ಅಂತರತಮ ನೀ ಗುರು,
ಹೇ ಆತ್ಮತಮೋಹಾರಿ!
ಜಟಿಲ ಕುಟಿಲತಮ ಅಂತರಂಗ ಬಹು
ಭಾವ ವಿಪಿನ ಸಂಚಾರಿ,
ಅಂತರತಮ ನೀ ಗುರು,
ಹೇ ಆತ್ಮತಮೋಹಾರಿ!

ಜನುಮ ಜನುಮ ಶತಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ,
ಅಂತರತಮ ನೀ ಗುರು,
ಹೇ ಆತ್ಮತಮೋಹರಿ!
ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲಾ
ರೂಪ ಅರೂಪ ವಿಹಾರಿ,
ಅಂತರತಮ ನೀ ಗುರು.