ನಿನ್ನಡಿದಾವರೆಯಲಿ ಹೂಕುಡಿಯುವ
ಮುರಿದುಂಬಿಯು ನಾನು;
ಹೇ ಗುರುದೇವನೆ, ನೀನೆನ್ನಾತ್ಮಕೆ
ಮಧುಮಾಸದ ಜೇನು!
ವಿವಿಧ ಪಯೋಜದಿ ವ್ಯರ್ಥಾಯಾಸದಿ
ತೊಳಲಿದೆ ತೃಪ್ತಿಯ ಚಿರನಿಧಿಗೆ:
ಬಾಯಾರಿಕೆಯಿಂದೆದೆ ಕುದಿಗೊಂಡಿರೆ
ಮೈದೋರಿದೆಯೈ ನೀ ತುದಿಗೆ!