ಇಡಿಅಡಿಕೆರಫ್ತು:

ಭಾರತದಿಂದ ರಫ್ತಾಗುತ್ತಿರುವ ಇಡಿ ಅಡಿಕೆಗೆ ಇರುವ ಮುಖ್ಯ ಅಂತರಾಷ್ಟ್ರೀಯ ಮಾರುಕಟ್ಟೆಗಳೆಂದರೆ ದಕ್ಷಿಣ ಆಫ್ರಿಕ, ಅರಬ್‌ ಸಂಯುಕ್ತ ಸಂಸ್ಥಾನ, ಇಂಗ್ಲಂಡ್‌, ನೇಪಾಳ, ಕೆನಡ, ಅಮೇರಿಕಾ, ಜಪಾನ್‌, ಮಾಲ್ವಿ, ಫ್ರಾನ್ಸ್‌ ಮುಂತಾದವುಗಳು. ಇವುಗಳ ಪೈಕಿ ದಕ್ಷಿಣ ಆಫ್ರಿಕಾ, ಇಂಗ್ಲಂಡ್‌, ಅರಬ್‌ ರಾಷ್ಟ್ರಗಳು ಇಡಿ ಅಡಿಕೆಯನ್ನು ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿವೆ. ೧೯೯೪–೯೫ರಲ್ಲಿ ದೇಶವು ಒಟ್ಟಾರೆಯಾಗಿ ಸುಮಾರು ೨೪೪ ಟನ್‌ಗಳಷ್ಟು ಇಡಿ ಅಡಿಕೆಯನ್ನು ರಫ್ತು ಮಾಡಿ ಸುಮಾರು ೧೯೧ ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸಿತ್ತು, ೧೯೯೯–೨೦೦೦ ದಲ್ಲಿ ಈ ಪ್ರಮಾಣ ಸುಮಾರು ೨೨೦ ಟನ್‌ಗಳಾಗಿ ಅದರಿಂದ ಲಭ್ಯವಾದ ಆದಾಯ ಸುಮಾರು ೩೨೨ ಲಕ್ಷ ರೂಪಾಯಿಗಳಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆಯೇರುತ್ತಿರುವುದರಿಂದಾಗಿ, ಇಡಿ ಅಡಿಕೆಗಿರುವ ಬೇಡಿಕೆಯೂ ಕುಸಿಯ ತೊಡಗಿದ್ದು, ಇದನ್ನು  ಪಟ್ಟಿ ೧೩ ರಲ್ಲಿ ಕೊಟ್ಟ ಅಂಕಿ-ಅಂಶಗಳ ಆಧಾರದಿಂದ ತಿಳಿದುಕೊಳ್ಳಬಹುದಾಗಿದೆ. ಈ ಅಂಕಿ-ಅಂಶಗಳು ಹೊರಚೆಲ್ಲುವ ಇನ್ನೊಂದು ಮುಖ್ಯ ಅಂಶವೆಂದರೆ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳ ಪೈಕಿ ಕೆಲವೊಂದು ಸಾಂಪ್ರದಾಯಿಕ ರಾಷ್ಟ್ರಗಳನ್ನು ಬಿಟ್ಟು ಉಳಿದೆಲ್ಲಾ ರಾಷ್ಟ್ರಗಳು ಅಡಿಕೆಯನ್ನು ಆಗೊಮ್ಮೆ ಈಗೊಮ್ಮೆ ಆಮದು ಮಾಡಿಕೊಳ್ಳುತ್ತಿದ್ದು, ಇದರೊಂದಿಗೆ ಸಾಮಪ್ರದಾಯಿಕ ರಾಷ್ಟ್ರಗಳೂ ಒಂದು ನಿರ್ಧಿಷ್ಟ ಪ್ರಮಾಣಕ್ಕೆ ಬೇಡಿಕೆ ಸಲ್ಲಿಸದೆ ಇರುವುದು, ಇವೆಲ್ಲಾ ನಮ್ಮ ರಪ್ತಿನ ಹೆಚ್ಚಳಕ್ಕೆ ಅಗತ್ಯವಿರುವ ಪ್ರಯತ್ನದ ಕೊರತೆ, ಪ್ರಚಾರದ ಅಭಾವ, ಬಳಕೆದಾರರ ಮನವೊಲಿಸುವಲ್ಲಿ ವಿಫಲತೆ ಮುಂತಾದವುಗಳನ್ನು ಹೆಸರಿಸುತ್ತದೆ.

ಪಟ್ಟಿ ೧೩
ಭಾರತದಿಂದ ಇಡಿ ಅಡಿಕೆಯ ರಫ್ತು
ಪ್ರಮಾಣ (ಕಿಲೋಗಳಲ್ಲಿ) ಮೌಲ್ಯ (ರೂಪಾಯಿಗಳಲ್ಲಿ)

ರಾಷ್ಟ್ರ

೧೯೯೬–೯೭

೧೯೯೭–೯೮

೧೯೯೮–೯೯

೧೯೯೯–೨೦೦೦

ಪ್ರಮಾಣ

ಮೌಲ್ಯ

ಪ್ರಮಾಣ

ಮೌಲ್ಯ

ಪ್ರಮಾಣ

ಮೌಲ್ಯ

ಪ್ರಮಾಣ

ಮೌಲ್ಯ

ಆಸ್ಟ್ರೇಲಿಯಾ

೧೬೦೦

೧೫೦೬೫೧

೨೨೨೫

೧೦೫೦೯೨

೬೦೦

೯೬೮೮೫

ಬಾಂಗ್ಲಾದೇಶ

೩೦೦

೧೮೧೭೪

ಕೆನಡಾ

೧೬೭೮೨

೧೮೧೭೯೭೫

೬೭೨೫

೮೧೪೨೧೦

೩೧೭೫೪

೩೧೮೭೯೨೨

೧೬೦೦

೩೨೪೪೦೫

ಸ್ಪ್ಯೆನ್‌

೪೦೦

೩೫೬೦೪

೩೭೫೦

೧೬೫೪೯೮

ಫ್ರಾನ್ಸ್‌

೩೧೦

೩೮೧೮೧

೨೩೪೧೨

೨೦೩೩೦೮೩

೨೦೦೦

೪೮೪೭೦೪

ಇಂಗ್ಲಂಡ್‌

೪೭೩೧೫

೪೧೦೬೫೯೨

೧೪೭೭೬

೧೩೯೧೫೬೦

೫೫೧೬೨

೪೯೭೧೪೯೫

೪೨೯೫೦

೪೦೨೩೨೬೫

ಇಸ್ರೇಲ್‌

೬೭೦

೨೦೧೮೨

ಕೆನ್ಯಾ

೨೧೨೦

೨೫೮೬೮೩

೫೩೪೬

೯೩೬೧೧

ಮಾಲ್ದೀವ್ಸ

೫೫೦೦

೪೫೪೩೫೪

೫೭೦

೪೪೯೭೭

ನೇಪಾಳ

೨೫೫೦

೨೩೫೫೬೪

೬೫೬೫

೨೫೭೫೫೬

೭೧೯೦

೫೭೫೨೩೬

ನ್ಯೂಜಿಲ್ಯಾಂಡ್‌

೧೬೯೪

೧೧೭೬೧೫

೨೫೦

೨೨೬೧೪

ಒಮಾನ್‌

೭೮೦೦

೮೧೧೩೫೦

೬೯೬೦

೬೨೮೮೩೫

ಪಾಕಿಸ್ಥಾನ್‌

೪೫೩೦

೧೨೦೭೭೩

೨೨೫೦೦

೧೯೫೬೧೬೯

ದಕ್ಷಿಣ ಆಫ್ರಿಕಾ

೧೧೭೯೦

೧೪೬೪೦೧೪

೩೫೨೪೩

೪೩೬೯೭೮೭

೫೨೨೨೫

೮೪೯೩೦೨೩

೩೪೦೧೦

೫೦೨೬೨೧೦

ಸೌದಿ ಅರೇಬಿಯಾ

೩೭೮

೫೩೯೩೦

೫೮೮೦

೯೦೬೧೪೬

೧೦೦೦

೨೧೩೯೨೮

೧೪೦೦

೩೦೧೪೮೯

ಸಿಂಗಾಪುರ

೬೩೫೦

೫೪೯೩೨೫

೩೫೦೦

೫೮೫೬೮೭

೫೦೦

೫೬೨೮೬

೧೦೦೦

೧೭೫೩೨೦

ಟಾಂಜಾನಿಯಾ

೨೦೦೦

೮೫೮೮೧

೫೫೦

೪೦೩೮೯

ಅರಬ್‌ ಸಂಯುಕ್ತ ಸಂಸ್ಥಾನ

೧೭೦೯೨

೧೭೨೯೫೯೨

೪೮೫೦

೫೪೦೫೭೪

೩೩೧೪೫

೪೪೭೦೪೯೫

೬೯೬೪೦

೧೧೧೮೮೭೯೧

ಅಮೇರಿಕಾ

೨೫

೨೩೪೭

೩೦೦

೪೦೮೫೨

೧೯೫೦

೧೦೯೩೦೬

೨೭೯೮೪

೫೯೧೬೪೭೦

ಜಪಾನ

೧೨೦೦

೨೩೧೬೫೦

ಕುವೈಟ್‌

೧೦೦೦

೬೪೭೨೦

೯೦೦

೧೭೮೭೩೮

೩೧೦೦

೪೫೧೩೫೭

ಮಾರಿಷಸ್‌

೯೭೫

೮೭೧೩೮

೨೫೦

೪೪೪೨೦

ಮಾಲ್ವಿ

೩೬೮೫

೧೫೧೦೪೦

೫೭೦

೩೮೮೯೧

ಮಲೇಷಿಯಾ

೫೮

೨೮೦೦

೯೫೦

೧೭೯೬೬೩

ನೆದರ್ಲ್ಯಾಂಡ್

೨೦೦

೪೪೦೦೦

೬೦೦೦

೬೨೨೦೦೦

ಒಟ್ಟು ಇತರ ಸೇರಿ

೧೭೦೬೩೪

೧೭೫೦೪೬೨೬೪

೧೨೨೭೩೨

೧೨೧೧೮೦೭೪

೧೯೩೧೮೬

೨೩೧೬೪೭೫೦

೨೨೦೦೩೪

೩೨೨೦೫೬೫೪

ಮೂಲ: ಡಿ.ಜಿ.ಸಿ.ಐ. ಮತ್ತು ಎಸ್‌. ಕೋಲ್ಕತ್ತ.

ಹೋಳಡಿಕೆಮತ್ತುಪುಡಿಯಡಿಕೆಯರಫ್ತು:

ಈ ರೀತಿಯ ಅಡಿಕೆಗಿಂದು ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆಯೇರುತ್ತಿದ್ದು, ಇದರ ರಫ್ತಿನ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರು ಪ್ರವೃತ್ತಿಯನ್ನು ತೋರಿಸುತ್ತಿದೆ. ಹೋಳಡಿಕೆ ಮತ್ತು ಪುಡಿಯಡಿಕೆಗಳನ್ನು ಒಂದು ರೀತಿಯ ಮೌಲ್ಯವರ್ಧನೆಗೊಳಗಾದ ಅಡಿಕೆ ಉತ್ಪನ್ನಗಳೆನ್ನಬಹುದಾಗಿದ್ದು, ಆದ್ದರಿಂದಲೇ ಇವಕ್ಕಿಂದು ಹೆಚ್ಚಿನ ಬೇಡಿಕೆ ಬರುತ್ತಿರುವುದು. ಇವುಗಳನ್ನಿಂದು ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳೆಂದರೆ ಅರಬ್‌ ರಾಷ್ಟ್ರಗಳು, ಫಿಲಿಪೈನ್ಸ್‌, ಕೆನಡಾ, ಇಂಗ್ಲಂಡ್, ದಕ್ಷಿಣ ಅಫ್ರಿಕಾ, ಮಲೇಷಿಯಾ ಮತ್ತು ಆಸ್ಟ್ರೇಲಿಯಾ. ೧೯೯೬–೯೭ರಲ್ಲಿ ಭಾರತವು ಸುಮಾರು ೧೮೨ ಟನ್‌ಗಳಷ್ಟು ಈ ರೀತಿಯ ಅಡಿಕೆಯನ್ನು ರಫ್ತು ಮಾಡಿದ್ದರೂ ೧೯೯೭–೯೮ರಲ್ಲಿ ಅದು ಕೇವಲ ೬೯ ಟನ್‌ಗಳಿಗಿಳಿದು, ಬಳಿಕ ಅದು ಏರು ಪ್ರವೃತ್ತಿಯನ್ನು ತೋರಿಸುತ್ತಲಿದೆ.  (ಪಟ್ಟಿ ೧೪).

ಪಟ್ಟಿ ೧೪
ಭಾರತದಿಂದ ಹೋಳಡಿಕೆ ಮತ್ತು ಪುಡಿಯಡಿಕೆಯ ರಫ್ತು
ಪ್ರಮಾಣ (ಕಿಲೋಗಳಲ್ಲಿ) ಮೌಲ್ಯ (ರೂಪಾಯಿಗಳಲ್ಲಿ)

ರಾಷ್ಟ್ರ

೧೯೯೬–೯೭

೧೯೯೭–೯೮

೧೯೯೮–೯೯

೧೯೯೯–೨೦೦೦

ಪ್ರಮಾಣ

ಮೌಲ್ಯ

ಪ್ರಮಾಣ

ಮೌಲ್ಯ

ಪ್ರಮಾಣ

ಮೌಲ್ಯ

ಪ್ರಮಾಣ

ಮೌಲ್ಯ

ಆಸ್ಟ್ರೇಲಿಯಾ

೬೬೦

೬೩೫೪೫

೯೦೦

೧೦೩೧೩೮

೩೪೭೦

೩೨೮೬೬೬

೩೫೦

೯೪೦೨೩

ಕೆನಡಾ

೫೮೦೦

೭೪೫೫೯೮

೨೦೦೦

೨೬೦೮೭೧

೨೨೧೨೫

೧೯೭೩೦೩೮

೧೫೦೦

೧೮೦೪೮೫

ಇಥಿಯೋಪಿಯಾ

 –

 –

೩೮೦

೬೬೪೬೫

೩೭೦

೬೩೬೦೦

೨೦೦

೪೯೭೬೬

ಫಿಜಿ

 –

 –

 –

 –

೨೦೦

೩೭೩೭೩

 –

 –

ಇಂಗ್ಲೆಂಡ್

೩೮೧೩೧

೩೩೫೪೬೪೫

೧೩೮೭೫

೧೭೩೧೫೮೩

೧೧೯೭೩

೧೦೫೪೨೮೭

೩೭೬೫೪

೬೦೬೨೮೨೨

ಇಸ್ರೇಲ್‌

 –

 –

೬೨೫

೪೩೧೮೭

 –

 –

 –

 –

ಕೆನ್ಯಾ

೬೦೦

೨೭೯೦೪

೮೭೬

೧೦೯೩೭೫

೧೭೨೦

೨೨೦೭೬೪

೨೧೦೧

೪೧೭೦೬೬

ಕೊರಿಯಾ(ರಿ)

 –

 –

 –

 –

೪೫೦

೭೫೦೦೦

 –

 –

ಮೊಜಾಂಬಿಕ್‌

೨೦೦

೪೮೮೭೯

೧೨೬೦

೧೮೭೦೬೯

 –

 –

 –

 –

ಮಲೇಷಿಯಾ

೨೦೬೪

೨೩೯೮೦೬

೬೦೦

೩೭೫೦೬

೭೨೦೦

೧೫೦೬೭೬೦

೬೨೦

೧೦೦೯೪೦

ನೆದರ್ಲ್ಯಾಂಡ್‌

 –

 –

೧೦೦೦

೧೪೦೦೯೫

 –

 –

 –

 –

ನೇಪಾಳ

೨೬೨೧೫

೭೩೪೨೦೩

೨೭೯೫

೧೧೯೧೦೩

೧೮೦೦

೧೩೬೭೧೫

 –

 –

ನ್ಯೂಜಿಲ್ಯಾಂಡ್‌

 –

 –

೩೯೦

೩೪೭೦೯

 –

 –

 –

 –

ಒಮಾನ್‌

೩೦೩೧೬

೨೯೧೭೭೦೨

೧೭೨೮೦

೧೭೩೦೭೫೨

೩೭೫೦

೩೫೪೦೬೦

 –

 –

ಫಿಲಿಪೈನ್ಸ್

 –

 –

 –

 –

೩೩೪೦೦

೧೯೫೩೩೩೨

 –

 –

ದಕ್ಷಿಣ ಆಫ್ರಿಕಾ

೭೩೫೦

೧೧೭೨೪೬೬

೬೫೨೦

೧೨೧೦೮೩೬

೭೨೨೬

೧೩೬೩೩೫೯

೬೧೪೦

೮೦೭೮೬೮

ಸೌದಿ ಅರೇಬಿಯಾ

೩೦೨೦

೯೫೫೮೦

೨೨೮೦

೪೭೭೫೮೧

೮೦೦

೧೧೨೭೪೬

೬೫೦೦

೧೩೩೫೬೯೫

ಸಿಂಗಾಪುರ

೧೮೫೦೫

೪೭೮೦೬೧

 –

 –

೧೦೦೦

೧೪೯೭೦೧

೫೦೬೦೦

೩೦೩೯೫೩೪

ಟಾಂಜಾನಿಯಾ

೩೦೦

೨೪೪೭೪

೨೦೦

೩೮೨೮೭

೧೪೦೦

೧೦೯೯೪೮

 –

 –

ಸಂಯುಕ್ತ ಅರಬ್‌ ಸಂಸ್ಥಾನ

೨೨೭೨೨

೨೦೫೮೫೨೫

೧೫೨೦೦

೧೭೮೩೩೬೮

೪೦೭೧೦

೫೨೨೯೧೬೯

೨೪೨೦೦

೨೩೩೮೪೩೦

ಅಮೇರಿಕಾ

೪೦೦

೩೪೯೪೪

೧೦೦

೩೨೧೨೯

೬೫೦

೧೧೨೦೯೦

 –

 –

ಒಟ್ಟು (ಇತರೇ ರಾಷ್ಟ್ರಗಳು ಸೇರಿ)

೧೮೨೨೮೩

೧೫೯೮೨೧೯೧

೬೯೧೦೩

೮೩೮೩೧೯೮

೧೩೮೨೪೪

೧೪೭೮೦೬೦೮

೧೩೨೩೭೫

೧೪೫೭೪೭೨೭

ಮೂಲ: ಡಿ.ಜಿ.ಸಿ.ಐ. ಮತ್ತು ಎಸ್‌. ಕೋಲ್ಕತ್ತ.

ಸುಲಿಯದಅಡಿಕೆಯರಫ್ತು:

ಹಣ್ಣಡಿಕೆ ಯಾ ಸುಲಿಯದೇ ಇರುವ ಅಡಿಕೆಗೆ ಮಾಲ್ದೀಸ್‌, ಮೋಲ್‌ಡೀವಿಯಾ, ಮಾರಿಷಸ್‌ ಮತ್ತು ಮಲೇಶಿಯಾ ರಾಷ್ಟ್ರಗಳಿಂದ ಬೇಡಿಕೆ ಬರುತ್ತಿದ್ದು. ೧೯೯೬–೯೭ರಲ್ಲಿ ಭಾರತವು ಸುಮಾರು ೧೫೯೬೯೦ ಕಿಲೋದಷ್ಟು ಈ ರೀತಿಯ ಅಡಿಕೆಯನ್ನು ರಫ್ತು ಮಾಡಿ ಸುಮಾರು ೧೦೮೭೯೨೩೫ ರೂಪಾಯಿಗಳನ್ನು ಗಳಿಸಿತ್ತು. ಆದರೆ ೧೯೯೭–೯೮ರಲ್ಲಿ ಈ ಪ್ರಮಾಣವು ಕೇವಲ ೫೮೦೦೦ ಕಿಲೋಗಳಾಗಿ ಗಳಿಸಿದ ಆದಾಯ ರೂಪಾಯಿ ೪೧೪೬೭೭೩ ಆಗಿತ್ತು. ಈ ರೀತಿಯ ಅಡಿಕೆಗೆ ಪ್ರತ್ಯಕ್ಷವಾಗಿ ಯಾವುದೇ ಬೇಡಿಕೆ ಕಂಡು ಬಂದಿಲ್ಲ.

ಮೌಲ್ಯವರ್ಧಿತಅಡಿಕೆಉತ್ಪನ್ನಗಳರಫ್ತು:

ಅಡಿಕೆಯನ್ನು ಮೂಲ ವಸ್ತುವನ್ನಾಗಿ ಉಪಯೋಗಿಸಿ ವಿವಿಧ ರೀತಿಯ ಮೌಲ್ಯರ್ಧಿತ ಉತ್ತನ್ನಗಳಾದ ಪಾನ್‌ಮಸಾಲ, ಗುಟ್ಕಾ, ಸುಗಂಧ ಸುಪಾರಿ ಮುಂತಾದವುಗಳನ್ನಿಂದು ಭಾರತದಲ್ಲಿ ಉತ್ಪಾದಿಸಲಾಗುತ್ತಿದ್ದು, ಇವಕ್ಕಿಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯೇರುತ್ತಿದೆ. ೧೯೯೪–೯೫ರಲ್ಲಿ ಈ ರೀತಿಯ ಉತ್ಪನ್ನಗಳ ರಫ್ತಿನ ಪ್ರಮಾಣವು ಸುಮಾರು ೪೮೪.೨೦ ಟನ್‌ಗಳಾಗಿದ್ದು, ಅದು ೧೯೯೭–೯೮ಕ್ಕಾಗುವಾಗ ೮೮೩.೪೪ ಟನ್‌ಗಳಿಗೇರಿತ್ತು. ಇದರಿಂದಾಗಿ ವಿದೇಶಿ ಮಾರುಕಟ್ಟೆಯಲ್ಲಿಂದು ಮೌಲ್ಯವರ್ಧಿತ ಅಡಕೆಗೆ ಇರುವ ಬೇಡಿಕೆ ಅಧಿಕಗೊಳ್ಳುತ್ತಿದೆಯೆಂಬುದನ್ನು ನಾವು ತಿಳಿದುಕೊಳ್ಳಬಹುದು.

ಮೌಲ್ಯವರ್ಧಿತ ಅಡಕೆ ಉತ್ಪನ್ನಗಳಿಗಿರುವ ಮುಖ್ಯ ಗ್ರಾಹಕ ರಾಷ್ಟ್ರಗಳೆಂದರೆ ಸಂಯುಕ್ತ ಅರಬ್‌ ಸಂಸ್ಥಾನ, ಇಂಗ್ಲೆಂಡ್‌, ಕೆನಡಾ, ಅಮೇರಿಕಾ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ನೇಪಾಳ, ಮೆಕ್ಷಿಕೋ, ಬಲ್ಗೇರಿಯಾ, ಕುವೈಟ್‌ ಮತ್ತು ಕೇನ್ಯಾಗಳು. ಇವುಗಳ ಪೈಕಿ ಅರಬ್‌ ರಾಷ್ಟ್ರಗಲು ಮತ್ತು ಇಂಗ್ಲೆಂಡ್‌ ಅಧಿಕ ಪ್ರಮಾಣದಲ್ಲಿ ಈ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತವೆ ಎಂಬುದನ್ನು ಪಟ್ಟಿ ೧೫ರಲ್ಲಿ ಕೊಟ್ಟಿರುವ ಅಂಕಿ-ಅಂಶಗಳಿಂದ ನಾವು ತಿಳಿದುಕೊಳ್ಳಬಹುದು. ಇಲ್ಲಿ ಕೊಟ್ಟಿರುವ ಅಂಕಿ-ಅಂಶಗಳ ಆಧಾರದಲ್ಲಿ ದೇಶವಿಂದು ಗಣನೆಗೆ ತೆಗೆದುಕೊಳ್ಳಬೇಕಾದ ಮುಖ್ಯ ಅಂಶವೆಂದರೆ ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳಿಗಿಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಏರುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ಪ್ರಯತ್ನಗಳಾಗಬೇಕು. ವಿದೇಶಿ ಗ್ರಾಹಕರ ರುಚಿಯನ್ನರಿತು ಅಡಿಕೆಯ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಯಾಗಿ, ಅವನ್ನು ರಫ್ತುಮಾಡಬೇಕು. ಅಡಿಕೆಯಿಂದು ವಿವಿಧ ರೂಪದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಇಲ್ಲಿ ಇನ್ನಷ್ಟು ಪ್ರಯತ್ನಗಳಾದಲ್ಲಿ ದೇಶದ ರಫ್ತಿನ ಪ್ರಮಾಣ ಅಧಿಕಗೊಂಡು ಅಡಿಕೆ ಕ್ಷೇತ್ರದ ಅದರಲ್ಲೂ ಮುಖ್ಯವಾಗಿ ಬೆಳೆಗಾರರ ರಕ್ಷಣೆಯಾಗಬಹುದು. ಇದಕ್ಕಾಗಿ ನಮ್ಮ ಸಂಸ್ಥೆಗಳು, ಬೆಳೆಗಾರರು ಮತ್ತು ಸಂಶೋಧನಾ ಕೇಂದ್ರಗಳು ಅಡಿಕೆಯಿಂದೊಡಗೂಡಿದ ಇನ್ನಷ್ಟು ಉತ್ಪನ್ನಗಳನ್ನು ತಯಾರಿಸಿ ವಿದೇಶಿ ಮಾರುಕಟ್ಟೆ ಪ್ರವೇಶಿಸಬೇಕು.

ಪಟ್ಟಿ ೧೫
ಭಾರತದಿಂದ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು
ಪ್ರಮಾಣ (ಕಿಲೋಗಳಲ್ಲಿ) ಮೌಲ್ಯ (ರೂಪಾಯಿಗಳಲ್ಲಿ)

ರಾಷ್ಟ್ರ

೧೯೯೪–೯೫

೧೯೯೫–೯೬

೧೯೯೬–೯೭

೧೯೯೭–೯೮

ಪ್ರಮಾಣ

ಮೌಲ್ಯ

ಪ್ರಮಾಣ

ಮೌಲ್ಯ

ಪ್ರಮಾಣ

ಮೌಲ್ಯ

ಪ್ರಮಾಣ

ಮೌಲ್ಯ

ಆಫ್ಘಾನಿಸ್ಥಾನ  –  –  –  –  –  – ೮.೩೪ ೩೫.೭೩
ಆಸ್ಟ್ರೇಲಿಯಾ ೩.೩೪ ೩.೮೮ ೯.೮೦ ೧೧.೫೫ ೯.೨೧ ೧೨.೫೫ ೬.೭೨ ೧೫.೫೭
ಬಹರೈನ್ ೧.೨೫ ೧.೯೬ ೩.೫೩ ೯.೬೫  –  – ೦.೦೩ ೦.೦೮
ಬಾಂಗ್ಲದೇಶ  –  – ೧೭.೬೧ ೩೧.೮೪  –  – ೩.೨೦ ೭.೩೦
ಬಲ್ಗೇರಿಯಾ  –  –  –  –  –  – ೨೦.೪೦ ೧೪೫.೬೩
ಕೆನಡಾ ೧೨.೦೪ ೧೩.೬೧ ೨೦.೩೭ ೩೭.೩೭ ೬೫.೧೫ ೧೩೪.೮೬ ೭೬.೧೨ ೨೦೨.೬೮
ಫ್ರಾನ್ಸ್  –  –  –  – ೨.೦೦ ೧೩.೧೧  –  –
ಹಾಂಗ್‌ಕಾಂಗ್‌ ೦.೭೯ ೧.೨೪ ೧.೫೯ ೧.೭೩  –  – ೦.೪೫ ೧.೨೨
ಜಪಾನ್‌ ೦.೭೩ ೨.೧೮ ೦.೧೫ ೦.೫೧  –  – ೧.೧೭ ೩.೬೬
ಕೆನ್ಯಾ ೩.೬೦ ೧.೫೧ ೨೦.೩೨ ೨೫.೯೭ ೧೨.೬೫ ೩೪.೫೯ ೧೦.೩೩ ೩೦.೭೬
ಕುವೈಟ್‌ ೦.೯೬ ೨.೧೮ ೫.೦೦ ೨೭.೨೦ ೭.೬೦ ೩೩.೪೦ ೧೧.೩೦ ೬೧.೩೫
ಮೆಕ್ಸಿಕೋ ೧೨.೭೦ ೨೬.೫೮  –  – ೧೦.೭೧ ೩೭.೬೭ ೧೫.೦೩ ೨೭.೮೨
ನೇಪಾಳ ೧೮.೦೯ ೨೫.೫೮ ೧೬.೧೪ ೨೦.೧೪ ೩೧.೨೮ ೫೦.೩೫ ೧೭.೨೩ ೪೬.೮೯
ನೆದರ್ಲ್ಯಾಂಡ್‌ ೮.೦೭ ೨೧.೮೪ ೧೮.೧೦ ೧೯೪.೩೪  –  – ೧೦.೬೭ ೧೫.೪೮
ನ್ಯೂಜಿಲ್ಯಾಂಡ್‌ ೧.೨೮ ೨.೩೬ ೩.೦೫ ೫.೮೪ ೭.೨೯ ೧೨.೩೭ ೪.೯೩ ೯.೫೬
ಒಮಾನ್‌ ೫.೫೨ ೧೫.೮೯ ೫.೦೨ ೧೩.೦೮ ೧೨.೮೨ ೨೮.೪೬ ೨೦.೩೦ ೭೩.೩೮
ಪಾಕಿಸ್ಥಾನ  –  – ೩.೨೯ ೨.೪೩ ೧೬.೭೫ ೬೮.೭೨ ೩೦.೮೭ ೧೨೦.೩೦
ಫಿಲಿಪೈನ್ಸ್‌  –  – ೧.೫೦ ೭.೭೪  –  – ೦.೧೬ ೦.೯೧
ರಶ್ಯಾ  –  – ೬೧.೯೪ ೨೭೦.೧೪  –  – ೦.೬೦ ೩.೦೨
ಸೌದಿಅರೇಬಿಯಾ ೩೬.೧೨ ೮೨.೮೭ ೯.೮೫ ೩೭.೨೪ ೪೫.೭೨ ೨೩೨.೪೦ ೧೬.೦೫ ೬೨.೭೧
ಸಿಂಗಾಪುರ ೨.೦೨ ೪.೯೯ ೦.೬೫ ೨.೪೩ ೦.೧೬ ೧.೦೧ ೦.೩೪ ೧.೨೪
ದಕ್ಷಿಣ ಆಫ್ರಿಕ ೧೪.೦೫ ೨೮.೮೪ ೧೨.೧೦ ೧೬.೧೦ ೩೧.೦೮ ೭೪.೩೫ ೨೧.೫೧ ೨೨.೯೦
ಸ್ಪೈನ್‌  –  – ೦.೧೪ ೦.೪೮ ೧೦.೨೦ ೧೬.೩೮ ೦.೪೦ ೦.೫೬
ಟಾಂಜ್ಹಾನಿಯಾ ೨.೬೨ ೨.೬೭ ೮.೦೮ ೧೬.೬೩  –  – ೨.೩೧ ೯.೨೯
ಅರಬ್‌ ಸಂಯುಕ್ತ ಸಂಸ್ಥಾನ ೧೫೮.೬೭ ೬೧೭.೧೧ ೨೧೮.೮೯ ೮೮೮.೫೩ ೨೦೨.೨೭ ೮೬೭.೭೧ ೪೨೫.೩೭ ೨೨೬೮.೦೯
ಇಂಗ್ಲೆಂಡ್‌ ೧೪೯.೧೭ ೧೫೬.೦೬ ೨೨೩.೩೧ ೨೩೦.೧೨ ೯೬.೪೯ ೧೯೧.೪೩ ೧೨೯.೦೮ ೨೩೪.೭೫
ಅಮೇರಿಕಾ ೪೫.೩೮ ೬೮.೭೧ ೬೧.೨೯ ೯೦.೧೦ ೬೫.೦೯ ೮೮.೭೭ ೩೭.೩೬ ೬೮.೮೧
ಒಟ್ಟು (ಇತರೇ ರಾಷ್ಟ್ರಗಳು ಸೇರಿ) ೪೮೪.೨೦ ೧,೦೯೩.೨೬ ೭೩೦.೭೯ ೧೯೬೬.೫೯ ೬೫೭.೧೦ ೧,೯೬೩.೦೧ ೮೮೩.೪೪ ೩೪೯೦.೮೯

ಮೂಲ: ಡಿ.ಜಿ.ಸಿ.. ಮತ್ತು ಎಸ್‌. ಕೋಲ್ಕತ್ತ.

ಭಾರತವಿಂದು ರಫ್ತು ಮಾಡುತ್ತಿರುವ ಅಡಿಕೆ ಮತ್ತು ಅದರ ವಿವಿಧ ರೀತಿಯ ಉತ್ಪನ್ನಗಳ ಬಗ್ಗೆ ಮೇಲೆ ತೋರಿಸಿರುವ ಅಂಕಿ-ಅಂಶಗಳ ಅಧಾರದಲ್ಲಿ ನಾವಿಂದು ಕಂಡುಕೊಳ್ಳಬಹುದಾದ ಪ್ರಮುಖ ಅಂಶವೆಂದರೆ ವಿದೇಶಿ ಮಾರುಕಟ್ಟೆಯಲ್ಲಿಂದು ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆಯು ನಿರಂತರವಾಗಿ ಏರುತ್ತಿರುವುದು. ಈ ರೀತಿಯ ಪ್ರವೃತ್ತಿ ಅಡಿಕೆ ಕ್ಷೇತ್ರದ ಬೆಳವಣಿಗೆಗೆ ಆಶಾಕಿರಣವಾಗಿಂದು ಮೂಡಿಬರುತ್ತಿರುವುದರಿಂದ ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿಂದು ಸಾಗಬೇಕು. ಇದಕ್ಕಾಗಿ ಹಲವು ಮುಖ್ಯ ವಿಚಾರಗಳನ್ನಿಂದು ಈ ಕ್ಷೇತ್ರ ಗಣನೆಗೆ ತೆಗೆದುಕೊಳ್ಳಬೇಕು ಅವುಗಳೆಂದರೆ:

(ಅ) ವಿದೇಶಿ ಮಾರುಕಟ್ಟೆಯಲ್ಲಿ ಅಡಿಕೆ ಮತ್ತು ಅದರ ವಿವಿಧ ಉತ್ಪನ್ನಗಳಿಗಿರುವ ಗ್ರಾಹಕರಾರು, ಬೇಡಿಕೆಯೇನು, ಅವರ ರುಚಿಯೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಧ್ಯಯನ ಕೈಗೊಳ್ಳಬೇಕು. ಇದರೊಂದಿಗೆ ಇಡಿ ಮತ್ತು ಹೋಳಡಿಕೆಗೆ ಇದ್ದ ಸಾಂಪ್ರದಾಯಿಕ ಮಾರಕುಟ್ಟೆಗಳಿಂದು ಯಾಕಾಗಿ ಆಮದಿನ ಪ್ರಮಾಣವನ್ನು ಕಡಿಮೆಗೊಳಿಸುತ್ತಿವೆ ಎಂಬುದನ್ನು ಅರಿಯಬೇಕು. ಇಷ್ಟು ಮಾತ್ರವಲ್ಲದೆ ಅಡಿಕೆಯನ್ನಿಂದು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಲ್ಲಿ ಬೇಡಿಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರು ಪೇರಾಗಲು ಕಾರಣಗಳೇನು, ಅಲ್ಲಿರುವ ಬೇಡಿಕೆ ಕುಸಿದೇ ಯಾ ಅವಿಂದು ಅಡಿಕೆ ಬೆಳೆಯುವ ಬೇರೆ ರಾಷ್ಟ್ರಗಳಿಂದ ಆಮದು ಕೈಗೊಳ್ಳುತ್ತಿವೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಧ್ಯಯನಗಳಾಗಬೇಕು. ಈ ರೀತಿಯ ಅಧ್ಯಯನವನ್ನು “ಅಪೇಡಾ”ದ ಮೂಲಕ ಕೈಗೊಳ್ಳಬಹುದಾಗಿದ್ದು, ಇದಕ್ಕಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು.

(ಆ) ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳ ರಫ್ತನ್ನು ಹೆಚ್ಚಿಸಲು ಮತ್ತು ಇನ್ನಷ್ಟು ಮಾರುಕಟ್ಟೆಗಳನ್ನು ಪ್ರವೇಶಿಸಲು ಆಂತರಿಕವಾಗಿ ಅಡಿಕೆ ಉತ್ಪಾದನಾ ಪ್ರದೇಶಗಳಲ್ಲೇ ಉತ್ತಮ ಗುಣಮಟ್ಟದ ಅಡಿಕೆ ಉತ್ಪನ್ನಗಳನ್ನು ತಯಾರಿಸಬೇಕು.

(ಇ) ಅಡಿಕೆಯಲ್ಲಿರುವ ಔಷಧೀಯ ಗುಣಗಳು ಮತ್ತು ಅದರ ಉಪಯೋಗದಿಂದಾಗಬಹುದಾದ ಪ್ರಯೋಜನಗಳ ಬಗ್ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೋಗ್ಯರೀತಿಯ ಪ್ರಚಾರ ಕೈಗೊಂಡು ಗ್ರಾಹಕರನ್ನು ಆಕರ್ಷಿಸುವುದು.

(ಈ) ಪ್ರಗತಿಶೀಲ ರಾಷ್ಟ್ರಗಳಲ್ಲಿ ಭಾರತದ ಸಂಬಾರ ಪದಾರ್ಥಗಳಿಗೆ ಅನಾದಿಕಾಲದಿಂದಲು ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಸಂಬಾರ ಪದಾರ್ಥಗಳಿಂದೊಡಗೂಡಿದ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ವಿದೇಶಿ ಗ್ರಾಹಕರನ್ನಿಂದು ಆಕರ್ಷಿಸಬೇಕು.

(ಉ) ಅಡಿಕೆ ಮತ್ತು ಅದರ ವಿವಿಧ ರೀತಿಯ ಉತ್ಪನ್ನಗಳ ರಫ್ತಿನ ಬಗ್ಗೆ ಹೆಚ್ಚಿನ ಗಮನ ಮತ್ತು ಆಸಕ್ತಿಯನ್ನು ಹೊಂದಲು ಉತ್ಪಾದನಾ ಪ್ರದೇಶದಲ್ಲೇ ಪ್ರತ್ಯೇಕವಾದ ಒಂದು ರಫ್ತು ವಿಸ್ತರಣಾ ಘಟಕವನ್ನು ಹೊಂದುವುದು.

ಈ ರೀತಿಯದ್ದಾದ ಪರಿಣಾಮಕಾರಿ ಯೋಜನೆಯನ್ನಿಂದು ಕ್ಷೇತ್ರ ಹಮ್ಮಿಕೊಂಡು ಕಾರ್ಯರೂಪಕ್ಕಿಳಿದಲ್ಲಿ ಅಡಿಕೆ ಮತ್ತು ಅದರ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಧಿಕ ಬೇಡಿಕೆ ಬರಬಹುದು. ಆದ್ದರಿಂದ ಈ ನಿಟ್ಟಿನಲ್ಲಿ ಬೆಳೆಗಾರ ಸಮೂಹ, ಸಂಘಟನೆಗಳು ಮತ್ತು ಸಮಸ್ಥೆಗಳು ಸರಕಾರದೊಡಗೂಡಿ ಶ್ರಮ, ಆಸಕ್ತಿ, ದಕ್ಷತೆ, ಮತ್ತು ಪ್ರಾಮಾಣಿಕತೆಯಿಂದ ದಿಟ್ಟ ಹೆಜ್ಜೆಯಿಟ್ಟಲ್ಲಿ ರಫ್ತಿನ ಪ್ರಮಾಣ ಹೆಚ್ಚಾಗಿ ಗಳಿಸಬಹುದಾದ ಆದಾಯವೂ ಅಧಿಕಗೊಂಡು ಕ್ಷೇತ್ರ ಅಭಿವೃದ್ಧಿಗೊಳ್ಳಬಹುದು.

ಭಾರತಕ್ಕೆ ಅಡಿಕೆಯ ಆಮದು

ಆಂತರಿಕ ಬೇಡಿಕೆಯನ್ನು ಸರಿದೂಗಿಸಲು ಭಾರತವು ಅನಾದಿಕಾಲದಿಂದಲೂ ಅಡಿಕೆಯನ್ನು ಆಮದುಮಾಡಿಕೊಳ್ಳತ್ತಿತ್ತು. ಈ ರೀತಿಯ ಆಮದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಡೆಯುತ್ತಿತ್ತು. ಇದೇ ಪ್ರವೃತ್ತಿ ಮುಂದೆಯೂ ಬಂದು ಈಗಲೂ ವಿದೇಶಗಳಿಂದ ಅಡಿಕೆಯ ಆಮದು ನಮ್ಮಲ್ಲಿಗಾಗುತ್ತಿದೆ. ಸರಕಾರವು ಕೊಡುತ್ತಿರುವ ಅಂಕಿ-ಅಂಶಗಳ ಪ್ರಕಾರ ಅಡಿಕೆಯ ಆಮದಿನ ಪ್ರಮಾಣವು ೧೯೬೦ರ ದಶಕದ ತನಕ ಅಧಿಕ ಮಟ್ಟದಲ್ಲಿತ್ತು. ಆ ಬಳಿಕ ಸರಕಾರವು ಆಮದಿನ ಮೇಲೆ ಕಟ್ಟುನಿಟ್ಟಿನ ಹತೋಟಿ ಕ್ರಮಗಳನ್ನು ಜ್ಯಾರಿಗೊಳಿಸಿದ್ದರಿಂದ ಈ ಪ್ರಮಾಣವು ಕುಸಿಯುತ್ತಾ ಹೋಗಿ ೧೯೬೮–೬೯ರಿಂದ ೧೯೭೦–೭೧ರ ತನಕ ಯಾವುದೇ ಆಮದಾಗದಂತಾಯಿತು. ಆದರೆ ೧೯೭೧–೭೨ರಿಂದ ೧೯೭೩–೭೪ರ ತನಕ ಅಲ್ಪ ಪ್ರಮಾಣದ ಅಡಿಕೆಯ ಆಮದು ನಮ್ಮಲ್ಲಿಗೆ ಆದರೂ ಪುನಃ ೧೯೭೪–೭೫ರಿಂದ ೧೯೯೩–೯೪ರ ತನಕ ಇದಿಲ್ಲದಾಗಿತ್ತು. ೧೯೯೪–೯೫ರಿಂದ ಬಾರತವು ಅಡಿಕೆಯ ಆಮದಿಗೆ ಆಸಕ್ತಿಯನ್ನು ತೋರಿಸಿದ್ದು ಇಲ್ಲಿ ಈ ಪ್ರಮಾಣವು ಏರಿಳಿತಕ್ಕೊಳಗಾಗುತ್ತಿದೆ. ೧೯೭೦ರ ದಶಕದಲ್ಲೊಮ್ಮೆ ಮತ್ತು ೨೦೦೦ದಿಂದೀಚೆಗೆ ಅಡಿಕೆಯ ಆಮದಿನ ಪ್ರಮಾಣ ಅತ್ಯಧಿಕ ಮಟ್ಟದಲ್ಲಿದೆಯೆಂಬ ವದಂತಿ ಮಾರುಕಟ್ಟೆಯಲ್ಲಿ ಕೇಳಿಬಂತು. ಈ ನಿಟ್ಟಿನಲ್ಲಿ ದೇಶವು ಪ್ರತ್ಯಕ್ಷವಾಗಿ ಆಮದು ಮಾಡಿಕೊಂಡ ಅಡಿಕೆಯ ಪ್ರಮಾಣವೆಷ್ಟೆಂಬುದನ್ನು ಪಟ್ಟಿ ೧೬ರಲ್ಲಿ ಕೊಟ್ಟ ಅಂಕಿ-ಅಂಶಗಳಿಂದ ನಾವಿಂದು ತಿಳಿದುಕೊಳ್ಳಬಹುದು.

ಪಟ್ಟಿ ೧೬
ಭಾರತಕ್ಕೆ ಅಡಿಕೆಯ ಆಮದು
ಪ್ರಮಾಣ(ಟಿನ್ ಗಳಲ್ಲಿ) ಮೌಲ್ಯ (‘೦೦೦ರೂಪಾಯಿಗಳು)

ವರ್ಷ

ಪ್ರಮಾಣ

ಮೌಲ್ಯ

೧೯೪೯–೫೦ ೩೯೯೧೨ ೨೩೯೮೯
೫೦–೫೧ ೪೫೧೨೦ ೩೪೨೬೦
೫೧–೫೨ ೫೦೬೦೦ ೫೫೭೩೫
೫೨–೫೩ ೩೭೨೬೬ ೩೪೫೦೩
೫೩–೫೪ ೩೬೪೪೬ ೩೦೪೮೨
೫೪–೫೫ ೨೯೬೪೬ ೨೧೬೬೧
೫೫–೫೬ ೪೨೪೪೭ ೪೩೫೯೮
೫೬–೫೭ ೩೯೯೦೩ ೫೪೪೬೬
೫೭–೫೮ ೩೦೮೩೯ ೨೯೭೬೬
೫೮–೫೯ ೧೮೩೬೪ ೮೩೫೮
೫೯–೬೦ ೧೪೧೭೫ ೭೧೮೬
೬೦–೬೧ ೧೧೧೭೦ ೬೪೬೩
೬೧–೬೨ ೧೦೦೪೧ ೪೫೩೨
೬೨–೬೩ ೮೯೮ ೩೪೬೧
೬೩–೬೪ ೨೮೧೦ ೧೩೮೭
೬೪–೬೫ ೩೨೭೫ ೧೯೨೬
೬೫–೬೬ ೩೩೨೩ ೨೦೪೫
೬೬–೬೭ ೫೯೭ ೩೮೫
೬೭–೬೮ ೧೩೬ ೧೦೫
೬೮–೭೧  –  –
೭೧–೭೨ ೯೦ ೬೫
೭೨–೭೩ ೧೬ ೧೫
೭೩–೭೪
೭೪–೯೪  –  –
೯೪–೯೫ ೫೪೫ ೭೦೨೫
೯೫–೯೬ ೫೦೯೧ ೯೪೬೭೫
೯೬–೯೭ ೯೫೬೫ ೨೧೨೨೩೨
೯೭–೯೮ ೧೦೮೨೩ ೩೩೯೬೪೮
೯೮–೯೯ ೬೭೦೭ ೧೮೭೫೫೭
೯೯–೨೦೦೦ ೩೦೨೨ ೯೪೩೫೬
೨೦೦೦–೨೦೦೧+ ೮೦೫ ೨೩೧೫೯

+ಅಗೋಸ್ತು ೨೦೦೦ದ ತನಕ.
ಮೂಲ:ಡಿ.ಜಿ.ಸಿ.ಐ. ಮತ್ತು ಎಸ್. ಕೋಲ್ಕತ್ತ.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಶ್ರೀಲಂಕಾ, ಮಲೇಶಿಯಾ, ಸಿಂಗಾಪುರಗಳಿಂದ ಅಂತರಿಕ ಬೇಡಿಕೆಗೆ ಅನುಗುಣವಾದ ಅಡಿಕೆ ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ಆಮದಿನ ಬಹುಪಾಲು ಒಣಗಿಸಿದ್ದ ಅಡಿಕೆಯೇ ಆಗಿತ್ತು. ಆ ಕಾಲದಲ್ಲಿ ಸಮುದ್ರದ ಮೂಲಕ ಈ ಆಮದು ಆಗುತ್ತಿದ್ದು, ೧೯೩೮–೩೯ರಲ್ಲಿ ದೇಶವು ಆಮದು ಮಾಡಿದ ಅಡಿಕೆಯ ಪ್ರಮಾಣವು ಅತ್ಯಧಿಕ ಮಟ್ಟದ್ದಾದ ೯೫,೩೦೦೦ ಟನ್‌ಗಳಷ್ಟಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ, ೧೯೩೬–೩೭ರಿಂದ ೧೯೪೦–೪೧ರ ಅವಧಿಯಲ್ಲಿ ವಾರ್ಷಿಕ ಸರಾಸರಿ ೮೧,೭೭೧ ಟನ್‌ಗಳಷ್ಟು ಅಡಿಕೆಯ ಆಮದು ಭಾರತಕ್ಕಾಗಿತ್ತು. ಆದರ ೧೯೪೧–೪೨ರಿಂದ ೧೯೪೫–೪೭ರ ಅವಧಿಯಲ್ಲಿ ಈ ಪ್ರಮಾಣವು ಗಣನೀಯವಾಗಿ ಕುಸಿದು ಅದು ೧೭೫೪೨ ಟನ್‌ಗಳಿಗಿಳಿಯಿತು. ಬಳಿಕ ಈ ಪ್ರಮಾಣವು ಏರಿಳಿತಕ್ಕೊಳಪಟ್ಟಿತ್ತು. ಆದರೆ ಸ್ವಾತ್ರಂತ್ರ್ಯ ದೊರೆತ ಬಳಿಕ ಭಾರತ ಸರಕಾರವು ಅಡಿಕೆಯ ಆಮದಿನ ಮೇಲೆ ಪ್ರಮಾಣಾತ್ಮಕ ಮತ್ತು ಹಣಕಾಸಿನ ನಿಗದಿಯನ್ನು ಗೊತ್ತುಪಡಿಸಿದ್ದರಿಂದ ಮತ್ತು ಆಮದಿನ ಮೇಲೆ ಸುಂಕವನ್ನು ಹೇರಿದ್ದರಿಂದ ಈ ಪ್ರಮಾಣವು ಕೆಳಕ್ಕಿಳಿಯಿತು. ಹೀಗಿದ್ದರೂ ೧೯೫೧–೫೨ರಲ್ಲಿ ದೇಶದೊಳಗೆ ಬಂದ ಅಡಿಕೆಯ ಪ್ರಮಾಣವು ೫೦,೬೦೦ ಟನ್‌ಗಳಷ್ಟಾಗಿತ್ತು. ಬಳಿಕ ಈ ಪ್ರಮಾಣ ಕೆಳಕ್ಕಿಳಿಯಿತು.

ಬಾರತವು ಅಡಿಕೆಯನ್ನಿಂದು ಶ್ರೀಲಂಕಾ, ಇಂಡೋನೇಷಿಯಾ, ಮಾಯ್‌ನಮಾರ್, ಸಿಂಗಾಪುರ, ಮಲೇಶಿಯಾ, ಥೈಲ್ಯಾಂಡ್, ನೇಪಾಳ, ಮುಂತಾದ ರಾಷ್ಟಗಳಿಂದ ಆಮದುಮಾಡಿಕೊಳ್ಳತ್ತಿದ್ದು, ಈ ಆಮದಿನ  ಆದಿಕೆಯಲ್ಲಿ ಬಹುಪಾಲು ಚಾಲಿ ರೂಪದ ಅಡಿಕೆಯಾಗಿರುತ್ತದೆ ಕಳೆದ  ನಾಲ್ಕೈದು ವರ್ಷಗಳಲ್ಲಿ ಭಾರತಕ್ಕೆ ಇಂಡೋನೇಷಿಯಾ,  ಮಾಯ್‌ನಮಾರ, ಥೈಲ್ಯಾಂಡ್‌ಗಳಿಂದ ಅಧಿಕ ಪ್ರಮಣದ ಆಡಿಕೆ ಆಮದಾಗುತ್ತಿದ್ದು, ಇದರೊಂದಿಗೆ ಪರೋಕ್ಷದಾರಿಯಲ್ಲೂ ಆಡಿಕೆಯಿಂದು ದೇಶದೊಳಕ್ಕೆ ಹರಿಯುತ್ತಿದೆ ಎಂಬ ಮಾತು ಮಾರುಕಟ್ಟೆಯ ವಲಯದಲ್ಲಿಂದು ಕೇಳಿಬರುತ್ತಿದೆ. ಈ ರೀತಿಯ ಆಮದು ಹೆಚ್ಚಾಗಿ ಆಂತರಿಕ ಉತ್ಪಾದನೆಯಲ್ಲಿ ಕೊರತೆ ಕಂಡುಬಂದಾಗ ಅಥವಾ ಕೊರತೆಯೆಂಬ ಭೀತಿ ಆದಾಗ ಇಲ್ಲವೇ ವದಂತಿ ಹಬ್ಬಿದಾಗ ಮಾತ್ರ ಆಗುತ್ತಿರುವುದನ್ನು ನಾವು ಕಂಡುಕೊಳ್ಳಬಹುದು. ಕೋಲ್ಕತ್ತದಲ್ಲಿರುವ ಅಂಕಿ-ಅಂಶಗಳನ್ನು ಒದಗಿಸುವ ಸರಕಾರದ ನಿರ್ದೇಶನಾಲಯದ ಪ್ರಕಾರ ಭಾರತಕ್ಕೆ ಅಮೇರಿಕಾ, ಟಾಂಜ್ಹಾನಿಯಾ, ಚೀನಾ, ಆಸ್ಟ್ರೇಲಿಯಾ, ಜರ್ಮನಿ, ಸ್ವಿಜ್ಜರ್ ಲ್ಯಾಂಡ್,  ವಿಯೆಟ್ನಾಂಗಳಿಂದಲೂ ಅಲ್ಪ ಪ್ರಮಾಣದ ಅಡಿಕೆಯ ಆಮದು ಅಗೊಮ್ಮೆ ಈಗೊಮ್ಮೆ ಆಗುತ್ತಲಿದೆ.

ಭಾರತಕ್ಕೆ ಆಮದಾಗುತ್ತಿರುವ ಅಡಿಕೆಯ ಬೆಲೆಯು ಆಂತರಿಕವಾಗಿ ಇರುವ ಬೆಲೆಗೆ ಹೋಲಿಸಿದಾಗ ಅತ್ಯಲ್ಪವಾಗಿದ್ದು, ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭಾರತದ ಅಡಿಕೆ ವ್ಯಾಪಾರಸ್ಥರು (ಉತ್ತರ ಭಾರತದ) ಆಮದಿನತ್ತ ಅಸಕ್ತಿಯನ್ನು ತೋರಿಸುತ್ತಿದ್ದಾರೆ. ಆದರೆ ವ್ಯಾಪಾರಿ ವಲಯದ ಪ್ರಕಾರ ಆಮದಾಗುತ್ತಿರುವ ಅಡಿಕೆಯ ಗುಣಮಟ್ಟ ಅಂತರಿಕವಾಗಿ ಉತ್ಪಾದಿಸಲ್ಪಡುವ ಅಡಿಕೆಯ ಗುಣಮಟ್ಟಕ್ಕೆ ಹೋಲಿಸಿದಾಗ ತೀರಾ ಕಳಪೆ ದರ್ಜೆಯದ್ದಾಗಿದ್ದು ಇವೇನಿದ್ದರೂ ನಮ್ಮಲ್ಲಿನ ಚಾಲಿ ಅಡಿಕೆ ಯಾವುದೇ ಪೈಪೋಟಿಯನ್ನು ನೀಡಲಾರವು. ಹೀಗಿದ್ದರೂ ಆಮದಾಗುತ್ತಿರುವ ಅಡಿಕೆಗಿಂದು ಆಂತರಿಕವಾಗಿ ಅಡಿಕೆಯ ಧಾರಣೆಯ ಮೇಲೆ ಹೊಡೆತಕೊಡುವ ಸಾಮರ್ಥ್ಯವಿದೆಯೆಂಬುದನ್ನು ಇತ್ತೀಚಿನ ವರ್ಷಗಳಲ್ಲಿ ಕಂಡುಕೊಳ್ಳಲಾಗಿದೆ. ಆಮದಾಗುತ್ತಿರುವ ಅಡಿಕೆಗೆ ಉತ್ಪಾದನಾ ರಾಷ್ಟ್ರಗಳಲ್ಲಿರುವ ಧಾರಣೆಯು ಸುಮಾರು ರೂಪಾಯಿ ೧೫ರಿಂದ ೪೫ರ ತನಕವಿದ್ದು, ಈ ಬೆಲೆಯಿಂದು ಅಡಿಕೆ ವ್ಯವಹಾರಸ್ಥರ ಆಕರ್ಷಣೆಗೊಳಗಾಗಿದೆ. ಇದರೊಂದಿಗೆ ನೇಲಾಳದ ಮೂಲಕ ಭಾರತಕ್ಕೆ ಅಡಿಕೆಯ ಒಳಹರಿವು ಆಗುತ್ತಿದೆಯೆಂಬ ಗುಮಾನಿಯೂ ಇದ್ದು, ನೇಪಾಳ ಮತ್ತು ಭಾರತದೊಳಗಿನ ವ್ಯಾಪಾರಿ ಸಂಬಂಧ ಇದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುತ್ತಿದೆ. ಭಾರತಕ್ಕಿಂದು ಪ್ರತ್ಯಕ್ಷವಾಗಿ ಅಂದರೆ ಸರಕಾರದ ಗಮನಕ್ಕೆ ಬಂದು ಆಮದಾಗುತ್ತಿರುವ ಅಡಿಕೆ ಪ್ರಮಾಣ ಅತ್ಯಲ್ಪವೆಂದು ಕಂಡುಬರುತ್ತಿದ್ದರೂ, ಮಾರುಕಟ್ಟೆವಲಯದ ಪ್ರಕಾರ ಅಡಿಕೆಯಿಂದು ಒಣಹಣ್ಣಿನ ರೂಪದಲ್ಲಿ ಅಲ್ಪ ಪ್ರಮಾಣದ ಸುಂಕಕ್ಕೊಳಪಟ್ಟು ಒಳಹರಿಯುತ್ತಿದೆ. ಒಟ್ಟಾರೆಯಾಗಿ ಭಾರತಕ್ಕಿಂದು ಆಮದಾಗುತ್ತಿರುವ ಅಡಿಕೆಯ ಒಟ್ಟು ಪ್ರಮಾಣವೆಷ್ಟು ಎಂಬುದರ ಬಗ್ಗೇ ಖಚಿತವಾದ ಮಾಹಿತಿಯ ಆಭಾವವಿದ್ದು, ಈ ವಿಚಾರದಿಂದಾಗಿ ಯಾ ಮಾಹಿತಿಯ ಕೊರತೆಯಿಂದು ಆಂತರಿಕವಾಗಿ ಆಮದೆಂಬ ಭೀತಿಯನ್ನು ಸೃಷ್ಟಿಸಿ ಧಾರಣೆಯ ಏರಿಳಿತಕ್ಕೆ ಸಹಾಯಕಾರಿಯಾಗಿದೆ. ಆದ್ದರಿಂದ ಇಲ್ಲಿಂದು ಖಚಿತ ಮಾಹಿತಿಯನ್ನು ಕೊಡಬಲ್ಲ ವ್ಯವಸ್ಥೆಗಳಾಗಬೇಕು. ಸರಕಾರದ ಕಣ್ಣು ತಪ್ಪಿಸಿ ಯಾ ಪರೋಕ್ಷವಾಗಿ ಇಲ್ಲವೇ ಕಾನೂನಿನ ಕೈಗೆ ಸಿಗದೆ ಬರುವ ಅಡಿಕೆಯ ಮೇಲೆ ನಿರ್ಬಂಧ ಹೇರಬೇಕು. ಇದರೊಂದಿಗೆ ಆಮದಾಗುವ ಅಡಿಕೆಯ ಗುಣಮಟ್ಟದ ಬಗ್ಗೆ ಪರಿಶೀಲನೆಗಳಾಗಬೇಕು. ಸರಕಾರದ ಅಂಕಿ-ಅಂಶಗಳಿಗನುಗುಣವಾಗಿ ಆಮದಾಗುತ್ತಿರುವ ಅಡಿಕೆಯು ಆಂತರಿಕ ಧಾರಣೆಗೆ ಯಾವುದೇ ಹೊಡೆತ ನೀಡಲಾರದ್ದಾಗಿರುವುದರಿಂದ ಸರಕಾರವಿಂದು ಪರೋಕ್ಷವಾಗಿ ಅಡಿಕೆಯ ಒಳಹರಿವಾಗುತ್ತಿದೆಯೇ ಎಂಬುದನ್ನು ತಿಳಿದು, ಅದಕ್ಕೆ ಕಡಿವಾಣ ಹಾಕಿ ಆಮದಿನಿಂದಾಗುತ್ತಿರುವ (ಪ್ರತ್ಯಕ್ಷ ಮತ್ತು ಪರೋಕ್ಷ) ತೊಂದರೆಗಳನ್ನು ನಿವಾರಿಸಬೇಕು. ಈ ನಿಟ್ಟಿನಲ್ಲಿ ಬೆಳೆಗಾರರು, ಸಂಘಟನೆಗಳು, ಸಹಕಾರಿ ಸಂಸ್ಥೆಗಳು ಒಗ್ಗೂಡಿ ಸರಕಾರದ ಮೇಲೆ ಒತ್ತಡ ಹೇರಬೇಕು. ಈಗಿಂದೀಗಲೇ ಈ ಕಾರ್ಯಗಳಾಗದಿದ್ದಲ್ಲಿ ಅಡಿಕೆ ಕ್ಷೇತ್ರ ಮುಂದೆಯೂ ಸೋಲನ್ನು ಅನುಭವಿಸಬೇಕಾಗಬಹುದು. ಆದ್ದರಿಂದ ಇಲ್ಲಿಂದು ಗಣನೆಗೆ ತೆಗೆದುಕೊಳ್ಳಬೇಕಾದ ಮುಖ್ಯ ಅಂಶಗಳೆಂದರೆ:

(೧) ವಿಶ್ವ ವ್ಯಾಪಾರಿ ಸಂಸ್ಥೆಯ ಒಪ್ಪಂದ (WTO)ಕ್ಕನುಗುಣವಾಗಿ ಪ್ರಮಾಣಾತ್ಮಕ ನಿರ್ಬಂಧವಿಂದು ಹೋಗಿ, ಅಡಿಕೆಯನ್ನು ಎಷ್ಟೇ ಪ್ರಮಾಣದಲ್ಲೂ ನಿಗದಿ ಪಡಿಸಿದ ಸುಂಕಕೊಟ್ಟು ಆಮದು ಮಾಡಿಕೊಳ್ಳಬಹುದಾಗಿದೆ. ಪ್ರಕೃತ ಗರಿಷ್ಟ ಮಟ್ಟದ ಸುಂಕವನ್ನು ಭಾರತವು ಹೇರುತ್ತಿದ್ದರೂ ವಿದೇಶಿ ಅಡಿಕೆಯ ಧಾರಣೆ ಅತ್ಯಲ್ಪವಾದುದರಿಂದ ಸುಂಕ ಸೇರಿಸಿದರೂ ಆಂತರಿಕ ಧಾರಣೆಗಿಂತ ಕಡಿಮೆ ದರದಲ್ಲಿ ಇವು ದೊರಕಿ ಅಡಿಕೆ ವ್ಯವಹಾರಸ್ಥರಿಗೆ ಇದು ಒಂದು ಪ್ರಮುಖ ಆಕರ್ಷಣೆಯಾಗಬಹುದು. ಆದ್ದರಿಂದ ಬಳಕೆದಾರ ಪ್ರದೇಶದಲ್ಲಿರುವ ಅಡಿಕೆ ವ್ಯವಹಾರಸ್ಥರೊಂದಿಗೆ ಬೆಳೆಗಾರ ಪ್ರದೇಶ ಸಂಬಂಧ ಇನ್ನು ಮುಂದೆಯಾದರೂ ಉತ್ತಮರೀತಿಯದ್ದಾಗಲೇ ಬೇಕು.

(೨) ಪರೋಕ್ಷ ದಾರಿಯಲ್ಲಿ ಒಳ ಹರಿಯುತ್ತಿರುವ ಅಡಿಕೆಯ ಮೇಲೆ ಸರಕಾರವು ತೀವ್ರ ನಿಗಾವಿರಿಸಿ ಅದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಬೆಳೆಗಾರ ಪ್ರದೇಶದ ಒತ್ತಡ ಅತ್ಯಗತ್ಯ.

(೩) ಅಮದಾಗುತ್ತಿರುವ ಅಡಿಕೆಯನ್ನು ಗುಣಮಟ್ಟ ಪರಿಶೀಲನೆಗೊಳಪಡಿಸುವ ಕಾರ್ಯಗಳಾಗಬೇಕು. ಈ ವ್ಯವಸ್ಥೆಯನ್ನು ಬೆಳೆಗಾರ ಪ್ರದೇಶದಲ್ಲಿ ರುವ ಸಂಶೋಧನಾ ಕೇಂದ್ರಗಳೇ ಕೈಗೊಳ್ಳವಂತಾಗಬೇಕು.

(೪) ಅಡಿಕೆಯ ಆಮದಿನ ಒಟ್ಟು ಪ್ರಮಾಣದ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಯಾಗಬೇಕು. ಈ ಮಾಹಿತಿಯನ್ನು ಕಾಲಕಾಲಕ್ಕೆ ಮಾರುಕಟ್ಟೆಗೆ ಒದಗಿಸಿ ಮಾರುಕಟ್ಟೆಯಲ್ಲಾಗುತ್ತಿರುವ ಊಹಾಪೋಹಗಳಿಗೆ ತೆರೆಯೆಳೆಯಬೇಕು.

(೫) ವಿದೇಶಗಳಲ್ಲಿಂದು ಇರುವ ಅಡಿಕೆ ಬೆಳೆಯ ವಿಸ್ತೀರ್ಣ, ಉತ್ಪಾದನೆ, ಬಳಕೆ, ಅಲ್ಲಿಂದಾಗುತ್ತಿರುವ ರಫ್ತು, ಆಮದು, ಅಲ್ಲಿನ ಧಾರಣೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಣೆಯಾಗಬೇಕು.

(೬) ಒಣಹಣ್ಣಿನ ರೂಪದಲ್ಲಿ ಅಡಿಕೆ ಆಮದಾಗುವುದು ನಿಜವಾದಲ್ಲಿ ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿ ಈ ರೀತಿಯ ಆಮದಿಗೆ ತಡೆ ಹಾಕುವ ಪ್ರಯತ್ನ ನಮ್ಮಲ್ಲಾಗಬೇಕು.