ಪ್ರಮುಖ ಘಟನಾವಳಿಗಳು:

 • 1795: ಪೋಲ್ಯಾಂಡ್ ದೇಶವನ್ನು ಆಸ್ಟ್ರಿಯಾ, ಪ್ರಷ್ಯಾ ಮತ್ತು ರಷ್ಯಾದ ನಡುವೆ ವಿಭಜಿಸಲಾಯಿತು.

 • 1836: ಅಲೋಂಜೋ ಡಿ ಫಿಲಿಪ್ಸ್ ರಂಜಕ ಘರ್ಷಣೆ ಸುರಕ್ಷತಾ ಬೆಂಕಿ ಕಡ್ಡಿಯನ್ನು ಪೇಟೆಂಟ್ ಪಡೆದರು.

 • 1904: ನ್ಯೂಯಾರ್ಕಿನ ಮೊದಲ ಸಬ್ವೇ ತೆರೆಯಲಾಯಿತು.

 • 1931: ನ್ಯೂಯಾರ್ಕ ಮತ್ತು ನ್ಯೂಜರ್ಸಿ ನಡುವೆ ಸಂಪರ್ಕ ಕಲ್ಪಿಸುವ ಜಾರ್ಜ್ ವಾಷಿಂಗ್ಟನ್ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು.

 • 1934: ಮಹಾತ್ಮಾ ಗಾಂಧಿಯವರು ಕಾಂಗ್ರಸ್ಸಿನಿಂದ ರಾಜಿನಾಮೆ ನೀಡಿದರು.

 • 1938: ಅಮೇರಿಕಾದಲ್ಲಿ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರನ್ನು ನಿಷೇಧಿಸಲಾಯಿತು.

 • 1939: ನೈಲಾನ್ ಸ್ಟಾಕಿಂಗ್ ಗಳನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ಮಾರಾಟ ಮಾಡಲಾಯಿತು.

 • 1949: ವಿಶ್ವಸಂಸ್ಥೆಯ ಮುಖ್ಯ ಕಚೇರಿಗೆ ನ್ಯೂಯಾರ್ಕಿನಲ್ಲಿ ಅಡಿಪಾಯ ಹಾಕಲಾಯಿತು.

 • 1951: ವಿಶ್ವಸಂಸ್ಥೆಯು ತನ್ನ ಮೊದಲ ಅಂಚೆಚೀಟಿಯನ್ನು ಪ್ರಕಟಿಸಿದರು.

ಪ್ರಮುಖ ಜನನ/ಮರಣ:

 • 1883: ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಜನಿಸಿದರು.

 • 1894: ಭಾರತೀಯ ಲೇಖಕ, ಕವಿ, ಚಿತ್ರಕಥೆಗಾರ ವಿಭೂತಿಭೂಷನ್ ಮುಖ್ಯೋಪಾಧ್ಯಾಯ ಜನಿಸಿದರು.

 • 1914: ಭಾರತ ಸೇನಾಪಡೆಯ ಅಧಿಕಾರಿ ಲಕ್ಷ್ಮಿ ಸೆಹ್ಗಾಲ್ ಜನಿಸಿದರು.

 • 1921: ಭಾರತದ ಅತ್ಯಂತ ಹೆಸರುವಾಸಿ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಜನಿಸಿದರು.

 • 1935: ಭಾರತೀಯ ಮೂಲಕ ಆಂಗ್ಲ ಪತ್ರಕರ್ತ ಮತ್ತು ಲೇಖಕ ಮಾರ್ಕ್ ಟುಲ್ಲಿ ಜನಿಸಿದರು.

 • 1963: ಭಾರತೀಯ ಉದ್ಯಮಿ ಅರವಿಂದ್ ರಘುನಾಥನ್ ಜನಿಸಿದರು.

 • 2004: ಹೈದರಾಬಾದ್ ಪ್ರದೇಶದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಕೊಲ್ಲೂರು ಮಲ್ಲಪ್ಪ ನಿಧನರಾದರು.

 • 2013: ಖ್ಯಾತ ಹಿಂದಿ ಗೀತ ಸಂಯೋಜಕ ಮನ್ನಾಡೇ ನಿಧನರಾದರು.

 • 2014: ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್.ಎಸ್.ರಾಜೇಂದ್ರನ್ ನಿಧನರಾದರು.