ನನ್ನೆದೆಯ ಬಾನಿನಲಿ
ಧ್ರುವತಾರೆ ನೀನಿರಲು
ದಾರಿ ತಪ್ಪಿದರೇನು?
ದಿಕ್ಕು ತಪ್ಪೆನೊ ನಾನು,
ಜೀವಯಾತ್ರೆಯಲಿ!

ಗುರಿಯು ತಪ್ಪುವುದಿಲ್ಲ;
ಕಡೆಗೆ ಬರುಗೈಯಲ್ಲ!
ದೊರೆಕೊಳ್ಳುವುದು ಎಲ್ಲ,
ತುಂಬಿರಲು ನಂಬುಗೆಯು
ಹೃದಯಪಾತ್ರೆಯಲಿ!