ಎಲ್ಲ ಅನಿಶ್ಚಯ! ಒಂದೆ ಸುನಿಶ್ಚಯ:
ನಿನ್ನ ಅಚಿಂತ್ಯ ಅಪಾರ ದಯಾ!
ದುಃಖಹಿರಣ್ಯನ ಸುಖನಖಕೃಪೆಯಿಂ
ಸೀಳ್ವ ನೃಸಿಂಹನ ಮುಖದ ದಯಾ!

ಎಲ್ಲ ಸುಚಂಚಲ! ಒಂದೆ ಅಚಂಚಲ:
ನಿನ್ನ ಚರಣತಲ ಭಕ್ತಿಬಲ!
ಎಲ್ಲ ಬಲಗಳಿಗೆ ತಾ ಮೂಲದ ಬಲ,
ಸಕಲ ತಪೋತರು ಪರಮಫಲ!