷನ್ ಆಫ್ ಅಮೇರಿಕಾವನ್ನು ಸ್ಥಾಪಿಸಲಾಯಿತು.
1921: ಬೆಲ್ಜಿಯಂನ ಸಾರ್ವಜನಿಕ ಗ್ರಂಥಾಲಯ ಕಾನೂನು ಜಾರಿಗೆ ಬಂದಿತು.
1952: ಪ್ರಪಂಚದಲ್ಲೆ ಮೊದಲ ಬಾರಿಗೆ ಮಾನವನ ಮೇಲೆ ಯಾಂತ್ರಿಕ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಯಿತು.
1956: ಇಂಗ್ಲೆಂಡಿನ ಮೊದಲ ದೊಡ್ಡ ಪ್ರಮಾಣದ ಪರಮಾಣು ವಿದ್ಯುತ್ ಕೇಂದ್ರವನ್ನು ತೆರೆಯಲಾಯಿತು.
1979: ಮದರ್ ಥೆರೆಸಾ ಅವರಿಗೆ ನೋಬಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
2000: ಮೇಡಮ್ ಟುಸ್ಸಾಡ್ಸ್ ವ್ಯಾಕ್ಸ್ ವಸ್ತುಸಂಗ್ರಹಾಲಯವನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ತೆರೆಯಲಾಯಿತು.
2003: ವಿಶ್ವದ ಅತ್ಯಂತ ಎತ್ತರವಾದ ಕಟ್ಟಡ ತೈಪೈಯ ನಿರ್ಮಾಣವನ್ನು ಪೂರ್ಣಗೊಳಿಸಲಾಯಿತು.
ಪ್ರಮುಖ ಜನನ/ಮರಣ:
1817: ಭಾರತೀಯ ತತ್ವಜ್ಞಾನಿ ಮತ್ತು ವಿದ್ವಾಂಸ ಸಯದ್ ಅಹಮದ್ ಖಾನ್ ಜನಿಸಿದರು.
1892: ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರಾಗಿದ್ದ ಆರ್.ಕೆ.ಶಣ್ಮುಖಂ ಚೆಟ್ಟಿ ಜನಿಸಿದರು.
1947: ಖ್ಯಾತ ನಿರೂಪಕಿ ಸಿಮಿ ಗಾರೆವಾಲ್ ಜನಿಸಿದರು.
1955: ಖ್ಯಾತ ಹಿಂದಿ ಚಿತ್ರನಟಿ ಸ್ಮಿತಾ ಪಾಟಿಲ್ ಅವರು ಜನಿಸಿದರು.
1965: ಚಿತ್ರ ನಟ ಸಂಜಯ್ ಕಪೂರ್ ಜನಿಸಿದರು.
1970: ಭಾರತೀಯ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಜನಿಸಿದರು.
1980: ಭಾರತದ ಖ್ಯಾತ ಕ್ರಿಕೆಟ್ ಆಟಗಾರ್ತಿ ರೀಮಾ ಮಲ್ಹೋತ್ರ ಜನಿಸಿದರು.
1981: ಭಾರತೀಯ ಕವಿ, ಲೇಖಕ, ಗೀತರಚನೆಕಾರ ಕಣ್ಣದಾಸನ್ ನಿಧನರಾದರು.
1984: ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ಅವರು ಜನಿಸಿದರು.