ಚಿರವಾಗಲಿ ಚಿರವಾಗಲಿ ಚಿರವಾಗಲಿ
ನಿನ್ನ ನೆನಹು ನನ್ನ ಮನದಿ, ಹೇ ಗುರೂ!
ಶಿಶಿರ ಋತುವು ಗತಿಸುತಿರಲು
ವಿಪಿನದಂತರಂಗದಲ್ಲಿ
ಹೊಸ ವಸಂತನುಸಿರು ಹಸರಿ
ನಲಿಯುವಂತೆ ಕಾನನ
ನವೀನ ಜೀವನ —

ಚಿರವಾಗಲಿ ಚಿರವಾಗಲಿ ಚಿರವಾಗಲಿ
ನಿನ್ನ ನೆನಹು ನನ್ನ ಮನದಿ, ಹೇ ಗುರೂ!
ಚೆಲುವೆಯೊಮ್ಮೆ ಸುಳಿದು ಕೆಣ್ಗೆ
ಒಲುಮೆಕಿಡಿಯ ಸೂಸಲೆದೆಗೆ
ಕಿಚ್ಚು ಬಾಳನೆಲ್ಲ ಮುಚ್ಚಿ
ಹುಚ್ಚುಗೈವ ತೆರೆದಲಿ
ಪ್ರೇಮ ಭರದಲಿ!