೧೯೭೦ರ ದಶಕದ ಆರಂಭದಲ್ಲಾದ ಏರಿಳಿತ:

೧೯೭೦ರ ಚಳಿಗಾಲದಲ್ಲಿ ಅಂದಿನ ವೈಸೂರು ರಾಜ್ಯದ (ಕರ್ನಾಟಕ) ಅಡಿಕೆ ಬೆಳೆಯುವ ಕೆಲವು ಜಿಲ್ಲೆಗಳಲ್ಲಿ ಚಳಿಗಾಳಿಯಿಂದಾಗಿ ಅಡಿಕೆ ಬೆಳೆಯ ಮೇಲೆ ಶೇಕಡಾ ೩೦ರಷ್ಟು ಹೊಡೆತ ಬೀಳಬಹುದೆಂಬ ವರದಿ ಬಂದು ಅಡಿಕೆ ಮಾರುಕಟ್ಟೆ ವಲಯದಲ್ಲಿ ಪೂರೈಕೆಯಲ್ಲಿ ಕೊರತೆ ಬರಬಹುದೆಂಬ ಭೀತಿ ನಿರ್ಮಾಣವಾಗಿ ಕ್ರಮೇಣ ಧಾರಣೆಯ ಏರು ಪ್ರವೃತ್ತಿಯನ್ನು ತೋರಿಸಿತ್ತು. ಮತ್ತು ೧೯೭೧ರ ಮಾರ್ಚ್‌‌ನಲ್ಲಿ ಅದು ಅತ್ಯಧಿಕ ಮಟ್ಟದ ಕ್ವಿಂಟಾಲ್‌ ಒಂದರ ರೂಪಾಯಿ ೬೮೪ಕ್ಕೇರಿತು, ಮತ್ತು ೭೧ರ ಮೇ ಬಳಿಕ ಏರಿಳಿತಕ್ಕೊಳಪಟ್ಟಿತ್ತು. ಬಳಿಕ ೧೯೭೨ರ ನವಂಬರಿನಿಂದ ಇಳಿಮುಖವಾಗುತ್ತಾ ಹೋಗಿತ್ತು. ೧೯೭೨ರ ನವಂಬರಿನಲ್ಲಿ ಅದು ಕ್ವಿಂಟಾಲ್‌ ಒಂದರ ೨೪೪ಕ್ಕಿಳಿದು ಹೋಯಿತು. ಈ ಪ್ರವೃತ್ತಿ ಪುನಃ ಏರಿಳಿತಕ್ಕೊಳಪಟ್ಟು ಏಪ್ರಿಲ್‌ ೧೯೭೩ರಲ್ಲಿ ಕ್ವಿಂಟಾಲ್‌ ಒಂದರ ರೂಪಾಯಿ ೩೦೪ಕ್ಕೇರಿ ಮುಂದಿನ ತಿಂಗಳಿನಲ್ಲಿ ಒಮ್ಮಿಂದೊಮ್ಮೆಗೆ ಶೇಕಡಾ ನೂರಕ್ಕಿಂತಲೂ ಹಚ್ಚಾಗಿತ್ತು. ೧೯೭೦ರ ಚಳಿಗಾಳಿಯಿಂದ ಉತ್ಪಾದನೆ ಕುಂಠಿತಗೊಳ್ಳಬಹುದೆಂಬ ಮಾಹಿತಿ ಮತ್ತು ಆತಂಕ ಆ ಬಳಿಕ ಧಾರಣೆಯನ್ನೇರಿಸಿದ್ದರೂ ಪೂರೈಕೆಯಲ್ಲಿ ಯಾವುದೇ ಇಳಿಕೆಯಾಗದೆ ಹೋಗಿ ಹೆಚ್ಚಿನ ಬೆಲೆ ತೆತ್ತು ಅಡಿಕೆಯನ್ನು ಕ್ರೋಢೀಕರಿಸಿದ್ದರಿಂದ ಅಡಿಕೆ ವ್ಯವಹಾರಸ್ಥರು ಸೋಲನ್ನನುಭವಿಸಿ ಮುಂದೆ ಇದು ಧಾರಣೆಯ ಕುಸಿತಕ್ಕೆ ದಾರಿ ಮಾಡಿಕೊಟ್ಟಿತ್ತು.

೧೯೭೦ರ ದಶಕದ ಪರಿಸ್ಥಿತಿ ಮತ್ತು ೧೯೯೮ರ ಬಳಿಕ ಕಂಡು ಬಂದ ಪರಿಸ್ಥಿತಿ ಇವೆರಡೂ ಸರಿಯಾದ ಮಾಹಿತಿಯ ಅಭಾವ ಮತ್ತು ಭೀತಿ, ಆತಂಕಗಳಿಂದಾಗಿ ಆಗಿತ್ತೆಂಬುದನ್ನು ಮೇಲೆ ತಿಳಿಸಿದ ವಿಚಾರಗಳಿಂದ ನಾವು ಅರಿತುಕೊಳ್ಳಬಹುದು. ಹೀಗಿದ್ದರೂ ೨೦೦೦ದಲ್ಲಿ ಕಂಡು ಬಂದ ಧಾರಣೆಯ ಕುಸಿತಕ್ಕೆ ಮಾರುಕಟ್ಟೆ ವಲಯವು ಹಲವು ರೀತಿಯ ಕಾರಣಗಳನ್ನು ಹೆಸರಿಸಿದ್ದು, ಇವುಗಳಲ್ಲಿ ಮುಖ್ಯವಾದವುಗಳೆಂದರೆ, ಉತ್ಪಾದನೆಯಲ್ಲಿನ ಹೆಚ್ಚಳ, ಬಳಕೆಯ ಪ್ರಮಾಣದ ಕುಸಿತ, ಮತ್ತು ಮುಕ್ತ ಆಮದು ನೀತಿಯಿಂದಾಗಿ ಆಮದಿನ ಪ್ರಮಾಣದ ಹೆಚ್ಚಳ, ಈ ನಿಟ್ಟಿನಲ್ಲಿ ಧಾರಣೆಯ ಮೇಲೆ ಇವುಗಳ ಪರಿಣಾಮಗಳೆಷ್ಟು ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

. ಉತ್ಪಾದನೆಯ ಹೆಚ್ಚಳ: ಅಡಿಕೆ ಉತ್ಪಾದನಾ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತಿದ್ದು, ಇದು ಧಾರಣೆಯ ಕುಸಿತಕ್ಕೆ ಕಾರಣವೆಂಬ ಮಾತು ಮಾರುಕಟ್ಟೆ ವಲಯದಲ್ಲಿ ಕೇಳಿಬಂತು. ಆದರೆ ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾದ ಮುಖ್ಯ ವಿಚಾರವೆಂದರೆ ಉತ್ಪಾದನೆ ಹೆಚ್ಚಾದಂತೆ ಅಡಿಕೆಯ ಪೂರೈಕೆ ಹೆಚ್ಚಾಗುವುದು, ಪೂರೈಕೆ ಹೆಚ್ಚಾದಾಗ ಅದಕ್ಕನುಗುಣವಾದ ಬೇಡಿಕೆ ಬಾರದೇ ಹೋದಲ್ಲಿ ಧಾರಣೆ ಕುಸಿತಕ್ಕೊಳಗಾಗುವುದು. ಅದರೆ ಕಳೆದ ಕೆಲವು ವರ್ಷಗಳಲ್ಲಿ ದೇಶದ ಅಡಿಕೆ ಉತ್ಪಾದನೆ ಹೆಚ್ಚಾದಂತೆ ಧಾರಣೆಯೂ ಏರು ಪ್ರವೃತ್ತಿಯನ್ನು ತೋರಿಸುತ್ತಾ ಬಂದಿದೆ. ಈ ಬಗ್ಗೆ ಅಂಕಿ-ಅಂಶಗಳನ್ನು ಪಟ್ಟಿ ೨೩ರಲ್ಲಿ ಕೊಡಲಾಗಿದ್ದು, ಇದರ ಪ್ರಕಾರ ಹೆಚ್ಚಿನ ಉತ್ಪಾದನೆ ಧಾರಣೆಯ ಮೇಲೆ ಯಾವುದೇ ಹೊಡೆತವನ್ನಿಕ್ಕಲಿಲ್ಲ. ಇದರೊಂದಿಗೆ ಒಂದು ಯಾ ಎರಡು ವರ್ಷಗಳಲ್ಲಿ ಧಾರಣೆಯು ಶೇಕಡಾ ೧೫೦ಕ್ಕಿಂತಲೂ ಕೆಳಕ್ಕಿಳಿಯುವಷ್ಟು ಉತ್ಪಾದನೆಯ ಪೂರೈಕೆ ಆಗುವುದು ಅಸಾಧ್ಯ. ಈ ರೀತಿಯ ಹೆಚ್ಚಳ ಈ ತನಕ ಕಂಡು ಬಂದಿಲ್ಲ. ಇಷ್ಟು ಮಾತ್ರವಲ್ಲದೆ ಅಡಿಕೆ ಬೆಳೆಯ ವಿಸ್ತೀರ್ಣವಿಂದು ಹೆಚ್ಚಾಗಿರುವುದು ಕೆಂಪಡಿಕೆಯ ತಯಾರಿಯಾಗುವ ಪ್ರದೇಶಗಳಲ್ಲಿ ಮಾತ್ರ. ೧೯೯೧ರಿಂದೀಚೆಗೆ ಅಡಿಕೆಯ ಬೆಲೆ ಏರು ಪ್ರವೃತ್ತಿಯನ್ನು ತೋರಿಸಿ ಚಾಲಿ ಅಡಿಕೆ ಬೆಳೆಯ ವಿಸ್ತೀರ್ಣವು ಹೆಚ್ಚಿರಲೂ ಬಹುದು, ಆದರೂ ಒಂದೇ ವರ್ಷದಲ್ಲಿ ಅಗಾಧ ಪ್ರಮಾಣದ ಧಾರಣೆ ಕುಸಿತಕ್ಕೆ ಇಂದು ಖಂಡಿತವಾಗಿಯೂ ಕಾರಣವಾಗಲಾರದು. ಇದೇ ರೀತಿಯ ಮಾತು ೧೯೭೨ರಲ್ಲೂ ಕೇಳಿ ಬಂದಿತ್ತು. ಆದರೆ ಅದು ಅಸತ್ಯವೆಂಬುದನ್ನು ಪೌಲೋಸ್ ಸಮಿತಿಯ ತಿಳಿಹೇಳಿತ್ತು. ಆದ್ದರಿಂದ ಉತ್ಪಾದನೆಯ  ಹೆಚ್ಚಳ ಧಾರಣೆಯ ಕುಸಿತಕ್ಕೆ ಕಾರಣವಲ್ಲವೆಂಬುದನ್ನು ಇಲ್ಲಿ ಹೆಸರಿಸಬಹುದು.

ಪಟ್ಟಿ ೨೩
ಭಾರತದಲ್ಲಿ ಅಡಿಕೆ ಬೆಳೆಯ ಉತ್ಪಾದನೆ ಮತ್ತು ಸರಾಸರಿ ಸಗಟು ಬೆಲೆ

ವರ್ಷ

ಉತ್ಪಾದನೆ
(ಮೆ. ಟನ್ ಗಳಲ್ಲಿ)

ಸರಾಸರಿ ಸಗಟು ಬೆಳೆ (ಕಿಲೋ ಒಂದರ ರೂಪಾಯಿ)

೧೯೭೫–೭೬

೧,೬೦,೦೦೦

೭.೧೦

೧೯೮೦–೮೧

೧,೯೧,೦೦೦

೧೫.೮೦

೧೯೮೫–೮೬

೨,೧೬,೦೦೦

೨೨.೭೦

೧೯೯೦–೯೧

೨,೩೯,೦೦೦

೩೯.೬೦

೧೯೯೧–೯೨

೨,೫೧,೦೦೫

೬೧.೯೦

೧೯೯೨–೯೩

೨,೪೮,೪೦೧

೫೮.೮೦

೧೯೯೩–೯೪

೨,೭೫,೦೦೦

೫೨.೭೦

೧೯೯೪–೯೫

೨,೮೯,೭೦೦

೬೫.೫೦

೧೯೯೫–೯೬

೨,೯೫,೫೦೦

೭೧.೮೦

೧೯೯೬–೯೭

೩,೦೭,೭೦೦

೮೨.೩೦

೧೯೯೭–೯೮

೩,೩೩,೯೦೦

೮೧.೪೦

೧೯೯೮–೯೯

೪,೧೫,೦೦೦

೯೮.೪೦

ಮೂಲ:ಉತ್ಪಾದನೆ ಕೇಂದ್ರ ಕೃಷಿ ಮಂತ್ರಾಲಯ ಹೊಸದೆಹಲಿ.
ಧಾರಣೆ ಕ್ಯಾಂಪ್ಕೋ ವಾರ್ಷಿಕ ವರದಿ ೧೯೯೮-೯೯.

. ಬಳಕೆಯ ಪ್ರಮಾಣದ ಕುಸಿತ: ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಮುಖ್ಯವಾಗಿ ೯೦ರ ದಶಕದ ಬಳಿಕ ಚಾಲಿ ಅಡಿಕೆಯನ್ನು ಬಳಸಿ ತಯಾರಿಸಲಾಗುತ್ತಿರುವ  ಬೀಡಾಗಳ ಉಪಯೋಗ ಕಡಿಮೆಯಾಗುತ್ತಿರುವುದರಿಂದ ಇದಕ್ಕಿರುವ ಬೇಡಿಕೆ ಕುಸಿದು ಧಾರಣೆ ಇಳಿಮುಖವಾಗುತ್ತಿದೆಯೆಂಬ ವಾದ ಮಾರುಕಟ್ಟೆ ವಲಯದ್ದಾಗಿದ್ದರೂ, ಒಮ್ಮಿಂದೊಮ್ಮೆಗೆ ಧಾರಣೆಯು ದಿಢೀರನೆ ಕುಸಿಯುವಷ್ಟು ಚಾಲಿ ಅಡಿಕೆ ಬೇಡಿಕೆ ಇಳಿದಿಲ್ಲವೆಂಬುದನ್ನು ಜನವರಿ ೨೦೦೧ರಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಉತ್ತರ ಭಾರತದ ಮಾರುಕಟ್ಟೆ ಸಮೀಕ್ಷೆಯನ್ನು ಕೈಗೊಂಡು ಹೆಸರಿಸಿದೆ. ೧೯೯೦ರ ಬಳಿಕ ಪಾನ್ ಮಸಾಲ ಮತ್ತು ಗುಟ್ಕಾಗಳಿಗೆ ಬೇಡಿಕೆ ಏರುತ್ತಿರುವುದೇನೋ ನಿಜ, ಆದರೆ ಚಾಲಿ ಅಡಿಕೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿರುವ ಗುಜಾರತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಇದಕ್ಕಿರುವ ಬೇಡಿಕೆಯನ್ನೂ ಕುಸಿದಿಲ್ಲ. ದೇಶದಲ್ಲಿಂದು ಒಂದು ಸಾಮಾನ್ಯ ಅಂದಾಜು ಪ್ರಕಾರ ಸುಮಾರು ೧೫ ಲಕ್ಷಕ್ಕಿಂತಲೂ ಅಧಿಕ ಪಾನ್‌ವಾಲಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ. ಆದ್ದರಿಂದ ಬೀಡಾಕ್ಕಿರುವ ಬೇಡಿಕೆಯೂ ಏರದೇ ಇದ್ದರೂ ಕುಸಿಯುತ್ತಿಲ್ಲವೆನ್ನಬಹುದು. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಕೆಂಪಡಿಕೆಯ ಬೆಲೆಯೂ ಏರು ಪ್ರವೃತ್ತಿಯನ್ನು ತೋರಿಸುತ್ತಿರುವುದರಿಂದ ಅಲ್ಲಿ ಈ ಮೊದಲು ಮಾಡುತ್ತಿದ್ದ ಚಾಲಿ ಅಡಿಕೆಯ ಪ್ರಮಾಣವೂ ಕುಸಿದಿದ್ದು, ಇದರಿಂದಾಗಿ ಚಾಲಿ ಅಡಿಕೆಯ ಪೂರೈಕೆಯ ಪ್ರಮಾಣವೂ ಕುಸಿದು, ಬೆಲೆಯೇರಿಕೆಗೆ ಅವಕಾಶ ಸೃಷ್ಟಿಸಬಹುದೇ ಹೊರತು ಕುಸಿತಕ್ಕಲ್ಲ. ಬೇಡಿಕೆಯ ಪ್ರಮಾಣ ಕುಸಿದಿದ್ದಲ್ಲಿ ದೇಶವು ಆಮದಿಗೆಂದೂ ಕೈಹಾಕುವಂತಿಲ್ಲ, ಆದರೆ ೧೯೯೪-೯೫ರ ಬಳಿಕ ಈ ಆಮದು ಹಂತ ಹಂತವಾಗಿ ಏರುತ್ತಾ ಹೋಗಿತ್ತು. ಇದರ ಪ್ರಕಾರ ಆಂತರಿಕ ಬಳಕೆಗೆ ಅನುಗುಣವಾದ ಪೂರೈಕೆಯ ಅಭಾವ ಆಮದಿಗೆ ದಾರಿ ಮಾಡಿಕೊಟ್ಟಿತು  ಎಂಬುದು. ಒಟ್ಟಾರೆಯಾಗಿ ಲಭ್ಯ ಅಂಕಿ-ಅಂಶಗಳ ಆಧಾರದಲ್ಲಿ ಚಾಲಿ ಅಡಿಕೆಯ ಪ್ರಮಾಣ ಧಾರಣೆಯ ದಿಢೀರ್ ಕುಸಿತಕ್ಕೆ ದಾರಿ ಮಾಡಿಕೊಡಲಾರದು.

. ಆಮದು: ಉದಾರೀಕರಣ, ಜಾಗತೀಕರಣ, ಖಾಸಗೀಕರಣ, ಡಬ್ಲ್ಯೂ. ಟಿ. ಓ. ಒಪ್ಪಂದ ಯಾ ಮುಕ್ತ ಆಮದಿಗಿರುವ ಅವಕಾಶದಿಂದಾಗಿ ಅಡಿಕೆಯ ಆಮದಿನ ಪ್ರಮಾಣ ಇಲ್ಲವೇ ಒಳಹರಿವು ಅಧಿಕವಾಗಿ ಧಾರಣೆ ಕುಸಿತಕ್ಕೊಳಗಾಗಿದೆ ಎಂಬ ಮಾತು ಮಾರುಕಟ್ಟೆ ವಲಯದಲ್ಲಿ ಕೇಳಿ ಬಂತು. ಆದರೆ ಸರಕಾರವು ಕೊಡುವ ಅಡಿಕೆಯ ಆಮದಿನ ಬಗೆಗಿನ ಅಂಕಿ-ಅಂಶಗಳು ಧಾರಣೆಯ ದಿಡೀರ್ ಕುಸಿತಕ್ಕೆ ಖಂಡಿತವಾಗಿಯೂ ಕಾರಣವಲ್ಲ ಎಂಬುದನ್ನು ದೃಢಪಡಿಸುತ್ತಿದೆ. ಅಡಿಕೆ ಧಾರಣೆ ಕುಸಿತದ ಪ್ರವೃತ್ತಿಯನ್ನು ಆರಂಭಿಸಿದ್ದು ಜನವರಿ ೨೦೦೦ದ ನಂತರ ಮತ್ತು ಅತ್ಯಂತ ಕೆಳಮಟ್ಟಕ್ಕಿಳಿದದ್ದು ಜೂನ್ ೧೯೯೯-೨೦೦೦ದ ಅವಧಿಯಲ್ಲಿ ಭಾರತವು ಆಮದು ಮಾಡಿಕೊಂಡ ಅಡಿಕೆಯ ಪ್ರಮಾಣ ಕೇವಲ ೩೦೨೨ ಟನ್‌ಗಳಷ್ಟು ಮಾತ್ರ, ಮತ್ತಿದು ೨೦೦೦-೨೦೦೧ರ ಆಗಸ್ಟ್ ಅವಧಿಯಲ್ಲಿ ಕೇವಲ ೮೦೫ ಟನ್‌ಗಳಷ್ಟಿತ್ತು. ಈ ರೀತಿಯ ಅಲ್ಪ ಪ್ರಮಾಣದ ಆಮದು ಯಾವುದೇ ರೀತಿಯಲ್ಲೂ ಅಡಿಕೆ ಧಾರಣೆಯ ದಿಢೀರ್ ಕುಸಿತಕ್ಕೆ ದಾರಿ ಮಾಡಲಾರದು. ಇದರೊಂದಿಗೆ, ೧೯೯೫-೯೬ರಲಿ ಭಾರತವು ೫೦೯೧ ಟನ್, ೧೯೯೬-೯೭ರಲ್ಲಿ ೯೫೬೫ ಟನ್, ೧೯೯೭-೯೮ರಲ್ಲಿ ೧೦೮೨೩ ಟನ್ ಮತ್ತು ೧೯೯೮-೯೯ರಲ್ಲಿ ೬೭೦೭ ಟನ್‌ಗಳಷ್ಟು  ಅಡಿಕೆಯ ಆಮದನ್ನು ಮಾದಿಕೊಂಡಿದ್ದರೂ ಧಾರಣೆ ಕುಸಿಯುವುದರ ಬದಲು ಏರು ಪ್ರವೃತ್ತಿಯನ್ನು ತೋರಿಸಿದೆ ಎಂದರೆ ಆಮದು ಯಾವುದೇ ಕಾರಣಕ್ಕೂ ಧಾರಣೆ ಕುಸಿತಕ್ಕೆ ದಾರಿ ಮಾಡಿಕೊಟ್ಟಿಲ್ಲವೆಂಬುದನ್ನು ದೃಢಪಡಿಸುತ್ತಿದೆ. ಹೀಗಿದ್ದರೂ ಅಡಿಕೆಯಿಂದು ಹೊರರಾಷ್ಟ್ರಗಳಿಂದ ಪರೋಕ್ಷ ದಾರಿಯಲ್ಲಿ ಅಗ್ಗದ ಬೆಲೆಯಲ್ಲಿ ಒಣ ಹಣ್ಣಿನ ರೂಪದಲ್ಲಿ ಇಲ್ಲವೇ ನೈಜ ರೂಪದಲ್ಲಿ ಬರುತ್ತಿದೆಯೆಂಬುಬು, ಈ ಬಗ್ಗೆ ಖಚಿತವಾದ ಅಂಕಿ-ಅಂಶ ದೊರಕದೇ ಇದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಇಲ್ಲಿ ಏನನ್ನೂ ಹೇಳಲು ಅಸಾಧ್ಯ. ಅಡಿಕೆಯ ಆಮದು ಅಧಿಕಗೊಳ್ಳುತ್ತಿದೆಯೆಂಬ ಭೀತಿ ಮಾರುಕಟ್ಟೆಯಲ್ಲಿ ಬಂದುದರಿಂದ ೧೯೭೦ರ ದಶಕದಲ್ಲೂ ಧಾರಣೆಯು ಕುಸಿದಿದ್ದು, ಇದೇ ರೀತಿಯ ಪ್ರವೃತ್ತಿ ೨೦೦೦ದ ಬಳಿಕವೂ ಅಗಿ ಹೋಯಿತೇ ಎಂಬ ವಿಚಾರ ಇಲ್ಲಿ ಎದ್ದು ಕಾಣುತ್ತದೆ.

ಒಟ್ಟಾರೆಯಾಗಿ ಚಾಲಿ ಅದಿಕೆಯ ಧಾರಣೆಯ ಕುಸಿತಕ್ಕೆ ಹೆಚ್ಚುವರಿ ಉತ್ಪಾದನೆಯಾಗಲೀ, ಬಳಕೆಯ ಪ್ರಮಾಣದ ಕುಸಿತವಾಗಲೀ ಮತ್ತು ಪ್ರತ್ಯಕ್ಷ ಆಮದಾಗಲೀ ಕಾರಣವಾಗಲಾರದೆಂಬುದನ್ನು ಮೇಲಿನ ವಿಚಾರಗಳಿಂದ ನಾವಿಂದು ಅರಿತುಕೊಳ್ಳಬಹುದು. ಹೀಗಿದ್ದಲ್ಲಿ ಚಾಲಿ ಅಡಿಕೆಯ ಧಾರಣೆಯಲ್ಲಿ ದಿಢೀರ್ ಕುಸಿತ ಯಾಕಾಯ್ತು ಎಂಬುದೊಂದು ಯಕ್ಷ ಪ್ರಶ್ನೆ. ಈ ನಿಟ್ಟಿನಲ್ಲಿ ಇದಕ್ಕೆ ಕಾರಣವಾಗಬಲ್ಲ ವಿಚಾರಗಳನ್ನು ಕೆಳಗೆ ಹೆಸರಿಸಲಾಗಿದೆ.

() ಮಾರುಕಟ್ಟೆ ವಲಯದಲ್ಲಿ ಸೃಷ್ಟಿಯಾದ ಅಪರಿಪೂರ್ಣ ಮಾಹಿತಿ: ಚಾಲಿ ಅಡಿಕೆಯ ಧಾರಣೆಯು ೧೯೯೮ರ ಜುಲೈನಿಂದ ಒಮ್ಮಿಂದೊಮ್ಮೆಗೆ  ಏರು ಪ್ರವೃತ್ತಿಯನ್ನು ತೋರಿಸಲಾರಂಭಿಸಿದ್ದು, ಇದಕ್ಕೆಇಲ್ಲಿ ಹೆಸರಿಸಬಹುದಾದ ಮುಖ್ಯ ಕಾರಾಣವೆಂದರೆ ಕಜ್ಜಿ ಕೀಟ ಮತ್ತು ಹಳದಿ ರೋಗದಿಂದ ಮಾರುಕಟ್ಟೆಗೆ ಪೂರೈಕೆಯಾಗಬಲ್ಲ ಅಡಿಕೆಯ ಪ್ರಮಾಣದಲ್ಲಿ ಕುಸಿತವಾಗಬಹುದೆಂಬ ಭೀತಿ ನಿರ್ಮಾಣವಾಗಿ ಮಾರುಕಟ್ಟೆ ವಲಯವು ಹೆಚ್ಚಿನ ಧಾರಣೆ ಅಡಿಕೆಯನ್ನು ಖರೀದಿಸಿ ಶೇಖರಣೆಗೆ ಅನುವಾಯಿತು. ಆದರೆ ಕ್ರಮೇಣ ಪೂರೈಕೆಯಲ್ಲಿ ಯಾವುದೇ ಇಳಿತ ಕಾಣದೆ ದುಬಾರಿ ಬೆಲೆ ತೆತ್ತು ಖರೀದಿಸಿದ ಅಡಿಕೆಯ ವ್ಯವಹಾರ ಸಮಸ್ಯೆಯಾಗಿ ಹೋಯಿತು. ಇದರೊಂದಿಗೆ ಮುಂದಿನ ಸಾಲಿನಲ್ಲಿ ಅಧಿಕ ಇಳುವರಿಯ ಸಾಧ್ಯತೆಯ ಬಗ್ಗೆಯೂ ಮಾಹಿತಿ ಬಂದು ಧಾರಣೆಯ ಇಳಿಕೆಗಿಂದು ದಾರಿ ಮಾಡಿಕೊಟ್ಟಿತು. ಇಷ್ಟು ಮಾತ್ರವಲ್ಲವೆ  ಮುಕ್ತ ವಾತಾವರಣದಿಂದ ಅಡಿಕೆಯ ಆಮದು ಇನ್ನಷ್ಟು ಹೆಚ್ಚಬಹುದೆಂಬ ಭೀತಿಯು ಕಂಡು ಬಂದುದರಿಂದ ಮೊದಲೇ ಸೋತ ಅಡಿಕೆ ವ್ಯವಹಾರಸ್ಥರು ಅಡಿಕೆಯ ಖರೀದಿಗೆ ಹಿಂದೇಟು ಹಾಕಲಾರಂಬಿಸಿ ಧಾರಣೆಯ ಇಳಿಕೆಗೆ ದಾರಿಯಾಯಿತು. ಇದೇ ಸಂರ್ಭದಲ್ಲಿ ಗುಜರಾತಿನ ಭೂಕಂಪವು ಅಲ್ಪ ಸ್ವಲ್ಪ ಭೀತಿಯನ್ನು ಸೃಷ್ಟಿಸಿ ಒಟ್ಟಾರೆಯಾಗಿ ಇಡೀ ಮಾರುಕಟ್ಟೆ ವಲಯ ಗೊಂದಲಮಯವಾಯಿತು. ಈ ರೀತಿಯಾಗಿ ಮಾಹಿತಿಯ ಅಭಾವ, ಭೀತಿ ಮತ್ತು ಗೊಂದಲಗಳು ಅಡಿಕೆಯ ವ್ಯವಹಾರಸ್ಥರಿಗೆ ಚಾಲಿ ಅಡಿಕೆಯ ಮೇಲಿದ್ದ ಮೋಹವನ್ನು ವಿರುದ್ಧದಿಕ್ಕಿಗೆ ಕೊಂಡೊಯ್ಯಲಾಂಭಿಸಿ, ಧಾರಣೆಯ ಏರಿಳಿತಕ್ಕೆ ವಿಪುಲ ಅವಕಾಶವನ್ನೊದಗಿಸಿತು. ಈ ರೀತಿಯ ಪರಿಸ್ಥಿತಿ ಈ ಮೊದಲು ಕೆಂಪಡಿಕೆಗೂ ಬಂದಿತ್ತು. ಈ ಎಲ್ಲಾ ಗೊಂದಲಗಳಿಂದಾಗಿ ಸೋತುಹೋದ ಬಳಕೆದಾರ ಪ್ರದೇಶದ ವ್ಯವಹಾರಸ್ಥರಿಂದು ತಾವು ಕಳಕೊಂಡ ವ್ಯವಹಾರ ಇಲ್ಲವೇ ನಷ್ಟವನ್ನು ಸರಿದೂಗಿಸಲು ಇದೀಗ ಇಳಿಮುಖವಾದ ಧಾರಣೆಯನ್ನೇ ನೆಚ್ಚಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

() ಏಕಸ್ವಾಮ್ಯ ಮಾರುಕಟ್ಟೆ : ದೇಶದಲ್ಲಿಂದು ಆಗುತ್ತಿರುವ ಒಟ್ಟು ಅಡಿಕೆಯ ವ್ಯವಹಾರದಲ್ಲಿ ಖಾಸಗಿ ಕ್ಷೇತ್ರದ ಪಾಲು ಶೇಕಡಾ ೯೦ಕ್ಕಿಂತಲೂ ಅಧಿಕ ಮತ್ತು ಸಹಕಾರಿ ಸಂಸ್ಥೆಗಳ ಪಾಲು ಅತ್ಯಲ್ಪ. ಯಾವುದೇ ಒಂದು ಉತ್ಪನ್ನದ ಮಾರುಕಟ್ಟೆಯು ಏಕಸ್ವಾಮ್ಯವಾಗಿದ್ದಲ್ಲಿ ಅಲ್ಲಿ ಬೆಲೆಯೂ ಸದಾ ಏರುಪೇರಾಗುವುದು ಸಹಜ. ಇಲ್ಲಿ ಏನಿದ್ದರೂ ಬಹು ಸಂಖ್ಯಾತರ (ಖಾಸಗಿಯವರ) ಹತೋಟಿ ಸರ್ವೇ ಸಾಮಾನ್ಯ. ಈ ರೀತಿಯ ಪರಿಸ್ಥಿತಿ ಅಡಿಕೆ ಕ್ಷೇತ್ರದಲ್ಲಿ ನೆಲೆಯೂರಿದ್ದು ಇದಿಂದು ತನ್ನ ರುಚಿಗನುಗುಣವಾಗಿ ವರ್ತಿಸುವುದು ಸಹಜ. ಇದಕ್ಕೆ ಪೂರಕವಾದ ಉದಾಹರಣೆಯನ್ನು ಬೆಳೆಗಾರರು ಗಳಿಸುತ್ತಿರುವ ಬೆಲೆ ಮತ್ತು ಬಳಕೆದಾರ ಪ್ರದೇಶಗಳಲ್ಲಿ ಚಲಾವಣೆಯಲ್ಲಿದ್ದ ಬೆಲೆಗಳ ನಡುವಿನ ಅಂತರದಿಂದ ನಾವು ಕಂಡುಕೊಳ್ಳಬಹುದು.

ಪಟ್ಟಿ ೨೪ ಕೊಟ್ಟಿರುವ ಅಂಕಿ-ಅಂಶಗಳು ಇದರ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನಮಗಿಂದು ಕೊಡುತ್ತಿದ್ದು ಇದರಿಂದಾಗಿ ನಾವಿಂದು ತಿಳಿದುಕೊಳ್ಳಬಹುದಾದ ಮುಖ್ಯ ಅಂಶವೆಂದರೆ ಬೆಳೆಗಾರ ಮತ್ತು ಬಳಕೆ ಕೇಂದ್ರಗಳ ನಡುವೆ ಅಧಿಕ ಸಂಖ್ಯೆಯ ಮಧ್ಯವರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂಬುದನ್ನು. ಒಟ್ಟಾರೆಯಾಗಿ ಇಲ್ಲಿ ಹೆಸರಿಸಬಹುದಾದ ಪ್ರಮುಖ ಅಂಶವೆಂದರೆ ಅಡಿಕೆ ಮಾರುಕಟ್ಟೆ ವ್ಯವಸ್ಥೆಯಿಂದು ಬೆಳೆಗಾರರ ಯಾ ಬಳಕೆದಾರರ ಹಿತಕ್ಕನುಗುಣವಾಗಿಲ್ಲ.

ಪಟ್ಟಿ ೨೪
ಚಾಲಿ ಅಡಿಕೆಗೆ ಮಹಾನಗರಗಳ ಮಾರುಕಟ್ಟೆಯಲ್ಲಿ ಧಾರಣೆಯ ಪ್ರವೃತ್ತಿ ೧೯೭೧೨೦೦೧
(ರೂಪಾಯಿ/ಕ್ವಿಂಟಾಲ್‌ ಒಂದರ)

ವರ್ಷ

ಮುಂಬೈ

ದೆಹಲಿ

ಕೋಲ್ಕತ್ತ

೧೯೭೦–೭೧

೮೫೦

೭೧೦

೭೧೦

೭೧–೭೨

೭೮೧

೭೨೫

೬೨೪

೭೨–೭೩

೬೧೩

೫೪೦

೫೦೪

೭೩–೭೪

೬೧೭

೪೭೫

೫೦೨

೭೪–೭೫

೮೭೮

೭೦೧

೭೨೫

೭೫–೭೬

೯೨೯

೮೧೭

೭೭೦

೭೬–೭೭

೧೦೧೦

೯೦೮

೭೭೩

೭೭–೭೮

೧೦೦೦

೯೨೬

೮೦೩

೭೮–೭೯

೧೧೧೮

೧೦೧೫

೮೦೩

೭೯–೮೦

೧೪೮೧

೧೩೪೬

೧೨೫೩

೮೦–೮೧

೧೮೪೬

೧೬೯೦

೧೪೯೧

೮೧–೮೨

೨೦೪೨

೧೯೫೪

೧೬೯೦

೮೨–೮೩

೧೯೩೪

೧೮೩೦

೧೪೮೩

೮೩–೮೪

೨೩೨೦

೧೮೦೬

೧೬೨೨

೮೪–೮೫

೨೬೪೭

೨೪೪೯

೨೦೧೧

೮೫–೮೬

೩೫೯೦

೩೨೭೧

೨೪೫೫

೮೬–೮೭

೩೫೬೨

೨೯೫೯

೨೬೦೫

೮೭–೮೮

೨೬೪೪

೨೧೯೩

೨೧೧೭

೮೮–೮೯

೨೭೫೦

೨೬೩೪

೨೨೧೭

೮೯–೯೦

೨೮೦೨

೩೧೪೭

೨೩೩೨

೯೦–೯೧

೪೫೬೬

೫೨೫೧

೩೮೫೬

೯೧–೯೨

೮೦೨೭

೭೪೫೯

೫೫೧೦

೯೨–೯೩

೭೪೬೯

೭೮೯೯

೬೫೦೦

೯೩–೯೪

೭೦೩೪

೭೦೪೩

೬೨೦೦

೯೪–೯೫

೭೬೫೬

೬೭೭೭

೬೨೪೪

೯೫–೯೬

೮೦೫೧

೬೨೭೦

೭೧೪೦

೯೬–೯೭

೯೪೬೩

೬೨೮೭

೮೦೪೩

೯೭–೯೮

೧೧೦೬೫

೫೭೭೮

೯೦೮೩

೯೮–೯೯

೧೮೩೬೯

೮೧೧೨

೯೯೧೩

೯೯–೨೦೦೦

೧೯೦೩೯

೧೭೩೭೨

೧೭೧೫೧

೨೦೦೦–೦೧

೧೨೯೯೮

೧೩೫೩೬

೧೩೨೫೦

ಮೂಲ: ರತಿನಂ ವರದಿ ೨೦೦೧.

ಪ್ರಕೃತ ಚಾಲಿ ಅಡಿಕೆಯ ಧಾರಣೆಯ ಕುಸಿತ ಮತ್ತು ಈ ಮೊದಲು ಕೆಂಪಡಿಕೆಯ ಧಾರಣೆ ಕುಸಿತ ಈ ಎರಡೂ ಸಂದರ್ಭಗಳಲ್ಲೂ ಈ ಕುಸಿತಗಳಿಗೆ ಹೆಸರಿಸಬಹುದಾದ ಮುಖ್ಯ ಕಾರಣಗಳೆಂದರೆ, ಮಾರುಕಟ್ಟೆಯಲ್ಲಿ ಸೃಷ್ಟಿಯಾದ ಗೊಂದಲ ಯಾ ಮಾಹಿತಿಯ ಅಭಾವ ಮತ್ತು ಖಾಸಗಿ ಹತೋಟಿ.

() ಬೆಳೆಗಾರರು ಮಾರುಕಟ್ಟೆಯ ಬಗ್ಗೆ ಚಿಂತನೆ ಮಾಡದಿರುವುದು : ಬೆಳೆಗಾರರಿಂದು ಅಡಿಕೆಯನ್ನು ಬಳಕೆದಾರ ಪ್ರದೇಶಕ್ಕಾಗಲೀ, ಬಳಕೆದಾರರಿಗಾಗಲೀ ತಲುಪಿಸುವುದು ಅಸಾಧ್ಯ. ಹೀಗಿದ್ದರೂ ಇವರಿಂದು ಅಡಿಕೆ ಕ್ಷೇತ್ರದ ಬಗ್ಗೆ ಅಲ್ಪ ಸ್ವಲ್ಪವಾದರೂ ತಿಳಿವಳಿಕೆಯನ್ನು ಹೊಂದಿರಲೇಬೇಕು. ನಮ್ಮಲ್ಲಿರುವ ಅಧಿಕ ಸಂಖ್ಯೆಯ ಬೆಳೆಗಾರರಿಂದು ಉತ್ಪಾದನಾ ವಿಚಾರದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ್ದರೂ ಮಾರುಕಟ್ಟೆಯ ಬಗ್ಗೆ ಚಿಂತನೆ ನಡೆಸಿರುವುದು ಅತ್ಯಲ್ಪ. ದೇಶದಲ್ಲಿಂದು ಉತ್ಪಾದನೆಯಾಗುತ್ತಿರುವ ವಿವಿಧ ರೀತಿಯ ಅಡಿಕೆಯ ಪ್ರಮಾಣವೆಷ್ಟು, ವಿಸ್ತೀರ್ಣವೆಷ್ಟು ಇದರ ಬಳಕೆ ಪ್ರದೇಶಗಳಾವುವು, ಇದಕ್ಕಿರುವ ಬೇಡಿಕೆಯೇನು, ಬಳಕೆದಾರರ ರುಚಿಯೇನು, ಯಾವ್ಯಾವ ವಿಧದ ಅಡಿಕೆಗೆ ಎಲ್ಲೆಲ್ಲಿ ಯಾವ ರೀತಿಯಲ್ಲಿ ಯಾವ ಸಮಯದಲ್ಲಿ ಎಷ್ಟೆಷ್ಟು ಬೇಡಿಕೆಯಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಅರಿವಿಲ್ಲ. ಮಾರುಕಟ್ಟೆಯಿಂದು ಯಾರೀತಿಯದ್ದಾಗಿದೆ, ತಮ್ಮ ಸಂಸ್ಥೆಗಳಿಂದೇನು ಮಾಡುತ್ತಿವೆ ಇವು ತಿಳಿದಿಲ್ಲ, ಇಲ್ಲಿ ಏನಿದ್ದರೂ ಸ್ಥಳೀಯ ಅಡಿಕೆ ವ್ಯವಹಾರಸ್ಥರದ್ದೇ ಕಾರುಬಾರು, ಅವರ ತಾಳಕ್ಕೆ ತಕ್ಕಂತೆ ಕುಣಿಯುವುದೊಂದೇ ದಾರಿ. ಈ ಸ್ಥಳೀಯ ವ್ಯಾಪಾರಸ್ಥರಿಗೂ ಈ ಎಲ್ಲಾ ವಿಚಾರಗಳ ಅರಿವಿಲ್ಲ, ಅವರಾದರೂ ನಂಬುವುದು ಕೇಂದ್ರೀಯ ಮಾರುಕಟ್ಟೆಯಲ್ಲಿರುವ ಸಗಟು ವ್ಯಾಪಾರಸ್ಥರನ್ನು ಇಲ್ಲವೇ ಬಳಕೆದಾರ ಪ್ರದೇಶದ ಮಾರಾಟ ಪ್ರತಿನಿಧಿಗಳನ್ನು. ಇದೇ ರೀತಿ ಬಳಕೆದಾರ ಪ್ರದೇಶದ ವ್ಯವಹಾರಸ್ಥರಿಗೂ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಇಲ್ಲಿ ಎಲ್ಲವೂ ವದಂತಿಗಳಿಂದಲೇ ವ್ಯವಹಾರ. ಹೀಗಿರುವ ಮಾರುಕಟ್ಟೆ ಮತ್ತು ಉತ್ಪಾದನಾ ವಲಯದಲ್ಲಿ ನಡೆದದ್ದೇ ವ್ಯವಹಾರ. ಇಲ್ಲಿ ಸ್ಥಿರತೆಗಿಂತ ಅಸ್ಥಿರತೆಗೇ ಮೌಲ್ಯ ಅಧಿಕ ಬೆಳೆಗಾರರಿಗೆ ಮಾರುಕಟ್ಟೆ ಬಗ್ಗೆ ಯಾವುದೇ ವ್ಯವಸ್ಥಿತ ಮಾಹಿತಿ ಇಲ್ಲದಿರುವುದರಿಂದ ವ್ಯಾಪಾರಸ್ಥರು ಯಾವುದೇ ಕಾರಣಕೊಟ್ಟು ಧಾರಣೆ ಇಳಿಸಿದರೂ ನಂಬಲೇ ಬೇಕಾದ ಅನಿವಾರ್ಯತೆಯಿಂದು ಈ ಕ್ಷೇತ್ರದಲ್ಲಿ ನೆಲೆಯೂರಿದೆ. ಇದರಿಂದಾಗಿಯೇ ಧಾರಣೆಯಲ್ಲಿ ಏರುಪೇರು ಎಂಡುಬರುತ್ತಿರುವುದು ಎಂದರೆ ತಪ್ಪಾಗಲಾರದು.

() ತೆರಿಗೆ ಪದ್ಧತಿ : ಅಡಿಕೆಯ ಮಾರಾಟದ ಹಂತದಲ್ಲಿ ಅಂದರೆ ಬೆಳೆಗಾರಿನಿಂದ ಬಳಕೆದಾರ ಪ್ರದೇಶಗಳಿಗೆ ಇಲ್ಲವೇ ಬಳಕೆದಾರನಿಗೆ ತಲುಪುವಾಗ ನಾನಾರೀತಿಯ ತೆರಿಗೆಗೆ ಒಳಪಡುತ್ತಿದ್ದು ಇದು ರಾಜ್ಯದಿಂದ ರಾಜ್ಯಕ್ಕೆ ಮತ್ತು ರಾಜ್ಯದೊಳಗೆ ಬೇರೆ ಬೇರೆ ಪ್ರಮಾಣದ್ದಾಗಿದ್ದು (ಪಟ್ಟಿ ೨೫) ಇದರಿಂದಾಗಿ ವ್ಯವಸ್ಥಿತ ರೀತಿಯ ಮಾರಾಟವನ್ನು ಕೈಗೆತ್ತಿಕೊಂಡಿರುವ ಕ್ಯಾಂಪ್ಕೋ ಸಂಸ್ಥೆಗೆ ಇವೊಂದು ನುಂಗಲಾರದ ತುತ್ತಾಗಿ ಹೋಗಿದೆ. ಈ ಎಲ್ಲಾ ತೆರಿಗೆಗಳನ್ನು ತೆತ್ತು ಅಡಿಕೆಯನ್ನು ಬಳಕೆದಾರ ಪ್ರದೇಶಗಳಿಗೆ ತಲುಪಿಸಿದಾಗ ವೆಚ್ಚ ಅಧಿಕಗೊಳ್ಳುವುದು ಒಂದೆಡೆಯಾದರೆ, ಇನ್ನೊಂದೆಡೆಯಲ್ಲಿ ಖಾಸಗಿ ಜಾಲವು ಈ ಎಲ್ಲಾ ತೆರಿಗೆಗಳನ್ನು ತಪ್ಪಿಸಿ ವ್ಯವಹಾರವನ್ನು ನಡೆಸುತ್ತಿದೆ. ಇದರಿಂದಾಗಿ ನಮ್ಮ ಸಹಕಾರಿ ಸಂಸ್ಥೆಗಳಿಗೆ ಪೈಪೋಟಿ ಕೊಡುವುದು ಅಸಾಧ್ಯವಾಗಿದೆ.

ಪಟ್ಟಿ ೨೫
ವಿವಿಧ ರಾಜ್ಯಗಳಲ್ಲಿ ಅಡಿಕೆಯ ಮೇಲೆ ಹೇರಲ್ಪಡುವ ಮಾರಾಟ ತೆರಿಗೆ

ರಾಜ್ಯ ಪ್ರಮಾಣ (ಶೇಕಡಾ)
ಕರ್ನಾಟಕ

ಕೇರಳ

ತಮಿಳುನಾಡು

ಆಂಧ್ರಪ್ರದೇಶ

ಒರಿಸ್ಸಾ

ಪಶ್ಚಿಮ ಬಂಗಾಳ

೧೨

ದೆಹಲಿ

ಮಹಾರಾಷ್ಟ್ರ

೩.೨

ರಾಜಸ್ಥಾನ

೧೦

ಗೋವಾ

ಗುಜರಾತ್‌

೬.೬

ಮಧ್ಯಪ್ರದೇಶ

ಬಿಹಾರ

೧೨

ಉತ್ತರ ಪ್ರದೇಶ

ಅಸ್ಸಾಂ

೮.೮

ವ್ವವಸ್ಥಿತ ರೀತಿಯ ಮಾರಾಟವನ್ನು ಕೈಗೊಳ್ಳುತ್ತಿರುವ ಸಂಸ್ಥೆಗಳಿಂದು ಮಾರಾಟ ತೆರಿಗೆಯೊಂದಿಗೆ, ಒಳಹೊಕ್ಕುವ ತೆರಿಗೆ (ಎಂಟ್ರಿ ಟ್ಯಾಕ್ಸ್‌) ಮಾರ್ಕೆಟ್‌ಸೆಸ್‌, ಮಾರುಕಟ್ಟೆಯ ಸಮಿತಿಯ ದರ ಇತ್ಯಾದಿಗಳನ್ನು ಕೊಡಬೇಕಾಗಿದ್ದು, ಇವೆಲ್ಲಾ ಮಾರಾಟ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸುತ್ತದೆ. ಪರಿಣಾಮವಾಗಿ ಖಾಸಗಿ ಜಾಲದ ಯಾ ಮಧ್ಯವರ್ತಿಗಳ ಸಂಖ್ಯೆ ಅಧಿಕಗೊಂಡು ಅವರುಗಳ ಹತೋಟಿ ಮಾರುಕಟ್ಟೆಯ ಮೇಲೆ ಇಲ್ಲವೇ ಧಾರಣೆಯ ಮೇಲಾಗಿ ಇದರ ಏರಿಳಿಕೆಗೆ ಸಹಾಯವಾಗುತ್ತಿದೆ. ಈ ರೀತಿಯ ತೆರಿಗೆ ಪದ್ಧತಿಯಿಂದ ಸರಕಾರಕ್ಕೆ ಲಭ್ಯವಾಗಬಹುದಾಗಿದ್ದ ಆದಾಯಕ್ಕೆ ಬೀಳುತ್ತಿರುವ ಪೆಟ್ಟು ಒಂದೆಡೆಯದ್ದಾದರೆ, ಇನ್ನೊಂದಡೆಯಲ್ಲಿ ಸಂಸ್ಥೆಗಳ ವ್ಯವಹಾರಕ್ಕೂ ಇದು ಅಡೆತಡೆಗಳನ್ನೊಡ್ಡುತ್ತಿದೆ.

ಅಡಿಕೆಯ ಧಾರಣೆಯ ಏರಿಳಿತಕ್ಕೆ ಇನ್ನಿತರೇ ಕಾರಣಗಳು:

() ಸಂಘಟನೆಯ ಅಭಾವ : ಅಡಿಕೆ ಬೆಳೆಗಾರರದ್ದಾದ ಪ್ರಭಲ ಸಂಘಟನೆಯ ಕೊರತೆಯಿಂದು ಈ ಕ್ಷೇತ್ರದಲ್ಲಿ ಎದ್ದು ಕಾಣುತ್ತಿದ್ದು, ಇದರ ಪರಿಣಾಮವಾಗಿ ಮಾರುಕಟ್ಟೆ ವಲಯವು ತನ್ನ ಪ್ರಾಬಲ್ಯವನ್ನು ಸ್ತಾಪಿಸುವಂತಾಗಿದೆ. ಈ ಕ್ಷೇತ್ರದಲ್ಲೊಂದು ಪ್ರಭಲ ಸಂಘಟನೆಯಿದ್ದಲ್ಲಿ ಮಾರುಕಟ್ಟೆಯ ಅಭಿವೃದ್ಧಿಗೆ ಅದು ಸಹಾಯಾಕಾರಿಯಾಗಬಹುದು. ಬೆಳೆಗಾರರು ಸಮಸ್ಯೆಗಳು ಬಂದಾಗ ಮಾತ್ರ ಹೋರಾಟದ ಪ್ರವೃತ್ತಿಗಿಳಿಯುವುದು ಈ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಪದ್ಧತಿ. ಇದರಿಂದಾಗಿಯೇ ಸಮಸ್ಯೆಗಳ ಮಹಾಪೂರ ಇಲ್ಲಿಂದು ಆಗುತ್ತಿರುವುದು ಎಂದರೆ ತಪ್ಪಾಗಲಾರದು.

() ಅಡಿಕೆಯ ಬದಲಿ ಬಳಕೆ ಬಗ್ಗೆ ಆಸಕ್ತಿಯ ಕೊರತೆ : ಅಡಿಕೆಯನ್ನಿಂದು ಮುಖ್ಯವಾಗಿ ಉಪಯೋಗಿಸುತ್ತಿರುವುದು ತಿಂದುಗುಳಲು ಮಾತ್ರ. ಅಡಿಕೆಯಲ್ಲಿ ಹಲವು ರೀತಿಯ ಔಷಧೀಯ ಗುಣಗಳಿವೆಯೆಂಬುದು ಈ ಮೊದಲೇ ತಿಳಿದಿದ್ದರೂ ಈ ಬಗ್ಗೆ ಕೈಗೊಂಡ ಕ್ರಮಗಳು ಅತ್ಯಲ್ಪ. ಇದರೊಂದಿಗೆ ಅಡಿಕೆಯನ್ನಿಂದು ಕೇವಲ ಮೂಲ ಉತ್ಪನ್ನದ ರೂಪದಲ್ಲಿ ಮಾರಟ ಮಾಡುವ ಪದ್ಧತಿ ನಮ್ಮಲ್ಲಿದೆಯೇ ಹೊರತು ಬದಲಾಗುತ್ತಿರುವ ಮಾರುಕಟ್ಟೆ ಇಲ್ಲವೇ ಗ್ರಾಹಕರ ರುಚಿಗನುಗುಣವಾಗಿ ಉತ್ಪಾದನಾ ಕೇಂದ್ರಗಳಲ್ಲೇ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಿನ್ನೂ ಆಗಿಲ್ಲ. ಆದ್ದರಿಂದ ಅಡಿಕೆಯನ್ನಿಂದು ಹೆಚ್ಚಾಗಿ ಬಳಸುತ್ತಿರುವ ಪ್ರದೇಶಗಳ ಉದ್ದಿಮೆದಾರರು ಈ ರೀತಿಯ ಉತ್ಪನ್ನಗಳ ತಯಾರಿಕೆಗೆ ಕೈಹಾಕಿ ಬಳಕೆದಾರ ಯಾ ಗ್ರಾಹಕರಿಂದು ಕೊಡುತ್ತಿರುವ ಹಣದ ಬಹುಪಾಲನ್ನು ಗಳಿಸುತ್ತಿರುವುದು. ಅಡಿಕೆ ಕ್ಷೇತ್ರದ ಇತಿಹಾಸವನ್ನೇ ನೋಡಿದರೆ ಇಲ್ಲಿ ಬದಲಿ ಬಳಕೆಯ ಬಗ್ಗೆ ಚಿಂತನೆಗಳು ಆರಂಭವಾಗುವುದು ಕೇವಲ ಧಾರಣೆ ಕುಸಿದಾಗ ಮಾತ್ರ ಈ ಮೊದಲು ಧಾರಣೆಯ ಏರಿಳಿತ ಹೆಚ್ಚು ಕಡಿಮೆ ಅಲ್ಪಕಾಲದ್ದಾದ್ದರಿಂದ ಈ ಚಿಂತನೆ ಧಾರಣೆಯ ಏರು ಪ್ರವೃತ್ತಿ ಕಂಡಾಗ ಕೊನೆಗೊಳ್ಳತ್ತಿರುವುದು ಸರ್ವೇ ಸಾಮಾನ್ಯ. ಈ ನಿಟ್ಟಿನಲ್ಲಿ ಬದಲಿ ಬಳಕೆಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳನ್ನು ಕೈಗೊಳ್ಳಲು ಕ್ಯಾಂಪ್ಕೋ ಇತ್ತೀಚೆಗೆ ಸ್ಥಾಪಿಸಿದ ಪೀಠವೊಂದನ್ನು ಬಿಟ್ಟರೆ ಇನ್ಯಾವುದೇ ವ್ಯವಸ್ಥೆಯಿಲ್ಲ. ಇದರರ್ಥ ಉತ್ಪಾದನಾ ವಲಯವು ಅಡಿಕೆಯ ಬದಲಿ ಬಳಕೆ ಹೆಚ್ಚಿನ ಆಸಕ್ತಿ ತೋರದೆ ಕೇವಲ ಮೂಲ ಉತ್ಪನ್ನದ ಮಾರಾಟದ ಬಗ್ಗೆ ಚಿಂತನೆ ಮಾಡುತ್ತಿರುವುದರಿಂದ ಬಳಕೆದಾರ ಪ್ರದೇಶದ ಅಡಿಕೆ ವ್ಯವಹಾರಸ್ಥರಿಗೆ ಇದೊಂದು ವರದಾನವಾಗಿ ಧಾರಣೆಯ ಏರಿಳಿತಕ್ಕೆ ಅವಕಾಶ ಸೃಷ್ಟಿಸುತ್ತಿದೆ.

() ಪೂರಕ ವ್ಯವಸ್ಥೆಗಳ ಕೊರತೆ: ಅಡಿಕೆಯಿಂದು ಉತ್ಪಾದಕನಿಂದ ಮಾರುಕಟ್ಟೆಗೆ ಚಲಿಸಬೇಕಿದ್ದಲ್ಲಿ ಸಾರಿಗೆ, ಸಂಪರ್ಕ, ಧಾರಣೆಯ ಬಗ್ಗೆ ತಿಳುವಳಿಕೆ, ಬೇಡಿಕೆಯ ಮತ್ತು ಪೂರೈಕೆಯಾಗಬೇಕಿರುವ ಪ್ರಮಾಣ ಈ ಎಲ್ಲಾ ಮಾಹಿತಿಗಳ ಅರಿವು ಮತ್ತು ವ್ಯವಸ್ಥೆಗಳು ಬೆಳೆಗಾರನಿಗಿರಬೇಕು. ಆದರೆ ಈ ಎಲ್ಲಾ ವ್ಯವಸ್ಥೆಗಳ ಕೊರತೆಯಿಂದು ಮಧ್ಯವರ್ತಿಗಳ ಏರಿಕೆಗೆ ಸಹಾಯವಾಗಿ ಅವರ ತಾಳಕ್ಕೆ ತಕ್ಕಂತೆ ಬೆಳೆಗಾರನಿಂದು ಕುಣಿಯಬೇಕಾದ ಪ್ರಸಂಗವೊದಗಿ ಬಂದಿದೆ.

() ಶೇಖರಣಾ ವ್ಯವಸ್ಥೆಯ ಕೊರತೆ: ಮಾರುಕಟ್ಟೆಗೆ ಅಡಿಕೆಯ ಪೂರೈಕೆ ಒಮ್ಮಿಂದೊಮ್ಮೆಗೆ ಹೆಚ್ಚಾಗುತ್ತಾ ಹೋದಲ್ಲಿ ಧಾರಣೆ ಇಳಿಕೆಯಾಗುವುದು ಸ್ವಾಭಾವಿಕ. ಈ ರೀತಿಯ ಪೂರೈಕೆಯನ್ನು ಹತೋಟಿಯಲ್ಲಿಡಬೇಕಿದ್ದಲ್ಲಿ ಬೆಳೆಗಾರನಿಗೆ ಯೋಗ್ಯ ರೀತಿಯ ಶೇಖರಣಾ ವ್ಯವಸ್ಥೆಯಿರಬೇಕು. ಆದರೆ ಈ ಕ್ಷೇತ್ರದಲ್ಲಿಂದು ಇರುವ ಕೃಷಿಕರಲ್ಲಿ ಬಹುಪಾಲು ಸಣ್ಣ ಹಾಗೂ ಮಧ್ಯಮ ವರ್ಗದವರಾಗಿದ್ದು, ಇವರಿಗೆ ಈ ರೀತಿಯ ವ್ಯವಸ್ಥೆಯನ್ನು ಹೊಂದಲು ಆರ್ಥಿಕ ಶಕ್ತಿಯಿಲ್ಲದೆ ಇರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ ಒಮ್ಮಿಂದೊಮ್ಮೆಗೆ ಆಗಿ ಧಾರಣೆಯ ಏರಿಳಿತಕ್ಕೆ ದಾರಿಯಾಗುತ್ತದೆ.

() ಮಾರಾಟ ವ್ಯವಸ್ಥೆಯ ಅಭಿವೃದ್ಧಿಗೆ ಅಗತ್ಯವುರುವ ಶಿಕ್ಷಣ ತರಬೇತು ಮತ್ತು ಮಾಹಿತಿಯ ಅಭಾವ: ಅಡಿಕೆ ಬೆಳೆಗಾರರಿಗಿಂದು ಅಡಿಕೆಯನ್ನು ಮಾರಾಟ ಮಾಡುವಲ್ಲಿ ಅದರ ವರ್ಗೀಕರಣ ಯಾ ವಿಂಗಡನೆ, ಶುಚಿಗೊಳಿಸುವಿಕೆ ಇತ್ಯಾದಿಗಳ ಬಗ್ಗೆ ಅಗತ್ಯ ತರಬೇತಿಲ್ಲದೆ, ತಮಗೆ ದೊರಕಬಹುದಾಗಿದ್ದ ಯೋಗ್ಯ ಧಾರಣೆಯಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಶಿಕ್ಷಣ, ತರಬೇತು ಮತ್ತು ಮಾಹಿತಿಯನ್ನೊದಗಿಸಲು ನಮ್ಮಲ್ಲಿ ಯಾವುದೇ ವ್ಯವಸ್ಥೆಯಿಲ್ಲ.

() ರಫ್ತನ್ನು ಹೆಚ್ಚಿಸಲು ವಿಫಲವಾಗಿರುವುದು: ಭಾರತದಿಂದ ರಫ್ತಾಗುತ್ತಿರುವ ಅಡಿಕೆಯ ಪ್ರಮಾಣವು ಸದಾ ಏರಿಳಿತಕ್ಕೊಳಗಾಗುತ್ತಿದ್ದು, ಈ ತನಕ ಇದರ ಬಗ್ಗೆ ಹರಿಸಿದ ಗಮನ ಅತ್ಯಲ್ಪ. ವಿದೇಶಿ ಮಾರುಕಟ್ಟೆಗಳಲ್ಲಿಂದು ಈ ಬಗ್ಗೆ ಬೆಳೆಗಾರರ  ವತಿಯಿಂದ ಯಾ ಸಂಸ್ಥೆಗಳಿಂದ ನಡೆದ ಪ್ರಯತ್ನಗಳು ಹೆಚ್ಚು ಕಡಿಮೆ ಶೂನ್ಯ. ಅಡಿಕೆಗೆ ಅಂತರಾಷ್ಟ್ರೀಯ ಸ್ಥಾನಮಾನವಿದ್ದು, ಇದಕ್ಕೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಗ್ರಾಹಕರಿದ್ದು, ಈ ನಿಟ್ಟಿನಲ್ಲಿ ರಫ್ತುನ ಆಭಿವೃದ್ಧಿಯತ್ತ ಹಾಯಿಸಿದ ದೃಷ್ಟಿ ಅತ್ಯಲ್ಪ. ನಮ್ಮಲ್ಲಿ ರಫ್ತುನ ಬಗ್ಗೆ ಚಿಂತನೆಗಳು ನಡೆಯುವುದು ಕೇವಲ ಧಾರಣೆ ಕುಸಿದಾಗ ಮಾತ್ರ.

(೭) ಮಾರುಕಟ್ಟೆಯ ಅಭಿವೃದ್ಧಿಗಾಗಿ ಪ್ರತೇಕ ಸಂಸ್ಥೆಯ ಅಭಾವ: ಯಾವುದೇ ಉತ್ಪನ್ನದ ಮಾರುಕಟ್ಟೆಯ ಅಭಿವೃದ್ಧಿಗೆ ಸತತವಾದ ಸಂಶೋಧನೆ ಮತ್ತು ಅಧ್ಯಯನಗಳು ಅತ್ಯಗತ್ಯ. ಮಾರುಕಟ್ಟೆಯ ವಾತಾವರಣ, ದಿಕ್ಕು, ರುಚಿ ಕಾಲಕಾಲಕ್ಕೆ ಬದಲಾಗುವುದು ಸ್ವಾಭಾವಿಕ. ಇದಕ್ಕನುಗುಣವಾದ ಬದಲಾವಣೆ ಉತ್ಪಾದನಾ ವಲಯದ ಮತ್ತು ಮಾರುಕಟ್ಟೆಗಳಲ್ಲಾದರೆ ಧಾರಣೆಯು ಸ್ಥಿರವಾಗಿರಬಲ್ಲದು. ಆದರೆ ಅಡಿಕೆ ಕ್ಷೇತ್ರದಲ್ಲಿಂದು ಈ ರೀತಿಯ ವ್ಯವಸ್ಥೆಯಿಲ್ಲ. ಇಲ್ಲಿ ಏನಿದ್ದರೂ ಉತ್ಪಾದನಾ ವಲಯದ ಅಭಿವೃದ್ಧಿಗೆ ವ್ಯವಸ್ಥೆಯಿರುವುದು ಮಾತ್ರ. ಉತ್ಪಾದನಾ ವಲಯ ಕೇವಲ ಉತ್ಪಾದನೆಯ ಬಗ್ಗೆ ಚಿಂತನೆ ಮಾಡಿದಲ್ಲಿ ಇದೊಂದು ಅಪರಿಪೂರ್ಣ ವ್ಯವಸ್ಥೆ.