ಪ್ರಮುಖ ಘಟನಾವಳಿಗಳು:

 • 1550: ಚಿಲಿಯ ಕಂಸೆಪ್ಷನ್ ನಗರವನ್ನು ಸ್ಥಾಪಿಸಲಾಯಿತು.

 • 1582: ಇಟಲಿ ಮತ್ತು ಇತರೆ ಕ್ಯಾಥೋಲಿಕ್ ರಾಷ್ಟ್ರಗಳಲ್ಲಿ ಗ್ರೆಗೋರಿಯನ್ ಕ್ಯಾಲೆಂಡರನ್ನು ಪರಿಚಯಿಸಲಾಯಿತು.

 • 1665: ಕೈಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

 • 1864: ಕಲ್ಕತ್ತಾದಲ್ಲಿ ಚಂಡಮಾರುತದ ಪ್ರಭಾವದಿಂದ ಸುಮಾರು 70,000 ಜನ ಮೃತಪಟ್ಟರು.

 • 1875: ಸ್ಯಾನ್ ಫ್ರಾನ್ಸಿಸ್ಕೊದ ಮಾರ್ಕೆಟ್ ಸ್ಟ್ರೀಟಿನಲ್ಲಿ ಪ್ಯಾಲೆಸ್ ಹೋಟೆಲ್ ತೆರೆಯಲಾಯಿತು.

 • 1969: ಮಾಂಟಿ ಪೈಥಾನ್ಸ್ ಫ್ಲೈಯಿಂಗ್ ಸರ್ಕಸ್ ಬಿಬಿಸಿ ಟೆಲಿವಿಷನ್ನಿನಲ್ಲಿ ತನ್ನ ಮೊದಲ ಪ್ರವೇಶ ಮಾಡಿತು.

 • 1989: ದಲೈಲಾಮ ಅವರಿಗೆ ವಿಶ್ವಶಾಂತಿಯ ನೋಬಲ್ ಪ್ರಶಸ್ತಿ ನೀಡಲಾಯಿತು.

 • 1991: ಲೈನೆಕ್ಸ್ ಕರ್ನಲ್ ಮೊದಲ ಅಧಿಕೃತ ಆವೃತ್ತಿ 0.02 ಬಿಡುಗಡೆ ಮಾಡಲಾಯಿತು.

 • 2001: ರಾಬರ್ಟ್ ಸ್ಟೀವನ್ಸ್ ಅವರು 2001ರ ಆಂತ್ರಾಕ್ಸ್ ದಾಳಿಗೆ ಮೊದಲ ಬಲಿಯಾದರು.

 • 2011: ಭಾರತವು ಕಡಿಮೆ ದರದ ಟ್ಯಾಬ್ಲೆಟ್ ಫೋನಾದ “ಆಕಾಶ್” ಅನ್ನು ಉದ್ಘಾಟಿಸಿತು.

 • 2015: ಕ್ಯಾಲಿಫೋರ್ನಿಯಾದ ಗವರ್ನರ್ ಜೆರ್ರಿ ಬ್ರೌನ್ ವಾಸಿ ಆಗದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ “ಸಾಯುವ ಹಕ್ಕನ್ನು” ನೀಡಿದರು.

ಪ್ರಮುಖ ಜನನ/ಮರಣ:

 • 1922: ಹಿಂದಿ ಚಿತ್ರಗಳ ಸಂಗೀತ ಸಂಯೋಜಕ ಶಂಕರ್ ಜೈಕಿಶನ್ ಜನಿಸಿದರು.

 • 1923: ಗುಜರಾತಿನ 18ನೇ ರಾಜ್ಯಪಾಲ ಕೈಲಾಶ್ ಪತಿ ಮಿಶ್ರಾ ಜನಿಸಿದರು.

 • 1934: ಹಾಸ್ಯನಟ, ನಾಟಕಕಾರ, ವಿಮರ್ಶಕ, ವಕೀಲ ಮತ್ತು ಅಂಕಣಕಾರ ಚೋ.ರಾಮಸ್ವಾಮಿ ಜನಿಸಿದರು.

 • 1950: ಇಂಡಿಯಾ ಇಂಟರ್ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರ್ಸ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಅಶೋಕ್ ಖೇಣಿ ಜನಿಸಿದರು.

 • 1976: ಲ್ಯಾಟಿಸ್ ಬೋಲ್ಟ್ಸ್ಮ್ಯಾನ್ ವಿಧಾನದಲ್ಲಿ ಬಳಸಲಾಗುವ ಭಟ್ನಾಗರ್-ಗ್ರಾಸ್-ಕ್ರೂಕ್ (ಬಿ.ಜಿ.ಕೆ) ಮಾದರಿಯನ್ನು ಕೊಡುಗೆ ನೀಡಿದ ಭಾರತೀಯ ಗಣಿತತಜ್ಞ ಪ್ರಭು ಲಾಲ್ ಭಟ್ನಾಗರ್ ನಿಧನರಾದರು.

 • 1980: ಕಲ್ಕತ್ತಾದ ಬಂಗಾಳಿ ನಟಿ ಪಯೋಲಿ ದಾಮ್ ಜನಿಸಿದರು.

 • 1982: ದೂರದರ್ಶನದ ನಟ ಅನುಜ್ ಸಚ್ಚಿದೇವ ಜನಿಸಿದರು.

 • 1985: ಬಂಗಾರದ ಮನುಷ್ಯ ಕಾದಂಬರಿ ಲೇಖಕ ಟಿ.ಕೆ.ರಾಮರಾವ್ ನಿಧನರಾದರು.

 • 1991: ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯನ್ನು ಆರಂಭಿಸಿದ ಪತ್ರಿಕೆ ಪ್ರಕಾಶಕ ರಾಮನಾಥ್ ಗೊಯೆಂಕಾ ನಿಧನರಾದರು.

 • 1997: ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ನಾಯಕ ಚಿತ್ತ ಬಸು ನಿಧನರಾದರು.

 • 2011: ಅಪಲ್ ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನಿಧನರಾದರು.