ಹರಕು ಬಟ್ಟೆ ತಿರುಕನಂತೆ
ಮನೆಯ ಮುಂದಕೆ
ನೀನು ಬರಲು ನಾsನೆಂದೆ
“ಹೋಗು ಮುಂದಕೆ!”

ಹೊಳೆವ ಹೊನ್ನ ತಟ್ಟೆಯಲ್ಲಿ
ಮುತ್ತು ರತ್ನಗಳನು ಚೆಲ್ಲಿ
ಪೂಜೆಗೆಂದು ಸಂಜೆಯಲ್ಲಿ
ಗುಡಿಗೆ ಹೋದನು.
ಅಯ್ಯೊ, ಗುಡಿಯ ಪೀಠದಲ್ಲಿ
ಮೂರ್ತಿಯಿಲ್ಲ! ದೇವರೆಲ್ಲಿ?
ಹರಕು ಬಟ್ಟೆ ತಿರುಕನಲ್ಲಿ
ಲೀನವಾದನು!