Categories
e-ದಿನ

ಅಕ್ಟೋಬರ್-26

 

ಪ್ರಮುಖ ಘಟನಾವಳಿಗಳು:

1492: ಮೊದಲ ಬಾರಿಗೆ ಲೆಡ್ ಪೆನ್ಸಿಲ್ ಗಳನ್ನು ಬಳಸಲಾಯಿತು.

1858: ರೋಟರಿ ಯಂತ್ರದ ಮೂಲಕ ಬಟ್ಟೆಯನ್ನು ಒಗೆಯಬಲ್ಲ ಯಂತ್ರಕ್ಕೆ ಹೆಚ್.ಇ.ಸ್ಮಿತ್ ಪೇಟೆಂಟ್ ಪಡೆದರು.

1863: ಲಂಡನ್ನಿನಲ್ಲಿ ಫುಟ್ ಬಾಲ್ ಅಸೋಸಿಯೇಷನ್ ರೂಪಿತವಾಯಿತು.

1941: ಅಮೇರಿಕಾದಲ್ಲಿ ಉಳಿತಾಯ ಬಾಂಡ್ ಗಳ ಮಾರಾಟ ಮಾಡಲಾಯಿತು.

1947: ಮಹಾರಾಜ ಹರಿಸಿಂಗ್ ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಳ್ಳಲು ಸಮ್ಮತಿ ನೀಡಿದರು.

1959: ಮೊದಲ ಬಾರಿಗೆ ಭೂಮಿಯಿಂದ ದೂರದಲ್ಲಿರುವ ಚಂದ್ರನ ಛಾಯಾಚಿತ್ರವನ್ನು ರೇಡಿಯೋ ಸಿಗ್ನಲ್ ಗಳ ಮೂಲಕ ಕಳುಹಿಸಲಾಯಿತು.

1984: ಮೊದಲ ಬಾರಿಗೆ ಒಂದು ಮಂಗನ ಹೃದಯವನ್ನು ಸಣ್ಣ ಮಗುವಿಗೆ ನೀಡಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

2001: ದೇಶಭಕ್ತಿ ಕಾಯಿದೆಯನ್ನು ಅಮೇರಿಕಾದಲ್ಲಿ ಜಾರಿಗೆ ತರಲಾಯಿತು.

2006: ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ಉದ್ದೇಶದಿಂದ ಭಾರತ ಸರ್ಕಾರವು ಕಾನೂನನ್ನು ಜಾರಿಗೊಳಿಸಲಾಯಿತು.

ಪ್ರಮುಖ ಜನನ/ಮರಣ:

1890: ಭಾರತೀಯ ಪತ್ರಕರ್ತ ಮತ್ತು ರಾಜಕಾರಣಿ ಗಣೇಶ್ ಶಂಕರ್ ವಿದ್ಯಾರ್ಥಿ ಜನಿಸಿದರು.

1932: ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಜನಿಸಿದರು.

1952: ಸಂಸದೀಯ ವ್ಯವಹಾರ ಮತ್ತು ಯೋಜನಾ ಸಚಿವರಾದ ಅಶ್ವನಿ ಕುಮಾರ್ ಜನಿಸಿದರು.

1974: ಹಿಂದಿ ಚಿತ್ರರಂಗದ ನಟಿ ರವಿನಾ ಟಂಡನ್ ಜನಿಸಿದರು.

1985: ದಕ್ಷಿಣ ಭಾರತದ ಖ್ಯಾತ ನಟಿ ಅಸೀನ್ ಜನಿಸಿದರು.

1988: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿರ್ಮಾತೃಎಂದೆ ಹೆಸರಾದ ಆರ್.ಕೆ.ಬಾಳಿಗ ನಿಧನರಾದರು.

1999: ಲೇಖಕ ಮತ್ತು ಶಿಕ್ಷಣ ತಜ್ಞ ಏಕನಾಥ ಈಶ್ವರನ್ ನಿಧನರಾದರು.