ಮೊದಲನೆಯ ಸಂಧಿ

ಸೂಚನೆ :         *

[1]ಶ್ರೀಯರಸನವಕರಿಸಿ ದೈತ್ಯನಿ
ಕಾಯವನು ಸಂಹರಿಸಿ ದಿವಿಜರ
ಕಾಯಿದಕ್ರೂರಂಗೆ ತನ್ನಯ ನಿಜವ ತೋರಿಸಿದ||

ಪದನು :

ಶ್ರೀರಮಣನಮೃತಾಬ್ಧಿಮಂದಿರ
ನೀರಜಾಸನ ಜನಕ ಜಗದಾ
ಧಾರ ಫಣಿಪರಿಯಂಕನಹಿರಿಪುಗಮನನಸುರಹರ
ಧಾರಿಣೀಧರ ದರಸುದರ್ಶನ
ವಾರಿರುಹಕೌಮೋದಕೀಧರ
ನಾರದಪ್ರಿಯ ಸಲಹುಗೆಮ್ಮ ಮನೋನುರಾಗದಲಿ                               ೧

ಸೋಮ ಸೋಮಕಲಾವಿಭೂಷಣ
ಸೋಮಸಖ ಸೋಮಾಶನಾರ್ಚಿತ
ಸೋಮಮಯನುತ ಪೂತ ಪಾವಕನೇತ್ರ ಸುಚರಿತ್ರ
ಕಾಮಹರ ಕಾಮಿತಫಲಪ್ರದ
ಸೋಮನಘವನದಾವ ಮಂಗಳ
ನಾಮ ಶಂಕರ ಸಲಹುಗೆಮ್ಮ ಮನೋನುರಾಗದಲಿ                              ೨

ಪರಶುಧರ ಫಣಿರತ್ನಭೂಷಣ
ಕರಿವದನಕಮನೀಯ ಲಕ್ಷಣ
ವರದ ಪಾಶಾಂಕುಶದ ಲಡ್ಡುಗದಿಂದೆ ಕರವೆಸೆವ
ದುರಿತತರುನಿರ್ಮೂಲ ನಿನ್ನಯ
ಶರಣರಘಸಂಹಾರ ಪುರಹರ
ವರತನುಜ ಗಣನಾಥ ಕರುಣಿಸು ಮತಿಗೆ ಮಂಗಳವ                           ೩

ತಾಮರಸಭವನರಸಿ ಭಾರತಿ
ಸಾಮಜಾನನ ವಿಷಮಶರ ನಿ
ಸ್ಸೀಮ ವೇದವ್ಯಾಸಮುನಿ ಸುರಗುರುಗಳೊಲವಿನಲಿ
ರಾಮಣೀಯಕ ಮತಿಗೆ ನಯಸುಖ
ಕಾಮಿತಾರ್ಥಜ್ಞಾನ ಸರಸೋ
ದ್ದಾಮ ಚತುರೋಕ್ತಿಯನು ನೀಡುಗುಪಕ್ರಮಂಗಳಲಿ                             ೪

ಕವಿಕುಮಾರವ್ಯಾಸರಾಯನ
ಕವಿತೆ ಜಾಣರ ಸೊಬಗು ರಸ ಭಾ
ವವನು ಸದಲಂಕೃತಿಯನತಿ ಮಧುರೋಕ್ತಿಕೌಶಲವ
ಸವಿನುಡಿಯ ಗಮಕಿಗಳ ಚರಣಾ
ಬ್ಬವನು ಪಿಡಿದಕ್ರೂರಚರಿತೆಯ
ವಿವರಿಸಿದನಾ ಸೋಮನಾಥ ಕವೀಂದ್ರನೊಲವಿನಲಿ                            ೫

ಧರೆಯರಿಯಲೀ ಕೃಷ್ಣಚರಿತದ
ಶರಧಿಯೊಳಗಕ್ರೂರಚರಿತೆಯ
ನೊರೆವೆನಚ್ಯುತಭಕ್ತರೆಲ್ಲರ ಚರಣಕಭಿನಮಿಸಿ
ಗರುವರತಿಕೋವಿದರು ಹಿರಿಯರು
ಸರಸರಿದನಾದರಿಸಿ ತಪ್ಪನು
ಪರಿಹರಿಸಿ ತಿದ್ದುವುದು ಮೆರೆವುದು ನಿಮ್ಮ ಸದ್ಗುಣವ                             ೬

ಕೃತಿಗೆ ಮೊದಲೆಂತನೆ ಸುಧಾಬ್ದಿ
ಸ್ಥಿತ ಜಗದ್ಗುರು ವಿಷ್ಣುಲೋಕ
ಸ್ಥಿತಿಗತಿಯನಾರೈದು ನಡೆಸುವ ದಿವ್ಯಮೂರ್ತಿಯಲಿ
ಕ್ರತುಗಳಿಂದೋಲಯಿಸಿಕೊಳುತಹಿ
ಪತಿಯ ಮೇಲೊಲವಿಂದ ಪವಡಿಸಿ
ಸತಿಸಹಿತವೀ ಪರಿಯೆ ಜಗವನು ಪಾಲಿ[2]ಸುತ್ತಿರ್ದ[3]                            ೭

[4]ಕಂಸ[5] ಮೊದಲಾದಸುರರವನಿಯ
ಬೇಸರಿಸಿ ಮಗುಳೆದ್ದು ಬಂದಾ
ವಾಸದಲಿ [6]ದಳವುಳಿಸಿ[7] ಶಕ್ರನ ಮುರಿದು ಸುಮನಸರ
ದೇಶದಿಂದರೆಯಟ್ಟಿ ದೈವ
ದ್ವೇಷವನು ನೆರೆಬಲಿದು [8]ಹೆಚ್ಚಿ ಕ[9]
ರಾಸಿಗಳ ಝಳಪಿಸುತ [10]ಮದವಡು[11] ತಿರ್ದುದವನಿಯಲಿ                               ೮

ಭೂವನಿತೆ ದಾನವರ ಭಾರಕೆ
ಹೇವರಿಸಿ ಬ್ರಹ್ಮಂಗೆ ಮೊರೆಯಿಡ
ಲಾ [12]ವನಜಸಂಭ[13] ವನಮೃತ ಜಲಧಿಗೆ ಸುರರು ಸಹಿತೈದಿ
ಶ್ರೀವರಂಗರುಪಿ[14]ದರೆ[15] ದೇವರ
ದೇವನಭಯವ ಕೊಟ್ಟು ಬಂದಪೆ
ನೀವು ಧರಣಿಯಲುದಿಸಿ ಹೋಗಿರಿ [16]ಯೆಂತ[17] ನಿರ್ಮಿಸಿದ                                           ೯

[18]ಬಳಿಕಲಾದಿ[19] ದಿವೌಕಸರು ಭೂ
ವಳಯದಲಿ ಗೋಪಾಲ [20]ವೇಷಧಿ
ಸಲೆವುದಯಿಸಿದರಖಿಳ[21] ನಿಗಮಪ್ರತತಿಪಶುವಾಗಿ
ಸುಳಿದುವದಿ೧೦[22]ತಿಯು೧೦[23] ಕಶ್ಯಪರವನಿ
ಯೊಳಗುದಿಸಿದರು ಯಾದವರ ಕುಲ
ದೊಳಗೆ ೧೧[24]ಸಿರಿ ವಸುದೇವ ದೇವಕಿಯೆಂಬ೧೧[25] ಪೆಸರಿನಲಿ                              ೧೦

ತಂದೆಯನು ಸೆರೆಗೊಯಿದು ಸೋದರ
ವೃಂದವನು ಕಡೆಗಣಿಸಿ ದೈತ್ಯರ
೧೨[26]ದೊಂದು೧೨[27] ಕೃತ್ಯವ ಬಲಿದು ಧರಣಿಯೊಳುಳ್ಳ ಭೂಭುಜರ
ಬಂದಿವಿಡಿದಚ್ಯುತ ವಿರೋಧದಿ
ಮುಂದುಗಾಣದೆ ದೇವಕಿಗೆ ಹರಿ
ಬಂದು ೧೩[28]ಪುಟ್ಟಿದ೧೩[29] ಕೇಳಿ ಶಂಕಿಸುತಿರ್ದನಾ ಕಂಸ                                      ೧೧

ಬಳಿಕ ಹರಿ ಶೇಷಾಹಿಸಹಿತ
ಗ್ಗಳೆಯ ಮಾಯೆಯ ಕೂಡಿಕೊಂಡಿಳೆ
ಗೊಲಿದು ಬಂದನು ಕಂಸನೊಡಹುಟ್ಟಿದಳ ಜಠರದಲಿ
ಬೆಳೆಯುತಿರ್ದನು ಮುನ್ನ ಬಲನಾ
ಲಲನೆಯುದರದಲಂದು ರೋಹಿಣಿ
ಗೊಲಿದು ಹುಟ್ಟಲು ಮೇಲೆ ಹರಿಯವತರಿಸಿದನು ಬಳಿಕ                                     ೧೨

*[30]ಯದುಕುಲದ ವಸುದೇವ [31]ದೇವಂ[32]
ಗುದಿಸಿ ತಾಯ್ತಂದೆಗಳ ದುಃಖೋ
ದಧಿಯ ಬತ್ತಿಸಿ ಕಂಸನಿಕ್ಕಿದ ಬಂಧನದ ಬಿಡಿಸಿ
ಪುದಿದಿರುಳು ಗೋಕುಲದ ನಂದನ
ಸದನದಲಿ ನಿಜ ಸುತನನೊಪ್ಪಿ [33]ಸಿ[34]
ಮುದಮಿಗಲು ವಸುದೇವ ಮಾಯಾದೇವಿಯರೆ [35]ತಂದ[36]                              ೧೩

ಈ ಪರಿಯಲಾನಂದಗೃಹದಲಿ
ಶ್ರೀಪತಿಯ [37]ಬಯಿಚಿಟ್ಟು[38] ಮಾಯಾ
ರೂಪಿಯಹ ದುರ್ಗಾಂಬಿಕೆಯ ಕೊಂಡೊಯ್ದು ತವಕದಲಿ
ಕಾಪಿನವರರಿಯದವೊಲಾ ಮಥು
ರಾಪುರಿಯ ಭವನವನು ಹೊಗೆ ನಾ –
ನಾಪರಿಯಲೊದರಿದಳು [39]ಸತಿ[40] ಬ್ರಹ್ಮಾಂಡವೊಡೆವಂತೆ                                          ೧೪

ಆ ಮಹಾಧ್ವನಿ[41]ಗಳವಳಿದು[42] ಸು
ತ್ರಾಮರಿಪುವೈತಂದು ಶಿಶುವಿಹ
ಸೀಮೆಗೊಬ್ಬನೆ [43]ಬಂದು[44] ಕಾಲ್ವಿಡಿದರೆಯೊಳಪ್ಪಳಿಸೆ
ಹಾ ಮರುಳೆ ಹಗೆಯತ್ತಲೈದನೆ
ತಾಮಸದ[45]ಲೆನ್ನೇಕೆ[46] ಕೊಂದಪೆ
ಹಾ [47]ಮದಾಂಧಾ[48] [49]ಎನುತ ಹಾಯ್ದಳು[50][51]ಗನಮಂಡಲಕೆ[52]   ೧೫

ಅದಕೆ ಸಿಗ್ಗಾಗುತ್ತ ಹಗೆಯನು
ಸದೆವೊಡಾವುದು ಬುದ್ದಿ[53]ಯೆನು[54]ತುವೆ
ಮದಮುಖನು ತನ್ನಾಪ್ತರಾಕ್ಷಸಮಂತ್ರಿಯನು ಕರೆಸಿ
ಉದಧಿವಳಯದಲೈದಿ ಶಿಶು[55]ವಿಹ[56]
[57]ಸದನ ಸದನದೊಳರಸಿ ಕೊಲುವುದು
ವಿದಿತವಿದು ನೀವ್ ಹಿತವರಾದರೆ[58] ಎಂದನಾ ಕಂಸ                                                   ೧೬

ಇಂತು ನೇಮಿಸಿ ಕಳುಹಿ ಚಿಂತಾ
ಕ್ರಾಂತನಾದನು ಬಳಿಕಲಿತ್ತಲು
ಕಂತುಪಿತನರ್ಭಕಶಿರೋಮಣಿಯಾಗಿ ಗೋಕುಲವ
ಸಂತಸದಲೊಂದಿಸುವ ನಂದನ
ಕಾಂತೆಯುತ್ಸಂಗದಲಿ ೧೦[59]ಬೆಳೆಯುತ೧೦[60]
ನಂತ ಸಹಿತವೆ ಕೃಷ್ಣನೆಸೆದನು ಬಾಲಲೀಲೆಯಲಿ                                                         ೧೭

ಅರುಣ ಸರಸಿಜ ವನದೊಳಾಡುವ
ತರುಣ ಹಂಸನೊ [61]ಮೇಲುಗಿರಿಪರಿ[62]
[63]ಸರದೊ[64]ಳೆಸೆವ ಮೃಗೇಂದ್ರ [65]ಬಾಲನೊ[66] ಪೂತಮಲ್ಲಿಗೆಯ
ಸುರಭಿಯಲಿ [67]ಝೇಂಕರಿಫ[68] ಮರಿಷಟ್
ಚರಣನೋ ಗೋಕುಲದ ಸುಖದಂ
ಕುರವೊ ಬೆಳೆಯುತ ಕೃಷ್ಣ [69]ನಿದ್ದನು[70] ನಂದಭವನದಲಿ                                                         ೧೮

ಮರಣಭಯದಲಿ ಕಂಸನೆಟ್ಟಿದ
ದುರುಳಪೂತನಿ ಶಕಟ ಧೇನುಕ
ತುರಗರೂಷಿನ ಕೇಶಿ ವತ್ಸಾಸುರ ಬಕಾಸುರರ
ಪರಿವಿಡಿ[71]ಯಲೇ[72] ಕೊಂದು ಗೋವರ
ನೆರವಿಯಲಿ ನಲಿದಾಡಿ [73]ಗೋವರ[74]
[75]ನೆರವಿ[76]ಗರ್ಭಕನೆನಿಸಿ ಪಳ್ಳಿಯೊಳಿರ್ದನಸುರಾರಿ                                                   ೧೯

*[77]ಬಾಯೊಳಗೆ ಬ್ರಹ್ಮಾಂಡಕೋಟಿಯ
ನಾಯಶೋದೆಗೆ ತೋರಿದಾಗಳೆ
ಮಾಯೆಯಿಂದವೆ ಮರೆಸಿ ಗಗನದ ಶಶಿಯ ಪಿಡಿ[78]ತಂದು[79]
ತಾಯಿಗೊಲವಿಂ ತೋರಿ ೧೦[80]ಮರರಾ
ದಾಯುಗಾರ್ಜುನರಿಗೆ೧೦[81] ವಿಶಾಪವ
ನೀಯೆ ಗೋಕುಲ ಪೊಗಳೆ ಪಳ್ಳಿಯೊಳಿರ್ದನಸುರಾರಿ                                                  ೨೦

[82]ಕಾಳಿಗನ[83] ಶಿರ[84]ನಿಕರದಲಿ ಹರಿ[85]
ಲೀಲೆಯಿಂ ಕುಣಿದಾಡಿ [86]ವನ[87]ಮೇ-
ಘಾಳಿಯಿಂ ಮಳೆಗರೆದ ಶಕ್ರನ ಗರ್ವವನು ಮುರಿದು
ತೋಳಿನಲಿ ಗೋವರ್ಧನಾದ್ರಿಯ
ನೇಳುದಿನ ಧರಿಸಿರ್ದು [88]ಗೋಪಿಯ[89]
ಬಾಲೆಯರೊಳೊಡಗೂಡಿ ಸುಖದಿಂದಿರ್ದನಸುರಾರಿ                                                     ೨೧

*[90]ಬೊಮ್ಮ ಕರದೈವಿಂಡುಗಳ ಮಕ್ಕಳ
ಸುಮ್ಮನಡಗಿಸಲದನರಿದು ಹರಿ
ನಿರ್ಮಿಸಿದನಾಕ್ಷಣಕೆ ಪ್ರತಿವತ್ಸಗಳ ಬಾಲಕರ
ಬೊಮ್ಮ ಬಳಿಕಾ ಹರಿಯ ಮಹಿಮೆಯ
ಪೆರ್ಮೆಯರಿಯುತ ಬಂದು ಚರಣಕೆ
ಸುಮ್ಮನೆರಗಿದ ನುತಿಸಿ ಭಯಭಕ್ತಿಯಲಿ ಬೀಳ್ಕೊಂಡ                                                    ೨೨

ಈ ತೆರದೊಳಚ್ಯುತನು ದೈತ್ಯ
ವ್ರಾತವನು [91]ಸಲೆ[92]ಕೊಂಡು ಭುವನ
ಖ್ಯಾತಿ ಮಿಗೆ ಗೋಪಾಲವೇಷದ [93]ಶೈತಕರನಂತೆ[94]
ಪ್ರೀತಿಯಿಂ ಸುರಭಿಗಳ ಕಾಯುತ
ನೂತ[95]ನಾಳಾಪದಲಿಯೊ[96]ಪ್ಪಿಹ
ಮಾತ ಕೇಳಿದು ಕಂಸನದಟಳಿದಳುಕಿ ಚಿಂತಿಸಿದ                                                         ೨೩

ಮೊದಲನೆಯ ಸಂಧಿ ಮುಗಿದುದು


[1] * ಈ ಸೂಚನಾಪದ್ಯ ಮೊದಲುಮಾಡಿ ೧ ರಿಂದ ೧೨ ರ ವರೆಗಿನ ಪದ್ಯಗಳು ಆ ಪ್ರತಿಯಲ್ಲಿಲ್ಲ.

[2] ೧ ಸುತಮಿರ್ದ (ಮು)

[3] ೧ ಸುತಮಿರ್ದ (ಮು)

[4] ೧. ಕೇಶಿ (ಮ)

[5] ೧. ಕೇಶಿ (ಮ)

[6] ೨. ದಳದುಳಿಸಿ (ಮು)

[7] ೨. ದಳದುಳಿಸಿ (ಮು)

[8] ೩. ಹೆಚ್ಚಿಕ (ಮು)

[9] ೩. ಹೆಚ್ಚಿಕ (ಮು)

[10] ೪. ಪದವಿಡು (ಮು)

[11] ೪. ಪದವಿಡು (ಮು)

[12] ೫. ವನಜಭವ (ಮು)

[13] ೫. ವನಜಭವ (ಮು)

[14] ೬. ದೊಡೆ (ಮು)

[15] ೬. ದೊಡೆ (ಮು)

[16] ೭. ಯೆನುತೆ (ಮು)

[17] ೭. ಯೆನುತೆ (ಮು)

[18] ೮. ಬಳಿಕವಾತ್ರಿ (ಮು)

[19] ೮. ಬಳಿಕವಾತ್ರಿ (ಮು)

[20] ೯. ವೇಶಗಳೊಳಿಳಿದರುಸಲೇನಿಖಿಳ (ಮು)

[21] ೯. ವೇಶಗಳೊಳಿಳಿದರುಸಲೇನಿಖಿಳ (ಮು)

[22] ೧೦. ತೀ (ಮು)

[23] ೧೦. ತೀ (ಮು)

[24] ೧೧. ವಸುದೇವೆಂಬ ದೇವಕಿಯೆಂಬ (ಮು)

[25] ೧೧. ವಸುದೇವೆಂಬ ದೇವಕಿಯೆಂಬ (ಮು)

[26] ೧೨. ಬಂಧು (ಮು)

[27] ೧೨. ಬಂಧು (ಮು)

[28] ೧೩. ಪುಟ್ಟುದ (ಮು)

[29] ೧೩. ಪುಟ್ಟುದ (ಮು)

[30] * ಆ ಪ್ರತಿಯಲ್ಲಿ ಈ ಪದ್ಯದಿಂದ ಕಾವ್ಯವು ಪ್ರಾರಂಭವಾಗುತ್ತದೆ.

[31] ೧ ದೇವಕಿ (ಆ)

[32] ೧ ದೇವಕಿ (ಆ)

[33] ೨ ಸೆ (ಮು)

[34] ೨ ಸೆ (ಮು)

[35] ೩ ಕಂಡ (ಆ)

[36] ೩ ಕಂಡ (ಆ)

[37] ೪ ಬಚ್ಚಿಟ್ಟು (ಆ)

[38] ೪ ಬಚ್ಚಿಟ್ಟು (ಆ)

[39] ೫ ಬಾಲೆ (ಆ)

[40] ೫ ಬಾಲೆ (ಆ)

[41] ೧ ಗರವಡಿಸಿ (ಆ)

[42] ೧ ಗರವಡಿಸಿ (ಆ)

[43] ೨ ಪೋಗಿ (ಆ), ಮು)

[44] ೨ ಪೋಗಿ (ಆ), ಮು)

[45] ೩ ಲೇಕೆನ್ನ (ಆ), (ಮು)

[46] ೩ ಲೇಕೆನ್ನ (ಆ), (ಮು)

[47] ೪ ಮದಾಂಧ (ಮು)

[48] ೪ ಮದಾಂಧ (ಮು)

[49] ೫ ಎನುತ್ತೊದೆದು ಹಾರಿದಳು (ಮು)

[50] ೫ ಎನುತ್ತೊದೆದು ಹಾರಿದಳು (ಮು)

[51] ೬ ದಿಗುವಲಯಕಾಗಿ (ಆ), ಗಗನಕ್ಕೆ (ಮು)

[52] ೬ ದಿಗುವಲಯಕಾಗಿ (ಆ), ಗಗನಕ್ಕೆ (ಮು)

[53] ೭ ಗಳ (ಮು)

[54] ೭ ಗಳ (ಮು)

[55] ೮ ವನು (ಆ)

[56] ೮ ವನು (ಆ)

[57] ೯ ಸದನದೊಳರಸಿ ಕೊಲುವುದು ವಿಹಿತವಿದು ನಿಮಗೆ ನೀಂ ಹಿತವರಾದೊಡೆಯೆ (ಮು)

[58] ೯ ಸದನದೊಳರಸಿ ಕೊಲುವುದು ವಿಹಿತವಿದು ನಿಮಗೆ ನೀಂ ಹಿತವರಾದೊಡೆಯೆ (ಮು)

[59] ೧೦ ಮೆರೆದಿರ (ಆ)

[60] ೧೦ ಮೆರೆದಿರ (ಆ)

[61] ೧ ಮೇಣುಮೇಣಾ (ಆ), ಮೇಣುಗಿರಿಪರಿ (ಮು)

[62] ೧ ಮೇಣುಮೇಣಾ (ಆ), ಮೇಣುಗಿರಿಪರಿ (ಮು)

[63] ೨ ಗಿರಿಯ ಪರುಷ (ಆ)

[64] ೨ ಗಿರಿಯ ಪರುಷ (ಆ)

[65] ೩ ಶಾಬವೊ (ಆ), (ಮುಂ)

[66] ೩ ಶಾಬವೊ (ಆ), (ಮುಂ)

[67] ೪ ಝೆಂಪಿಸುವ (ಆ)

[68] ೪ ಝೆಂಪಿಸುವ (ಆ)

[69] ೫ ನೆಸೆದನು (ಆ)

[70] ೫ ನೆಸೆದನು (ಆ)

[71] ೬ ಗಳಿಂ (ಆ)

[72] ೬ ಗಳಿಂ (ಆ)

[73] ೭ ನಂದನ (ಆ), ಮು)

[74] ೭ ನಂದನ (ಆ), ಮು)

[75] ೮ ತರುಣಿ (ಆ), (ಮು)

[76] ೮ ತರುಣಿ (ಆ), (ಮು)

[77] * ಈ ಪದ್ಯವು ಆ ಪ್ರತಿಯಲ್ಲಿಲ್ಲ.

[78] ೯ ವಂತು (ಮು)

[79] ೯ ವಂತು (ಮು)

[80] ೧೦ ಮರವಾದಾಮಾರ್ಜುನರಿಗೆ (ಮು)

[81] ೧೦ ಮರವಾದಾಮಾರ್ಜುನರಿಗೆ (ಮು)

[82] ೧ ಕಾಳಿಯನ (ಆ), (ಮು)

[83] ೧ ಕಾಳಿಯನ (ಆ), (ಮು)

[84] ೨ ದಲ್ಲಿ ಹರಿನಿಜ (ಮು)

[85] ೨ ದಲ್ಲಿ ಹರಿನಿಜ (ಮು)

[86] ೩ ನವ (ಆ), (ಮು)

[87] ೩ ನವ (ಆ), (ಮು)

[88] ೪ ಗೋಪೀ (ಮು)

[89] ೪ ಗೋಪೀ (ಮು)

[90] * ಈ ಪದ್ಯವು ಆ ಪ್ರತಿಯಲ್ಲಿ ಇಲ್ಲ

[91] ೫ ತವೆ (ಮು)

[92] ೫ ತವೆ (ಮು)

[93] ೬ ದೊಳಿಪ್ಪವರನಂತೆ (ಆ)

[94] ೬ ದೊಳಿಪ್ಪವರನಂತೆ (ಆ)

[95] ೭ ನಕ್ರೀಡೆಗಳಲೊ (ಆ), (ಮು)

[96] ೭ ನಕ್ರೀಡೆಗಳಲೊ (ಆ), (ಮು)