ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಕೃಷಿ ಮಾನವ ಪರಿಸರ ಪ್ರತಿಷ್ಠಾನ ಕೋಲಾರ ಜಿಲ್ಲೆಯ ಕೆಲವು ಹಳ್ಳಿಗಳ ರೈತರಿಗೆ ಅಜೋಲಾ ಬಳಕೆ ಕುರಿತು ತರಬೇತಿ ನೀಡಿತು. ಸರಳ ವಿಧಾನಗಳ ಮೂಲಕ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳ ಜೀವನಮಟ್ಟ ಸುಧಾರಣೆ ಯೋಜನೆಯ ಅಡಿಯಲ್ಲಿ ಅಜೋಲಾ ಬಳಕೆಗೆ ಉತ್ತೇಜನ ನೀಡಿತು.
ಅಜೋಲಾ ತಯಾರಿಕೆ, ಬಳಕೆಯಲ್ಲಿ ಅನುಭವ ಪಡೆದ ರೈತರು ಪ್ರೊಟೀನ್, ಪೋಷಕಾಂಶಗಳಿಂದ ಸಮೃದ್ಧವಾದ ಅಜೋಲಾವನ್ನು ಜಾನುವಾರುಗಳಿಗೆ ಮೇವಿನೊಂದಿಗೆ ನೀಡಿದರು. ‘ಇದರಲ್ಲಿ ಲಿಗ್ನೈನ್ ಅಂಶ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಪ್ರಾಣಿಗಳು ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತವೆ. ಜಾನುವಾರುಗಳಿಗೆ ಅಜೋಲಾ ತಿನ್ನಿಸುವುದರಿಂದ
ಹಾಲಿನ ಉತ್ಪನ್ನದಲ್ಲಿ ಹೆಚ್ಚಳ ಹಾಗೂ ಗುಣಮಟ್ಟವನ್ನೂ ಅಧಿಕಗೊಳಿಸಬಹುದು. ಮೇವಿನೊಂದಿಗೆ ಇದನ್ನು ಕೊಡುವ ಕಾರಣ,
ಆಹಾರದ ವೆಚ್ಚ ಕಡಿಮೆಯಾಗುತ್ತದೆ. ಕುರಿ, ಮೇಕೆ ಹಾಗೂ ಮೊಲಗಳಿಗೂ ಅಜೋಲಾ ನೀಡಬಹುದು. ಭತ್ತದ ಗದ್ದೆಗಳಲ್ಲಿ ಅಜೋಲಾವನ್ನು ಹಸಿರೆಲೆ ಗೊಬ್ಬರವನ್ನಾಗಿ ಬಳಸಲಾಗುತ್ತಿದ್ದು, ಇದು ಸಾರಜನಕ ಸ್ಥಿರೀಕರಣ ಮಾಡುವ ಜತೆಗೆ, ಕಳೆ ನಿಯಂತ್ರಣ ಹಾಗೂ ನೀರು ಆವಿಯಾಗುವುದನ್ನು ತಡೆಯುತ್ತದೆ’ ಎನ್ನುತ್ತಾರೆ ಪ್ರತಿಷ್ಠಾನದ ಸಂಶೋಧಕರು.
ಕೋಲಾರ ಜಿಲ್ಲೆಯಯಲ್ಲಿ ಆಯ್ದುಕೊಳ್ಳಲಾದ ಒಟ್ಟು ೩೧೫ ಕುಟುಂಬಗಳ ಪೈಕಿ ೧೮೧ ರೈತರು ಶಾಶ್ವತ ರಚನೆ ಮಾಡಿಕೊಂಡಿದ್ದರೆ, ಉಳಿದ ೧೩೪ ರೈತರು ಅಲ್ಪ ವೆಚ್ಚದ ಘಟಕ ಸ್ಥಾಪಿಸಿಕೊಂದ್ದಾರೆ. ರೈತರು ತಮಗೆ ಸೂಕ್ತವೆನಿಸಿದ ಎರಡು ಬಗೆಯ ರಚನಾ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ- ಇಟ್ಟಿಗೆ ಹಾಗೂ ಸಿಮೆಂಟ್ನಿಂದ ಶಾಶ್ವತ ರಚನೆ ಹಾಗೂ ಪ್ಲಾಸ್ಟಿಕ್ ಹಾಳೆಯಿಂದ ಅಲ್ಪ ವೆಚ್ಚದ ರಚನೆಗಳು.
ಕೆಲವು ರೈತರು ತಮ್ಮಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಒಂದಕ್ಕಿಂತ ಹೆಚ್ಚು ಅಜೋಲಾ ಘಟಕಗಳನ್ನು ರಚಿಸಿಕೊಂಡಿದ್ದಾರೆ. ಶಾಶ್ವತ ರಚನೆಗಳು ಪ್ರತಿ ಘಟಕಕ್ಕೆ ೮೦೦ರಿಂದ ೧೦೦೦ ರೂಪಾಯಿವರೆಗೆ ಇದ್ದರೆ, ಅಲ್ಪ ವೆಚ್ಚದ ಘಟಕಗಳು ೧೫೦ರಿಂದ ೨೦೦ ರೂಪಾಯಿಗಳಲ್ಲಿ ಸ್ಥಾಪನೆಗೊಂಡಿವೆ.
ಅಜೋಲಾ ಕೃಷಿಯಲ್ಲಿ ರೈತರೇ ನಡೆಸಿದ ಕೆಲವು ಸಂಶೋಧನೆಗಳು ಹೀಗಿವೆ:
* ಕೆಲವು ರೈತರು ಅಜೋಲಾ ಜತೆಗೆ ಎರೆಗೊಬ್ಬರ ಬೆರೆಸಿದ್ದಾರೆ.
* ಹೆಚ್ಚಿನ ಸಂಖ್ಯೆಯ ಜಾನುವಾರುಗಳನ್ನು ಹೊಂದಿರುವ ರೈತರು, ಅಧಿಕ ಅಜೋಲಾ ಉತ್ಪಾದನೆಗೆ ಚಾವಣಿ ಮೇಲೆ ಘಟಕ ಸ್ಥಾಪಿಸಿಕೊಂಡ್ದಿದಾರೆ. ಆ ಮೂಲಕ ಸ್ಥಳಾವಕಾಶ ಕೊರತೆಗೆ ತಮ್ಮದೇ ವಿಧಾನದಲ್ಲಿ ಪರಿಹಾರ ಕಂಡುಕೊಂಡಿದ್ದಾರೆ.
* ಕೋಳಿಗೊಬ್ಬರ ಎರಚಿ, ಅಜೋಲಾ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಅಜೋಲಾವನ್ನು ಜಾನುವಾರುಗಳಿಗೆ ನೀಡಿ, ಪ್ರಯೋಗ ನಡೆಸುವ ಬಗ್ಗೆ ರೈತರ ಮನವೊಲಿಸಲಾಯಿತು. ಅಜೋಲಾ ತಿನಿಸುವುದರಿಂದ, ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗಿ, ಗುಣಮಟ್ಟ ಕೂಡ ಅಧಿಕವಾಗುತ್ತದೆ ಎಂಬುದನ್ನು ರೈತರು ಕಂಡುಕೊಂಡಿದ್ದಾರೆ. ಹೀಗಾಗಿ ಮೇವಿನ ಜೊತೆ ಅಜೋಲಾ ನೀಡಲು ಮುಂದಾಗಿದ್ದಾರೆ. ಅಜೋಲಾ ನೀಡುವುದರಿಂದ ಆಗುವ ಲಾಭಗಳ ಬಗ್ಗೆ ಈ ಕೆಳಗಿನ ಕೋಷ್ಟಕದಲ್ಲಿ ಮಾಹಿತಿ ನೀಡಲಾಗಿದೆ.
ಕೋಷ್ಠಕ : ಜಾನುವಾರುಗಳಿಗೆ ಅಜೋಲಾ ನೀಡುವುದರಿಂದ ಆಗುವ ಪ್ರಯೋಜನಗಳು
ಹಾಲಿನ ಉತ್ಪಾದನೆ ಹೆಚ್ಚಳವಾಗಿದ್ದು
ಗ್ರಾಮ ಹೆಸರು ಆಕಳು/ (ಲೀ/ ಪ್ರತಿ ದಿನ)
ಎಮ್ಮೆ ಮೊದಲು ನಂತರ ಎಷ್ಟು?
ಗುಟ್ಟಹಳ್ಳಿ ಸಂಪಂಗಿಗೌಡ ಆಕಳು ೪.೫ ೪.೭೫ ೦.೨೫ ಲೀಟರ್ ಹೆಚ್ಚಳ
ಸುರೇಶ ಆಕಳು ೭.೫ ೮.೦೦ ೦.೫ ಲೀಟರ್ ಹೆಚ್ಚಳ
ಪಿ.ರಾಮಗೋಳ ಗಣೆಪ್ಪ ಆಕಳು ೭.೫ ೭.೭೫ ೦.೨೫ ಲೀಟರ್ ಹೆಚ್ಚಳ
ಪ್ರಭಾಕರ ಆಕಳು ೪.೫ ೪.೭೫ ೦.೨೫ ಲೀಟರ್ ಹೆಚ್ಚಳ
ಕೃಷ್ಣಪ್ಪ ಆಕಳು ೫.೫ ೫.೭೫ ೦.೨೫ ಲೀಟರ್ ಹೆಚ್ಚಳ
ಸಿದ್ನಳ್ಳಿ ಹನುಮಂತ್ರಾಜಪ್ಪ ಆಕಳು ೬.೦ ೭.೦೦ ೧ ಲೀಟರ್ ಹೆಚ್ಚಳ
ಕುಪ್ಪನಹಳ್ಳಿ ಶಕುಂತಲಪ್ಪ ಎಮ್ಮೆ ೧.೦ ೧.೨೦ ೦.೨೦ ಲೀಟರ್ ಹೆಚ್ಚಳ
ಗೌರಮ್ಮ ಆಕಳು ೭.೦ ೭.೩೦ ೦.೩೦ ಲೀಟರ್ ಹೆಚ್ಚಳ
ಪಿಳ್ಳಪ್ಪ ಎಮ್ಮೆ ೧.೧ ೧.೫೦ ೦.೫೦ ಲೀಟರ್ ಹೆಚ್ಚಳ
ಪ್ರತಿ ದಿನ ಎರಡು ಹೊತ್ತು ಅಜೋಲಾ ನೀಡುವುದರಿಂದ ಪ್ರತಿ ಆಕಳು/ ಎಮ್ಮೆಯಿಂದ ಪ್ರತಿ ದಿನ ೦.೨೫ರಿಂದ .೫ ಲೀಟರ್ ಹಾಲು ಹೆಚ್ಚು ಸಿಗುವ ಸಾಧ್ಯತೆಯನ್ನು ಬಹುತೇಕ ರೈತರು ಕಂಡುಕೊಂಡಿದ್ದಾರೆ. ವೆಂಕಟೇಶಪ್ಪ, ಮೂರ್ತಿ ಇತರ ಕೆಲವು ರೈತರು ಜಾನುವಾರುಗಳಿಗೆ ಅಜೋಲಾ ನೀಡುವುದರಿಂದ ಅವುಗಳ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿ, ಪ್ರತಿ ಲೀಟರ್ ಹಾಲಿಗೆ ೦.೨೫ ರಿಂದ ೧.೩೫ ರೂ ಬೆಲೆ ಹೆಚ್ಚಿಗೆ ಪಡೆದಿದ್ದಾರೆ. ಅವರ ಆದಾಯ ಪ್ರತಿ ತಿಂಗಳಿಗೆ ೨೧೦ ರಿಂದ ೫೪೦ ರೂಪಾಯಿವರೆಗೆ ಏರಿಕೆಯಾಗಿದೆ.
ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು, ಅಜೋಲಾವನ್ನು ಬಳಸುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಅಜೋಲಾದಿಂದ ಸಿಗುವ ಪ್ರಯೋಜನ ನೋಡಿದ ರೈತರು, ತಮ್ಮ ಅಲ್ಪ ವೆಚ್ಚದ ಘಟಕಗಳನ್ನು ಶಾಶ್ವತ ರಚನೆಗಳನ್ನಾಗಿ ಪರಿವರ್ತಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಅಜೋಲಾ ಬೆಳೆದವರು ಏನಂತಾರೆ ?
ಸಿದ್ನಳ್ಳಿ ಗ್ರಾಮದ ಹನುಮಂತರಾಯಪ್ಪ ಅವರ ಆಕಳು ನಿತ್ಯ ೬ ಲೀಟರ್ ಹಾಲು ಕರೆಯುತ್ತಿದ್ದರು. ಸ್ಥಳೀಯವಾಗಿ ಸಿಗುವ ಮೇವನ್ನು ಆಕಳಿಗೆ ನೀಡುತ್ತಿದ್ದರು. ಅಜೋಲಾ ಕುರಿತ ತgಬೇತಿಯಲ್ಲಿ ಪಾಲ್ಗೊಂಡು ಪ್ರಾತ್ಯಕ್ಷಿಕೆ ನೋಡಿದ ನಂತರ ಅವರು, ಅಜೋಲಾ ಕೃಷಿಗೆ ಮುಂದಾದರು. ತಮ್ಮ ಆಕಳಿಗೆ ನಿತ್ಯ ಒಂದು ಕೆಜಿ ಅಜೋಲಾ ನೀಡಿದರು. ‘ಒಂದು ತಿಂಗಳ ನಂತರ ಗಮನಿಸಿದಾಗ, ನಮ್ಮ ಆಕಳು ಒಂದು ಲೀಟರ್ ಹೆಚ್ಚಿಗೆ ಹಾಲು ನೀಡುತ್ತಿರುವುದು ಗೊತ್ತಾಯಿತು. ಮಾತ್ರವಲ್ಲ, ಆಕಳಿನ ಆರೋಗ್ಯ ಕೂಡ ಸುಧಾರಿಸಿದೆ’ ಎನ್ನುತ್ತಾರೆ ಹನುಮಂತರಾಯಪ್ಪ.
ಬಲಮಂಡೆ ಗ್ರಾಮದ ವೆಂಕಟೇಶಪ್ಪ ಅವರಲ್ಲಿ ಒಂದು ಜರ್ಸಿ ಆಕಳು ಇದೆ. ಅದು ನಿತ್ಯ ೪.೪೪ ಲೀಟರ್ ಹಾಲು ಕೊಡುತ್ತದೆ. ಅಜೋಲಾವನ್ನು ಆಕಳಿಗೆ ನೀಡಿದ ಒಂದು ತಿಂಗಳ ನಂತರ, ಹಾಲಿನ ಪ್ರಮಾಣ ೪.೮ಕ್ಕೆ ಏರಿದೆ. ಎರಡು ತಿಂಗಳ ನಂತರ ಹಾಲಿನ ಉತ್ಪಾದನೆ ಅರ್ಧ ಲೀಟರ್ ಹೆಚ್ಚಿದೆ ಹಾಗೂ ಕೊಬ್ಬಿನ ಪ್ರಮಾಣ ೪.೦ಯಿಂದ ೬.೦ಗೆ ಏರಿದೆ ಎಂದು ವೆಂಕಟೇಶಪ್ಪ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
ಈವರೆಗೆ ಅವರಿಗೆ ಪ್ರತಿ ಲೀಟರ್ ಹಾಲಿಗೆ ದೊರೆಯುತ್ತಿದ್ದ ಹಣ ೧೧.೭೫ ರೂ.ಗಳಿಂದ ೧೨ ರೂ.ಗೆ ಹೆಚ್ಚಿದೆಯೆಂತೆ. ಈ ಅಧಿಕ ಇಳುವರಿ ಹಾಗೂ ಗುಣಮಟ್ಟದಿಂದ ಅವರ ಆದಾಯ ಪ್ರತಿ ದಿನಕ್ಕೆ ೭ ರೂ. ಏರಿಕೆಯಾಗಿದ್ದು, ತಿಂಗಳಿಗೆ ೨೧೦ ರೂ.ಗಳಷ್ಟು ಹೆಚ್ಚಿದೆ. ಗೊಡಗಮಂದೆ ಗ್ರಾಮದ ಮೂರ್ತಿ ಅವರ ಅನುಭವ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಹೈನುಗಾರಿಕೆಯಿಂದ ಅವರ ಆದಾಯ ಪ್ರತಿನಿತ್ಯ ೧೮ ರೂ.ಗಳಷ್ಟು ಅಥವಾ ತಿಂಗಳಿಗೆ ೫೪೦ ರೂ. ಹೆಚ್ಚಿದೆ.
ಕುಪ್ಪನಹಳ್ಳಿ ಶಕುಂತಲಮ್ಮ ರೈತಮಹಿಳೆ. ಇವರು ಅಜೋಲಾ ಬೆಳೆಯಲು ಸಿಮೆಂಟ್ ತೊಟ್ಟಿ ರಚಿಸಿಕೊಂಡಿದ್ದಾರೆ. ತಮ್ಮ ಎಮ್ಮೆಗಳಿಗೆ ನಿತ್ಯ ಅಜೋಲಾ ನೀಡುತ್ತಿದ್ದಾರೆ. ಆರಂಭದಲ್ಲಿ ಒಂದು ಎಮ್ಮೆಗೆ ದಿನಕ್ಕೆ ಒಂದು ಕೆ.ಜಿಯಂತೆ ಅಜೋಲಾ ನೀಡುತ್ತಿದ್ದರು. ಹಾಲು ಹೆಚ್ಚಿ, ಆರೋಗ್ಯದಲ್ಲಿ ಸುಧಾರಣೆಯಂತಹ ಉತ್ತಮ ಫಲಿತಾಂಶ ಕಂಡುಕೊಂಡ ಬಳಿಕ, ಮೂರೂ ಎಮ್ಮೆಗಳಿಗೆ ಅಜೋಲಾ ನೀಡುತ್ತಿದ್ದಾರೆ. ಇದಕ್ಕಾಗಿ ಅಲ್ಪ ವೆಚ್ಚದ ಘಟಕಗಳನ್ನು ನಿರ್ಮಿಸಿಕೊಂಡ್ದಿದಾರೆ. ಇದಲ್ಲದೇ ಅಜೋಲಾವನ್ನು ರೈತರಿಗೆ ಮಾರಾಟ ಮಾಡಿದ್ದಾರೆ.
ಐಆರ್ಆರ್ ಐನಲ್ಲಿರುವ ಅಜೋಲಾ ಜೀನ್ ಸಂಗ್ರಹ
ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದಲ್ಲಿ ೧೯೭೫ರಿಂದೀಚೆಗೆ ಅಜೋಲಾದ ಬಗ್ಗೆ ಸಂಶೋಧನೆಗಳಾಗುತ್ತಿವೆ. ವಿಶ್ವದ ಅತಿ ದೊಡ್ಡ ಅಜೋಲಾ ತಳಿ ಸಂಗ್ರಹವಿರುವುದೂ ಅಲ್ಲೇ. ಅವುಗಳ ಪಟ್ಟಿ ಹೀಗಿದೆ.
The International Rice Research Institute Azolla germplasm Collection
Species code Number Number
A. pinnata var. mbricata PI001- 93
A. filiculoides FI1001- 135
A. mexicana ME2001- 56
A. caroliniana CA3001- 72
A. microphylla MI4001- 129
A. nilotica NI5001- 3
A. pinnata var. pinnata PP7001- 53
Unknown 8001- 17
Groun‚„total 562
Leave A Comment