ಪ್ರಮುಖ ಘಟನಾವಳಿಗಳು:
1604: ಸೂಪರ್ ನೋವಾ ಆದ “ಕೆಪ್ಲರ್ಸ್ ನೋವಾ” ಮೊದಲ ಬಾರಿಗೆ ಕಾಣಿಸಿತು.
1871: ಅಮೇರಿಕಾದ ಚಿಕಾಗೊ ನಗರದಲ್ಲಿ ತೀವ್ರ ಬೆಂಕಿ ಅನಾಹುತ ಸಂಭವಿಸಿತ್ತು.
1873: ಮಹಿಳೆಯರಿಂದ ನಿರ್ವಹಿಸಲ್ಪಡುವ ಮೊದಲ ಮಹಿಳಾ ಜೈಲು ತೆರೆಯಲಾಯಿತು.
1895: ದಿ ಬರ್ಲಿನರ್ ಗ್ರಾಮಫೋನ್ ಸಂಸ್ಥೆ ಫಿಲಾಡೆಲ್ಫಿಯಾದಲ್ಲಿ ಸ್ಥಾಪಿಸಲಾಯಿತು.
1932: ಭಾರತದ ವಾಯುಸೇನೆಯನ್ನು ಸ್ಥಾಪಿಸಲಾಯಿತು.
1945: ಮೈಕ್ರೋವೇವ್ ಓವನನ್ನು ಪೇಟೆಂಟ್ ಮಾಡಲಾಯಿತು.
1958: ಡಾ.ಆಕೆ ಸೆನ್ನಿಂಗ್ ಮೊದಲ ಪೇಸ್ ಮೇಕರ್ ಅನ್ನು ಅಳವಡಿಸಿದರು.
1965: ಬ್ರಿಟನ್ನಿನ ಅತ್ಯಂತ ಎತ್ತರದ ಕಟ್ಟಡಗಳಲೊಂದಾದ ಲಂಡನ್ನಿನ ಅಂಚೆ ಕಛೇರಿ ಟವರನ್ನು ಉದ್ಘಾಟಿಸಲಾಯಿತು.
1974: ಅಮೇರಿಕಾದ 20ನೇ ಅತೀ ದೊಡ್ಡ ಬ್ಯಾಂಕ್ ಆಗಿದ್ದ ಫ್ರಾಂಕ್ಲಿನ್ ನ್ಯಾಷನಲ್ ಬ್ಯಾಂಕ್ ಮೋಸ ಮತ್ತು ದೌರ್ಜನ್ಯದ ಕಾರಣ ದಿವಾಳಿಯಾಯಿತೆಂದು ಘೋಷಿಸಲಾಯಿತು.
1982: ಪೋಲೆಂಡಿನಲ್ಲಿ ಸೋಲಿಡಾರಿಟಿ ಸೇರಿದಂತೆ ಎಲ್ಲಾ ಕಾರ್ಮಿಕ ಸಂಘಟನೆಗಳನ್ನು ನಿಷೇಧಿಸಲಾಯಿತು.
2005: ಭಾರತದ ಕಶ್ಮೀರ ಮತ್ತು ಉತ್ತರ ಪಾಕಿಸ್ತಾನದ ಪ್ರದೇಶಗಳಲ್ಲಿ ಅತ್ಯಂತ ಶಕ್ತಿಯುತವಾದ ಭೂಕಂಪ ಸಂಭವಿಸಿತು.
ಪ್ರಮುಖ ಜನನ/ಮರಣ:
1924: ಭಾರತೀಯ ಕವಿ, ವಿದ್ವಾಂಸಿ ತಿರುನಲ್ಲೂರ್ ಕರುಣಾಕರನ್ ಜನಿಸಿದರು.
1926: ಭಾರತೀಯ-ಪಾಕಿಸ್ತಾನದ ನಟ, ಮತ್ತು ಪೋಲಿಸ್ ಅಧಿಕಾರಿ ರಾಜಕುಮಾರ್ ಜನಿಸಿದರು.
1935: ಭಾರತೀಯ ಖ್ಯಾತ ಓಟಗಾರ, ಕ್ರೀಡಾಪಟು ಮಿಲ್ಕಾ ಸಿಂಗ್ ಜನಿಸಿದರು.
1936: ಕವಿ, ಲೇಖಕ, ಚಿತ್ರಕಥೆಗಾರ ಪ್ರೇಮ್ ಚಂದ್ ನಿಧನರಾದರು.
1970: ಖ್ಯಾತ ಬಾಲಿವುಡ್ ನಿರ್ಮಾಪಕಿ ಗೌರಿ ಖಾನ್ ಜನಿಸಿದರು.
1979: ಭಾರತೀಯ ರಾಜಕಾರಣಿ ಜಯಪ್ರಕಾಶ್ ನಾರಾಯಣ್ ನಿಧನರಾದರು.
1983: ಭಾರತೀಯ ಕ್ರಿಕೆಟ್ ಆಟಗಾರ ಅಭಿಷೇಕ್ ನಾಯರ್ ಜನಿಸಿದರು.
1993: ಖ್ಯಾತ ಪೋಲೀಸ್ ಅಧಿಕಾರಿ ಸಿ.ವಿ.ಎಸ್.ರಾವ್ ನಿಧನರಾದರು.
2012: ಭಾರತೀಯ ಗಾಯಕಿ, ಪತ್ರಕರ್ತೆ ವರ್ಷ ಭೋಸಲೆ ನಿಧನರಾದರು.
2012: ಗುಜರಾತಿನ 20ನೇ ರಾಜ್ಯಪಾಲರಾಗಿದ್ದ ನವಾಲ್ ಕಿಶೋರ್ ಶರ್ಮ ನಿಧನರಾದರು.