ಪ್ರಮುಖ ಘಟನಾವಳಿಗಳು:
1636: ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.
1793: ಹತ್ತಿಯ ಜಿನ್ನಿಗೆ ಎಲ್ಲಿ ವೈಟ್ನೀ ಪೇಟೆಂಟೆ ಪಡೆಯಲು ಕೋರಿದರು.
1904: ಸೇಂಟ್ ಲ್ಯೂಯಿಸ್ ಪೋಲೀಸರು ಮೊದಲ ಬಾರಿಗೆ ನೂತನ ತನಿಖಾ ವಿಧಾನವಾದ ಬೆರಳಚ್ಚುಗಳನ್ನು ಪ್ರಯತ್ನಿಸಿದರು.
1928: ಇಂಡೋನೇಷಿಯಾದಲ್ಲಿ ಮಕ್ಕಳ ಕಾನೂನು ಜಾರಿಗೊಳಿಸಲಾಯಿತು.
1946: ಜರ್ಮನ್ ರಾಕೆಟ್ ಇಂಜಿನಿಯರ್ಗಳು ರಷ್ಯಾದಲ್ಲಿ ಕೆಲಸ ಆರಂಭಿಸಿದರು.
1948: ಇಸ್ರೇಲ್ ಧ್ವಜವನ್ನು ಅಳವಡಿಸಲಾಯಿತು.
1965: ಸೇಂಟ್ ಲ್ಯೂಯಿಸ್ ಸ್ಮಾರಕವನ್ನು ಸ್ಟೇನ್ಲೆಸ್ ಸ್ಟೀಲಿನಲ್ಲಿ 630 ಅಡಿ ಎತ್ತರದ ಪ್ಯಾರಬೋಲಾ ಗೇಟ್ವೇ ಆರ್ಚ್ ಕಾಮಗಾರಿ ಪೂರ್ಣಗೊಂಡಿತು.
2011: ದೇಶದಲ್ಲಿ ಆತ್ಮಹತ್ಯೆ ದರ ಹೆಚ್ಚುತ್ತಿದೆ ಮತ್ತು ಪ್ರತಿ ಗಂಟೆಗೂ 15ಕ್ಕು ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಭಾರತ ಸರ್ಕಾರವು ವರದಿ ನೀಡಿತು.
2015: ವಿಶ್ವ ಆರೋಗ್ಯ ಸಂಘಟನೆಯು ಹೆಚ್.ಐ.ವಿ ಜೊತೆಗೆ ಕ್ಷಯರೋಗವನ್ನು ವಿಶ್ವದ ಅತ್ಯಂತ ಪ್ರಾಣಾಂತಿಕ ಸಾಂಕ್ರಾಮಿಕ ಕಾಯಿಲೆ ಎಂದು ಪರಿಗಣಿಸಲಾಯಿತು.
ಪ್ರಮುಖ ಜನನ/ಮರಣ:
1627: ಮುಘಲ್ ಸಾಮ್ರಾಜ್ಯದ ರಾಜ ಜಹಂಗೀರ್ ನಿಧನರಾದರು.
1867: ಐರಿಷ್-ಭಾರತೀಯ ನರ್ಸ್, ಲೇಖಕಿ, ಶಿಕ್ಷಕಿ ಸಿಸ್ಟರ್ ನಿವೇದಿತಾ ಜನಿಸಿದರು.
1892: ಮಹಾತ್ಮಾ ಗಾಂಧಿಯ ಪುತ್ರರಾದ ಮಣಿಲಾಲ್ ಗಾಂಧಿ ಜನಿಸಿದರು.
1955: ಪೆಪ್ಸಿಕೋ ಸಂಸ್ಥೆಯ ಮುಖ್ಯಸ್ಥೆ ಮತ್ತು ಸಿ.ಇ.ಓ. ಆದ ಇಂದಿರಾ ಕೃಷ್ಣಮೂರ್ತಿ ನೂಯಿ ಜನಿಸಿದರು.
1958: ಮಹಾರಾಷ್ಟ್ರದ 16ನೇ ಮುಖ್ಯಮಂತ್ರಿ ಆಗಿದ್ದ ಅಶೋಕ್ ಚವ್ಹಾಣ್ ಅವರು ಜನಿಸಿದರು.
1989: ಕನ್ನಡ ಚಿತ್ರರಂಗದ ನಟಿ ಶರ್ಮಿಲಾ ಮಾಂಡ್ರೆ ಅವರು ಜನಿಸಿದರು.
1998: ಭಾರತದ ಟೆಸ್ಟ್ ಕ್ರಿಕೆಟ್ ಆಟಗಾರ ಗುಲಾಮ್ ಅಹಮದ್ ನಿಧನರಾದರು.