ಅಡಿಕೆಯ ಧಾರಣೆಯ ವರ್ತನೆ

ಪ್ರತಿಯೊಬ್ಬ ಕೃಷಿಕನಿಗೂ ತಾನು ಉತ್ಪಾದಿಸಿದ ಉತ್ಪನ್ನಕ್ಕೆ ಯಾವ ಧಾರಣೆ ದೊರಕುತ್ತದೆ ಎಂಬುದೊಂದು ಕುತೂಹಲ. ಸಿಗಬಹುದಾದ ಧಾರಣೆ ಏರು ಪ್ರವೃತ್ತಿಯದ್ದಾದಲ್ಲಿ ಆತನ ಕೃಷಿ ಚಟುವಟಿಕೆಗಳು ಇನ್ನಷ್ಟು ಅಭಿವೃದ್ಧಿಗೊಂಡು ದೇಶದ ಉನ್ನತಿಗಾಗಿ ಆತ ಶ್ರಮಿಸಬಹುದು. ಇನ್ನೊಂದೆಡೆಯಲ್ಲಿ ಅದು ವಿರುದ್ಧ ದಿಕ್ಕಿಗೆ ಯಾ ಸದಾ ಏರುಪೇರಾಗುತ್ತಿದ್ದಲ್ಲಿ ಆತ ದಿಕ್ಕೆಟ್ಟುಹೋಗಬಹುದು. ಭಾರತದಲ್ಲಿ ಕೃಷಿಕರೆಂದು ಉದ್ದಾರವಾದದ್ದಿಲ್ಲ. ಇದಕ್ಕೆ ಕಾರಣಗಳು ಹಲವು. ಉದಾಹರಣೆಗೆ ಅತಿವೃಷ್ಟಿ, ಅನಾವೃಷ್ಟಿ, ವಿವಿಧ ರೀತಿಯ ರೋಗಗಳು, ಕೀಟಗಳ ಹಾವಳಿ ಇತ್ಯಾದಿಗಳಿಂದಾಗಿ ಬೇಳೆಯಲ್ಲಾಗುವ ಏರು ಪೇರು, ಇದರೊಂದಿಗೆ ಮೂಲಭೂತ ಸೌಕರ್ಯಗಳ ಅಭಾವ ಮತ್ತು ಯೋಗ್ಯ ಮಾರುಕಟ್ಟೆ ಕೊರತೆ, ಮಧ್ಯವರ್ತಿಗಳ ಹಾವಳಿ, ಧಾರಣೆಯಲ್ಲಿ ಏರಿಳಿತ ಇತ್ಯಾದಿಗಳು. ಯಾವುದೇ ಉತ್ಪನ್ನದ ಧಾರಣೆಯನ್ನು ನಿರ್ಧರಿಸುವಲ್ಲಿ ಪೂರೈಕೆ, ಬೇಡಿಕೆಗಳು ಮತ್ತು ಲಭ್ಯತೆಯೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಎಲ್ಲಾ ವಿಚಾರಗಳು ಅಡಿಕೆಯ ಧಾರಣೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನಿಂದುವಹಿಸುತ್ತದೆ.

ಅಡಿಕೆ ಕ್ಷೇತ್ರದ ಇತಿಹಾಸವನ್ನು ನೋಡಿದಾಗ ಅಡಿಕೆಯ ಧಾರಣೆಯು ಸದಾ ಎರುಪೇರಾಗುತ್ತಾ ಬಂದಿದ್ದು, ಇದರಿಂದಾಗಿ ಬೇಳೆಗಾರರು ಯಾವತ್ತೂ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿಲ್ಲ. ಕೆಲವೊಮ್ಮೆ ಏರು ಪ್ರವೃತ್ತಿಯನ್ನು, ತಕ್ಷಣ ಇಳಿಕೆಯನ್ನು, ಕೆಲಕಾಲ ಸ್ಥಿರತೆಯನ್ನೂ ತೋರಿಸುತ್ತಿರುವ ಅಡಿಕೆ ಧಾರಣೆ ಈ ಕ್ಷೇತ್ರಕ್ಕೊಂದು ದೊಡ್ಡ ಸವಾಲಾಗಿ ಹೋಗಿದೆ. ಕಳೆದ ಶತಮಾನದಿಂದೀಚೆಗೆ ಅಡಿಕೆ ಧಾರಣೆಯು ಸಾಧಾರಣವಾಗಿ ಮೂವತ್ತು ವರ್ಷಗಳಿಗೊಮ್ಮೆ ಅಗಾಧ ಪ್ರಮಾಣದ ಕುಸಿತಕ್ಕೊಳಗಾಗುತ್ತಿದ್ದು, ಇಲ್ಲಿ ಇದರ ಕಾಲ ದೀರ್ಘವಾಗಿದ್ದು, ಹತ್ತು ವರ್ಷಗಳಿಗೊಮ್ಮೆ ಸಾಧಾರಣ ಮಟ್ಟದ ಕುಸಿತವನ್ನೆದರಿಸಿದ್ದು, ವರ್ಷಕ್ಕೊಮ್ಮೆ ಯಾ ಎರಡು ವರ್ಷಕ್ಕೊಮ್ಮೆ ತಾತ್ಕಾಲಿಕ ಕುಸಿತವನ್ನೂ ಸೂಚಿಸಿದೆ. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲೊಮ್ಮೆ. ೧೯೭೦ರ ದಶಕದ ಆರಂಭದಲ್ಲೊಮ್ಮೆ ಮತ್ತು ೨೦೦೦ದಲ್ಲೊಮ್ಮೆ ಈ ದಾರಣೆಯು ತೀರಾ ಕೆಳಕ್ಕಿಳಿದು ಅಡಿಕೆ ಕ್ಷೇತ್ರದ ಅಸ್ಥಿತ್ವವನ್ನು ಪ್ರಶ್ನಿಸಿದೆ. ಇವುಗಳ ಪೈಕಿ ೨೦೦ದ ಬಳಿಕ ಕಂಡು ಬರುತ್ತಿರುವ ಧಾರಣೆಯ ಕುಸಿತ ಮತ್ತು ನಿರಂತರ ಏರುಪೇರು ಪ್ರಬಲವಾದ ಹೊಡೆತವನ್ನು ಈ ಕ್ಷೇತ್ರಕ್ಕೆ ಕೊಟ್ಟು ಬೆಳೆಗಾರ ಸಮೂಹ ಕಂಗಾಲಾಗುವಂತೆ ಮಾಡಿದೆ. ಈ ರೀತಿಯ ಹೊಡೆತಗಳು ಹೆಚ್ಚಾಗಿ ಚಾಲಿ ಅಡಿಕೆಯತ್ತ ಬಂದಿದ್ದರೂ ಕೆಂಪಡಿಕೆಯೂ ಇದಕ್ಕೆ ಹೊರತಾಗಿಲ್ಲ. ಸ್ವಾತಂತ್ರ್ಯ ದೊರೆತ ಸಮಯ, ಎಪ್ಪತ್ತರ ದಶಕ ಮತ್ತು ೨೦೦೦ದಲ್ಲಾದ ಧಾರಣೆಯ ಇಳಿಕೆಗೆ ಮಾರುಕಟ್ಟೆ ವಲಯ ಸೂಚಿಸಿದ ಮುಖ್ಯ ಕಾರಣ ಅಡಿಕೆಯ ಆಮದೇ ಆಗಿದ್ದು, ಆದರೆ ಈ ಎಲ್ಲಾ ಸಂದರ್ಭದಲ್ಲೂ ಆಮದು ಧಾರಣೆಯ ಕುಸಿತಕ್ಕೆ ಕಾರಣವಾಗಿಲ್ಲ ಎಂಬ ವಿಚಾರವನ್ನು ಸರಕಾರದ ಅಂಕಿ-ಅಂಶಗಳು ರುಜುವಾತು ಮಾಡಿಕೊಟ್ಟುವು. ಹೀಗಿದ್ದರೂ ಅಡಿಕೆ ಧಾರಣೆಯಿಂದು ಯಾಕಾಗಿ ಏರುಪೇರಾಗುತ್ತಿದೆ. ಎಂಬುದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಅದೇನಿದ್ದರೂ ತನ್ನಿಂದ ತಾನಾಗಿ ಬದಲಾಗುತ್ತಿದೆ. ಒಟ್ಟಾರೆಯಾಗಿ ಅಡಿಕೆ ಧಾರಣೆಯು ಸದಾ ಏರಿಳಿತವನ್ನು ತೋರಿಸುತ್ತದೆ ಎಂಬುದಂತು ಸತ್ಯ. ಈ ನಿಟ್ಟಿನಲ್ಲಿ ಚಾಲಿ ಅಡಿಕೆಯ ಧಾರಣೆಯು ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಕಳೆದ ೩೦ ವರ್ಷಗಳಲ್ಲಿ ಯಾವ ರೀತಿಯದ್ದಾಗಿತ್ತು ಎಂಬುದನ್ನು ಪಟ್ಟಿ ೧೭ರ ಮೂಲಕ ತಿಳಿದುಕೊಳ್ಳಬಹುದು.

ಪಟ್ಟಿ ೧೭
ದೇಶದಲ್ಲಿ ಚಾಲಿ ಅಡಿಕೆ ಬೆಳೆಯುವ ರಾಜ್ಯಗಳಲ್ಲಿರುವ ಮುಖ್ಯ ಮಾರುಕಟ್ಟೆಗಳಲ್ಲಿನ ವಾರ್ಷಿಕ ಸರಾಸರಿ ಅಡಿಕೆ ಧಾಋಣೆ (ಕ್ವಿಂಟಾಲೊಂದರ ರೂಪಾಯಿಗಳಲ್ಲಿ)

ವರ್ಷ

ಮಂಗಳೂರು

ಕೋಜ್ಹಿಕೋಡ್‌

ಗೌಹಾತಿ

೧೯೭೦–೭೧

೬೬೪

೫೦೯

೬೦೬

೭೧–೭೨

೫೬೦

೩೭೯

೪೭೮

೭೨–೭೩

೪೧೪

೨೫೫

೪೨೭

೭೩–೭೪

೪೭೯

೨೯೩

೪೩೦

೭೪–೭೫

೬೯೨

೪೨೨

೫೬೪

೭೫–೭೬

೬೯೯

೪೩೯

೬೨೩

೭೬–೭೭

೭೫೫

೪೯೮

೬೦೧

೭೭–೭೮

೭೦೧

೪೩೧

೬೫೩

೭೮–೭೯

೮೫೧

೫೩೨

೮೯೨

೭೯–೮೦

೧೧೦೩

೮೫೯

೧೧೨೫

೮೦–೮೧

೧೩೮೪

೧೧೫೮

೧೪೩೮

೮೧–೮೨

೧೫೦೦

೧೨೦೭

೧೩೩೩

೮೨–೮೩

೧೩೦೫

೧೦೪೦

೧೦೮೯

೮೪–೮೫

೧೮೬೪

೧೬೦೦

೧೯೩೯

೮೫–೮೬

೨೫೩೯

೨೩೬೩

೨೫೪೭

೮೬–೮೭

೨೦೯೨

೧೮೮೮

೧೬೩೨

೮೭–೮೮

೧೬೦೪

೧೨೯೨

೧೨೨೭

೮೮–೮೯

೨೦೮೦

೧೬೫೨

೧೭೨೨

೮೯–೯೦

೨೫೬೪

೨೦೭೫

೧೯೯೫

೯೦–೯೧

೪೦೨೪

೩೩೯೧

೩೨೯೫

೯೧–೯೨

೫೮೧೬

೪೫೯೨

೫೩೪೪

೯೨–೯೩

೫೫೩೨

೫೨೭೧

೫೧೫೧

೯೩–೯೪

೪೮೭೧

೪೫೮೫

೫೧೫೦

೯೪–೯೫

೫೯೩೧

೪೯೭೨

೫೧೬೭

೯೫–೯೬

೬೧೨೩

೪೮೮೩

೪೯೬೮

೯೬–೯೭

೬೫೦೫

೬೧೧೬

೬೩೧೦

೯೭–೯೮

೭೦೦೫

೬೪೬೮

೫೯೩೩

೯೮–೯೯

೯೦೫೨

೮೧೧೬

೭೯೩೫

೯೯–೨೦೦೦

೧೩೧೮೧

೧೧೬೨೬

೧೨೯೧೩

೨೦೦೦–೦೧

೭೮೮೬

೬೮೮೯

೭೮೪೧

ಮೂಲ: ರತಿನಂ ವರದಿ ೨೦೦೧

ಕಳೆದ ಕೆಲವು ವರ್ಷಗಳಿಂದ ಕಂಡು ಬಂದ ಚಾಲಿ ಅಡಿಕೆ ಧಾರಣೆಯ ಪ್ರವೃತ್ತಿಯನ್ನು ಮಂಗಳೂರು ಮತ್ತು ಕೋಜ್ಹಿಕೋಡ್ ಮಾರುಕಟ್ಟೆಗಳಲ್ಲಿ ನೋಡಿದಾಗ ಅದು ಸಾಮಾನ್ಯವಾಗಿ ಜುಲೈ ತಿಂಗಳಿಂದ ಮಾರ್ಚ್‌ತನಕ ಏರುತ್ತಾ ಹೋಗಿ ಆ ಬಳಿಕ ಇಳಿಮುಖವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಪೂರೈಕೆಯಲ್ಲಾಗುತ್ತಿರುವ ಏರಿಳಿತ. ಹೀಗಿದ್ದರೂ ಈ ಪ್ರವೃತ್ತಿಗೆ ಕೆಲವೊಂದು ವರ್ಷಗಳಲ್ಲಿ ಅಪವಾದ ಕಂಡು ಬಂದಿದೆ. ಇನ್ನೊಂದೆಡೆಯಲ್ಲಿ ಚಾಲಿ ಅಡಿಕೆಯನ್ನು ಉತ್ಪಾದಿಸುತ್ತಿರುವ ಅಸ್ಸಾಂನ ಗೌಹಾತಿ ಮಾರುಕಟ್ಟೆಯಲ್ಲಿ ಕೆಲವೊಂದು ವರ್ಷಗಳ ಎಲ್ಲಾ ತಿಂಗಳಲ್ಲೂ ಧಾರಣೆಯು ಹೆಚ್ಚು ಕಡಿಮೆ ಸ್ಥಿರವಾಗಿಯೇ ಕಂಡು ಬರುತ್ತಿದ್ದು, ಇಲ್ಲಿ ಪೂರೈಕೆಯ ಪ್ರಮಾಣ ಹೆಚ್ಚು ಕಡಿಮೆ ಸ್ಥಿರವಾಗಿದ್ದಿರಬೇಕು. (ಪಟ್ಟಿ ೧೮, ೧೯, ಮತ್ತು ೨೦) ಇದರಿಂದಾಗಿ ನಾವಿಲ್ಲಿ ಹೆಸರಿಸಬಹುದಾದ ಮುಖ್ಯ ವಿಚಾರವೆಂದರೆ ಪೂರೈಕೆಯ ಪ್ರಮಾಣ ಹತೊಟಿಯಲ್ಲಿದ್ದಷ್ಟು ಬೆಲೆಯಲ್ಲಿ ಸ್ಥಿರತೆಯನ್ನು ಕಂಡು ಕೊಳ್ಳಬಹುದೆಂಬುದನ್ನು.

ಪಟ್ಟಿ ೧೮
ಮಂಗಳೂರು ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯ ಧಾರಣೆ (ಸರಾಸರಿ ತಿಂಗಳೊಂದರ)
(ಧಾರಣೆ ರೂ. ಕ್ವಿಂಟಾಲೊಂದರ)

ತಿಂಗಳು

೧೯೯೪-೯೫

೧೯೯೫-೯೬

೧೯೯೬-೯೭

೧೯೯೭-೯೮

೧೯೯೮-೯೯

೧೯೯೯-೨೦೦೦

೨೦೦೦-೦೧

ಏಪ್ರಿಲ್

೫೬೦೦

೬೨೫

೬೧೬೯

೬೬೪೮

೭೨೭೪

೧೪೭೩೪

೧೦೬೬೫

ಮೇ

೫೫೦೪

೬೬೦೮

೬೨೬೭

೬೮೬೬

೭೫೬೭

೧೪೨೦೩

೧೦೧೨೬

ಜೂನ್

೫೮೭೪

೬೬೧೭

೬೨೮೧

೬೯೧೮

೭೬೯೩

೧೩೮೧೯

೯೩೦೮

ಜುಲೈ

೬೪೨೪

೬೬೦೦

೬೧೫೩

೭೦೧೦

೮೫೧೨

೧೪೦೯೪

೧೦೨೪೦

ಅಗೋಸ್ತು

೬೬೫೬

೬೫೧೨

೬೭೪೫

೭೦೨೪

೧೦೧೦೮

೧೫೨೭೭

೯೧೪೪

ಸೆಪ್ಟಂಬರ್

೬೫೮೬

೬೫೫೩

೬೮೩೪

೭೬೬೫

೯೪೬೮

೧೫೬೦೭

೮೩೦೮

ಅಕ್ಟೋಬರ್

೬೪೭೬

೬೪೮೬

೭೧೧೪

೭೮೪೮

೯೨೫೭

೧೫೪೯೫

೭೦೭೩

ನವಂಬರ್

೫೧೭೭

೪೮೯೯

೬೧೨೪

೬೯೯೪

೭೭೪೦

೧೧೪೩೫

೭೯೩೯

ದಶಂಬರ್

೫೨೦೦

೪೯೧೮

೬೦೬೦

೬೫೫೦

೭೬೧೭

೧೦೦೫೬

೫೩೬೭

ಜನವರಿ

೫೬೩೭

೫೫೧೦

೬೮೭೦

೬೬೪೧

೮೬೨೮

೧೧೪೭೫

೫೬೮೩

ಫೆಬ್ರವರಿ

೫೭೪೨

೫೯೫೩

೬೭೩೮

೬೬೩೫

೧೦೫೪೪

೧೧೩೯೯

೫೪೩೦

ಮಾರ್ಚ್

೬೨೯೨

೬೦೯೩

೬೭೦೪

೭೨೬೬

೧೪೨೧೭

೧೦೫೭೫

೫೩೫೦

ಸರಾಸರಿ

೫೯೩೧

೬೧೨೩

೬೫೦೫

೭೦೦೫

೯೦೫೨

೧೩೧೮೧

೭೮೮೬

ಮೂಲ: ರತಿನಂ ವರದಿ ೨೦೦೧.

ಪಟ್ಟಿ ೧೯
ಕೋಜ್ಹಿಕೋಡ್ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯ ಧಾರಣೆ (ಸರಾಸರಿ ತಿಂಗಳೊಂದರ)

ತಿಂಗಳು

೧೯೯೪-೯೫

೧೯೯೫-೯೬

೧೯೯೬-೯೭

೧೯೯೭-೯೮

೧೯೯೮-೯೯

೧೯೯೯-೨೦೦೦

೨೦೦೦-೦೧

ಎಪ್ರಿಲ್

೪೮೫೦

೬೧೬೭

೫೬೭೫

೬೩೦೦

೬೧೫೦

೧೨೧೭೫

೯೦೭೫

ಮೇ

೪೮೦೦

೬೦೭೫

೫೭೬೦

೬೪೬೦

೬೧೫೦

೧೨೧೨೫

೮೩೫೦

ಜೂನ್

೫೧೭೫

೬೦೪೦

೫೮೦೦

೬೫೫೦

೬೪೭೫

೧೧೮೫೦

೭೨೫೦

ಜುಲೈ

೫೫೮೦

೫೯೦೦

೫೭೫೦

೬೪೭೫

೭೧೬೦

೧೨೩೮೦

೮೨೦೦

ಅಗೋಸ್ಟು

೫೬೭೫

೪೬೨೫

೬೦೦೦

೬೫೭೦

೭೪೭೫

೧೩೨೭೫

೭೦೭೫

ಸಪ್ಟಂಬರ್

೫೭೪೦

೩೨೬೮

೬೨೦೦

೬೬೦೦

೭೭೩೩

೧೨೯೫೦

೬೦೬೦

ಅಕ್ಬೋಬರ್

೪೩೭೫

೩೧೨೫

೬೫೦೦

೬೯೮೦

೮೩೩೩

೧೩೭೬೦

೪೯೦೦

ನವಂಬರ್

೩೭೬೭

೩೩೨೫

೬೫೮೦

೭೪೫೦

೯೨೨೫

೧೩೭೫೦

೫೧೭೫

ದಶಂಬರ್

೩೭೨೫

೪೧೬೦

೬೭೦೦

೭೩೩೩

೮೪೨೫

೧೦೧೦೦

೫೯೨೦

ಜನವರಿ

೫೦೦೦

೪೮೭೫

೬೨೨೫

೫೫೦೦

೮೯೪೦

೯೧೭೭

೫೦೦೦

ಫೆಬ್ರವರಿ

೫೧೦೦

೫೪೦೦

೬೧೦೦

೫೪೨೫

೯೧೨೫

೯೧೨೫

೪೬೨೫

ಮಾರ್ಚ್

೫೮೮೦

೫೬೨೦

೬೧೦೦

೫೯೭೫

೧೨೨೦೦

೮೮೪೦

ಲಭ್ಯವಿಲ್ಲ.

ಸರಾಸರಿ

೪೯೭೨

೪೮೮೩

೬೧೧೬

೬೪೬೮

೮೧೧೬

೧೧೬೨೬

೬೫೧೨

ಮೂಲ: ರತಿನಂ ವರದಿ ೨೦೦೧

ಪಟ್ಟಿ ೨೦
ಕೋಜ್ಹಿಕೋಡ್ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯ ಧಾರಣೆ (ಸರಾಸರಿ ತಿಂಗಳೊಂದರ)
ಧಾರಣೆ (ರೂ. ಕ್ವಿಂಟಾಲೊಂದರ)

ತಿಂಗಳು

೧೯೯೪–೯೫

೧೯೯೫–೯೬

೧೯೯೬–೯೭

೧೯೯೭–೯೮

೧೯೯೮–೯೯

೧೯೯೯–೦೦

೨೦೦೦–೦೧

ಎಪ್ರಿಲ್

೪೪೭೯

೫೦೦೦

೬೦೦೦

೬೫೦೦

೬೦೦೦

೧೦೦೨೫

೧೧೦೦೦

ಮೇ

೪೪೩೮

೪೮೭೫

೬೧೦೦

೬೫೦೦

೬೫೦೦

೧೦೦೦೦

೯೩೩೩

ಜೂನ್

೫೨೫೦

೪೯೯೦

೬೦೦೦

೬೫೦೦

೬೭೫೦

೧೨೬೨೫

೭೫೦೦

ಜುಲೈ

೫೩೬೦

೪೮೭೫

೬೦೦೦

೬೫೦೦

೭೪೦೦

೧೩೪೦೦

೮೩೭೫

ಅಗೋಸ್ಟು

೫೫೦೭

೫೧೨೫

೬೧೨೫

೬೪೫೦

೭೮೭೫

೧೩೦೦೦

೯೧೬೭

ಸಪ್ಟಂಬರ್

೫೫೯೦

೪೨೫೦

೬೫೦೦

೫೦೦೦

೫೭೫೦

೧೩೮೭೫

೭೩೦೦

ಅಕ್ಟೋಬರ್

೫೨೫೦

೪೨೫೦

೬೫೦೦

೫೦೦೦

೮೧೦೦

೧೫೦೦೦

೯೨೫೦

ನವಂಬರ್

೫೨೫೦

೪೬೯೫

೬೫೦೦

೫೦೦೦

೮೯೦೦

೧೫೦೦೦

೬೦೦೦

ದಶಂಬರ್

೫೨೫೦

೫೦೫೦

೬೫೦೦

೫೦೦೦

೯೫೦೦

೧೩೬೨೫

೬೫೦೦

ಜನವರಿ

೫೨೫೦

೪೭೫೦

೬೫೦೦

೫೭೫೦

೮೯೦೦

೧೩೦೦೦

೬೧೬೭

ಫೆಬ್ರವರಿ

೫೩೭೫

೫೮೫೦

೬೫೦೦

೬೫೦೦

೯೫೧೩

೧೩೦೦೦

೬೫೦೦

ಮಾರ್ಚ್

೫೦೦೦

೫೯೦೦

೬೫೦೦

೬೫೦೦

೧೦೦೨೫

೧೨೪೦೦

೭೦೦೦

ಸರಾಸರಿ

೫೧೬೭

೪೯೬೮

೬೩೧೦

೫೯೩೩

೭೯೩೪

೧೨೯೧೩

೭೮೪೧

ಮೂಲ: ರತಿನಂ ವರದಿ ೨೦೦೧

ಮಂಗಳೂರು ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯ ಧಾರಣೆಯ ಪ್ರವೃತ್ತಿ ೧೯೭೦೨೦೦೦:

ಕಳೆದ ಮೂವತ್ತು ವರ್ಷಗಳಲ್ಲಿ ಚಾಲಿ ಅಡಿಕೆಗೆ ಮಂಗಳೂರು ಮಾರುಕಟ್ಟೆಯಲ್ಲಿದ್ದ ಸರಾಸರಿ ಧಾರಣೆಯ ಬಗ್ಗೆ ಅಂಕಿ-ಅಂಶಗಳನ್ನು ಪಟ್ಟಿ ೨೧ರಲ್ಲಿ ಕೊಡಲಾಗಿದ್ದು, ಇದರ ಪ್ರಕಾರ ಅಡಿಕೆಯ ಧಾರಣೆಯಲ್ಲಿ ಸದಾ ಏರುಪೇರು ಕಂಡು ಬರುತ್ತಿದ್ದರೂ ೧೯೭೨ರ ಒಕ್ಟೋಬರಿನಿಂದ ಇಳಿಮುಖವಾದ ಧಾರಣೆ ಅದೇ ವರ್ಷದ ದಶಂಬರದಲ್ಲಿ ನೆಲಕಚ್ಚಿತ್ತು. ಆದರೂ ಬಳಿಕವದು ಚೇತರಿಸಿ ನಾಲ್ಕು ತಿಂಗಳೊಳಗೆ ಜನವರಿ ೧೯೭೧ರಲ್ಲಿದ್ದ ಅಧಿಕ ಮಟ್ಟದ ಧಾರಣೆಯನ್ನೂ ಮೀರಿ ನಿಂತಿತ್ತು. (ಅದೇ ಸಮಯದಲ್ಲಿ ಕ್ಯಾಂಪ್ಕೋದ ಹುಟ್ಟಿಗೆ ಚಾಲನೆ ದೊರಕಿದ್ದು) ಆದರೆ ೧೯೭೩ರ ಒಕ್ಟೋಬರ್ ನಲ್ಲಿ ಅದು ಪುನಃ ಕುಸಿತಕ್ಕೊಳಗಾಗಿ ನಾಲ್ಕು ತಿಂಗಳ ಬಳಿಕ ಮೇಲೇರಿತ್ತು. ಈ ರೀತಿಯಾಗಿ ೧೯೭೦ರ ಮೇ ತಿಂಗಳಿನಿಂದ ಹಿಡಿದು ೧೯೯೨ರ ನವಂಬರ ತನಕ ಅಡಿಕೆಯ ಧಾರಣೆ ಕೆಲವೊಂದು ತಿಂಗಳುಗಳನ್ನು ಬಿಟ್ಟು ಸದಾ ಏರು ಪ್ರವೃತ್ತಿಯನ್ನೇ ತೋರಿಸುತ್ತಾ ಹೋಯಿತು. ಆದರೆ ಆ ಬಳಿಕ ಧಾರಣೆ ಒಮ್ಮಿಂದೊಮ್ಮೆಗೆ ಕೆಳಕ್ಕಿಳಿದು ಇದು ಮಾರ್ಚ್ ೧೯೯೩ರ ವೇಳೆಗೆ ತೀವ್ರ ಕುಸಿತಕ್ಕೊಳಪಟ್ಟಿತ್ತು. ಬಳಿಕ ನಿಧಾನವಾಗಿ ಏರಿ ನವಂಬರ್ ೧೯೯೨ರ ಮಟ್ಟಕ್ಕೆ ೧೯೯೩ರ ಅಗಸ್ಟ್ ನಲ್ಲಿ ತಲುಪಿತ್ತು. ಈ ರೀತಿಯ ಏರಿಕೆ ನವಂಬರ್ ೧೯೯೩ರ ತನಕವಾಗಿ ದಶಂಬರ್ ೧೯೯೩ರಲ್ಲಿ ಪುನಃ ಕೆಳಕ್ಕಿಳಿದು ಮಾರ್ಚ್ ೧೯೯೪ರಲ್ಲಿ ಏರಲಾರಂಬಿಸಿ ಅದೇ ವರ್ಷದ ದಶಂಬರದಿಂದ ಕುಸಿತಕ್ಕೊಳಗಾಯಿತು. ಆ ಬಳಿಕ ಹಂತ ಹಂತವಾಗಿ ಧಾರಣೆಯು ಏರುತ್ತಾ ಹೋಗಿ ಕೆಲವೊಂದು ತಿಂಗಳುಗಳಲ್ಲಿ ಅಲ್ಪ ಸ್ವಲ್ಪ ಇಳಿಮುಖವಾಗಿ ೧೯೯೭ರ ನವಂಬರಿಗಾಗುವಾಗ ಕಿಲೋ ಒಂದರ ರೂಪಾಯಿ ೯೦ರ ಗಡಿದಾಟಿ ಬಳಿಕ ಜನವರಿ ೧೯೯೮ರಲ್ಲಿ ಕಿಲೋ ಒಂದರ ರೂಪಾಯಿ ೬೯ಕ್ಕಿಳಿದು ಪುನಃ ಹಂತ ಹಾಂತವಾಗಿ ಏರಿ ಸೆಪ್ಟಂಬರ್ ೧೯೯೮ಕ್ಕಾಗುವಾಗ ಕಿಲೋ ಒಂದರ ರೂಪಾಯಿ ೧೦೦ಕ್ಕೆ ತಲುಪಿತ್ತು. ಈ ಏರಿಕೆಗೆ ಜನವರಿ ೧೯೯೯ರಲ್ಲೊಮ್ಮೆ ತಡೆಬಿದ್ದರೂ ಆ ಬಳಿಕ ಇದು ನಿರಂತರವಾಗಿ ಹೆಚ್ಚುತ್ತಾ ಹೋಗಿ ಅದೇ ವರ್ಷದ ಒಕ್ಟೋಬರಿನಲ್ಲಿ ಸಾರ್ವಕಾಲಿಕ ದಾಖಲೆಯಾದ ಕಿಲೋ ಒಂದರ ರೂಪಾಯಿ ೧೭೧.೬೦ಕ್ಕೆ ತಲಪಿತ್ತು. ಆ ಬಳಿಕ ಹಂತ ಹಂತವಾಗಿ ಇಳಿಮುಖವಾಗುತ್ತಾ ಹೋಗಿ ಸೆಪ್ಟಂಬರ್ ೨೦೦೦ದಿಂದ ಇನ್ನಿಲ್ಲದಂತೆ ನೆಲಕಚ್ಚತೊಡಗಿತು. ಇಲ್ಲಿಂದ ಮುಂದೆ ಆಗೊಮ್ಮೆ ಈಗೊಮ್ಮೆ  ಅಲ್ಪ ಸಲ್ಪ ಚೇತರಿಸಿಕೊಂಡರೂ ಜೂನ್ ೨೦೦೧ರ ಬಳಿಕ ಪುನಃ ಹಿಂಜರಿಕೆಯನ್ನೇ ತೋರಿಸಲಾರಂಬಿಸಿದ್ದು, ಈ ರೀತಿಯ ಪ್ರವೃತ್ತಿ ಇಡೀ ಅಡಿಕೆ ಕ್ಷೇತ್ರವನ್ನು ಅಲುಗಿಸಲಾರಂಭಿಸಿದೆ. ೧೯೭೧ರಿಂದ ೧೯೭೩ರ ತನಕ ಅಡಿಕೆ ಧಾರಣೆಯು ಇಳಿಮುಖವಾಗುತ್ತಾ ಹೋಗಿದ್ದರೂ ಕ್ರಮೇಣ ಅದು ಹಂತ ಹಂತವಾಗಿ ಏರಲಾರಂಬಿಸಿತ್ತು. ಆದರೆ ೨೦೦೦ದಲ್ಲಿ  ಮತ್ತು ಅನಂತರ ಕಂಡ ಇಳಿಕೆ ಪ್ರವಿತ್ತಿ ಹೆಚ್ಚು ಕಡಿಮೆ ಒಮ್ಮೆಯೂ ಏರು ಪ್ರವೃತ್ತಿಯನ್ನು ತೋರಿಸದೇ ಇದ್ದು. ಈ ರೀತಿಯ ಪ್ರವೃತ್ತಿ ಈ ಕ್ಷೇತ್ರಕ್ಕೆ ಕಳೆದ ಶತಮಾನದಲ್ಲಿ ಬಿದ್ದ ಅತ್ಯಂತ ಭೀಕರ ಹೊಡೆತವಾಗಿದೆ.

ಪಟ್ಟಿ ೨೧
ಮಂಗಳೂರು ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆ ಪ್ರವೃತ್ತಿ ೧೯೭೦೨೦೦೦
(ರೂಪಾಯಿ/ಕ್ವಿಂಟಾಲ್ ಗೆ)

ತಿಂಗಳು

೧೯೭೦

೧೯೭೧

೧೯೭೨

೧೯೭೩

೧೯೭೪

೧೯೭೫

೧೯೭೬

೧೯೭೭

೧೯೭೮

೧೯೭೯

ಜನವರಿ

 –

೬೭೦

೫೩೦

೩೪೮

೫೩೨

೬೭೨

೭೦೪

೭೦೦

೮೩೮

೮೩೮

ಫೆಬ್ರವರಿ

 –

೬೫೮

೫೧೮

೩೬೪

೫೪೪

೬೭೮

೭೦೬

೭೨೮

೬೬೮

೧೦೧೪

ಮಾರ್ಚ್

 –

೬೮೪

೪೯೪

೩೭೩

೬೩೪

೬೮೬

೭೦೬

೭೪೬

೭೪೪

೧೧೦೨

ಎಪ್ರಿಲ್

 –

೬೭೮

೪೫೬

೩೬೮

೭೨೦

೭೦೨

೭೨೪

೭೬೪

೭೭೮

೧೦೮೬

ಮೇ

೬೫೦

೪೪೦

೪೪೮

೭೩೮

೭೩೦

೭೦೦

೭೫೦

೮೨೨

೧೦೪೬

೧೨೫೮

ಜೂನ್

೬೨೮

೪೫೨

೪೪೬

೭೩೨

೬೮೦

೬೯೬

೭೪೬

೮೨೮

೧೦೯೬

೧೨೬೮

ಜುಲೈ

೫೭೮

೫೦೨

೪೬೬

೬೮೮

೬೫೮

೮೧೬

೭೯೨

೮೯೦

೧೧೯೬

೧೨೯೪

ಅಗಸ್ಟ್

೬೦೮

೫೩೨

೪೩೮

೭೨೬

೭೦೨

೮೬೪

೭೫೦

೮೭೨

೧೨೨೪

೧೩೦೨

ಸೆಪ್ಟಂಬರ್

೬೬೪

೪೧೧೦

೪೬೬

೭೭೦

೭೩೨

೯೨೦

೭೮೪

೯೦೬

೧೦೯೦

೮೪೮

ಅಕ್ಟೋಬರ್

೫೪೨

೩೨೮

೪೦೮

೫೯೬

೭೨೦

೭೮೨

೫೫೮

೭೪೦

೮೬೮

೧೧೯೮

ನವಂಬರ್

೬೪೮

೪೪೬

೩೮೪

೫೫೪

೬೪೮

೭೧೯

೭೨೬

೫೪೮

೬೮೦

೯೬೬

ಡಿಸೆಂಬರ್

೬೨೦

೫೧೬

೨೫೮

೪೭೮

೬೫೨

೬೬೪

೬೬೬

೬೩೦

೭೪೮

೧೦೩೬

 

ತಿಂಗಳು

೧೯೮೦

೧೯೮೧

೧೯೮೨

೧೯೮೩

೧೯೮೪

೧೯೮೫

೧೯೮೬

೧೯೮೭

೧೯೮೮

೧೯೮೯

 

ಜನವರಿ

೧೧೬೬

೧೬೩೬

೧೪೨೨

೧೨೭೦

೧೪೬೨

೨೨೯೪

೨೬೬೪

೧೭೭೬

೧೨೫೨

೨೨೧೦

ಫೆಬ್ರವರಿ

೧೨೩೦

೧೬೨೦

೧೨೬೮

೧೨೬೨

೧೪೫೮

೨೪೮೪

೨೫೬೬

೧೮೬೨

೧೭೭೦

೨೨೬೦

ಮಾರ್ಚ್

೧೨೩೮

೧೫೦೦

೧೨೮೨

೧೨೫೨

೧೪೪೬

೨೭೭೨

೨೩೩೨

೧೮೫೨

೧೯೭೨

೨೨೪೨

ಎಪ್ರಿಲ್

೧೨೫೮

೧೫೭೬

೧೧೧೮

೧೩೭೨

೧೫೬೦

೨೮೨೨

೨೪೦೪

೧೮೧೦

೧೭೧೦

೨೧೯೪

ಮೇ

೧೬೦೪

೧೧೨೦

೧೪೯೪

೧೫೩೪

೧೫೩೪

೨೭೫೪

೨೨೯೮

೧೭೬೦

೧೮೫೦

೨೧೭೮

ಜೂನ್

೧೪೯೮

೧೪೦೨

೧೭೦೦

೧೬೩೦

೨೭೪೪

೨೩೮೦

೧೭೦೨

೧೭೨೦

೨೨೫೦

೩೨೦೬

ಜುಲೈ

೧೬೫೦

೧೫೨೬

೧೭೮೦

೧೭೬೮

೧೭೬೮

೨೮೩೨

೨೩೦೬

೧೬೬೨

೧೮೯೦

೨೪೫೦

ಅಗಸ್ಟ್

೧೬೪೦

೧೬೧೪

೧೬೦೨

೧೭೮೨

೧೭೮೨

೨೬೭೬

೨೪೭೮

೧೭೦೨

೨೧೦೪

೨೯೩೪

ಸೆಪ್ಟಂಬರ್

೧೮೧೦

೧೬೨೦

೧೩೬೨

೧೯೩೪

೧೯೩೪

೨೭೯೦

೨೬೯೮

೧೯೧೮

೨೪೫೦

೨೯೩೮

ಅಕ್ಟೋಬರ್

೧೫೦೦

 –

೯೧೬

೧೬೧೬

೧೬೧೬

೨೦೨೨

೧೭೧೦

೧೦೪೨

೨೪೪೬

೨೯೧೨

ನವೆಂಬರ್

೧೪೦೮

೧೪೧೪

೯೨೦

೧೨೭೮

೧೮೩೦

೨೩೬೨

೧೭೭೮

೧೩೩೨

೧೯೩೮

೩೦೧೨

ಡಿಸೆಂಬರ್

೧೪೭೨

೧೩೪೦

೧೦೦೬

೧೩೬೦

೧೯೭೬

೨೪೮೪

೧೬೭೮

೧೨೧೦

೨೨೯೦

೨೬೫೦

 

ತಿಂಗಳು

೧೯೯೦

೧೯೯೧

೧೯೯೨

೧೯೯೩

೧೯೯೪

೧೯೯೫

೧೯೯೬

೧೯೯೭

೧೯೯೮

೧೯೯೯

೨೦೦೦

ಜನವರಿ

೨೫೭೮

೪೫೯೪

೫೫೭೮

೪೯೩೮

೪೬೧೪

೫೭೫೮

೫೭೭೮

೬೪೫೮

೬೯೦೦

೮೭೭೮

೧೧೮೫೦

ಫೆಬ್ರವರಿ

೨೫೭೪

೫೩೩೨

೫೬೬೦

೪೬೧೪

೪೪೦೨

೫೭೭೮

೬೨೨೨

೬೫೭೦

೬೭೩೮

೧೧೩೩೨

೧೧೯೩೨

ಮಾರ್ಚ್

೨೬೯೦

೬೧೦೦

೫೬೭೪

೪೧೫೦

೫೪೬೨

೬೪೭೮

೬೧೩೮

೬೮೫೮

೭೪೦೦

೧೫೫೦೦

೧೦೬೫೦

ಎಪ್ರಿಲ್

೩೦೩೪

೬೧೮೨

೫೯೯೮

೪೩೫೮

೫೬೬೨

೬೭೭೮

೬೧೧೮

೬೭೩೮

೭೭೯೦

೧೫೮೦೦

೧೦೮೧೮

ಮೇ

೩೩೨೨

೬೧೫೦

೫೭೧೮

೪೪೫೦

೬೬೦೬

೬೫೩೮

೬೩೩೮

೬೯೫೮

೭೭೯೦

೧೪೨೯೬

೧೦೪೨೦

ಜೂನ್

೩೨೦೫

೬೧೮೦

೬೦೬೨

೪೫೫೮

೬೨೧೮

೬೬೪೨

೬೦೨೮

೭೦೭೦

೭೭೩೮

೧೪೧೧೮

೯೩೭೮

ಜುಲೈ

೩೭೫೦

೫೯೫೬

೬೧೫೦

೪೭೦೦

೬೭೨೬

೬೬೩೮

೬೩೭೮

೭೦೯೦

೮೬೫೦

೧೪೭೩೦

೧೦೪೧೮

ಅಗಸ್ಟ್

೪೦೦೬

೫೮೭೨

೬೦೨೬

೬೨೦೨

೬೬೯೮

೬೫೫೦

೬೬೫೮

೭೩೫೮

೯೫೬೦

೧೫೩೫೬

೯೨೦೦

ಸೆಪ್ಟಂಬರ್

೪೨೨೦

೬೧೧೪

೬೩೧೮

೬೦೭೮

೬೫೫೮

೬೬೪೨

೬೬೯೮

೭೭೩೮

೧೦೦೦೦

೧೫೩೮೦

೭೮೦೦

ಅಕ್ಟೋಬರ್

೪೧೦೬

೬೫೧೪

೬೪೭೨

೬೪೧೮

೬೫೧೮

೬೩೨೦

೭೮೨೦

೮೪೭೮

೧೦೦೧೮

೧೭೧೬೦

೭೭೬೦

ನವೆಂಬರ್

೪೩೫೮

೬೧೩೮

೬೫೩೮

೬೦೧೮

೬೭೫೪

೬೮೬೬

೭೪೫೮

೯೨೩೮

೧೦೨೦೦

೧೬೧೦೦

೮೦೧೮

ಡಿಸೆಂಬರ್

೪೪೫೦

೫೮೦೨

೫೧೭೮

೪೭೦೨

೫೨೧೬

೬೭೭೮

೭೭೩೮

೯೧೩೦

೧೦೨೦೦

೧೬೧೩೮

೭೬೭೮

ಮೂಲ: ಕೃಷಿಯುತ್ಪನ್ನ ಮಾರುಕಟ್ಟೆ ಸಮಿತಿ, ಮಂಗಳೂರು.

ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ನಡೆಸಿದ ಸಮೀಕ್ಷೆ ಪ್ರಕಾರ ಮಾರುಕಟ್ಟೆಗೆ ಸುಮಾರು ೧೦.೦೦೦ ಕ್ವಿಂಟಾಲ್‌ಗಿಂತ ಹೆಚ್ಚು ಅಡಿಕೆ ಪೂರೈಕೆಯಾದಾಗಲೆಲ್ಲ ಧಾರಣೆ ಇಳಿಮುಖವಾಗುತ್ತಾ ಹೋಗಿದೆ. ಅಲ್ಲದೆ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಪೂರೈಕೆಯಾಗುವ ಅಡಿಕೆಯ ಗುಣಮಟ್ಟ ಕಳಪೆಯಾದ್ದರಿಂದ ಆ ಸಮಯದಲ್ಲಿ ಧಾರಣೆ ಇಳಿಕೆಯಾಗುತ್ತದೆ. ಮಂಗಳೂರು ಮಾರುಕಟ್ಟೆಗೆ ಪೂರೈಕೆಯಾಗುವ ಅಡಿಕೆಯ ಪ್ರಮಾಣವು ಮಾರ್ಚ್ ನಿಂದ ಎಪ್ರಿಲ್ ತನಕ ಆತ್ಯಧಿಕವಾಗಿದ್ದು, ಅಗಸ್ಟ್ ನಿಂದ ಅಕ್ಟೋಬರ್ ತನಕ ಇದು ಮಧ್ಯ ಪ್ರಮಾಣದ್ದಾಗಿರುತ್ತದೆ. ಆ ಬಳಿಕ ಇದು ಸಾಮಾನ್ಯ ಪ್ರಮಾಣದಲ್ಲಿದ್ದು, ಒಟ್ಟಾರೆಯಾಗಿ ೧೯೯೮ರ ತನಕ ಪೂರೈಕೆಯ ಪ್ರವೃತ್ತಿ ಅಡಿಕೆಯ ಬೆಲೆಯ ಏರು ಪೇರಿಗೆ ಕಾರಣವಾಗಿತ್ತು ಎಂಬುದಾಗಿ ಅಂಕಿ-ಅಂಶಗಳ ಆಧಾರದಿಂದ ತಿಳಿದುಕೊಳ್ಳಬಹುದಾಗಿದೆ.

೧೯೯೮ರ ಬಳಿಕ ಅಡಿಕೆ ಧಾರಣೆಯ ಏರಿಳಿತ:

೧೯೯೮ರ ಜೂನ್ ತನಕ ಸಾಮಾನ್ಯ ಮಟ್ಟದ ಸ್ಥಿರತೆಯನ್ನು ತೋರಿಸುತ್ತಿದ್ದ ಅಡಿಕೆಯ ಧಾರಣೆ ಆ ಬಳಿಕ ಹಂತಹಂತವಾಗಿ ಏರು ಪ್ರವೃತ್ತಿಯನ್ನು ತೋರಿಸುತ್ತಾ ಹೋಯಿತು. ಈ ರೀತಿಯ ಏರಿಕೆ ಬೆಳೆಗಾರರ ನಿರೀಕ್ಷೆಗೂ ಮೀರಿತ್ತು. ಇಡೀ ಅಡಿಕೆ ಮಾರುಕಟ್ಟೆಗೆ ಒಮ್ಮಿಂದೊಮ್ಮೆ ನಿರೀಕ್ಷೆಗೂ ಮೀರಿದ ಉತ್ಸಾಹ ಬಂದು ಬೆಲೆಯು ಏರುತ್ತಾ ಹೋದಂತೆ ಪೂರೈಕೆಯಲ್ಲೂ ಎರು ಪೇರಾಗಿ ಬೆಲೆ ಪ್ರವೃತ್ತಿಯನ್ನೇ ತೋರಿಸಿತು. ಬೆಳೆಗಾರರಿಂದ ಅಡಿಕೆಯನ್ನು ಖರೀದಿ ಮಾಡುವ ಮುಖ್ಯ ಮಾರುಕಟ್ಟೆಯಲ್ಲಿ ಅಡಿಕೆಯ ಕ್ರೋಢಿಕರಣ ಯಾ ಶೇಖರಣೆ ಹೆಚ್ಚುತ್ತಾ ಹೋಯಿತು. ಇನ್ನೊಂದೆಡೆಯಲ್ಲಿ ಬಳಕೆದಾರ ಪ್ರದೇಶಗಳ ವ್ಯವಹಾರಸ್ಥರೂ ಹೆಚ್ಚಿನ  ಪ್ರಮಾಣದ ಶೇಖರಣೆಗೆ ಹೊರಟರು ಇದಕ್ಕೆ ಮುಖ್ಯ ಕಾರಣ ೧೯೯೮–೯೯ರ ಸಾಲಿನಲ್ಲಿ ಅಡಿಕೆ ಬೆಳೆಗೆ ಬಂದ ಕಜ್ಜಿಕೀಟ ರೋಗ ಮತ್ತು ಕೇರಳದಲ್ಲಿ ಈ ಬೆಳೆಗೆ ತಗಲಿದ ಹಳದಿ ರೋಗ, ಇವೆರಡರಿಂದಾಗಿ ಆ ಸಾಲಿನಲ್ಲಿ ಮಾರುಕಟ್ಟೆಗೆ ಬರಬಹುದಾದ ಅಡಿಕೆ ಪ್ರಮಾಣದಲ್ಲಿ ಗಣನೀಯ ಕುಸಿತವಾಗಬಹುದೆಂಬ ಮಾಹಿತಿ ಮತ್ತು ಭೀತಿ ಕರ್ನಾಟಕ ಮತ್ತು ಕೇರಳದ ಬೆಳೆಗಾರ ಮತ್ತು ಮಾರುಕಟ್ಟೆ ವಲಯದಲ್ಲಿ ಕಂಡು ಬಂತು. ಈ ಮಾಹಿತಿ ಮತ್ತು ಭೀತಿಗಳಿಂದಾಗಿ ಕೇಂದ್ರೀಯ ಮಾರುಕಟ್ಟೆಯಲ್ಲಿದ್ದ ಬಳಕೆದಾರ ಪ್ರದೇಶದ ಮಾರಾಟ ಪ್ರತಿನಿಧಿಗಳು ಯಾ ಮಧ್ಯವರ್ತಿಗಳು ಈ ವಿಚಾರವನ್ನು ಬಳಕೆದಾರ ಪ್ರದೇಶದ ಅಡಿಕೆ ವ್ಯವಹಾರಸ್ಥರಿಗೆ ತಿಳಿಹೇಳಿದಾಗ ಅವರು ಈ ಮಧ್ಯವರ್ತಿಗಳಲ್ಲಿ ಸಾಧ್ಯವಾದಷ್ಟು ಪ್ರಮಾಣದ ಅಡಿಕೆಯನ್ನು ಎಷ್ಟೇ ಬೆಲೆ ತೆತ್ತಾದರೂ ಕ್ರೋಢಿಕರಿಸಿ ಪೂರೈಸುವಂತೆ ಕೇಳಿಕೊಂಡರು ಇದರ ಪರಿಣಾಮವಾಗಿ ಧಾರಣೆ ಏರು ಪ್ರವೃತ್ತಿಯನ್ನು ತೋರಿಸಿತು.

ಮಾಹಿತಿ ಮತ್ತು ಭೀತಿಗಳು ಮಾರುಕಟ್ಟೆಯ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂಬುದಕ್ಕೆ ೧೯೯೮ರ ಬಳಿಕ ಮಾರುಕಟ್ಟೆಗೆ ಪೂರೈಕೆಯಾದ ಅಡಿಕೆಯ ಪ್ರಮಾಣವೇ ಇದಕ್ಕೆ ಸಾಕ್ಷಿ. ಮಾರುಕಟ್ಟೆ ವಲಯದಲ್ಲಿ ಭೀಕರ ರೋಗಗಳಿಂದ ಅಡಿಕೆಯ ಪೂರೈಕೆ ಕಡಿಮೆಯಾಗಬಹುದೆಂಬ ಭೀತಿ ಕಂಡು ಬಂದರೂ ಆ ಸಮಯದಲ್ಲಿ ಪೂರೈಕೆ ಕಡಿಮೆಯಾಗುವುದರ ಬದಲು ಅದು ಹೆಚ್ಚಾಗಿ ಹೋಗಿತ್ತು. ೧೯೯೭–೯೮ರಲ್ಲಿ  ಮಂಗಳೂರು ಮಾರುಕಟ್ಟೆಗೆ ಪ್ರತ್ಯಕ್ಷವಾಗಿ ಬಂದ ಅಡಿಕೆಯ ಒಟ್ಟು ಪ್ರಮಾಣ ೨,೧೯,೯೮೯ ಕ್ವಿಂಟಾಲ್, ಅದು ೧೯೯೮–೯೯ರಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿ ೨,೧೯,೧೧೬ ಕ್ವಿಂಟಾಲ್‌ಗಳಾಗಿತ್ತು. ಮತ್ತು ೧೯೯೯–೨೦೦೦ದಲ್ಲಿ ಅದು ೨,೨೪,೮೩೬ ಕ್ವಿಂಟಾಲ್‌ಗಳಿಗೇರಿತ್ತು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮಾರುಕಟ್ಟೆ ವಲಯದ ನಿರೀಕ್ಷೆ ಸುಳ್ಳಾಗಿ ಅಡಿಕೆಯ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗದೇ ಹೋದದ್ದು ಈ ಪರಿಸ್ಥಿತಿ ಮುಂದೆ ಇಡೀ ಅಡಿಕೆ ಕ್ಷೇತ್ರದ ಸೋಲಿಗೆ ನಾಂದಿಯಾಯಿತು ಎಂದರೆ ತಪ್ಪಾಗಲಾರದು. (ಪಟ್ಟಿ ೨೨).

ಪಟ್ಟಿ ೨೨
ಮಂಗಳೂರು ಮಾರುಕಟ್ಟೆಯಲ್ಲಿ ಅಡಿಕೆ ಮಾಸಿಕವಾರು ಹಾಗೂ ವಾರ್ಷಿಕವಾರು ಆವಕ ತೋರಿಸುವ ಪಟ್ಟಿ
(ಆವಕ ಕ್ವಿಂಟಾಲ್‌ಗಳಲ್ಲಿ)

ವರ್ಷ

ಎಪ್ರಿಲ್

ಮೇ

ಜೂನ

ಜುಲೈ

ಆಗಸ್ಟ್

ಸೆಪ್ಟಂಬರ್

ಅಕ್ಟೋಬರ್

ನವಂಬರ್

ಡಿಸೆಂಬರ್

ಜನವರಿ

ಫೆಬ್ರವರಿ

ಮಾರ್ಚ್

ಒಟ್ಟು

೧೯೯೦-೯೧ ೩೧೪೩೩ ೫೪೧೯೧ ೩೯೯೦೩ ೨೨೫೩೨ ೩೨೯೦೨ ೨೧೦೩೪ ೨೧೧೯೯ ೨೧೮೬೫ ೨೯೧೫೩ ೩೯೮೬೨ ೩೬೪೧೩ ೪೯೬೬೯ ೪೦೦೧೫೬
೧೯೯೧-೯೨ ೩೫೩೫೩ ೨೮೨೨೬೫ ೨೪೭೫೩ ೧೯೬೮೫ ೧೯೮೬೯ ೧೮೪೮೦ ೧೯೪೩೮ ೨೨೦೦೭ ೨೫೪೬೨ ೩೨೬೬೨ ೩೯೯೪೬ ೪೧೫೪೨ ೨೭೪೬೨
೧೯೯೨-೯೩ ೩೩೬೮೩ ೩೮೪೨೨ ೨೭೪೧೮ ೨೬೧೩೦ ೧೪೧೬೯ ೧೯೬೦೪ ೨೨೩೮೫ ೨೫೫೧೩ ೧೫೭೮೫ ೨೮೯೬೬ ೨೮೬೪೮ ೩೧೦೩೯ ೩೧೧೭೬೨
೧೯೯೩-೯೪ ೨೯೭೭೫ ೨೫೫೮೪ ೨೧೮೪೯ ೨೧೯೦೩ ೧೪೫೧೦ ೧೮೮೨೬ ೧೫೩೫೭ ೧೩೪೯೦ ೧೮೦೬೧ ೨೦೬೪೦ ೨೦೨೨೧ ೩೦೭೧೧ ೨೫೦೯೨೭
೧೯೯೪-೯೫ ೩೪೬೩೬ ೩೧೩೩೬ ೨೩೭೪೯ ೩೩೬೮೦ ೨೧೭೪೯ ೧೬೯೦೯ ೨೫೧೦೯ ೧೮೫೩೧ ೧೯೯೨೮ ೧೯೭೧೩ ೩೦೦೨೧ ೪೨೨೫೮ ೩೧೭೬೧೯
೧೯೯೫-೯೬ ೨೭೪೫೧ ೨೩೧೪೩ ೨೩೧೨೮ ೧೫೫೭೯ ೧೧೨೫೪ ೧೮೧೭೫ ೧೩೬೮೬ ೧೪೭೭೮ ೧೩೦೩೯ ೧೮೭೯೩ ೨೦೯೮೦ ೨೫೯೫೪ ೨೨೫೯೬೦
೧೯೯೬-೯೭ ೨೩೩೮೮ ೨೫೪೦೫ ೧೬೬೭೦ ೧೨೪೬೦ ೧೩೭೮೦ ೧೧೬೫೮ ೧೮೬೦೪ ೨೦೨೨೪ ೨೩೪೫೮ ೨೦೯೯೮ ೧೯೧೪೭ ೩೦೫೪೮ ೨೩೬೩೪೦
೧೯೯೭-೯೮ ೧೭೧೨೮ ೩೦೨೩೮ ೨೩೧೩೬ ೧೭೩೪೦ ೧೩೮೩೩ ೧೨೬೪೨ ೧೭೧೯೪ ೧೪೪೭೬ ೧೦೮೨೫ ೧೯೦೧೬ ೧೮೫೮೯ ೨೫೫೭೨ ೨೧೯೯೮೯
೧೯೯೮-೯೯ ೨೨೭೪೨ ೨೫೧೨೩ ೧೫೪೩೦ ೧೭೭೧೨ ೧೫೫೫೪ ೧೬೧೮೫ ೧೪೦೦೪ ೧೮೨೭೧ ೧೨೨೩೪ ೧೩೮೪೫ ೧೭೬೪೩ ೩೦೩೭೩ ೨೧೯೧೧೬
೧೯೯೯-
೨೦೦೦
೩೩೮೫೩ ೨೦೧೫೩ ೧೯೯೭೬ ೧೭೬೩೫ ೧೫೧೬೫ ೧೫೫೫೯ ೧೪೬೮೬ ೧೩೬೫೨ ೨೦೨೯೫ ೨೦೩೪೩ ೨೧೮೪೬ ೧೧೬೭೩ ೨೨೪೮೩೬
೨೮೯೪೪೨ ೩೦೧೮೬೦ ೨೩೬೦೧೨ ೨೦೪೬೫೬ ೧೭೨೭೮೫ ೧೬೯೦೭೨ ೧೮೧೬೬೨ ೧೮೨೮೦೭ ೧೮೮೨೪೦ ೨೩೪೮೩೮ ೨೫೩೪೫೪ ೩೧೯೩೩೯

ಮೂಲ: ಕೃಷಿಯುತ್ಪನ್ನ ಮಾರುಕಟ್ಟೆ ಸಮಿತಿ.

೧೯೯೯–೨೦೦೦ದ ತನಕ ಮಾರುಕಟ್ಟೆ ವಲಯ ಅಡಿಕೆಯ ಪೂರೈಕೆಯ ಬಗ್ಗೆ ಇಟ್ಟಿದ್ದ ಸಂದೇಹ ಸುಳ್ಳಾದ್ದು ಒಂದೆಡೆಯಾದರೆ ಇನ್ನೊಂದೆಡೆಯಲ್ಲಿ ಅತ್ಯಧಿಕ ಬೆಲೆ ತೆತ್ತು ಅಡಿಕೆ ಖರೀದಿಗಿಳಿದ ಅಡಿಕೆ ವ್ಯವಹಾರಸ್ಥರೆಲ್ಲ ಸೋಲನ್ನು ಅಪ್ಪಿಕೊಂಡ ಕಾರಣ ಬಳಿಕ ಧಾರಣೆಯು ಇಳಿಮುಖವಾಗುತ್ತಾ ಹೋಯಿತು. ಇದರೊಂದಿಗೆ ಸೊಲಿನ ಕಹಿಯನ್ನುಂಡ ವ್ಯವಹಾರಸ್ಥರು ಅಡಿಕೆ ವ್ಯವಹಾರದ ಬಗ್ಗೆ ನಿರಾಸಕ್ತಿಯನ್ನು ತೋರಿಸಲಾರಂಭಿಸಿ ಮಾರುಕಟ್ಟೆಯೇ ನಿಸ್ತೇಜಗೊಂಡಿತು.