W.T.O./SAARC ನಿಂದಾಗಬಹುದಾದ ಆಮದುಗಳಿಗೆ ಪರಿಹಾರಗಳು:
– ಡಾ. ವಿಘ್ನೇಶ್ವರ ವರ್ಮುಡಿ.

ಅಂತರಾಷ್ಟ್ರೀಯ ವ್ಯಾಪಾರೀ ಒಪ್ಪಂದಗಳಾದ W.T.O./SAARC ಗಳಿಂದಾಗಿ ಅಡಿಕೆಯನ್ನು ಹೊರದೇಶಗಳಿಂದ ಮುಕ್ತವಾಗಿ ಅಂದರೆ ಪ್ರಮಾಣಾತ್ಮಕ ನಿರ್ಬಂಧವಿಲ್ಲದೆ ಆಮದು ಮಾಡಿಕೊಳ್ಳಬಹುದಾಗಿದ್ದು, ಇಲ್ಲಿ SAARC ರಾಷ್ಟ್ರಗಳಿಂದ ಬರುವ ಅಡಿಕೆ ಶೇಕಡಾ ೫೦ರ ಸುಂಕ ಮತ್ತು ಇತರೇ ರಾಷ್ಟ್ರಗಳಿಂದ ಬರುವ ಅಡಿಕೆಗೆ ಶೇಕಡಾ ೧೦೦ರ ಸುಂಕ ವಿಧಿಸಬಹುದಾಗಿದೆ. ಈ ಮುಕ್ತ ಆಮದಿಗಿರುವ ಅವಕಾಶದಿಂದ ಅಡಿಕೆಯ ಆಮದಿಂದು ಆಗುತ್ತಿರುವುದರಿಂದ ಕೇಂದ್ರ ಸರಕಾರವು ಈಗಾಗಲೇ ಗರಿಷ್ಟ ಪ್ರಮಾಣದ (ಶೇಕಡಾ ೧೧೪ರ) ಸುಂಕ ಹೇರಿದ್ದು, ಇಲ್ಲಿ ಇನ್ನಷ್ಟು ವ್ಯವಸ್ಥೆಗಳಿಗೆ ಅವಕಾಶಗಳಿವೆ. ಅವುಗಳೆಂದರೆ:

() ಅಡಿಕೆಯನ್ನಿಂದು ಕಡಿಮೆ ಬೆಲೆ ತೋರಿಸಿ ನಮ್ಮಲ್ಲಿ ರಾಶಿ ಹಾಕುತ್ತಿದ್ದಲ್ಲಿ (ಡಂಪಿಂಗ್‌) ಇದಕ್ಕೆ ಶೇಕಡಾ ೩೦೦ರ ಸುಂಕ ಹೇರಬಹುದು. ಆದರೆ ಈ ಬಗ್ಗೆ ಹಲವು ಮಾಹಿತಿಗಳು ಅಗತ್ಯ. ಉದಾ: ಅಲ್ಲಿರುವ ಬೆಲೆ, ಆಮದಿನ ಬೆಲೆ, ಅಲ್ಲಿನ ಉತ್ಪಾದನೆ, ಎಂಬಿತ್ಯಾದಿ ಮಾಹಿತಿಗಳನ್ನು ನಾವು ಕಲೆ ಹಾಕಿ ಅದನ್ನು ‘ಆಂಟಿಡಂಪಿಂಗ್‌’ ವಿಭಾಗಕ್ಕೆ ಸಲ್ಲಿಸಬೇಕು. ಆ ಬಳಿಕ ಅದರ ಇತ್ಯರ್ಥವಾಗುವುದು, ಇದಕ್ಕೆ ಸುಮಾರು ೬ ತಿಂಗಳು ಬೇಕಾಗುವುದು. ಒಪ್ಪಂದದ ಪ್ರಕಾರ ಆಮದಾಗುತ್ತಿರುವ ಒಟ್ಟು ಪ್ರಮಾಣದ ಶೇಕಡಾ ೩ನ್ನು ಇಲ್ಲಿ ತಂದು ರಾಶಿ ಹಾಕಲು ಅವಕಾಶವಿದೆ. ಇವೆಲ್ಲದಕ್ಕೆ ಅಗತ್ಯ ಮಾಹಿತಿ ನಮ್ಮಲ್ಲಿದ್ದಲ್ಲಿ ಆಮದನ್ನು ತಡೆಗಟ್ಟಬಹುದು.

() ಆಮದಾಗುತ್ತಿರುವ ಅಡಿಕೆಯ ಗುಣಮಟ್ಟವು ಹೇಗಿದೆಯೆಂಬುದನ್ನು ಪರಿಶೀಲಿಸಿ, ಇದು ಬಳಕೆದಾರರ ಆರೋಗ್ಯಕ್ಕೆ ಹಾನಿಕಾರಕವೆಂಬ ವಿಚಾರವನ್ನು ನಾವು ತೋರಿಸಿಕೊಟ್ಟಲ್ಲಿ W.T.Oನ ಆರೋಗ್ಯ ರಕ್ಷಣ ಸಂಬಂಧಿ ಪರಿಹಾರಗಳು (Sanitary and Phytosanitary Measure, SPM) ಇದರ ಆಮದಿಗೆ ತಡೆ ಹಾಕಲು ಅವಕಾಶ ಕಲ್ಪಿಸಿದೆ. ಉದಾ: ಅಮೇರಿಕಾ ಭಾರತ ಬೀಡಿ ಮೇಲೆ ಹಾಕಿದ ತಡೆ.

() ಸಿಪ್ಪೆಯಿಲ್ಲದ ಇಡಿ, ಹೋಳು ಮತ್ತು ಪುಡಿಯಡಿಕೆ ರೂಪದಲ್ಲಿ ಭಾರತದೊಳಗೆ ಬರುವ ಅಡಿಕೆಗೆ ಶೇಕಡಾ ೧೫೦ರ ಸುಂಕ ಮತ್ತು ಎಕ್ಸೈಸ್‌ ಸುಂಕವನ್ನು ಹೇರಲು ಅವಕಾಶವಿರುತ್ತದೆ.

(ಈ) ತಳಹದಿ ಸುಂಕ (Bound Rate)ನ್ನು ಹೆಚ್ಚಿಸಲು W.T.Oನ ಮೇಲೆ ಒತ್ತಡ ಹೇರುವುದು.