ತನ್ನ ಹಸುಳೆಯ ಹೂವುಹಣೆಯಲಿ
ಮಸಿಯ ಚುಕ್ಕಿಯು ಕಾಣಲು
ಹೆತ್ತ ತಾಯಿಯು ಹಾಲುಗೆನ್ನೆಗೆ
ಮುತ್ತನೀಯದೆ ಮಾಣಳು.

ಅಂತೆ ನಮ್ಮೊಳು ದೋಷವಿದ್ದರು
ಕ್ಷಮಿಸಿ ಕರುಣಿಸಿ ಎತ್ತಿಕೋ,
ಅಮ್ಮ , ಪಾವನೆ ನೀನು; ಹೇಸದೆ
ನಮ್ಮಗಳನೆದೆಗೊತ್ತಿಕೋ!