Categories
e-ದಿನ

ಅಕ್ಟೋಬರ್-7

 

ಪ್ರಮುಖ ಘಟನಾವಳಿಗಳು:

1806: ರಾಲ್ಫ್ ವೆಡ್ಜ್ ವುಡ್ ಕಾರ್ಬನ್ ಪೇಪರಿಗೆ ಪೇಟೆಂಟ್ ಪಡೆದರು.

1816: ಎರಡು ಮಹಡಿ ಇರುವ ಸ್ಟೀಮ್ ಬೋಟ್ ವಾಷಿಂಗ್ಟನ್ನಿಗೆ ಆಗಮಿಸಿತು.

1856: ಪುಸ್ತಕ ಮತ್ತು ವೃತ್ತಪತ್ರಿಕೆಗಳನ್ನು ಮಡಿಸುವ ಯಂತ್ರಕ್ಕೆ ಸೈರಸ್ ಚೇಂಬರ್ಸ್ ಪೇಟೆಂಟ್ ಪಡೆದರು.

1912: ಹೆಲ್ಸಿಂಕಿ ಸ್ಟಾಕ್ ಎಕ್ಸ್ಚೇಂಜ್ ತನ್ನ ಮೊದಲ ವಹಿವಾಟನ್ನು ಕಂಡಿತು.

1919: ರಾಯಲ್ ಡಚ್ ವಿಮಾನ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1950: ಮದರ್ ತೆರೆಸಾ ಮಿಷಿನರಿಸ್ ಆಫ್ ಚ್ಯಾರಿಟಿ ಸ್ಥಾಪಿಸಿದರು.

1968: ಮೋಷನ್ ಪಿಚ್ಚರ್ಸ್ ಅಸೋಸಿಯೇಷನ್ ಆಫ್ ಅಮೇರಿಕಾ ಚಲನಚಿತ್ರಗಳಿಗೆ ರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಿದರು.

2000: ಜಪಾನಿನಲ್ಲಿ ಮಾನವ ಅಬೀಜ ಸಂತಾನೋತ್ಪತ್ತಿ ಅಪರಾಧ ಎಂದು ಘೋಷಿಸಲಾಯಿತು.

2001: ಭಯೋತ್ಪಾದನೆ ವಿರುದ್ಧ ಅಮೇರಿಕಾದ ಆಪರೇಷನ್ “ಅಡೋರಬಲ್ ಫ್ರೀಡಂ” ಪ್ರಾರಂಭಿಸಲಾಯಿತು.

2008: ಪ್ಯಾಲಸ್ಟೇನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಭಾರತಕ್ಕೆ ನಾಲ್ಕು ದಿನದ ಭೇಟಿಗೆಂದು ಆಗಮಿಸಿದರು.

ಪ್ರಮುಖ ಜನನ/ಮರಣ:

1708: ಭಾರತದ 10ನೇ ಸಿಖ್ ಗುರು ಆದ ಗುರು ಗೋವಿಂದ ಸಿಂಗ್ ಅವರು ನಿಧನರಾದರು.

1914: ಗಾಯಕಿ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತೆ ಬೇಗಂ ಅಕ್ತಾರ್ ಜನಿಸಿದರು.

1970: ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ಕಟ್ಟಿ ಜನಿಸಿದರು.

1975: ಭಾರತೀಯ ಚಲನಚಿತ್ರ ಛಾಯಾಗ್ರಾಹಕ, ನಿರ್ದೇಶಕ ಮತ್ತು ಚಿತ್ರಕಥೆಗಾರ ಅಮಲ್ ನೀರದ್ ಜನಿಸಿದರು.

1978: ಭಾರತದ ಕ್ರಿಕೆಟ್ ಆಟಗಾರ ಜಹೀರ್ ಖಾನ್ ಜನಿಸಿದರು.

1979: 1999ರ ವಿಶ್ವಸುಂದರಿ ಸ್ಪರ್ದೆಯ ವಿಜೇತೆ ಯುಕ್ತಾ ಮುಕೀ ಜನಿಸಿದರು.

1981: ಗಾಯಕ ಅಭಿಜೀತ್ ಸಾವಂತ್ ಜನಿಸಿದರು.

1984: ಮಲಯಾಳಂ ನಟ ನರಾಯೆನ್ ಜನಿಸಿದರು.

1992: ರಾಜಕಾರಣಿ ಮತ್ತು ಉದ್ಯಮಿ ಬಾಬು ಕರಂ ಸಿಂಗ್ ಬಾಲ್ ನಿಧನರಾದರು.