ಮನ್ಮನೋಮಂದಿರಕೆ, ಓ,
ಲೋಕಗುರುಗಳೆಲ್ಲ ಬನ್ನಿ!
ಬನ್ನಿ, ಬನ್ನಿ, ಬನ್ನಿ! —
ತುಳಿಯೆ ನಿಮ್ಮ ಪದತಲ
ದಲ ದಲ ದಲ ಅರಳ್ವುದೆನ್ನ
ಶಿರಃಕಮಲ ಕುಟ್ಮಲ!
ತಮೋತಿಮಿರವಳಿಯಲಲ್ಲಿ
ಪರಂಜ್ಯೋತಿ ಬೆಳಗಲಿ;
ಋತದ ಶಿವದ ಆನಂದದ
ಚಿದ್ವಿಭೂತಿ ತೊಳಗಲಿ.

ಮನ್ಮನೋಮಂದಿರಕೆ, ಓ,
ಲೋಕಗುರುಗಳೆಲ್ಲ ಬನ್ನಿ!
ಬನ್ನಿ, ಬನ್ನಿ, ಬನ್ನಿ!