ಅಸುರನಾಳೆಂದೆನ್ನನತಿ ಕೋ
ಪಿಸುವನೋ ತನ್ನಾತನೆಂದೆನ
ಗೊಸೆವನೋ ಸರ್ವಾತ್ಮನರಿಯನೆ ಭಕುತರಿಂಗಿತವ
ಹೆಸರುಗೊಂಡರೆ ಭವಭ

[1][2]ವ ತ
ಪ್ಪಿಸುವ ಹರಿ ಕಣ್ಣಾರೆ ಕಂಡರೆ
ಬಿಸುಡುವನೆ ತಾನಾಗಲೆನುತ [3]ಕ್ರೂರ ಪುಳಕಿಸಿದ[4]                                       ೨೫

ಅವನೊಬ್ಬನ ಚರಣವನು ನಿಗ
ಮಾವಳಿಗಳಜಮುಖ್ಯದೇವರು
ಠಾವುಗಾಣಿಸಲರಿಯರಾ ಶುಕನಾರದಾದಿಗಳು
ಭಾವದಲಿ ನಿರ್ಧರಿಸಲರಿಯದ
ದೇವದೇವೋತ್ತಮನ ನಾಳಿನ
ಜಾವದಲಿ ಕಂಡಪೆನೆನುತ್ತಡಿಗಡಿಗೆ [5]ಬೆರಗಾದ[6]                                             ೨೬

ಬಿಟ್ಟನೀ ಪರಿ ನಿದ್ರೆಯನು ಮನ
ಮುಟ್ಟೆ ಕೃಷ್ಣನ ನೆನೆದು ಪಾಪದ
ಬೆಟ್ಟವನು ಹುಡಿಗುಟ್ಟಿ ಸೂರ್ಯೋದಯದ ಪರಿವಿಡಿಯ
ದಿಟ್ಟಿಸುತ ವಿಜ್ಞಾನಪದವಿಗೆ
ಕಟ್ಟೊಡೆಯನಾದಂತೆ ಶಂಕೆಯ
ಬಿಟ್ಟು ಸಂಭ್ರಮಿಸುತ್ತ ಗಮನೋದ್ಯೋಗಪರನಾದ                                           ೨೭

ಹರಿಯೆ ನೆನೆವಕ್ರೂರ[7]ನರಿತ
ಸ್ತಿಮಿರದೊಡನಾ[8]ತಿಮಿರ ಹರಿಯಿತು
ಪರಮ ವೈಷ್ಣವರಾಸ್ಯ ಪಂಕಜದೊಡನೆ ಸರಸಿರುಹ
ಅರಳಿದುವು ಸುಕವಿಯ ಮನೋರಥ
ಸಿರಿಯ ಕೂಡೆ ರಥಾಂಗ ಕೂಡಿದು
ವರರೆ ರವಿಯುದಯಿಸಿದನಿಂದ್ರದಿಶಾದ್ರಿಶಿಖರದಲಿ                                           ೨೮

ವಿದಿತಸಂಧ್ಯಾವಂದನೆಯ ಹರಿ
ಪದಸಮಾರಾಧನೆಯನಾ ರವಿ
ಯುದಯದಲಿ ಪುಳಕಿಸುತ ಮಾಡಿ ಮನೋನುರಾಗದಲಿ
ಸದನವನು ಬೀಳ್ಕೊಂಡು ಶುಭಲ-
ಗ್ನದಲಿ ರಥವೇರಿದನು ಬಹುಳಾ
ಭ್ಯುಧಯಲಂಪಟನೆ[9]ಣಿ[10]ಸುತೈದಿದನಚ್ಯುತನ ಗುಣವ                                                ೨೯

[11][12]ತ್ಯಜಯ ವೈಕುಂಠದಲಿ ಸ
ರ್ವೋತ್ತಮನು ತಾನಾಗಿ ತೋರಿಸಿ
ಸತ್ಯಶಾಶ್ವತವೆನಿಸಿ ಮಹದಾನಂದಮಯನಾಗಿ
ಮತ್ತೆ ನೆನೆವ ಗುಣತ್ರಯಂಗಳ
ಕೃತ್ಯದಲಿ ಬಹುರೂಪಿಯಹ ಸಂ
ಸ್ತುತ್ಯ ನೀ ಗೋಕುಲದಲಿಹುದ[13]ರಿದೆನುತ ನಡೆತಂದ[14]                                              ೩೦

*[15]ಜಗದ ಜೀವರ ತಂದೆಯೆನಿಪಾ
ಮಗನ ಪಡೆದನು ನಾಭಿಯಲಿ ನಸು
ನಗೆಯೊಳಗೆ ತಾ ಪಡೆದನಲಸದೆ ಮಾಯೆಯೆಂಬವಳ
ಮಗುಳಿ ಭುವನಪವಿತ್ರೆಯೆನಿಸುವ
ಮಗಳ ಪಡೆದನು ಚರಣದಲಿ ತಾ
ಮಗನೆನಿಸಿ ತೋರುವುದಿದಚ್ಚರಿಯೆನುತ ಬರುತಿರ್ದ                                        ೩೧

ಪರಮಪುರುಷೋತ್ತಮನು ಕಮಲೋ
ದರನು ಕೈವಲ್ಯಾಧಿಪತಿ ಪಂ
ಕರುಹನಾಭನಚಿಂತ್ಯನದ್ವಯನಸಮಶರಜನಕ
ದುರಿತಕೋಳಾಹಳ [16]ನು ನಾಕಾ
ಮರರ ಪ್ರಭು ವಂದಿಸುವ ಪದಗಳ[17]
ಹರಿಯ ಕಂಡರೆ ಧನ್ಯನೆನುತಕ್ರೂರ ಬರುತಿರ್ದ                                               ೩೨

ಹರಿಪದವನರ್ಚಿಸದೆ ಹರಿಯಾ
ಶರಣರೊಡನೆ ಸಖಿತ್ವವಿಲ್ಲದೆ
ಮುರಹರನ ಕೀರ್ತಿಸದೆ ಲಕ್ಷ್ಮೀಧರನ [18]ನಿಟ್ಟಿಸದೆ[19]
ಶರಧಿಶಯನನ ಗುಣಕಥೆಯನಾ
ದರಿಸಿ ಕೇಳದೆ ಹಿರಿಯತನದಲಿ
ಬೆರೆವ ನರನಿಹಪರಕೆ ಬಾಹಿರನೆನುತ [20]ಬರುತಿರ್ದ[21]                                     ೩೩

ಹರಿಯ ನೆನೆಯದ ಮನ ಮುರಾರಿಯ
ಚರಣವನು ಪೂಜಿಸದ ಕೈ ಭೂ
ಧರನ ಹೊಗಳದ ಜಿಹ್ವೆ ವಿಷ್ಣುಕ್ಷೇತ್ರಯಾತ್ರೆಗಳ
ಚರಿಸದಂಘ್ರಿಗಳಿಂದಿರೇಶನ
ಬಿರುದ ಕೇಳದ ಕಿವಿಗಳವು ಜೀ-
ವರಿಗೆ ಪೂರ್ವದ ಹಗೆಗಳೆನುತಕ್ರೂರ ನಡೆತಂದ                                             ೩೪

ಈ ತೆರದಲಚ್ಯುತನ ಮಹಿಮಾ
ಖ್ಯಾತಿಯನು ಕೊಂಡಾಡಿ ಹಿಗ್ಗುತ
ನೂತನಾಳಾಪದಲಿ ಬರೆ ಬರೆ ಮುಂದೆ ದೂರದಲಿ
ಜಾತಿರತುವನ ಧರಿಸಿ ತೊಳಗುವ
ಜಾತರೂಪದ ತೊಡವಿನಂತೆ ಮ
ಹಾತಿಶಯ ವಿಭವದಲಿ ಮೆರೆದುದು ಪಳ್ಳಿ ಹರಿಸಹಿತ                                         ೩೫

[22]ಪರು ಸ[23]ವಿಹ ಗಿರಿಯಂತೆ ಸಿತಪಂ
ಕರುಹವಿಹ ಕೊಳದಂತೆಯಾ ಸುರ
ತರುವೆಸೆವ ವನದಂತೆ ಕೇಸರಿಯಿಪ್ಪ ಗುಹೆಯಂತೆ
[24]ಪರಮ[25] ವೈಷ್ಣವರಿಪ್ಪ ಸಭೆಯಂ
ತರಣಿಯಿಹ ವನದಂತೆ ನಂದನ
[26]ತರುಣ[27]ರಿಹ ಪೆರ್ಮೆಯಲ್ಲಿ ಮೆರೆದುದು ಪಳ್ಳಿ [28]ಗೋಕುಲದಾ[29]                               ೩೬

ಸುತ್ತ ಬಳಸಿದ ಚೂತ[30]ವನ[31]ದೊ
ತ್ತೊತ್ತಿನಲಿ ಪೂತೆಸೆವ ಮಲ್ಲಿಗೆ
ನರ್ತಿಸುವ ನವಿಲು[32]ಗಳು[33] ಕೋಗಿಲೆ ಗಳಪುವರಗಿಣಿಯ
ಮೊತ್ತ ಮೊರೆವ ಮದಾಳಿ ರಮಿಸುವ
ಮತ್ತಹಂಸೆಗಳಿಂದ ಮೆರೆದು ಯ
ದೂತ್ತಮನ ಕಣ್ಮನವ [34]ನೆಳೆ[35]ದುದು ಗೋಕುಲೋದ್ಯಾನ                               ೩೭

ಶೇಷನಂತೆ ಸಹಸ್ರಸಂಖ್ಯೆಯ
ಗೋಸಮಾಜದಿನೊಪ್ಪಿ ತೋರಿತ
ದಾ ಸರಿತ್ಪತಿಯಂತೆ ಮೆರೆದುದು ಘೋಷಮುದ್ರೆಯಲಿ
ಆ ಸುರೇಶ್ವರನಂತೆ ಸುಲಲಿತ
ಗೋಸಮನ್ವಿತಮಾಗಿ ತೊಳಗಿತು
ಘೋಷವಕ್ರೂರನ ಮನೋರಥವಿದಿರಲೆಸೆವಂತೆ                                              ೩೮

ಬಂದನೀ ಪರಿ ದಾನಪತಿ[36]ಯಾ
ನಂದದಲಿ[37] ಗೋಕುಲವನೀಕ್ಷಿಸಿ
ಸಂದಣಿಪ ಹರುಷದಲಿ ರಥದಿಂದಿಳಿದು ತವಕದಲಿ
ನಂದನರಮನೆಗಾಗಿ ಬರೆ ಗೋ
ವೃಂದ ಹೊಕ್ಕುವು ಪುರವ ಬಳಿಕರ
ವಿಂದ ಸಖ ಪವಡಿಸಿದನಾ ವಾರುಣಿಯ ತೋಳಿನಲಿ                                        ೩೯

ವಸುಮತಿಯ ಬಿಸುಪಾರೆ [38]ಜಾತ[39]
ಪ್ರಸರದಳವಿಂಪಾರೆ ಕಮಳಿನಿ
[40]ವಶವಳಿದು[41] ನೀ [42]ರೇರೆ[43] ರಜಿನೀನಾರಿ ತಲೆದೋರೆ
ಅಸತಿಯರು ನಲವೇರೆ ಕೈರವ
ದೊಸಗೆವರೆಗಳು ಸಾರೆ ಕ[44]ಡುರುಚಿ[45]
[46]ಬಿಸಜಸಖ ತಾ ಜಾರಿದನು ಪಶ್ಚಿಮದ ಗಿರಿವರಕೆ[47]                                     ೪೦

ಹರಿ ತನಗೆ ನಿಜ ಗೋಪಮುದ್ರೆಯ
[48]ಸರಿಗೆ ಸರಿ[49] ಕಮಳಾನುರಾಗೋ
ತ್ಕರುಷ ನಮ್ಮಿಬ್ಬರಿಗೆ ಸರಿ ತಮವೈರಿಯೆಂದೆನಿಪ
ಬಿರುದು ಸರಿ ದ್ವಿಜರಾಜತೇಜೋ
ಹರಣದಿಂ ದೆಸೆಗೆಟ್ಟೆ ನಾನೆಂ
[50]ದರುಣ[51] ಕೃಷ್ಣಸ್ಮರಣೆಯಿಂದಪರಾರ್ಣವಕೆ ನಡೆದ                                       ೪೧

ಹರಿಯ ತೇಜಃಪುಂಜದಿದಿರಲಿ
[52]ಸರಿಸವಾಗಿಹುದೊಂದು[53] ಪೂರ್ವದ
ತರುಣಿಯನು ಬಿಟ್ಟಪರಕಾಂ ೧೦[54]ತನ೧೦[55] ಮಾರ್ಗದೊಳು ನಡೆದ
ಮರುಳುತನವೊಂದಧಿಕ ರೌದ್ರತೆ
ವೆರಸಿ ಬಾಳ್ವುದಿದೊಂದೆನುತ ಪಂ
ಕರುಹಸಖನಂಬರವ ಬಿ೧೧[56]ಟ್ಟುದರಿಂದಬುಧಿಗಳಿದ೧೧[57]                                                ೪೨

ದೆಸೆದೆಸೆಯ ಬಾಸಣಿಸಿ [58]ಮೆರೆದುದು[59]
ಮಿಸುಪ ಸಂಧ್ಯಾರಾಗ ಖಗಮೃಗ
ವಿಸರ ತರುಕೋಟರಕೆ ಸಾರಿದುವಳಿಗಳಬ್ಜಿನಿಯ
ಬಿಸುಟುವುಡುನಿಕುರುಂಬವಭ್ರದೊ
ಳೆಸೆದುದುವನಿಯನೈದೆ ಕತ್ತಲೆ
ಮುಸುಕಿದುದು ದೀಪಾಳಿ ಮೆರೆದುದು ನಿಳಯನಿಳಯದಲಿ                                 ೪೩

[60]ಇಂತು[61] ರವಿಯಸ್ತಮಿಸಲಾ ಯದು
ಮಂತ್ರಿ ಕೃಷ್ಣನ ಕಾಂಬಭರದಲಿ
ಮುಂತೆ [62]ಬರೆ ತದ್ವಾರವೊಪ್ಪಿತು[63] ನಂದನರಮನೆಯ
ಸಂತಸದಲೊಳಪೊಕ್ಕು ಗೋವರ
ತಿಂತಿಣಿಯಲಾಸುರಭಿನಿಕರದ
ಹಂತಿಗಳ[64][65]ಚ್ಯುತನ [66]ಕಂಡವ ನಗುತ[67]ಲೈತಂದ                                            ೪೪

ಹೊಳೆವ ಕಿರಿ[68]ದಾಳು[69]ಗಳ ನಿರಗೊಂ
ಡೆಳರ್ವ ಗಡ್ಡದ ಗುಜುರುಮೀಸೆಯ
ನಲಿವ ಮಣಿಕುಂಡಲದ ಮಿಂಚುವ ತನುಛಡಾಳಿಕೆಯ
ನಳಿದ ಬೆನ್ನಿನ ಬೆರಳ ಮಿಸುನಿಯ
ಹಳಚುಮುದ್ರೆಯ ಗೋಪರಿ[70]ದ್ದರು[71]
ಕೆಲಬಲದ ಕೇರಿಗಳೊಳೊಪ್ಪಿರೆ ಕಂಡನಕ್ರೂರ                                                 ೪೫

ಹಗಡುಗಣ್ಣಿಯ ಮುರಿವ ಕಡೆಗೋ
ಲುಗಳ ತಿದ್ದುವ ದಾವಣಿಯ ಗೂಂ
ಟಗಳ ಕೆತ್ತುವ ಮೂಗುನೇಣಿನ ಹುರಿಯ [72]ಜಡಿ[73]ದುಡಿವ
ಮೊಗವಡವ ಮಾಡುವ[74]ರ ಮನೆ[75]
ಟ್ಟಿಗಳ ಕು[76][77]ತೆವರುಗಳ ತಿದ್ದುವ
ಬಗೆಯೊಲೊಪ್ಪುವ ಗೋವಳರನಕ್ರೂರನೀಕ್ಷಿಸಿದ                                             ೪೬

ಹಟ್ಟಿ ಹಟ್ಟಿಯ ಮುಂದೆ ಗೋಪರು
[78]ಗೊಟ್ಟಿ ಗೆಲುಗುಂಡು[79] ಗಳ ಕುಣಿವಿನ
ಚಿಟ್ಟುಮುರಿ [80]ಹಿಳಿದೆ[81]ಪ್ಪನಾ ಹಿಡಿಗವಡೆಗಳ [82]ಹಿಡಿದು[83]
ಅಟ್ಟಿ ಮುಟ್ಟುವ [84]ಸೂಟಿ[85] ಗವಡೆಯ
ನೊಟ್ಟಜೆಯಲಂದಾಡುತಿರಲವ
ದಿಟ್ಟಿಸಿದನಕ್ರೂರ[86]ನತಿಬಲ[87] ಬಾಲಲೀಲೆಗಳ                                                          ೪೭

ತಾಯ ಬರವನು ಹಾರಿ [88]ಹರಿ[89]ದಂ
ಬೇಯೆನುತ ಹಟ್ಟಿಗಳ ಸುತ್ತಿ ನ
*[90]ವಾಯಿಯಲಿ ಪರೆದಾಡಿ ಮಿಗೆ ಪುಟ೧೦[91]ನೆಗೆದು೧೦[92] ಮೇಳಿಸುತ
ಆಯಸದಿ ಕುಡಿವಳ್ಳೆಹೊಯ್ಲಿನ
ಮೇಯಲರಿಯದ ವತ್ಸವಂದಾ
ಶ್ರೀಯ ಮೊದಲೆಂಬಂತೆ ಮೆರೆದಿರೆ ಕಂಡನಕ್ರೂರ                                           ೪೮

ಕೊರಳ ಪೊಂಬಚ್ಚುಗಳ ಬೆಳ್ಳಿಯ
ಮುರುಹುಗದಗದ ಜೋಲ್ವ ಹುಬ್ಬಿನ
ನರೆದಲೆಯ ಸೆರೆಯುಬ್ಬಿದಂಗದ ತೆರೆಯ [93]ನಿರಿಗಳಲಾ[94]
ತೆರಳಿದಾಸ್ಯದ ಬತ್ತಿದೆವೆಯದು
ಕಿರುವ ಕಂಗಳ ಕಳಿದ ದಂತದ
ಪರಮಗೋಪರ ಕಂಡು ನಸುನಗುತಿರ್ದನಕ್ರೂರ                                             ೪೯

ಮಿಸುಪ ಹೊಂಗೇದಗೆಯ ತುರುಬಿನ
ಕುಸುರಿಗೆಲಸದ ಕರ್ಣಪತ್ರದ
ನೊಸಲ[95]ಕಸ್ತುರಿ[96] [97]ಜೂಳೆಯದ ಕುಚವೆಸೆವ ಮೃಗಮದದ[98]
ತ್ರಿಸರದೇಕಾವಳಿಯ ಮದನನ
ಮಸೆದ ಮೊನೆಯಂಬುಗಳಲೆ[99]ಸುತಲೆ[100]
[101]ಬಿಸಜನಾಭನ[102] ಸತಿಯರೊಪ್ಪಿರೆ ಕಂಡನಕ್ರೂರ                                       ೫೦

ಕೆಂದೆ [103]ಬೆಳ್ತಿಗೆ[104] ಕಾಳಿ ಕಪಿಲೆ ಸು
[105]ಗಂಧೆ [106]ನಂದಿನಿ ಚಿಂಚೆ ಹಂಡೆ ಮು
ಕುಂದೆ ಕಿರುಗೆಚ್ಚಲಿನ ಜನ್ನಿಗೆ ಜಾಲೆ ತನಿ[107]ಹುಲಿತಿ[108]
ಮುಂದೆ ತಾನೈತಪ್ಪ ಮುದುವೆಳ
ಗಂದಿ ಸುರಭಿಯೆನಿಪ್ಪ [109]ಪಶುಗಳ[110]
ಗೊಂದಣವನಕ್ರೂರನೀಕ್ಷಿಸಿ ಹೊಗಳುತೈತಂದ                                               ೫೧

ಕರೆವ ಕಟ್ಟುವ ಲಾಲಿಸುವ ಮೈ
ದುರಿಸಿ ದಳಿಯಿಕ್ಕಿಸುವ ಕರುಗಳ
ಕರೆಕರೆದು ಮುಂಡಾಡಿ ತಟ್ಟುವ ಪರಸಿ ತೂಪಿರಿವ
ಸರಳಿಸುವ ಹೋರಿಗಳ ಬೆನ್ನಲಿ
ಹರಿವ ಹದುಳಿಸಿ ಹಾಲಹರವಿಯ
ತೆರಳಿಚುವ ಲೀಲೆಯಲಿ ಹರಿಯಿರೆ ಕಂಡನಕ್ರೂರ                                             ೫೨

ಸುಳಿಗುರುಳ ಪೆರೆನೊಸಲನಾಟಿಸಿ
ಹೊಳೆವ ಕಂಗಳ ಮಿಸುಪ ಕದಪಿನ
ಲುಳಿತ ನಾಸಾಪುಟದ ಬಿಂಬಾಧರದ ಸೀಮೆಯಲಿ
ತೊಳೆಪ ದಶನಾವಳಿಗಳೊಪ್ಪುವ
ಗಳದ ಸಿರಿ ನೆಲಸಿಪ್ಪ ವಕ್ಷ
ಸ್ಥಳದ ಕೃಷ್ಣನ ಕಂಡು ಪುಳಕಿತನಾದನಕ್ರೂರ                                                             ೫೩

ತೋಳೆರಡು ನಾಲ್ಕೆನಿಸಿ ತೋರುತ
ನೀಲಮೇಘಶ್ಯಾಮನುದರದ
ಮೂಲೆಯಲಿ ಬ್ರಹ್ಮಾಂಡಕೋಟಿಯ [111]ಧರಿಸಿ ರಾಜಿಸುವ[112]
ಲೋಲನಖಿಳ ಮುನೀಶ್ವರರ ಹೃದ
ಯಾಲಯದೊಳಡಿಯಿಡುವ ಬಡಗೋ
ಪಾಲನಚ್ಯುತನಹುದೆನುತ ಮೆಯ್ಯಿಕ್ಕಲನುವಾದ                                             ೫೪

*[113]ಕುಂದದಲರಿಂದೆಸೆವ ಕಬರಿಯ
ಬಂಧವನು ಕೆತ್ತಿಸಿದ ಪೀಲಿಯ
ಚಂದ್ರಿಕೆಯ ಮುಡಿಗಟ್ಟ ಮುಸುಕಿದ ತುಂಬಿಗುರುಳುಗಳ
ಚಂದನದ ಕತ್ತುರಿಯ[114]ತಿಲಕದ
ಲಂದ[115]ವೇರಿದ ಗಳದಲೊಪ್ಪಿಹ
ನಂದತನಯನ ಕಂಡು ಮೈಯಿಕ್ಕಿದನು ಹರುಷದಲಿ                                         ೫೫

ದೇವ ಜಯ ಜಯ ಜಯ ಜನಾರ್ದನ
ಸಾವು ಹುಟ್ಟಿಲ್ಲದ ಜಗನ್ಮಯ
ಕಾವುದೈ[116]ಶರಣರನು[117] ಕರುಣಾರ್ಣವ ಮಹಾಮಹಿಮ
ಶ್ರೀವಧೂವರ ಸಲಹು ಕೃಷ್ಣ ಕೃ
ಪಾವಲೋಕನದಿಂದ ರಕ್ಷಿಸು
ದೇವಕೀಸುತ ಎನುತ ಹೊರಳಿದನಚ್ಯುತಾಂಘ್ರಿಯಲಿ                                       ೫೬

ಮೇರೆದಪ್ಪಿದ ಹರುಷ ಪಾರಾ
ವಾರದಲಿ ಮನಮುಳುಗಿ ಹರಿಪದ
ವಾರಿಜಕೆ ನಿಜತನುವನೊಪ್ಪಿಸಿ ವಿಕಳ ಭಾವದಲಿ
ಆರು ತಾನಿದಿರಾರದೆಂಬ ವಿ
ಚಾರವಳಿದಾರೂಢಯೋಗಿಯ
ಭಾರಣೆಯಲಕ್ರೂರನೆಸೆದನು[118] ಭಕುತಿ[119]ಕೇಳಿಯಲಿ                                      ೫೭

ಮರೆದೊರಗಿದರ್ಭಕನೊ ಸಮರ[120]
ದೆ[121] ರಕದಿನಿಯನೊ ವಿಷ್ಣುಭಕುತಿಯ
ಪರಮಸೀಮಾಸ್ತಂಭವೋ ಸಂಸಾರವಿಭ್ರಮವ
ತೊರೆದ ಸಮ್ಯಗ್ ಜ್ಞಾನಿಯಂತಃ
ಕರಣವೋ ಪೇಳೆನಲು ಕೃಷ್ಣಂ
ಗೆರಗಿ ಸೈವೆರಗಾಗಿ ಪಿಲಿತನಾದನಕ್ರೂರ                                                       ೫೮

ಕಂಡು ಹರಿ ನಸುನಗುತ ಭಕುತನ
ಮಂಡೆಯನು ಹಿಡಿದೆತ್ತಿ ನಿಜದೋ
ರ್ದಂಡದಲಿ ಬಿಗಿದಪ್ಪಿ ತನುವಿನ ಧಳಿಯನು ತೊಡೆದು
ಚಂಡರುಚಿ ತಾಪದಲಿ ಬಳಲಿದೆ
ಯುಂಡಹೊಲಬಿಲ್ಲಹಹ ದೇಹವ
ದಂಡಿಸುವೆಯೇ[122]ಕೆಂದು[123] ಮಧುರೋಕ್ತಿಯಲಿ ಮನ್ನಿಸಿದ                              ೫೯

ಸುರರಿಗಭಯವನಿತ್ತ ಕರದಿಂ
ದೊರಸಿದನು ಮೈ ಬೆಮರನಾಸರ
ಸಿರುಹನಿಳಯಳನಪ್ಪು ವುರದಿಂದೊಲಿದು ಬಿಗಿಯಪ್ಪಿ
ಹರಚತುರ್ಮುಖರೊಡನೆ ನುಡಿವಾ
ದರ ರಸೋಕ್ತಿಯ [124]ಮಾವ[125] ಕಂಸಾ
ಸುರನ ಮಂತ್ರಿಯ ಮನ್ನಿಸಿದನಸುರಾರಿಯುಚಿತದಲಿ                                       ೬೦

ಮನ್ನಣೆಗೆ ಮನ[126]ವುಕ್ಕಿ[127] ಮುಂದಿಹ
ಪನ್ನಗಾರಿಧ್ವಜನ ಹೊಗಳುತ
ಧನ್ಯನಾದೆನೆನುತ್ತ ಮಕುಟವನೊಲೆದು ಮುದದಿಂದ
ತನ್ನೊಳಗು ಹೊರಗಚ್ಯುತನ ಸಂ
ಪನ್ನತೆಯನೀಕ್ಷಿಸುತ ಬೆರಗಿನ
ಬಿನ್ನಣದೊಳಕ್ರೂರನೆಸೆದನು ದಿವ್ಯಮುನಿಯಂತೆ                                             ೬೧

ಸಂದಣಿಸಿ ಪರಿ[128]ಪರಿದು[129] ನೋಡುತ
ನಿಂದ ಗೋವರ ನೆರವಿ ನೆರವಿಯ
ಹಿಂದೆ ಕವಿ[130]ದುದು ಪರಿದು ನೋಡುತ[131] ಗೋಪಕಾಂತೆಯರ
ನಂದನಾಪ್ತರನಾಯಶೋದೆಯ
ಬಂಧುವರ್ಗವ ಕಂಡು ಮನದಲಿ
ವಂದಿಸುತ ಹರಿಸಹಿತ ಬಂದನು ನಂದನಿದ್ದೆಡೆಗೆ                                             ೬೨

ನಂದನಿದಿರೆದ್ದ ಡಿಗೆಗರಿ ನಿಜ
ಮಂದಿರಕೆ [132]ಕೊಂಡೊಯ್ದು[133] ಪೂರ್ವದ
ಬಂಧು[134]ವರ್ಗವು[135] ಘಟಿಸಿ[136] ತೆನೆ ನಿಂದಾದರಿಸಿ ಬಳಿಕ[137]
ಗಂಧಪುಷ್ಪಾದ ಖಿಳವಸ್ತುವ
ಮುಂದಿರಿಸಿ ಕಾಲ್ಪೊಳೆದು ಬದುಕಿದೆ
[138]ವೆಂದು[139] ತಾನನುನಯದಿ ನುಡಿದನು ಮಧುರವಚನದಲಿ                          ೬೩

ಏನು ಹದುಳವೆ ಬಂದ[140]ಕಾರಿಯ
ವೇನು ಆವುದು[141] ನಾವು ಪೂರ್ವದ
ಲೇನು ಸುಕೃತವ ಮಾಡಿದೆವೊ ನಿಮ್ಮಂಘ್ರಿದರುಶನಕೆ
ಮಾನನಿಧಿ ಬಳಲಿದಿರೆನುತ ಸ
ನ್ಮಾನದಲಿ[142] ತೋಷಣವ ಮಾಡಿ[143]
ನೋನುರಾಗದಲವನನುಪಚರಿಸಿದನು ವಿನಯದಲಿ                                         ೬೪

ಅದಕೆ ಹರುಷಿತನಾಗಿ ನುಡಿದನು
ಯದು ಚಮೂಪತಿ[144] ನಮಗೆ ಕೇಳ[145]
ಭ್ಯುದಯ ಕೈವಶವಾಯ್ತಲಾ ಬಳಿಕೀ ಜನಾರ್ಧನನ
ಸದನದಿಂ [146]ತೋಲಯಿಸಿ[147] ಶಿಶು ಭಾ
ವದಲಿ [148]ಪಾ[149]ಲಿಸಿ ತಂದೆಯೆನಿ೧೦[150]ಸಿದ೧೦[151]
ಪದವಿ ಪೂರ್ವದ ಸುಕೃತಫಲ ನಿ೧೧[152]೧೧[153]ಗೆಂದನಕ್ರೂರ                                          ೬೫

ಈ ಪರಿಯಲಕ್ರೂರ ಮಧು[154]ರಾ[155]
ಳಾಪದಲಿ ಕೊಂಡಾಡಿ ಪಳ್ಳಿಯ
ಗೋಪರೆಲ್ಲರ ಕರೆಸಿ ಮಜ್ಜನಭೋಜನಾಂತದಲಿ
ಚಾಪದುತ್ಸವವೆಂದು ಕಂಸ ನಿ
ರೂಪಿಸಿದ ವೃತ್ತಾಂತವನು ನಾ
ನಾಪರಿಯ ಚತುರೋಕ್ತಿಯಲಿ ವಿಸ್ತರಿಸಲನುವಾದ                                           ೬೬

ಎರಡನೆಯ ಸಂಧಿ ಮುಗಿದುದು 


[1] ೫ ವ (ಆ)

[2] ೫ ವ (ಆ)

[3] ೬ ಡಿಗಡಿಗೆ ಬೆರಗಾದ (ಆ)

[4] ೬ ಡಿಗಡಿಗೆ ಬೆರಗಾದ (ಆ)

[5] ೭ ಪುಳಕಿಸಿದ (ಆ)

[6] ೭ ಪುಳಕಿಸಿದ (ಆ)

[7] ೧ ನಾಂತ ತಿ | ಮಿರಗಳೊಡನಾ (ಮು)

[8] ೧ ನಾಂತ ತಿ | ಮಿರಗಳೊಡನಾ (ಮು)

[9] ೨ ನೆ (ಆ)

[10] ೨ ನೆ (ಆ)

[11] ೩ ನಿ (ಆ)

[12] ೩ ನಿ (ಆ)

[13] ೪ ಚ್ಚರಿಯೆನುತ ಬಂದ (ಆ)

[14] ೪ ಚ್ಚರಿಯೆನುತ ಬಂದ (ಆ)

[15] * ಆ ಪ್ರತಿಯಲ್ಲಿ ಈ ಪದ್ಯವಿಲ್ಲ

[16] ೧ ನಜೇಶಾ ! ಮರಕುಲಪ್ರಭು ವೈದ್ಯನೆನಿಸುವ (ಆ)

[17] ೧ ನಜೇಶಾ ! ಮರಕುಲಪ್ರಭು ವೈದ್ಯನೆನಿಸುವ (ಆ)

[18] ೨ ನರ್ಚಿಸಿದೆ (ಆ) ನೀಕ್ಷಿಸದೆ (ಮು)

[19] ೨ ನರ್ಚಿಸಿದೆ (ಆ) ನೀಕ್ಷಿಸದೆ (ಮು)

[20] ೩ ನಡೆತಂದ (ಆ)

[21] ೩ ನಡೆತಂದ (ಆ)

[22] ೧ ಷ (ಆ)

[23] ೧ ಷ (ಆ)

[24] ೨ ಪರಮ ವೈಷ್ಙವನಿಪ್ಪ ಸಭೆವೊಲು | ತರಣಿಯಿಹ ನಭದಂತೆ (ಮು)

[25] ೨ ಪರಮ ವೈಷ್ಙವನಿಪ್ಪ ಸಭೆವೊಲು | ತರಣಿಯಿಹ ನಭದಂತೆ (ಮು)

[26] ೩ ತನಯ (ಆ),

[27] ೩ ತನಯ (ಆ),

[28] ೪ ಪುರವೆನಿಸಿ (ಆ), (ಮು)

[29] ೪ ಪುರವೆನಿಸಿ (ಆ), (ಮು)

[30] ೧ ಕುಜ (ಆ), (ಮು)

[31] ೧ ಕುಜ (ಆ), (ಮು)

[32] ೨ ಲಿವ (ಆ), (ಮು)

[33] ೨ ಲಿವ (ಆ), (ಮು)

[34] ೩ ಸೆಳೆ (ಆ) (ಮು)

[35] ೩ ಸೆಳೆ (ಆ) (ಮು)

[36] ೪ ಗೋವಿಂದನಿಹ (ಆ), (ಮು)

[37] ೪ ಗೋವಿಂದನಿಹ (ಆ), (ಮು)

[38] ೧ ಕೋಕ (ಆ) ಯಾತು (ಮು)

[39] ೧ ಕೋಕ (ಆ) ಯಾತು (ಮು)

[40] ೨ ಬಸವಳಿದು (ಆ), (ಮು)

[41] ೨ ಬಸವಳಿದು (ಆ), (ಮು)

[42] ೩ ಬಾಯಾರಿ (ಆ)

[43] ೩ ಬಾಯಾರಿ (ಆ)

[44] ೫ ಕಂಡೀ (ಆ)

[45] ೫ ಕಂಡೀ (ಆ)

[46] ೬ ಬಿಸಜಸಖ ಜಾರಿದನು ವರುಣದಿಶಾದ್ರಿಮಂದಿರಕೆ (ಆ)

[47] ೬ ಬಿಸಜಸಖ ಜಾರಿದನು ವರುಣದಿಶಾದ್ರಿಮಂದಿರಕೆ (ಆ)

[48] ೭ ಹರಿ ಸಲಿಸೆ (ಮು)

[49] ೭ ಹರಿ ಸಲಿಸೆ (ಮು)

[50] ೮ ದುರುಳಿ (ಮು)

[51] ೮ ದುರುಳಿ (ಮು)

[52] ೯ ಸ್ಮರಿಸನಾಂದನೊಂದು (ಆ) ಸ್ಮರಸಲಾವುದದಿಂದು (ಮು)

[53] ೯ ಸ್ಮರಿಸನಾಂದನೊಂದು (ಆ) ಸ್ಮರಸಲಾವುದದಿಂದು (ಮು)

[54] ೧೦ ತಾ (ಆ), (ಮು)

[55] ೧೦ ತಾ (ಆ), (ಮು)

[56] ೧೧ ಟ್ಟಳಲಿಂ ಜಳಧಿ (ಆ), ಟ್ಟಳಿತಂದನಂಬುಧಿಗೆ (ಮು)

[57] ೧೧ ಟ್ಟಳಲಿಂ ಜಳಧಿ (ಆ), ಟ್ಟಳಿತಂದನಂಬುಧಿಗೆ (ಮು)

[58] ೧ ನಡೆದುದು (ಮು)

[59] ೧ ನಡೆದುದು (ಮು)

[60] ೨ ಅಂತು (ಆ)

[61] ೨ ಅಂತು (ಆ)

[62] ೩ ಬರೆಬರಲಿದಿರಲೊಪ್ಪುವ (ಆ) ಬರುಬರುತಿದಿರಲೊಪ್ಪುವ (ಮು)

[63] ೩ ಬರೆಬರಲಿದಿರಲೊಪ್ಪುವ (ಆ) ಬರುಬರುತಿದಿರಲೊಪ್ಪುವ (ಮು)

[64] ೪ ನ (ಆ)

[65] ೪ ನ (ಆ)

[66] ೫ ಚಿಹ್ನವ ನೋಡುತೈ (ಆ)

[67] ೫ ಚಿಹ್ನವ ನೋಡುತೈ (ಆ)

[68] ೬ ಡೊಳ್ಳು (ಆ), ದೋಳು (ಮು)

[69] ೬ ಡೊಳ್ಳು (ಆ), ದೋಳು (ಮು)

[70] ೭ ವೃದ್ಧರು (ಆ), (ಮು)

[71] ೭ ವೃದ್ಧರು (ಆ), (ಮು)

[72] ೧ ಪಿಡಿ (ಆ), (ಮು)

[73] ೧ ಪಿಡಿ (ಆ), (ಮು)

[74] ೨ ಮನೆಯ (ಆ)

[75] ೨ ಮನೆಯ (ಆ)

[76] ೩ ಣಿ (ಆ)

[77] ೩ ಣಿ (ಆ)

[78] ೪ ಗೊಟ್ಟಿ ಗುಳಿಸೆಂಡು (ಆ), (ಮು)

[79] ೪ ಗೊಟ್ಟಿ ಗುಳಿಸೆಂಡು (ಆ), (ಮು)

[80] ೫ ಹೆಳದಿ (ಆ)

[81] ೫ ಹೆಳದಿ (ಆ)

[82] ೬ ನೊಲಿದು (ಆ), (ಮು)

[83] ೬ ನೊಲಿದು (ಆ), (ಮು)

[84] ೭ ಸುತ್ತು (ಮು)

[85] ೭ ಸುತ್ತು (ಮು)

[86] ೮ ನಿಹಬಲು (ಆ)

[87] ೮ ನಿಹಬಲು (ಆ)

[88] ೯ ಕರೆ (ಆ)

[89] ೯ ಕರೆ (ಆ)

[90] *”ವಾಯಿಯಲಿ” ಈ ಅಕ್ಷರಗಳು ಆ ಪ್ರತಿಯಲ್ಲಿಲ್ಲ

[91] ೧೦ ವೇರಿ (ಆ)

[92] ೧೦ ವೇರಿ (ಆ)

[93] ೧ ನಿರಿಗಡಲ (ಆ) ನಿರಿಗೆಗಳ (ಮು)

[94] ೧ ನಿರಿಗಡಲ (ಆ) ನಿರಿಗೆಗಳ (ಮು)

[95] ೨ ಮುತ್ತಿನ (ಆ) ಕಸ್ತೂರಿಯ (ಮು)

[96] ೨ ಮುತ್ತಿನ (ಆ) ಕಸ್ತೂರಿಯ (ಮು)

[97] ೩ ಪಿಣಿಲ ಕಚವಕ್ರವಲ್ಲಿಗಳ (ಮು)

[98] ೩ ಪಿಣಿಲ ಕಚವಕ್ರವಲ್ಲಿಗಳ (ಮು)

[99] ೪ ಸೆಯುತೆ (ಆ) ನೇಳಿಸು (ಮು)

[100] ೪ ಸೆಯುತೆ (ಆ) ನೇಳಿಸು (ಮು)

[101] ೫ ತೆಸೆವಪಾಂಗದ (ಮು), ಯೆಸೆವಪಾಂಗದ (ಆ)

[102] ೫ ತೆಸೆವಪಾಂಗದ (ಮು), ಯೆಸೆವಪಾಂಗದ (ಆ)

[103] ೬ ಬೆಳತಿಗೆ (ಮು)

[104] ೬ ಬೆಳತಿಗೆ (ಮು)

[105] ೭ ನಂದೆ (ಮು)

[106] ೭ ನಂದೆ (ಮು)

[107] ೮ ಹೊನ್ನಿ (ಆ), ಹುಲಚಿ (ಮು)

[108] ೮ ಹೊನ್ನಿ (ಆ), ಹುಲಚಿ (ಮು)

[109] ೯ ಪಸುವಿನ (ಆ)

[110] ೯ ಪಸುವಿನ (ಆ)

[111] ೧ ನಿರಿಸಿಕೊಂಡಿಹನು (ಆ)

[112] ೧ ನಿರಿಸಿಕೊಂಡಿಹನು (ಆ)

[113] * ಈ ಪದ್ಯವು ಆ ಪ್ರತಿಯಲ್ಲಿ ಇಲ್ಲ.

[114] ೨ ತಿಗುರಿನೊಳಂದ (ಮು)

[115] ೨ ತಿಗುರಿನೊಳಂದ (ಮು)

[116] ೧ ಶರಣಾಗತರ (ಆ)

[117] ೧ ಶರಣಾಗತರ (ಆ)

[118] ೨ ಭಕ್ತ (ಮು)

[119] ೨ ಭಕ್ತ (ಮು)

[120] ೩ ತಿಯೆ (ಆ)

[121] ೩ ತಿಯೆ (ಆ)

[122] ೧ ಕೆನುತ (ಆ)

[123] ೧ ಕೆನುತ (ಆ)

[124] ೨ ನುಡಿದು (ಆ), (ಮು)

[125] ೨ ನುಡಿದು (ಆ), (ಮು)

[126] ೩ ವುಬ್ಬಿ

[127] ೩ ವುಬ್ಬಿ

[128] ೪ ವರಿದು

[129] ೪ ವರಿದು

[130] ೫ ಕವಿದಡರಿ ನೋಡುವ (ಆ), (ನು)

[131] ೫ ಕವಿದಡರಿ ನೋಡುವ (ಆ), (ನು)

[132] ೧ ಕೊಂಡುಯ್ದ (ಆ), (ಮುಂ)

[133] ೧ ಕೊಂಡುಯ್ದ (ಆ), (ಮುಂ)

[134] ೨ ದರುಶನ (ಆ), ದರ್ಶನ (ಮು)

[135] ೨ ದರುಶನ (ಆ), ದರ್ಶನ (ಮು)

[136] ೩ ತೆಂದಾದರಿಸಿ ವಿನಯದಲಿ (ಆ), ತೆನಗೆಂದಾದರಿಸಿ ಬಳಿಕ (ಮು)

[137] ೩ ತೆಂದಾದರಿಸಿ ವಿನಯದಲಿ (ಆ), ತೆನಗೆಂದಾದರಿಸಿ ಬಳಿಕ (ಮು)

[138] ೪ ನೆಂದು (ಆ), (ಮು)

[139] ೪ ನೆಂದು (ಆ), (ಮು)

[140] ೫ ಕಾರ್ಯವಿಧಾನವಾವುದು (ಆ), ಕಾರ್ಯವನೂನವಾವುದು (ಮು)

[141] ೫ ಕಾರ್ಯವಿಧಾನವಾವುದು (ಆ), ಕಾರ್ಯವನೂನವಾವುದು (ಮು)

[142] ೬ ಘೋಷಣವ ಮಾಡಿ (ಆ), ಸಂತೋಷವಡಿಸಿ (ಮು)

[143] ೬ ಘೋಷಣವ ಮಾಡಿ (ಆ), ಸಂತೋಷವಡಿಸಿ (ಮು)

[144] ೭ ನಂದ ನಿನಗ (ಆ), ನಂದ ಕೇಳ (ಮು)

[145] ೭ ನಂದ ನಿನಗ (ಆ), ನಂದ ಕೇಳ (ಮು)

[146] ೮ ದೊಳಗಿರಿಸಿ (ಆ), (ಮು)

[147] ೮ ದೊಳಗಿರಿಸಿ (ಆ), (ಮು)

[148] ೯ ಲಾ (ಆ)

[149] ೯ ಲಾ (ಆ)

[150] ೧೦ ಸುವ (ಆ), (ಮು)

[151] ೧೦ ಸುವ (ಆ), (ಮು)

[152] ೧೧ ನ (ಆ), (ಮು)

[153] ೧೧ ನ (ಆ), (ಮು)

[154] ೧. ನುಚಿತಾ (ಆ)

[155] ೧. ನುಚಿತಾ (ಆ)