Categories
e-ದಿನ

ಅಕ್ಟೋಬರ್-23

 

ಪ್ರಮುಖ ಘಟನಾವಳಿಗಳು:

1760: ಮೊದಲ ಯಹೂದಿ ಪ್ರಾರ್ಥನಾ ಪುಸ್ತಕಗಳನ್ನು ಉತ್ತರ ಅಮೇರಿಕಾದಲ್ಲಿ ಮುದ್ರಿಸಲಾಯಿತು.

1814: ಮೊದಲ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯನ್ನು ಇಂಗ್ಲೆಂಡಿನಲ್ಲಿ ಮಾಡಲಾಯಿತು.

1824: ಮೊದಲ ಉಗಿ ವಾಹನವನ್ನು ಪರಿಚಯಿಸಲಾಯಿತು.

1947: ದಂಪತಿಗಳಾದ ಡಾ.ಕಾರ್ಲ್ ಮತ್ತು ಡಾ.ಗರ್ಟಿ ಒಟ್ಟಾಗಿ ನೋಬಲ್ ಪ್ರಶಸ್ತಿ ಪಡೆದ ಮೊದಲ ದಂಪತಿಗಳು.

1959: ಚೀನಾದ ಪಡೆಗಳು ಭಾರತಕ್ಕೆ ಆಗಮಿಸಿದ ಕಾರಣ 17 ಮಂದಿ ಮೃತ ಪಟ್ಟರು.

1989: ಹಂಗೇರಿ ಗಣರಾಜ್ಯವೆಂದು ಘೋಷಿಸಿಕೊಂಡಿತು ಮತ್ತು ಕಮ್ಮ್ಯುನಿಸ್ಟ್ ಆಡಳಿತ ಕೊನೆಗೊಂಡಿತೆಂದು ಘೋಷಿಸಿತು.

2001: “ಆಪಲ್” ತನ್ನ ನೂತನ ವಸ್ತು “ಐಪಾಡ್” ಅನ್ನು ಬಿಡುಗಡೆಗೊಳಿಸಿತು.

2008: ಪಾಶ್ಚಿಮಾತ್ಯ ಭಾರತದಲ್ಲಿ ಕಾನೂನುಬಾಹಿರ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಪೋಟ ಸಂಭವಿಸಿದ ಕಾರಣ 12 ಮಕ್ಕಳನ್ನು ಸೇರಿದಂತೆ 27 ಜನ ಮೃತಪಟ್ಟರು.

ಪ್ರಮುಖ ಜನನ/ಮರಣ:

1900: ಕ್ರಿಕೆಟ್ ಆಟಗಾರ ದೌಗ್ಲಾಸ್ ಜಾರ್ಡಿನ್ ಜನಸಿದರು.

1923: ಭಾರತೀಯ ಮೂಲದ ಪಾಕಿಸ್ತಾನಿ ಭಾಷಾ ಶಾಸ್ತ್ರಜ್ಞ, ಲೇಖಕ, ವಿದ್ವಾಂಸ ಅಸ್ಲಾಂ ಫರೂಕಿ ಜನಿಸಿದರು.

1923: ಭಾರತದ 11ನೇ ಉಪ-ರಾಷ್ಟ್ರಪತಿ ಆಗಿದ್ದ ಭೈರೋನ್ ಸಿಂಗ್ ಶೆಖಾವತ್ ಜನಿಸಿದರು.

1926: ಹಿಂದೂ ಪತ್ರಿಕೆಯ ಸಂಪಾದಕ ಎಸ್.ರಂಗಸ್ವಾಮಿ ಐಯಂಗಾರ್ ನಿಧನರಾದರು.

1937: ಭಾರತೀಯ ನಟ, ನಿರ್ಮಾಪಕ, ನಿರ್ದೇಶಕ ವೇವೆನ್ ವರ್ಮಾ ಜನಿಸದರು.

1957: ಭಾರತಿ ಎಂಟರ್ ಪ್ರೈಸಸ್ ಸಂಸ್ಥಾಪಕ ಮತ್ತು ಸಿಇಓ ಸುನಿಲ್ ಭಾರತಿ ಮಿತ್ತಲ್ ಜನಿಸಿದರು.

1974: ಲೇಖಕ ಮತ್ತು ಪತ್ರಕರ್ತ ಅರವಿಂದ ಅಡಿಗಾ ಅವರು ಜನಿಸಿದರು.

1979: ತಮಿಳು ಚಿತ್ರರಂಗದ ಖ್ಯಾತ ನಟ ಪ್ರಭಾಸ್ ಜನಿಸಿದರು.

1998: ಕನ್ನಡದ ಖ್ಯಾತ ಕವಿ ಪು.ತಿ.ನರಸಿಂಹಾಚಾರ್ ನಿಧನರಾದರು.

2012: ಭಾರತೀಯ ಲೇಖಕ ಮತ್ತು ಕವಿ ಸುನಿಲ್ ಗಂಗೋಪಾಧ್ಯಾಯ ನಿಧನರಾದರು.