ಸೂಚನೆ :         !

[1]ಹರಿಯ ಕರೆಹೋಗೆಂದು ಕಂಸಾ
ಸುರ ನಿರೂಪಿಸಿ ಹಳುಹೆ ಮನದಲಿ
ಹರುಷಮಿಗಲಕ್ರೂರ ಬಂದನು ಕಂಡನಚ್ಯುತನ||

ಪದನು :
ಇದು ಮಹಾಪಾತಕದ ನೆತ್ತಿಯ
­[2]ಸದೆವಡೆವ ದಡಿ[3] ಸಕಲ ಸುಕೃತದ
ಸದನವಿಹಪರಸುಖದ[4] ಪಲಹಾರಕ್ಕೆ[5] ಹೊಣೆಕಾರ
[6]ಚದುರರಿಕ್ಕೆ [ಸುಧೀ] ಪ್ರಭಾವದ
ವೊದಗು[7] ನೀತಿಯ ಕೂಟ ಬಹುಳಾ
ಭ್ಯುದಯಸೂಚಕ [8]ಕೇಳಿ[9] ಸಭೆಗೆಕ್ರೂರವರಚರಿತೆ                                          ೧

ತನಗೆ ಹಗೆಯಹ ದೇವಕೀನಂ
ದನನ ಭುಜಸಾಹಸವ ಕೇಳಿದು
ಮೊನೆಯಲಗು ಕಿಬ್ಬಸುರಿನಲಿ ಮಸೆದೋರಿದಂದದಲಿ
ತನುವನಹಿಪಿಡಿದಂತೆ ಚಿಂತಾ
ವನಧಿಯಲಿ ಮನಮುಳುಗೆ ನಾರದ
ಮುನಿಯ ನುಡಿ ತಲೆತಾಗಿತೆನುತಳವಳಿದನಾ ಕಂಸ                                       ೨

ಮದವಳಿದ ಗಜದಂತೆ ಬಲುಪಿಂ
ಗಿದ ಮೃಗಾಧಿಪನಂತೆ [10]ವದನದ
ರದಗಳೆದ ಫಣಿಯಂತೆ ಮರ್ಕಟ ಪಾವ ಕಂಡಂತೆ[11]
ಸುದತಿಯರು ಖತಿಯಾದ ನರನಂ
ತಧಿಕ ಚಿಂತೆಯ ತಾಳ್ದು ನಾನಾ
ವಿಧದುಪಾಯವನೆಣಸುತೋಲಗಸಾಲೆಗೈತಂದ                                             ೩

ಕರೆಸಿದನು ತನ್ನಾಪ್ತದೈತ್ಯೇ
ಶ್ವರರನಕ್ರೂರಾದಿ ಯಾದವ
ಪರಿ[12]ಜನ[13]ವನಖಿಳಪ್ರಧಾನರ ನೀತಿಕೋವಿದರ
ಸರಸಕವಿಗಳ ಸೂರಿಗಳನಾ
ಪುರದ [14]ಪರದರ[15] ದುರ್ಗಪತಿಗಳ
ಕರಿತುರಗ ಶಿಕ್ಷಕರ [16]ಸಜ್ಜನವಾಸಿನೀ[17]ಜನವ                                                          ೪

ಈ ಪರಿಯಲೆಲ್ಲರ [18]ಕರೆಸಿ[19] ಮಥು
ರಾಪುರಾಧಿಪ[20]ಕಂಸನತಿ[21]ಪರಿ
ತಾಪದಲಿ ಪರರರಿಯದಂತಿರೆ ಬಹಳ ದುಗುಡದಲಿ
ಕೋಪಿಸುತ ನಸುನಗುತ ಹೆದರುತ
ಭೂಪಲಕ್ಷಣವಡಗಿ ಸಭೆಯಲಿ
ಕಾಪುವಡೆದವರಂತೆ ಚಿಂತಿಸುತಿರ್ದನಾ ಕಂಸ                                                ೫

ಅಸುರನೋಲಗಸಾಲೆಯನು ವ
ರ್ಣಿಸುವ[22]ಡೆನಗ[23]ಳವಲ್ಲ ಶಕ್ರನ
ಶಶಿಧರನ ಕಮಲಜನ ಲಕ್ಷ್ಮೀರಮಣನೋಲಗವ
[24]ವಶವಳಿಸಿ[25] ನಿಂದಿಸುವ ಮರುಳಾ
ಡಿಸುವ [26]ನಗಿಸುವ ಚಿತ್ರ[27] ವಿಭವದ
ಲೆಸೆದು ಗರ್ಜಿಸುತಿಹುದು ಹುಲಿನೆಲಸಿರ್ದ[28]ಗುಹೆ[29]ಯಂತೆ                             ೬

ಅವನ ಸಭೆ ಗರಳಾಮೃತಂಗಳ
[30]ಸವಿದ[31]ವೊಲು ನರಸಿಂಹ ನಿಕರದ
ಗವಿಯವೊಲು ನವಚೂತಬೊಬ್ಬುಲಿ ಬೆಳೆದ ವನದಂತೆ
ದಿವಿಜರಿಪುಗಳ ಯಾದವರ ಭೂ
ದಿವಿಜಕುಜನರ ಜಾತಿಮೂರ್ಖರ
ಕವಿಗಳಂ [32]ತೊಪ್ಪಿದುದು ಸಭೆಯುದಯಾಸ್ತಮಯವಾಗಿ[33]                             ೭

ಆ ಸಭೆಯಲಕ್ರೂರನೆಂಬ ಮ
ಹಾಸಚಿವನತಿ ಹಿತವ ಶುಚಿ ವಿ
ಶ್ವಾಸಿ ವಿನಯ ವಿಭೂಷನಗಣಿತನೀತಿಯೊಳು [34]ನಿಪುಣ[35]
ದೋಷರಹಿತನು ಸುಬಲ[36]ಸುತ[37] ಧರ
ಣೀಶ[38]ಕುಲ[39]ದೊಳಭಿಜ್ಞನಿರೆ ಕಂ
ಡಾಸುರಾಧಿಪ ಕಂಸ ನುಡಿಸಿದನುಚಿತವಚನದಲಿ                                            ೮

ಎಲೆ ಯದೂತ್ತಮ ನಮ್ಮ ಹಗೆಗೋ
ಕುಲದೊಳಚ್ಯುತನಾಗಿ ನಂದನ
ನಿಳಯದಲಿ ಬಳೆದೊಲಿದು ಮಾನುಷಲೀಲೆ[40]ಯನು[41] ನಟಿಸಿ
ಬಲುಗಡಿಯ ರಕ್ಕಸರನೊಬ್ಬರ
ನುಳಿಯ[42]ಲೀಯದೆ[43] ಕೊಂದ ನಾವಿ
ನ್ನುಳಿವುಪಾಯವದೆಂತೆನುತ್ತಮರಾರಿ [44]ಬಿಸು ಸುಯಿದ[45]                                            ೯

ಏಕೆ ಜೀಯ ವೃಥಾ ಮನೋವ್ಯಥೆ
ಸಾಕು ಬಿಡು ಬಿಡು ಧರೆಯ ಭಾರವ
[46]ನೀಕ[47]ಲೋಸುಗ ಬಂದ ಹರಿ ಕೃಷ್ಣಾಭಿಧಾನದಲಿ
ಗೋಕುಲದೊಳವತರಿಸಿ ದೈತ್ಯಾ
ನೀಕವನು ಸವರಿದನು ನೀ ಮುನಿ
ದಾ ಕುಮಾರರ ಕೂಡೆ ಸೆಣಸುವುದುಚಿತವಲ್ಲೆಂದ                                            ೧೦

ಲೇಸನಾಡಿದೆ ದಾನಪತಿ ವಿ
ಶ್ವಾಸಿ [48]ನೀನೆಂದೆನ್ನ[49] ಚಿತ್ತದ
ಕ್ಲೇಶವನು ವಿಸ್ತರಿಸಿ ನುಡಿದರೆ ಸಫಲವಾ[50]ಯ್ತಿಂದು[51]
ವಾಸುದೇವನ ಮೇಲೆ ನಿನಗಭಿ
ಲಾಸೆಯುಂಟೆಂದರಿ[52]ವೆವೈ[53] ನಾ
ವೈಸಲೇ ಕಡು ಮೂರ್ಖರೆಂದಮರಾರಿ [54]ಚಿಂತಿಸಿದ[55]                                                ೧೧

ಎನಲು ನಗುತಕ್ರೂರ ನುಡಿದನು
[56]ದನುಜಪತಿ ಚಿತ್ತಯಿಸು[57] ನಾ[58]ನಿ[59]
ನ್ನನುವನರಿ[60]ವರೆ ನುಡಿದೆ[61] ಹರಿಬಕೆ ಚಿಂತೆ ನಿನಗೇಕೆ
ಮನುಜ[62]ದಿವಿ[63]ಜರ ಪಾಡೆ ವಾಸವ
ಧನಪರನು ಬೆದರಿಸುವ ನಿನಗೀ
ಬಿನಗುಗಳ ಹಗೆಮಾಡಿ [64]ಮುನಿ[65]ವುದು ನೀತಿಯಲ್ಲೆಂದ                                             ೧೨

ಎಂದೊಡೆಂದನು ಕಂಸ ಹಗೆ ಬಡ
ವೆಂದಹಂಕರಿಸುವರೆ ನಾನಾ
ಛಂದದಲಿ ಜಯಿಸುವುದು [66]ಸನ್ನುತ[67] ರಾಜನೀತಿಯಲಿ
ಬಂಧುತನದಲಿ [68]ದಾನದ[69]ಲಿ ಬಲು
[70]ಹಿಂದೆ[71] ಕುಹಕೋಪಾಯದಲಿ ಕೊಲು
ವಂದವನು ಪೇಳೆನಲು [72]ನಗುತ[73] ಕ್ರೂರನಿಂತೆಂದ                                       ೧೩

ನೀನರಿಯದಿಹ ನೀತಿಗಳನ
ಜ್ಞಾನಿಗಳು ನಾವೆತ್ತ ಬಲ್ಲೆವು
ಭಾನುವಿನ ಸಾಮರ್ಥ್ಯವುಂಟೇ ಮಿಂಚುಬುಳುವಿಂಗೆ
ಏನನಾದಡು ೧೦[74]ಬೆಸಸೆ೧೦[75] ಕೈ ಕೊಂ
ಡಾನದನು ಸಲೆ ಮಾಳ್ವೆನೆಂದಾ
ದಾನಪತಿ ಕೈಮುಗಿದು ನುಡಿದರೆ ಕಂಸನಿಂತೆಂದ                                            ೧೪

ಹಗೆ ಹಸುಳೆಯೆಂದುಳುಹಲಾಗದು
ಹಗೆ ಶರಣುಹೊಗೆ ನಂಬಲಾಗದು
ಹಗೆ ಹಿತವನನುಕರಿಸಿ [76]ನುಡಿದರೆ[77] ಹಿಗ್ಗಿ ಮೈಮರೆದು
ಹಗೆಯಲೆಚ್ಚರುಗುಂದಲಾಗದು
ಹಗೆಯ [78]ಸ್ನೇಹವ ಬೆಳಸಲಾಗದು[79]
ಹಗೆ ತನಗೆ ಮರಣಾಂತವೆಲೆ ಅಕ್ರೂರ ಕೇಳೆಂದ                                              ೧೫

ತನ್ನ ಕಾರ್ಯಾಧೀನದಿಂ ಹಗೆ
ಮನ್ನಿಸುವನೊಳಪೊಕ್ಕು ತನ್ನಯ
ಕನ್ನೆಯರನೊಲಿದೀವನೊಡನುಂಡತಿ ಹಿತವನೆನಿಸಿ
ಮುನ್ನ ಮಾwwiಡಿದ ವೈರ ಬಂಧ[80][81]
[82]ನಿನ್ನ[83]ವನು ನೆನೆ-ನೆನೆದು ಜೀವಕೆ
[84]ನಿರ್ಣಯವ[85] ಕಂಡಲ್ಲದಿರನಕ್ರೂರ ಕೇಳೆಂದ                                                          ೧೬

ಹಗೆಯನುರಗನ ಜಾರವನಿತೆಯ
ನಗಡು ಮಕ್ಕಳನಲೆವ ರೋಗವ
ಜಗಳವಾಡುವ ನೆರೆಯ ಮನ್ನಿಸದರಿಯದವನಿಪನ
ತಗರ ನೆರವಿಯ ಸೋರುತಿಹ ಮಾ
ಳಿಗೆಯ ನಂಬಿದೆ ಮೂಢ ನಿಕರೆ
ವಿಗಡ[86]ವಪ್ಪುದು[87] ಕೆಲವು ದಿನಕಕ್ರೂರ ಕೇಳೆಂದ                                          ೧೭

[88]ಎನಗೆ[89] ಹಗೆ ವಸುದೇವ ಸುತ[90]ನಾ[91]
ತನ ವಿನಾಶವನೈದಿಸುವಡೊಂ
ದನುವ ನಿಶ್ಚಯಿಸಿದರೆ ಬಿಡುವುದು ಚಿಂತೆಯಿಂ[92]ದೆಮಗೆ[93]
ಮನವ ವಂಚಿಸಬೇಡ ನುಡಿಯೆನೆ
[94]ದನುಜನಾಗ್ರಹ[95] ಕಂಡು ಕೃಷ್ಣನ
ಘನತೆಯನು ನೆನೆ-ನೆನೆದು ಸೈವೆರಗಾದನಕ್ರೂರ                                            ೧೮

ಈತನಿಂಗಿತವರಿದು ದೈತ್ಯ
ವ್ರಾತಪರಿವೃಢ ಕಂಸ ನುಡಿದನು
[96]ಪ್ರೀತ[97]ನೀನಚ್ಯುತನ ದೆಸೆಗದ ಬಲ್ಲೆ ನಾ[98]ಮುನಿದು[99]
[100]ಆತುರದಿ ಸೆಣಸುವರೆ ಮಿಗೆ ನವ[101]
ನೀತತಸ್ಕರನೆನಗಿದಿರೆ ನಯ
ನೀತಿಯಿಂದಾದರಿಸಿ ಕರೆಯೆಂದಸುರ ನೇಮಿಸಿದ                                            ೧೯

ಅದಕೆ ಜೀಯ ಹಸಾದವೆಂದಾ
ಯದುಕುಲೋತ್ತಮ ದಾನಪತಿ ಹರಿ
ಪದವ ಕಾಂಬ ನಿಯೋಗವಾಯ್ತೆಂಬಧಿಕ ಹರ್ಷದಲಿ
ಚೆದುರಿನಿಂದವರೊಡನೆ ನುಡಿವುದು
ಮಧುರೆಯಲಿ ಧನುಪರ್ವ ಸಂಭ್ರಮ
ವದಕೆ ಕೃಷ್ಣನ ಕರೆಯಲಟ್ಟಿದರೆಂದು ಹೇಳೆಂದ                                                 ೨೦

ಎಂದು ನೇಮಿಸಿ ರಥವ ಕೊಟ್ಟೊಲ
ವಿಂದ ಕಳುಹಿದನಿತ್ತಲೀಯರ
ವಿಂದಸಖನಸ್ತಮಿ[102]ಸತೊಡಗಲು ಚಕ್ರವಾಕಯುಗ[103]
ಕಂದಿದುವು ತಾವರೆಗಳಧಿಕ ತ
ಮಂಧ ಹೆಚ್ಚಿತು ಜಾರೆಯರು ನಲ
ವಿಂದ [104]ಬೆಚ್ಚಿ[105]ದರೆಸೆದ [106]ನುಡುಪತಿ ಮೂಡಣದ್ರಿಯಲಿ[107]                                                ೨೧

ದೀಪ ಮೆರೆದುವು ನಿಳಯ ನಿಳಯದೊ
ಳಾಪತಂಗನ ದೂತರಂತಿರೆ
ತಾಪಸರು ನಿಜ ಕೃತ್ಯದಲಿ ನಿಶ್ಚಿಂತ[108]ಮಯರಾಗಿ[109]
ಶ್ರೀಪತಿಯ ಭಜಿಸಿದರು ಧರಣಿಯ
ತಾಪವಡಗಲು ಚಂದ್ರನುದಯಿಸಿ
ಲೋಪಿಸಿದನಾ ತಮವ[110]ನತಿ[111] ಬಿಳಿದಾಯ್ತು ಭುವನತಳ                             ೨೨

ಅಂದಿನಿರುಳಕ್ರೂರ ತನ್ನಯ
ಮಂದಿರಕೆ ನಡೆತಂದು ಪರಮಾ
ನಂದಮಯ ಶರಧಿಯಲಿ ಮುಳುಗುತ ಶಿರವನೊಲೆದೊಲೆದು
ಇಂದು ನಾ ಸುಖಿಯಾದೆನೀ ಗೋ
ವಿಂದನನು ಕಣ್ಣಾರೆ ಕಂಡಪೆ
ನೆಂದು ನಲಿನಲಿದಾಡುತಿರ್ದನು [112]ಬಹಳ ಹರುಷದಲಿ[113]                                          ೨೩

ಅಂಧನಕ್ಷಿಯ ಪಡೆದವೊಲು ಸತಿ
[114]ನಂದನನ[115] [116]ಪಡೆದಂತೆ[117]ಯತಿ ಸುರ
ಸಿಂಧುವನು ಕಂಡಂತೆ ಕೃಪಣನು ನಿಧಿಯ [118]ಕಂಡಂತೆ[119]
ಮಂದಮತಿಯವ ಗುರುಪದವ ನಲ
ವಿಂದ [120]ಕಂಡಂದದಲಿ ಪರಮಾ
ನಂದಮನದಲಿ ಮುಂದುಗಾಣದೆಯಿರ್ದನಕ್ರೂರ[121]                                        ೨೪


[1] ! ಈ ಸೂಚನಾಪದ್ಯವೂ ಮೊದಲನೆಯ ಪದ್ಯದ ಪ್ರಥಮಾರ್ಥವೂ ಆ ಪ್ರತಿಯಲ್ಲಿ ೧ನೆಯ ಸಂಧಿಯ ಕೊನೆಯಲ್ಲಿವೆ. ಉತ್ತರಾರ್ಧ ಪದ್ಯವು ೨ನೆಯ ಸಂಧಿಗೆ ಸೂಚನಾಪದ್ಯವಾಗಿದೆ.

[2] ೧. ಸದೆಬಡೆವ ದಡಿ (ಆ), ಸದೆವ ದಡಿಯಿದು (ಮು)

[3] ೧. ಸದೆಬಡೆವ ದಡಿ (ಆ), ಸದೆವ ದಡಿಯಿದು (ಮು)

[4] ೨ ಫಲಸಾರಕ್ಕೆ (ಮು), (ಆ)

[5] ೨ ಫಲಸಾರಕ್ಕೆ (ಮು), (ಆ)

[6] ೩ ಚದುರರಿಕ್ಕೆ ರಸಪ್ರಭಾವದವೊದಗು (ಆ), ಚರುನಿಕ್ಕೆ ಸಭೀಷ್ಟಭಾವಗಳೊದಗು (ಮು)

[7] ೩ ಚದುರರಿಕ್ಕೆ ರಸಪ್ರಭಾವದವೊದಗು (ಆ), ಚರುನಿಕ್ಕೆ ಸಭೀಷ್ಟಭಾವಗಳೊದಗು (ಮು)

[8] ೪ ಕೇಳ್ದ (ಆ), ಕೇಳೆ (ಮು)

[9] ೪ ಕೇಳ್ದ (ಆ), ಕೇಳೆ (ಮು)

[10] ೧ ಕಡುಪಾ | ರಿದ ದಿವಾಕರನಂತೆ ಗರಳವನುಗಿದ ಫಣಿಯಂತೆ (ಆ)
ಕಡುಪಾ | ರಿದ ದಿವಾಕರನಂತೆ ಪಲುಗಳು ಕಳೆದ ಫಣಿಯಂತೆ (ಮು)

[11] ೧ ಕಡುಪಾ | ರಿದ ದಿವಾಕರನಂತೆ ಗರಳವನುಗಿದ ಫಣಿಯಂತೆ (ಆ)
ಕಡುಪಾ | ರಿದ ದಿವಾಕರನಂತೆ ಪಲುಗಳು ಕಳೆದ ಫಣಿಯಂತೆ (ಮು)

[12] ೨ ಕರ (ಆ)

[13] ೨ ಕರ (ಆ)

[14] ೩ ಪಿರಿಯರ (ಆ), (ಮು)

[15] ೩ ಪಿರಿಯರ (ಆ), (ಮು)

[16] ೪ ವಾರವಿಳಾಸಿನಿ

[17] ೪ ವಾರವಿಳಾಸಿನಿ

[18] ೫ ಕರೆದು (ಆ)

[19] ೫ ಕರೆದು (ಆ)

[20] ೬ ನಾಸನದೆ (ಮು)

[21] ೬ ನಾಸನದೆ (ಮು)

[22] ೧ ಡೆನ್ನ (ಆ)

[23] ೧ ಡೆನ್ನ (ಆ)

[24] ೨ ಮಸುಳಿಸುವ (ಆ), ಮು)

[25] ೨ ಮಸುಳಿಸುವ (ಆ), ಮು)

[26] ೩ ನಗುವ ವಿ (ಆ), ಮು)

[27] ೩ ನಗುವ ವಿ (ಆ), ಮು)

[28] ೪ ಮೆಳೆ (ಆ)

[29] ೪ ಮೆಳೆ (ಆ)

[30] ೫ ಸವಿಯ (ಆ), (ಮು)

[31] ೫ ಸವಿಯ (ಆ), (ಮು)

[32] ೬ ದೊಪ್ಪಿರೆ ಸಖೇದ್ರಪ್ರೀತಿಮಯಮಾಯ್ತು (ಮು)

[33] ೬ ದೊಪ್ಪಿರೆ ಸಖೇದ್ರಪ್ರೀತಿಮಯಮಾಯ್ತು (ಮು)

[34] ೭ ನಿಯತ್ಯ (ಆ)

[35] ೭ ನಿಯತ್ಯ (ಆ)

[36] ೮ ನುತ (ಮು)

[37] ೮ ನುತ (ಮು)

[38] ೯ ಕೆಲ (ಮು)

[39] ೯ ಕೆಲ (ಮು)

[40] ೧ ಯಲಿ (ಆ)

[41] ೧ ಯಲಿ (ಆ)

[42] ೨ ದಂತಿರೆ (ಆ)

[43] ೨ ದಂತಿರೆ (ಆ)

[44] ೩ ಚಿಂತಿಸಿದ (ಮು)

[45] ೩ ಚಿಂತಿಸಿದ (ಮು)

[46] ೪ ನೂಕ (ಆ), (ಮು)

[47] ೪ ನೂಕ (ಆ), (ಮು)

[48] ೫ ಯಂದಾನೆನ್ನ (ಆ)

[49] ೫ ಯಂದಾನೆನ್ನ (ಆ)

[50] ೬ ಯ್ತೆನಗೆ (ಆ), (ಮು)

[51] ೬ ಯ್ತೆನಗೆ (ಆ), (ಮು)

[52] ೭ ಯೆ ವೈ (ಆ)

[53] ೭ ಯೆ ವೈ (ಆ)

[54] ೮ ಖತಿಗೊಂಡ (ಆ), ಮು)

[55] ೮ ಖತಿಗೊಂಡ (ಆ), ಮು)

[56] ೧ ಜನಪ ಚಿತ್ತಯಿಸುವುದು (ಆ)

[57] ೧ ಜನಪ ಚಿತ್ತಯಿಸುವುದು (ಆ)

[58] ೨ ವಿ (ಆ)

[59] ೨ ವಿ (ಆ)

[60] ೩ ಯಾ ಹಗೆಯ (ಆ)

[61] ೩ ಯಾ ಹಗೆಯ (ಆ)

[62] ೪ ಗಿನು (ಆ), ಮು)

[63] ೪ ಗಿನು (ಆ), ಮು)

[64] ೫ ನುಡಿ (ಆ), ಮು)

[65] ೫ ನುಡಿ (ಆ), ಮು)

[66] ೬ ಸನ್ಮತ (ಮು)

[67] ೬ ಸನ್ಮತ (ಮು)

[68] ೭ ಸಾಮ (ಆ)

[69] ೭ ಸಾಮ (ಆ)

[70] ೮ ಪಿಂದ (ಆ)

[71] ೮ ಪಿಂದ (ಆ)

[72] ೯ ಬಳಿಕ (ಆ)

[73] ೯ ಬಳಿಕ (ಆ)

[74] ೧೦ ಬೆಸಸು (ಆ), ಮರಿಪು (ಮು)

[75] ೧೦ ಬೆಸಸು (ಆ), ಮರಿಪು (ಮು)

[76] ೧ ಮನ್ನಿಸೆ (ಆ), (ಮು)

[77] ೧ ಮನ್ನಿಸೆ (ಆ), (ಮು)

[78] ೨ ಹಿತವರ ನುಡಿಸಲಾಗದು (ಆ), (ಮು)

[79] ೨ ಹಿತವರ ನುಡಿಸಲಾಗದು (ಆ), (ಮು)

[80] ೩ ದ (ಆ)

[81] ೩ ದ (ಆ)

[82] ೪ ಬನ್ನ (ಮು)

[83] ೪ ಬನ್ನ (ಮು)

[84] ೫ ನನ್ನಿಯಂ (ಮು)

[85] ೫ ನನ್ನಿಯಂ (ಮು)

[86] ೬ ತಪ್ಪದು (ಮು)

[87] ೬ ತಪ್ಪದು (ಮು)

[88] ೧ ತನೆಗೆ (ಆ)

[89] ೧ ತನೆಗೆ (ಆ)

[90] ೨ ನೀ (ಆ)

[91] ೨ ನೀ (ಆ)

[92] ೩ ದೆನಗೆ (ಆ)

[93] ೩ ದೆನಗೆ (ಆ)

[94] ೪ ದನುಜನುಗ್ರತೆ (ಮು)

[95] ೪ ದನುಜನುಗ್ರತೆ (ಮು)

[96] ೫ ಭೀತ (ಮು)

[97] ೫ ಭೀತ (ಮು)

[98] ೬ ಮುಳಿದು (ಮು)

[99] ೬ ಮುಳಿದು (ಮು)

[100] ೭ ಆ ತರುಣನೊಳು ಸೆಣಸುವರೆ ನವ (ಆ)

[101] ೭ ಆ ತರುಣನೊಳು ಸೆಣಸುವರೆ ನವ (ಆ)

[102] ೧ ಸಿದನು ಕೂಡಗಲೆ ಚಕ್ರಯುಗ (ಆ)

[103] ೧ ಸಿದನು ಕೂಡಗಲೆ ಚಕ್ರಯುಗ (ಆ)

[104] ೨ ಪೆಚ್ಚಿ (ಆ)

[105] ೨ ಪೆಚ್ಚಿ (ಆ)

[106] ೩ ವುಡು ನಿ ಕುರುಂಬವಭ್ರದಲಿ (ಆ), (ಮು)

[107] ೩ ವುಡು ನಿ ಕುರುಂಬವಭ್ರದಲಿ (ಆ), (ಮು)

[108] ೪ ಮನರಾಗಿ (ಆ)

[109] ೪ ಮನರಾಗಿ (ಆ)

[110] ೫ ನುರೆ (ಮು)

[111] ೫ ನುರೆ (ಮು)

[112] ೬ ತನ್ನ ಮನದೊಳಗೆ (ಆ), ಮು)

[113] ೬ ತನ್ನ ಮನದೊಳಗೆ (ಆ), ಮು)

[114] ೧ ಕಂದನನು (ಆ)

[115] ೧ ಕಂದನನು (ಆ)

[116] ೨ ಪೆತ್ತಂತೆ (ಆ), (ಮು)

[117] ೨ ಪೆತ್ತಂತೆ (ಆ), (ಮು)

[118] ೩ ಪಡೆದಂತೆ (ಆ), ಮು)

[119] ೩ ಪಡೆದಂತೆ (ಆ), ಮು)

[120] ೪ ನೆನೆವಂದದಲಿ ಮನದಲಿ ! ಮುಂದುಗಾಣದೆ ಬಹಳ ಸೌಖ್ಯದಲಿರ್ದನಕ್ರೂರ (ಆ)

[121] ೪ ನೆನೆವಂದದಲಿ ಮನದಲಿ ! ಮುಂದುಗಾಣದೆ ಬಹಳ ಸೌಖ್ಯದಲಿರ್ದನಕ್ರೂರ (ಆ)