ವಿಶ್ವದಲ್ಲಿ ಅಡಿಕೆಯ ಕೃಷಿ

ವಿಶ್ವದಲ್ಲಿಂದು ಅಡಿಕೆಯ ಕೃಷಿಯನ್ನು ವ್ಯವಸ್ಥಿತ ರೀತಿಯಲ್ಲಿ ಭಾರತದಲ್ಲಿ ಮಾತ್ರ ಕೈಗೊಳ್ಳಲಾಗುತ್ತಿದ್ದು, ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಚೀನಾ ದೇಶವು ಕೂಡ ಇದರ ವ್ಯವಸಾಯವನ್ನು ಸುಧಾರಿತ ರೀತಿಯಲ್ಲಿ ಕೈಗೊಳ್ಳುತ್ತಿರುವ ಅಂಶ ಬೆಳಕಿಗೆ ಬರುತ್ತಲಿದೆ. ಈ ರಾಷ್ಟ್ರಗಳಲ್ಲದೆ ಇಂಡೋನೇಶಿಯಾ, ಬಾಂಗ್ಲ, ಶ್ರೀಲಂಕ, ಮ್ಯಾನಮಾರ್, ಮಲೇಶಿಯಾ, ಥೈಲೇಂಡ್, ಮಾಲ್ಡೀಸ್‌ ಮುಂತಾದ ರಾಷ್ಟ್ರಗಳಲ್ಲಿ ಅಡಿಕೆ ಬೆಳೆಯುತ್ತಿದ್ದು ಈ ನಿಟ್ಟಿನಲ್ಲಿ ಅಡಿಕೆಯಿಂದು ವಿಶ್ವ ವ್ಯಾಪಿ ಬೆಳೆಯಾಗುತ್ತಿದೆ ಎನ್ನಲೂ ಬಹುದು. ವಿಶ್ವದಲ್ಲಿಂದು ಉತ್ಪಾದಿಸಲ್ಪಡುವ ವಿವಿಧ ಆಹಾರ ಮತ್ತು ಆಹಾರೇತರ ಉತ್ಪನ್ನಗಳ ವಿಸ್ತೀರ್ಣ ಮತ್ತು ಉತ್ಪಾದನೆಗಳ ಬಗ್ಗೆ ಅಂಕಿ-ಅಂಶಗಳನ್ನು ಪೂರೈಸುತ್ತಿರುವ ರೋಮಿನ (ಇಟಲಿ) ಎಫ್‌ಎಓ ಒದಗಿಸಿರುವ ಮಾಹಿತಿಯನ್ನು ಪಟ್ಟಿ ರಲ್ಲಿ ಕೊಡಲಾಗಿದ್ದು, ಇದರ ಪ್ರಕಾರ ೧೯೯೮–೯೯ ರಲ್ಲಿ ವಿಶ್ವದಲ್ಲಿ ಅಡಿಕೆ ವ್ಯವಸಾಯವಾಗುತ್ತಿದ್ದ ಒಟ್ಟು ವಿಸ್ತೀರ್ಣ ಸುಮಾರು ೪,೬೮,೩೧೬ ಹೆಕ್ಟೇರುಗಳು ಮತ್ತು ಉತ್ಪಾದನಾ ಪ್ರಮಾಣ ಸಮಾರು ೫,೯೩,೨೯೫ ಮೆಟ್ರಿಕ್ ಟನ್‌ಗಳು. ಇದರಲ್ಲಿ ವಿಸ್ತೀರ್ಣದ ಮಟ್ಟಿಗೆ ಭಾರತದ ಪಾಲು ಶೇಕಡಾ ೫೭, ಉತ್ಪಾದನೆಯಲ್ಲಿ ಶೇಕಡಾ ೫೩, ಇಂಡೋನೇಶಿಯಾವು ವಿಶ್ವದ ಅಡಿಕೆ ಬೆಳೆಯ ಒಟ್ಟಾರೆ ವಿಸ್ತೀರ್ಣದ ಶೇಕಡಾ ೧೬ನ್ನು ಹೊಂದಿದ್ದು, ಉತ್ಪಾದನೆಯಲ್ಲಿ ಕೇವಲ ಶೇಕಡಾ ೫ರಷ್ಟಾಗಿದೆ. ಇನ್ನೊಂದೆಡೆಯಲ್ಲಿ ಚೀನಾವು ವಿಸ್ತೀರ್ಣದಲ್ಲಿ ಶೇಕಡಾ ೧೬ನ್ನು ಹೊಂದಿದು, ಉತ್ಪಾದನೆಯಲ್ಲಿ ಅದು ಶೇಕಡಾ ೨೯ರಷ್ಟಿದೆ. ಉತ್ಪಾದಕತೆ ಯಾ ಇಳುವರಿಯಲ್ಲಿ ಚೀನಾವು ಅಗ್ರಸ್ಥಾನದಲ್ಲಿದ್ದು, ಈ ಪ್ರಮಾಣವು ಹೆಕ್ಟೇರೊಂದರ ೩೭೫೨ ಕಿಲೋ ಆಗಿದ್ದು, ೩೩೩ ಕಿಲೋ ಹೊಂದಿರು ಮಾಲ್ಡೀಸ್ ಈ ದೃಷ್ಟಿಯಲ್ಲಿ ಕೊನೆ ಸ್ಥಾನವನ್ನು ಹೊಂದಿದೆಯೆಂಬುದನ್ನು ಪಟ್ಟಿ ರ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಪಟ್ಟಿ
ವಿಶ್ವದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆ
(ವಿಸ್ತೀರ್ಣ ‘೦೦೦ ಹೆಕ್ಟೇರ್ ಗಳಲ್ಲಿ, ಉತ್ಪಾದನೆ ಮೆಟ್ರಿಕ್‌ ಟನ್‌ಗಳಲ್ಲಿ, ಉತ್ಪಾದಕತೆ ಕಿಲೋ/ಹೆಕ್ಟೇರ್ ಗೆ)
೧೯೮೮–೯೯

ರಾಷ್ಟ್ರ

ವಿಸ್ತೀರ್ಣ

ಉತ್ಪಾದನೆ

ಉತ್ಪಾದಕತೆ

ಬಾಂಗ್ಲಾ

೩೬.೦೦

೨೮.೦೦

೭೭೭

ಚೀನಾ

೪೬.೦೦

೧೭೨.೫೭

೩೭೫೨

ಭಾರತ

೨೭೦.೦೦

೩೧೦.೦೦

೧೧೪೮

ಇಂಡೋನೇಶಿಯಾ

೭೫.೩೮

೩೨.೬೦

೪೩೩

ಮಲೇಶಿಯಾ

೪.೦೦

೧೬೬೬

೨.೪೦

ಮಾಲ್ಡೀಸ್

೦.೦೩

೦.೦೧

೩೩೩

ಮ್ಯಾನ್‌ಮಾರ್

೨೯.೫೦

೩೧.೫೦

೧೦೬೮

ಥೈಲಾಂಡ್

೯.೦೦

೧೪.೫೦

೧೬೧೧

ಒಟ್ಟು

೪೬೮.೩೧

೫೯೩.೨೯

೧೨೬೭

ಮೂಲ: ಎಫ್.ಎ.ಓ

ವಿಸ್ತೀರ್ಣ ಮತ್ತು ಉತ್ಪಾದನಾ ಪ್ರವೃತ್ತಿ:

ವಿಶ್ವದಲ್ಲಿ ಅಡಿಕೆ ವ್ಯವಸಾಯವು ಹಲವು ವರ್ಷಗಳಿಂದೀಚೆಗೆ ಕೈಗೊಳಲಾಗುತ್ತಿದ್ದು, ಭಾರತವು ತನ್ನ ಅಗತ್ಯಕ್ಕನುಗುಣವಾಗಿ ಅನಾದಿಕಾಲದಿಂದಲೂ ಅಡಿಕೆಯ ಆಮದನ್ನು ಕೈಗೊಳ್ಳುತ್ತಿದ್ದುದೇ ಇದಕ್ಕೆ ಸಾಕ್ಷಿ. ಎಫ್.ಎ.ಓ ಒದಗಿಸಿರುವ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನಾ ಪ್ರವೃತ್ತಿ (ಪಟ್ಟಿ)ಯ ಪ್ರಕಾರ ಅಡಿಕೆ ಬೆಳೆಯು ನಿರಂತರವಾಗಿ ಪ್ರಗತಿ ಪಥದತ್ತ ಹೆಜ್ಜೆಯಿಡುತ್ತಿದೆ, ಅದರಲ್ಲೂ ಚೀನಾದಲ್ಲಿ ೧೯೯೧ರ ಬಳಿಕ ಅದ್ಭುತ ಬೆಳವಣಿಗೆಯಾಗುತ್ತಿದೆ. ಇದರೊಂದಿಗೆ ಭಾರತ, ಥೈಲಾಂಡ್‌ಗಳಲ್ಲೂ ವಿಸ್ತರಣಾ ಕಾರ್ಯಗಳು ಅಧಿಕಗೊಳ್ಳುತ್ತಿದೆ.

ಪಟ್ಟಿರ ಮೂಲಕ ನಾವಿಂದು ತಿಳಿದುಕೊಳ್ಳಬಹುದಾದ ಮುಖ್ಯ ಅಂಶವೆಂದರೆ ೧೯೯೧ರ ತನಕ ವಿಶ್ವದ ಅಡಿಕೆ ಉತ್ಪಾದನೆಯಲ್ಲಿ ಭಾರತಕ್ಕಿದ್ದ ಏಕಸ್ವಾಮ್ಯ ಇಂದಿಲ್ಲ. ಭಾರತಕ್ಕಿಂದು ಚೀನಾ ಪ್ರಬಲ ಪೈಪೋಟಿ ನೀಡುವ ಹಂತಕ್ಕೆ ಬೆಳೆದಿದ್ದು, ಈಗ ಅಲ್ಲಿ ಕಂಡು ಬರುತ್ತಿರುವ ಉತ್ಪಾದನಾ ಪ್ರವೃತ್ತಿ ಮುಂದೆ ಭಾರತಕ್ಕೆ ಆತಂಕದ ಕ್ಷಣಗಳನ್ನು ನೀಡಬಹುದಾಗಿದೆ. ಇದರೊಂದಿಗೆ ಇನ್ನಿತರೇ ರಾಷ್ಟ್ರಗಳಲ್ಲೂ ಅಡಿಕೆ ಬೆಳೆಯು ಅಭಿವೃದ್ಧಿಯಾಗುತ್ತಿದ್ದು, ಎಫ್.ಎ.ಓ ಹೆಸರಿಸಿರುವ ಪಟ್ಟಿಯಲ್ಲಿ ಅಡಿಕೆಯನ್ನಿಂದು ಬೆಳೆಸುತ್ತಿರುವ ಶ್ರೀಲಂಕಾ, ಪಾಕಿಸ್ಥಾನಗಳ ಬಗ್ಗೆ ಮಾಹಿತಿಯಿಲ್ಲದೆ ಇರುವುದರಿಂದ ಭಾರತದ ಪಾಲು ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಲಭ್ಯ ಮಾಹಿತಿಗಳ ಪ್ರಕಾರ ಈ ಎಲ್ಲಾ ರಾಷ್ಟ್ರಗಳಲ್ಲಿಂದು ಬೆಳೆಸಲಾಗುತ್ತಿರುವ ಅಡಿಕೆ ನಮ್ಮ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಕರಾವಳಿ ಜಿಲ್ಲೆಗಳ ಚಾಲಿ ಅಡಿಕೆಯ ರೀತಿಯದ್ದಾಗಿದ್ದು, ಇದೀಗ ವಿಶ್ವ ವ್ಯಾಪಾರ ಸಂಸ್ಥೆ (W.T.O.)ಯ ಒಪ್ಪಂದದಂತೆ ಮುಕ್ತ ಆಮದಿಗೆ ಅವಕಾಶ ಒದಗಿರುವುದರಿಂದ ಮತ್ತು ವಿಶ್ವದಲ್ಲಿ ಅಡಿಕೆಯ ಬಳಕೆ ಭಾರತದಲ್ಲೇ ಅತ್ಯಧಿಕ ಪ್ರಮಾಣದಲ್ಲಿರುವುದರಿಂದ ವಿಶ್ವದಲ್ಲಿಂದು ಭಾರತ ಹೊರತಾಗಿ ಇನ್ನಿತರೇ ರಾಷ್ಟ್ರಗಳಲ್ಲಿಂದು ಕಂಡು ಬರುತ್ತಿರುವ ಅಡಿಕೆ ಬೆಳೆಯ ಬೆಳೆವಣಿಗೆ ಭಾರತಕ್ಕೆ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಅಡಿಕೆ ಬೆಳೆಗಾರರಿಗೆ ಒಂದು ಪ್ರಮುಖ ಸಮಸ್ಯೆಯಾಗಿ ಕಾಡಬಹುದಾಗಿದೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ದೊರೆಕಿರುವ ಆಕರ್ಷಣಾ ಬೆಲೆಯಿಂದ ಈ ಜಿಲ್ಲೆಗಳಲ್ಲಿ ಅಡಿಕೆ ಕೃಷಿಯ ವಿಸ್ತೀರ್ಣ ಹೆಚ್ಚಾಗುತ್ತಿದ್ದು, ಇದು ಈ ಕ್ಷೇತ್ರಕ್ಕೆ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡಲು ಅವಕಾಶವನ್ನೊದಗಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವದ ಅಡಿಕೆ ಕ್ಷೇತ್ರವಿಂದು ತನ್ನ ಮಾರುಕಟ್ಟೆಯ ವಿಸ್ತರಣಾ ಕಾರ್ಯವನ್ನು ವಿಶ್ವಾದಾದ್ಯಂತ ಕೈಗೊಳ್ಳಬೇಕಾದ ಅನಿವಾರ್ಯತೆಯಿಂದು ಒದಗಿಬಂದಿದೆ.

ಪಟ್ಟಿ
ವಿಶ್ವದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನಾ ಪ್ರವೃತ್ತಿ
(೧೯೬೧–೧೯೯೮)
(ವಿಸ್ತೀರ್ಣ ‘೦೦೦ ಹೆಕ್ಟೇರ್ ಗಳಲ್ಲಿ, ಉತ್ಪಾದನೆ ಮೆಟ್ರಿಕ್‌ ಟನ್‌ಗಳಲ್ಲಿ)

ರಾಷ್ಟ್ರ

೧೯೬೧

೧೯೭೧

೧೯೮೧

೧೯೯೧

೧೯೯೮

ವಿಸ್ತೀರ್ಣ

ಉತ್ಪಾದನೆ

ವಿಸ್ತೀರ್ಣ

ಉತ್ಪಾದನೆ

ವಿಸ್ತೀರ್ಣ

ಉತ್ಪಾದನೆ

ವಿಸ್ತೀರ್ಣ

ಉತ್ಪಾದನೆ

ವಿಸ್ತೀರ್ಣ

ಉತ್ಪಾದನೆ

ಬಾಂಗ್ಲಾದೇಶ

೮೨.೬೦

೬೨.೯೯

೪೦.೧೦

೨೩.೩೬

೩೬.೪೩

೨೫.೦೫

೩೫.೮೧

೨೪.೧೨

೩೬.೦೦

೨೮.೦೦

ಚೀನಾ ೦.೬೨

೩.೭೧

೧.೩೩

೧೦.೦೭

೨.೮೩

೨೪.೩೫

೨೬.೯೬

೧೧೧.೦೯

೪೬.೦೦

೧೭೨.೫೭

ಭಾರತ ೧೩೫.೦೦

೧೨೦.೦೦

೧೬೭.೩೦

೧೪೧.೦೦

೧೮೫.೨೦

೧೯೫.೯೦

೨೧೭.೦೦

೨೫೮.೫೦

೨೭೦.೦೦

೩೧೦.೦೦

ಇಂಡೋನೇಶಿಯಾ

೬೫.೦೦

೧೩.೦೦

೭೫.೦೦

೧೫.೦೦

೯೦.೦೦

೧೮.೦೦

೯೫.೭೬

೨೨.೮೧

೭೫.೩೮

೩೨.೬೦

ಮಲೇಷಿಯಾ

೬.೦೦

೬.೫೦

೨.೫೦

೩.೦೦

೧.೩೦

೨.೫೦

೨.೨೦

೪.೦೦

೨.೪೦

೪.೦೦

ಮಾಲ್ದೀಸ್

೦.೦೦೩

೦.೦೦೧

೦.೦೦೩

೦.೦೦೧

೦.೦೦೬

೦.೦೦೫

೦.೦೩

೦.೦೧

೦.೦೩

೦.೦೧

ಮ್ಯಾನ್‌ಮಾರ್

೧೧.೩೩

೮.೦೦

೨೪.೬೮

೧೯.೨೦

೨೬.೪೭

೨೫.೮೦

೨೮.೯೩

೯೨.೨೭

೨೯.೫೦

೩೧.೫೦

ಥೈಲಾಂಡ್

೮.೫೦

೧೩.೨೫

೯.೦೦

೧೪.೫೦

ಒಟ್ಟು

೩೦೦.೫೫

೨೧೪.೨೧

೩೧೦.೯೨

೨೧೧.೬೪

೩೪೨.೨೫

೨೯೧.೬೨

೪೧೫.೨೦

೪೪೬.೧೫

೪೬೮.೩೧

೫೯೩.೨೯

ಮೂಲ: ಎಫ್.ಎ.ಓ

ಗಣನೆಗೆ ತೆಗೆದುಕೊಳ್ಳಬೇಕಾದ ಮುಖ್ಯ ವಿಚಾರಗಳು:

೧. ಅಡಿಕೆ ಕೃಷಿ ಇಂದು ವಿಶ್ವವ್ಯಾಪಿಯಾಗುತ್ತಿದೆ. ಭಾರತಕ್ಕೆ ಈ ಮೊದಲಿದ್ದ ಏಕಸ್ವಾಮ್ಯ ಇನ್ನಿಲ್ಲ.

೨. ಅಡಿಕೆಯನ್ನು ಬೆಳೆಸುತ್ತಿರುವಲ್ಲೆಲ್ಲ ಬಳಕೆಯು ಆಗುತ್ತಿರಲೇ ಬೇಕು. ಆದ್ದರಿಂದ ಉತ್ತಮ ಗುಣಮಟ್ಟದ ಅಡಿಕೆಯನ್ನು ಬೆಳೆಯುತ್ತಿರುವ ಭಾರತ, ಈ ರಾಷ್ಟ್ರಗಳಲ್ಲಿ ಮಾರುಕಟ್ಟೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು.

೩. ವಿಶ್ವ ಮಾರುಕಟ್ಟೆ ಇಂದು ಮುಕ್ತವಾಗಿದ್ದು, ಚೀನಾವು ಈ ಸಾಲಿಗೆ ಸೇರಲಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳು ಭಾರತದ ಮಟ್ಟಿಗೆ ಕಠಿಣವಾಗಬಹುದು.

೪. ಭಾರತವು ಅಡಿಕೆ ಉತ್ಪಾದಕತೆಯನ್ನು ಹೆಚ್ಚಿಸಲು ಶ್ರಮಿಸಬೇಕೇ ಹೊರತು ವಿಸ್ತೀರ್ಣವನ್ನಲ್ಲ.

೫. ಅಡಿಕೆ ಬೆಳೆಯುತ್ತಿರುವ ಇನ್ನಿತರೇ ರಾಷ್ಟ್ರಗಳೊಂದಿಗೆ ಸೇರಿ ಅಡಿಕೆಯ ವಿವಿಧ ರೀತಿಯ ಬಳಕೆಯ ಬಗ್ಗೆ ಅಧ್ಯಯನಗಳನ್ನು ಕೈಗೊಂಡು ವಿಶ್ವದಾದ್ಯಂತ ಮಾರುಕಟ್ಟೆಯನ್ನು ವಿಸ್ತರಿಸಲು ಭಾರತವಿಂದು ಶ್ರಮಿಸಬೇಕಾದ ಅಗತ್ಯವಿದೆ.

೬. ಶ್ರೀಲಂಕಾದಲ್ಲಿ ಅನಾದಿಕಾಲದಿಂದಲೂ ಅಡಿಕೆಯನ್ನು ಬೆಳೆಸುತ್ತಿದ್ದು, ಅಲ್ಲಿಂದು ಉತ್ಪಾದನೆಯಾಗುತ್ತಿರುವ ಪ್ರಮಾಣದ ಬಗ್ಗೆ ಮಾಹಿತಿಯಿಲ್ಲದಿರುವುದರಿಂದ ಈ ಬಗ್ಗೆ ಅಧ್ಯಯನ ಅಗತ್ಯ.

೭. ವಿಶ್ವದಲ್ಲಿಂದು ಬೆಳೆಸಲಾಗುತ್ತಿರುವ ಅಡಿಕೆ ಪ್ರಮಾಣ, ವಿಸ್ತೀರ್ಣ, ಬಳಕೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಣೆ ಅತ್ಯಗತ್ಯ.