Categories
e-ದಿನ

ಅಕ್ಟೋಬರ್-2

 

ಪ್ರಮುಖ ಘಟನಾವಳಿಗಳು:

1608: ಮೊದಲ ಪೂರ್ವ ದೂರದರ್ಶಕಕ್ಕೆ ಹ್ಯಾನ್ಸ್ ಲಿಪ್ಪರ್ ಶೇ ಪೇಟೆಂಟ್ ಪಡೆದರು.

1866: ಕೀಲಿಯಿಂದ ತೆರೆಯಬಹುದಾದ ಟಿನ್ ಕ್ಯಾನಿಗೆ ಜೆ.ಆಸ್ಟರ್ ಹೌಡ್ತ್ ಅವರು ಪೇಟೆಂಟ್ ಪಡೆದರು.

1872: ಮಾರ್ಗನ್ ಸ್ಟೇಟ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1895: ಮೊದಲ ಬಾರಿಗೆ ದಿನಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರವನ್ನು ಪ್ರಕಟಿಸಲಾಯಿತು.

1901: ಮೊದಲ ರಾಯಲ್ ನೇವಲ್ ಜಲಾಂತರ್ಗಾಮಿ ಬಾರ್ರೋದಲ್ಲಿ ಪ್ರಾರಂಭವಾಯಿತು.

1916: ಸ್ಯಾನ್ ಡೀಯಾಗೋ ಮೃಗಾಲಯ ಸ್ಥಾಪಿಸಲಾಯಿತು.

1936: ಮೊದಲ ಮದ್ಯಸಾರ ವಿದ್ಯುತ್ ಸ್ಥಾವರ ಆಟ್ಚಿಸನ್ನಿನಲ್ಲಿ ಸ್ಥಾಪಿಸಲಾಯಿತು.

1956: ಮೊದಲ ಪರಮಾಣು ವಿದ್ಯುತ್ ಗಡಿಯಾರವನ್ನು ನ್ಯೂಯಾರ್ಕಿನಲ್ಲಿ ಪ್ರದರ್ಶಿಸಲಾಯಿತು.

1986: ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲು ಉಗ್ರರು ಪ್ರಯತ್ನಿಸಿದರು.

2008: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಯಿತು.

ಪ್ರಮುಖ ಜನನ/ಮರಣ:

1869: ಭಾರತದ ರಾಷ್ಟ್ರಪಿತ ಎಂದೇ ಖ್ಯಾತರಾದ ಮೋಹನದಾಸಕರಮಚಂದ ಗಾಂಧಿ ಜನಿಸಿದರು.

1848: ಖ್ಯಾತ ವರ್ಣಚಿತ್ರಕಾರ ರಾಜಾ ರವಿವರ್ಮ ನಿಧನರಾದರು.

1899: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿ, ಲೇಖಕ ವೆಂಕಟರಾಮಯ್ಯ ಸೀತಾರಾಮಯ್ಯ ಜನಿಸಿದರು.

1904: ಭಾರತದ 2ನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಜನಿಸಿದರು.

1939: ಭಾರತದ ಕ್ರಿಕೆಟ್ ಆಟಗಾರ ಬುದಿ ಕುಂದೆರನ್ ಜನಿಸಿದರು.

1942: ಹಿಂದಿ ಚಲನಚಿತ್ರ ನಟಿ ಆಶಾ ಪಾರೇಖ್ ಜನಿಸಿದರು.

1948: ಫೆಮಿನಾ ಮಿಸ್ ಇಂಡಿಯಾ 1965 ವಿಜೇತೆ ಪೆರ್ಸಿಸ್ ಕಂಬಟ್ಟ ಜನಿಸಿದರು.

1964: ಭಾರತ ಸರ್ಕಾರದ ಆರೋಗ್ಯ ಮಂತ್ರಿ ಆಗಿದ್ದ ಸ್ವಾತಂತ್ರ ಹೋರಾಟಗಾರ್ತಿ ಮತ್ತು ಕಾರ್ಯಕರ್ತೆ ರಾಜಕುಮಾರಿ ಅಮೃತ್ ಕೌರ್ ನಿಧನರಾದರು.

1965: ಅಮೇರಿಕಾದ ರಸಾಯನಶಾಸ್ತ್ರಜ್ಞ, ಥೈಯಾಮೈನ್ (ವಿಟಮಿನ್ ಬಿ 1) ಸಂಸ್ಲೇಶಿಸಿದ ರಾಬರ್ಟ್ ರನ್ನಲ್ ವಿಲ್ಲಿಯಂಸ್ ನಿಧನರಾದರು.

1975: ಭಾರತದ ಸ್ವಾತಂತ್ರ್ಯಗ ಹೋರಾಟಗಾರ ಮತ್ತು ಹಿರಿಯ ರಾಜಕಾರಣಿ ಕೆ.ಕಾಮರಾಜ್ ನಿಧನರಾದರು.