Categories
e-ದಿನ

ಅಕ್ಟೋಬರ್-19

 

ಪ್ರಮುಖ ಘಟನಾವಳಿಗಳು:

1630: ಬಾಸ್ಟನ್ನಿನಲ್ಲಿ ಮೊದಲ ಸಾಮಾನ್ಯ ನ್ಯಾಯಾಲಯದ ಕಾರ್ಯ ನಡೆಸಲಾಯಿತು.

1722: ಬೆಂಕಿಯನ್ನು ಆರಿಸಲು ಉಪಯೋಗಿಸುವ ಯಂತ್ರಕ್ಕೆ ಫ್ರೆಂಚ್ ಸಿ.ಹಾಪ್ಫರ್ ಪೇಟೆಂಟ್ ಪಡೆದರು.

1853: ಮೊದಲ ಹಿಟ್ಟಿನ ಗಿರಣಿಯ ಕಾರ್ಯ ಆರಂಭಿಸಲಾಯಿತು.

1872: ವಿಶ್ವದ ಅತಿ ದೊಡ್ಡ ಚಿನ್ನದ ಗಟ್ಟಿ (215 ಕೆ.ಜಿ) ದಕ್ಷಿಣ ವೇಲ್ಸಿನಲ್ಲಿ ಪತ್ತೆಯಾಯಿತು.

1914: ಅಮೇರಿಕಾದ ಅಂಚೆ ಕಛೇರಿಯ ಮೊದಲ ಪತ್ರವನ್ನು ಸಂಗ್ರಹಿಸಲು ಅಥವಾ ತಲುಪಿಸಲು ವಾಹನವನ್ನು ಬಳಸಲಾಯಿತು.

1926: ಮೊದಲ ಅರ್ಧ ಸ್ವಯಂಚಾಲಿತ ರೈಫೆಲ್ಲಿಗೆ ಜಾನ್.ಸಿ.ಗರಾಂಡ್ ಪೇಟೆಂಟ್ ಪಡೆದರು.

2005: ಸಿಸ್ಕೋ ಸಿಸ್ಟಮ್ಸ್ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಅಮೇರಿಕ ಹೊರಭಾಗದಲ್ಲಿ ಅತಿದೊಡ್ಡ ಹೂಡಿಕೆಯನ್ನು (1.1 ಶತಕೋಟಿ ಡಾಲರ್) ಭಾರತದಲ್ಲಿ ಹೂಡುವುದಾಗಿ ಘೋಷಿಸಿತು.

2014: ಅಮೇರಿಕಾದಲ್ಲಿ ಕಾಂಡಕೋಶಗಳಿಂದ ಪ್ರಯೋಗಾಲಯದಲ್ಲಿ ಕಾರ್ಯಯೋಗ್ಯ ಮಾನವ ಕರುಳನ್ನು ಉತ್ಪತ್ತಿ ಮಾಡಲಾಯಿತು.

ಪ್ರಮುಖ ಜನನ/ಮರಣ:

1910: ಭಾರತೀಯ-ಅಮೇರಿಕನ್ ನೋಬಲ್ ಪ್ರಶಸ್ತಿ ವಿಜೇತ ಎಸ್.ಚಂದ್ರಶೇಖರ್ ಜನಿಸಿದರು.

1920: ಭಾರತೀಯ ತತ್ವಜ್ಞಾನಿ ಮತ್ತು ಶಿಕ್ಷಣತಜ್ಞ ಪಾಂಡುರಂಗ ಶಾಸ್ತ್ರಿ ಅತಿವಾಳೆ ಜನಿಸಿದರು.

1954: ನಟಿ, ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ತೆಂಡುಲ್ಕರ್ ಜನಿಸಿದರು.

1955: ತೆಲುಗು ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಗಂಗರಾಜು ಗುನ್ನಂ ಜನಿಸಿದರು.

1961: ಖ್ಯಾತ ನಟ, ನಿರ್ಮಾಪಕ ಸನ್ನಿ ಡಿಯೋಲ್ ಜನಿಸಿದರು.

2000: ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಪರಿಣ್ಯತೆ ಹೊಂದಿದ್ದ ಡಾ.ಶರದ್ ವೈದ್ಯ ನಿಧನರಾದರು.

2002: ಖ್ಯಾತ ವೈಯಲಿನ್ ವಾದಕ ಮೆಹಲಿಮೆಹ್ತಾ ನಿಧನರಾದರು.

2013: ಸಂಗೀತಕಾರ, ಸಂಗೀತ ಸಂಯೋಜಕ ಕೆ.ರಾಘವನ್ ನಿಧನರಾದರು.