ಅಡಿಕೆಕ್ಷೇತ್ರದಅಭಿವೃದ್ಧಿಗಾಗಿಸಂಸ್ಥೆಕೈಗೊಂಡಕ್ರಮಗಳು:

ಅಡಿಕೆ ಕ್ಷೇತ್ರದ ಅಭಿವೃದ್ಧಿ ಸಾಧಿಸಬೇಕಿದ್ದಲ್ಲಿ ಅಡಿಕೆಗೆ ಉತ್ತಮ ಧಾರಣೆ ದೊರಕಲೇಬೇಕು. ಅಲ್ಲದೆ, ಅಡಿಕೆಯ ಬದಲಿ ಬಳಕೆ ಬಗ್ಗೆ ಅಗತ್ಯವಾದ ಕ್ರಮಗಳೂ ಕಾರ್ಯರೂಪಕ್ಕೆ ಬರಬೇಕು. ಈ ಎಲ್ಲಾ ದೃಷ್ಟಿಯನ್ನಿಟ್ಟು ಕೊಂಡು ಕ್ಯಾಂಪ್ಕೋ ಅಡಿಕೆಯ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಗ್ರಾಹಕರ ರುಚಿಗನುಗುಣವಾಗಿ ಬಿಡುಗಡೆಗೊಳಿಸಿ ಯಶಸ್ಸನ್ನು ಸಾಧಿಸಿದ್ದು, ಇಲ್ಲಿ ಹೆಸರಿಸಬಹುದಾದ ಉತ್ಪನ್ನಗಳೆಂದರೆ ಕಾಜು ಸುಪಾರಿ, ಕ್ಯಾಂಪ್ಕೋ ಎ-೧, ಮುಂತಾದವುಗಳು, ಅಡಿಕೆಯ ಬದಲಿ ಬಳಕೆಯನ್ನರಿಯಲು ಮತ್ತು ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲು ಸಂಸ್ಥೆ ಒಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನವನ್ನು ೧೯೯೮ರಲ್ಲಿ ಸ್ಥಾಪಿಸಿದ್ದು, ಈ ಪ್ರತಿಷ್ಠಾಪನವು ಅಡಿಕೆಯ ಪರ್ಯಾಯ ಬಳಕೆ ಹಾಗೂ ಸಾಂಸ್ಕೃತಿಕ ಸಂಪನ್ನ ಆರೋಗ್ಯಕರ ವ್ಯಕ್ತಿತ್ವಕ್ಕೆ ಪೂರಕವಾದ ವ್ಯಾಪಕ ಸಂಶೋಧನೆ, ಮಾರಾಟದ ವ್ಯವಸ್ಥೆಗೆ ಪ್ರತ್ಯಕ್ಷ ಸಹಕಾರ ಹಾಗೂ ಪ್ರೋತ್ಸಾಹ ನೀಡಲು ಮುಂದೆ ಬರುವುದರೊಂದಿಗೆ ದೇಶ ವಿದೇಶಗಳಲ್ಲಿ ಅಡಿಕೆಯ ಹೆಚ್ಚಿನ ಬಳಕೆಗಳ ಬಗ್ಗೆ ಪ್ರಚಾರ ನೀಡುವುದು, ಬೆಳೆಗಾರ ಮತ್ತು ಬಳಕೆದಾರರಿಗೆ ವಿಶೇಷ ಮಾಹಿತಿ ಒದಗಿಸುವುದು, ಬೆಳೆಗಾರರ ಸಮಗ್ರ ಅಭಿವೃದ್ಧಿಯತ್ತ ವಿಶೇಷ ಗಮನ, ದೇಶ ವಿದೇಶಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಗಳ ಬಗ್ಗೆ ಮಾಹಿತಿ ಸಗ್ರಹಣೆ ಮುಂತಾದ ವಿಚಾರಗಳನ್ನು ತನ್ನ ಮುಖ್ಯ ಉದ್ದೇಶಗಳನ್ನಾಗಿಟ್ಟುಕೊಂಡು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಒಟ್ಟಾರೆಯಾಗಿ ಕ್ಯಾಂಪ್ಕೋ ಸಂಸ್ಥೆಯು ತನ್ನ ಆರಂಭದಿಂದ ಈ ತನಕ ಅಡಿಕೆ ಮತ್ತು ಕೊಕ್ಕೋ ಬೆಳೆಗಾರರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಕ್ಷೇತ್ರದ ರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ವಿಚಾರಗಳನ್ನೊಳಗೊಂಡ ಸುಮಾರು ಹತ್ತೊಂಬತ್ತು ಮುಖ್ಯ ಉದ್ದೇಶಗಳನ್ನು ಅದಿಂದು ಕೈಗೆತ್ತಿಕೊಂಡಿದೆ. ಅಡಿಕೆ ಕ್ಷೇತ್ರದ ರಕ್ಷಣೆಗಾಗಿ ಈ ಸಂಸ್ಥೆ ನಿರಂತರ ಶ್ರಮಿಸುತ್ತಿದ್ದರೂ, ಅದರ ಮುಂದಿಂದು ಹತ್ತು ಹಲವು ಸಮಸ್ಯೆಗಳು ಎದುರಾಗಿವೆ. ಉದಾಹರಣೆಗೆ ಅಡಿಕೆ ಧಾರಣೆಯಲ್ಲಾಗುತ್ತಿರುವ ಏರುಪೇರು, ಖಾಸಗಿ ವ್ಯವಹಾರಸ್ಥರ ಸವಾಲುಗಳು, ಬಂಡವಾಳದ ಕೊರತೆ, ನಿರ್ವಹಣಾ ಹೆಚ್ಚಳ, ಸರಕಾರದ ಬೆಂಬಲದ ಕೊರತೆ ಇತ್ಯಾದಿಗಳು.

ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ಮಾರುಕಟ್ಟೆಯ ಸುಧಾರಣೆಗಾಗಿ ಕಳೆದ ೨೮ ವರ್ಷಗಳಿಂದ ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಇದಿಂದು ಪ್ರಬುದ್ಧನಾಗಿರುವುದರಿಂದ ಮುಂದಿನ ದಿನಗಳಲ್ಲಿ ಇಲ್ಲಿ ಇನ್ನಷ್ಟು ಸುಧಾರಣೆ ಮತ್ತು ಪರಿವರ್ತನೆಗಳಾಗಬೇಕಾಗ ಬಹುದು. ಆದ್ದರಿಂದ ಸಂಸ್ಥೆಯಿಂದು ತನ್ನ ಮೂಲ ಉದ್ದೇಶಗಳನ್ನೆಲ್ಲಾ ಕಾರ್ಯರೂಪಕ್ಕಿಳಿಸಲೇಬೇಕು. ಸಂಸ್ಥೆಯಿಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಸದಸ್ಯರೊಡಗೂಡಿ ಅದಿಂದು ಅಗತ್ಯ ಪರಿಹಾರಗಳನ್ನು ಕಂಡು ಕೊಳ್ಳಬೇಕು. ೨೦೦೧–೨೦೦೧ರಲ್ಲಿ ಕಂಡು ಬರುತ್ತಿರುವ ಅಡಿಕೆ ಧಾರಣೆ ಕುಸಿತಕ್ಕೆ ತಡೆಯೊಡ್ಡಲು ಶ್ರಮಿಸಿದ ಸಂಸ್ಥೆ. ಇನ್ನು ಮುಂದೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಲು ತನ್ನನ್ನು ತಾನೇ ಬಲಪಡಿಸಿಕೊಳ್ಳಬೇಕು. ಬದಲಾಗುತ್ತಿರುವ ಮಾರುಕಟ್ಟೆಗನುಗುಣವಾಗಿ ತಾನೂ ಬದಲಾಗಿ ತನ್ನ ಮೂಲ ಉದ್ದೇಶಗಳನ್ನು ಈಡೇರಿಸಬೇಕು. ಹೀಗಾದಲ್ಲಿ ಬೆಳೆಗಾರರ ಮತ್ತು ಕ್ಷೇತ್ರದ ರಕ್ಷಣೆಯಾಗಿ ಸಂಸ್ಥೆಯು ಪ್ರಗತಿಯನ್ನು ಸಾಧಿಸಬಹುದು. ಕ್ಯಾಂಪ್ಕೋವಿಂದು ಖರೀದಿ ಮಾಡುತ್ತಿರುವ ಅಡಿಕೆಯ ಪ್ರಮಾಣವು ದೇಶದ ಒಟ್ಟು ಅಡಿಕೆ ಉತ್ಪಾದನೆಯ ಶೇಕಡಾ ೧೦ ರೊಳಗಿದ್ದು (ಪಟ್ಟಿ ೧೧).

ಪಟ್ಟಿ ೧೧
ಭಾರತದ ಅಡಿಕೆ ಉತ್ಪಾದನೆಯಲ್ಲಿ ಕ್ಯಾಂಪ್ಕೋ ಖರೀದಿ ಪಾಲು

ವರ್ಷ

ಭಾರತದ ಒಟ್ಟು ಉತ್ಪಾದನೆ (ಟನ್‌ಗಳಲ್ಲಿ)

ಕ್ಯಾಂಪ್ಕೋದ ಖರೀದಿಯ ಪಾಲು

೧೯೭೩–೭೪

೧೬೭೪೦೦

೭೪–೭೫

೧೬೭೭೦೦

೭೫–೭೬

೧೬೦೦೦೦

೭೬–೭೭

೧೬೫೧೦೦

೧೧

೭೭–೭೮

೧೭೫೨೦೦

೧೧

೭೮–೭೯

೧೮೧೯೦೦

೧೦

೭೯–೮೦

೧೮೯೫೦೦

೧೨

೮೦–೮೧

೧೯೫೯೦೦

೧೨

೮೧–೮೨

೧೯೩೮೦೦

೧೩

೮೨–೮೩

೨೦೨೨೦೦

೧೪

೮೩–೮೪

೧೮೯೫೦೦

೧೧

೮೪–೮೫

೨೧೮೭೦೦

೧೧

೮೫–೮೬

೨೧೬೨೦೦

೧೨

೮೬–೮೭

೨೧೯೦೦೦

೧೩

೮೭–೮೮

೨೨೬೭೦೦

೧೧

೮೮–೮೯

೨೪೮೫೦೦

೧೦

೮೯–೯೦

೨೫೧೩೦೦

೯೦–೯೧

೨೩೮೫೦೦

೯೧–೯೨

೨೫೧೦೦೦

೯೨–೯೩

೨೫೬೩೦೦

೯೩–೯೪

೨೭೧೧೦೦

೯೪–೯೫

೨೮೯೭೦೦

೯೫–೯೬

೨೯೫೫೦೦

೯೬–೯೭

೩೦೭೭೦೦

೯೭–೯೮

೩೩೩೫೦೦

೯೮–೯೯

೩೩೦೧೦೦

ಮೂಲ: ರತಿನಂ ವರದಿ ೨೦೦೧.

ಈ ನಿಟ್ಟಿನಲ್ಲಿ ಸಂಸ್ಥೆಗಿಂದು ತನ್ನ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸಲು ವಿಪುಲ ಅವಕಾಳಗಳಿದ್ದು, ಅದಕ್ಕಾಗಿ ಇದಿಂದು ಬೆಳೆಗಾರರ ಮನವೊಲಿಸಿ ತನ್ನ ಬಂಡವಾಳವನ್ನು ಇನ್ನಷ್ಟು ಹೆಚ್ಚಿಸಿ ಮಾರುಕಟ್ಟೆಯ ಬಹುಪಾಲನ್ನು ತನ್ನದಾಗಿಸಲು ಶ್ರಮಿಸಬೇಕು. ಇದಕ್ಕಾಗಿ ಬೆಳೆಗಾರರು ತಮ್ಮ ಸಂಸ್ಥೆಯಿಂದ ತಮ್ಮ ಅಭಿವೃದ್ಧಿ ಎಂಬ ವಿಚಾರವನ್ನು ಅರಿತು ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸಲೇಬೇಕು.

ಸಹಕಾರಿಮಾರಾಟವ್ಯವಸ್ಥೆಯಲ್ಲಾಗಬೇಕಾದಬದಲಾವಣೆಗಳು:

ಅಡಿಕೆ ಮಾರಾಟ ವ್ಯವಸ್ಥೆಯಲ್ಲಿಂದು ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳಿಗೆ ದೀರ್ಘ ಇತಿಹಾಸವಿದ್ದು, ಈ ಎಲ್ಲಾ ಸಂಸ್ಥೆಗಳಿಂದು ಬದಲಾಗುತ್ತಿರುವ ಆಥಿಕ ವ್ಯವಸ್ಥೆ, ಅಂತರಾಷ್ಟೀಯ ಪರಿಸ್ಥಿತಿ ಮತ್ತು ಮಾರುಕಟ್ಟೆಯ ನೀತಿ, ರೀತಿ ಅಲ್ಲದೆ ಬಳಕೆದಾರರ ರುಚಿ, ಶುಚಿಗನುಗುಣವಾಗಿ ತಮ್ಮ ಕಾರ್ಯ ವೈಖರಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆಯಿಂದೊದಗಿ ಬಂದಿದೆ. ಅನಾದಿಕಾಲದಿಂದಲೂ ಅಡಿಕೆ ಮಾರುಕಟ್ಟೆಯು ಖಾಸಗಿ ವ್ಯವಹಾರಸ್ಥರ ಹತೋಟಿಗೊಳಪಟ್ಟಿದ್ದು, ಇದೇ ಪರಿಸ್ಥಿತಿ ಇನ್ನಷ್ಟು ಮುಂದುವರಿದಲ್ಲಿ ಅಡಿಕೆ ಕ್ಷೇತ್ರ ಇನ್ನಷ್ಟು ಸೋಲನ್ನು ಆನುಭವಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಈ ಎಲ್ಲಾ ಸಂಸ್ಥೆಗಳು ಆರ್ಥಿಕವಾಗಿ ಬೆಳೆದು ತಮ್ಮ ಕಾರ್ಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲೇಬೇಕಾಗಿದೆ. ಪ್ರಕೃತ ಅಡಿಕೆ ಮಾರುಕಟ್ಟೆಯಲ್ಲಿ ಹತೋಟಿಯಲ್ಲಿಡಲು ಕ್ಯಾಂಪ್ಕೋ ಸಂಸ್ಥೆಯೊಂದೇ ಶ್ರಮಿಸುತ್ತಿದ್ದು, ಒಬ್ಬಂಟಿಯಾಗಿ ಈ ಸಂಸ್ಥೆಗೆ ಇದು ಅಸಾಧ್ಯ. ಆದ್ದರಿಂದಲೇ ಅಡಿಕೆ ಮಾರುಕಟ್ಟೆ ಕಾಲಕಾಲಕ್ಕೆ ಏರಿಳಿತಕ್ಕೊಳಪಡುತ್ತಿರುವುದು. ಈ ನಿಟ್ಟಿನಲ್ಲಿ ಅಡಿಕೆ ಮಾರಾಟ ವ್ಯವಸ್ಥೆಯಲ್ಲಿರುವ ಸಹಕಾರಿ ಸಂಘಗಳಿಂದು ತಮ್ಮ ಸಾಂಪ್ರದಾಯಿಕ ವಹಿವಾಟುಗಳನ್ನು ಕೈಗೊಳ್ಳವುದರೊಂದಿಗೆ ಕ್ಯಾಂಪ್ಕೋ ಸಂಸ್ಥೆಯ ರೀತಿಯಲ್ಲೇ ಅಡಿಕೆಯ ನೇರ ಖರೀದಿ ಮಾಡಿ ಬಳಕೆದಾರ ಪ್ರದೇಶಗಳಿಗೆ ತಲುಪಿಸುವ ವ್ಯವಸ್ಥೆಗಿಳಿಯಬೇಕು. ಇದಕ್ಕಾಗಿ ಈ ಸಂಘಗಳಿಂದು ಕೆಳಗೆ ಸೂಚಿಸಿದ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು. ಅವುಗಳೆಂದರೆ:–

(ಅ) ಕ್ಯಾಂಪ್ಕೋದ ಮಾದರಿಯಲ್ಲಿ ಅಡಿಕೆ ಖರೀದಿ ಮತ್ತು ಮಾರಾಟ ವ್ಯವಸ್ಥೆಗಳನ್ನು ಮಾಡುವುದು, ಇದಕ್ಕಾಗಿ ಬೆಳೆಗಾರ ಸದಸ್ಯರನ್ನೊಲಿಸಿ ಅಗತ್ಯವಿರುವ ಬಂಡವಾಳವನ್ನು ಹೊಂದಿಕೊಳ್ಳವುದು.

(ಆ) ತಮ್ಮ ಶಾಖೆಗಳಲ್ಲಿ ಅಡಿಕೆಯ ನೇರ ಖರೀದಿಗಿಳಿಯುವುದು.

(ಇ) ಸಹಕಾರಿ ಸಂಸ್ಥೆಗಳು (ಕ್ಯಾಂಪ್ಕೋ ಸಹಿತ) ತಮ್ಮ ಶಾಖೆಗಳಿರುವಲ್ಲಿ ಒಂದು ಸಂಚಾರಿ ವಾಹನ ವ್ಯವಸ್ಥೆಯನ್ನು ಹೊಂದಿ ಸ್ಥಳೀಯವಾಗಿ ಬೆಳೆಗಾರರತ್ತ ಚಲಿಸುವುದು. ಈ ರೀತಿಯ ವ್ಯವಸ್ಥೆಯಿಂದ ಇಂದು ಆಗುತ್ತಿರುವ ಮಧ್ಯವರ್ತಿ ವ್ಯಾಪಾರದ ಪ್ರಮಾಣವನ್ನು ತಗ್ಗಿಸಿ ಬೆಳೆಗಾರನ ನೇರ ಸಂಪರ್ಕವಾಗಬಹುದು.

(ಈ) ಸಹಕಾರಿ ಸಂಸ್ಥೆಗಳಿಂದು ಕೈಗೊಳ್ಳುತ್ತಿರುವ ದಲ್ಲಾಳಿ ನೆಲೆಯ ವ್ಯವಸ್ಥೆಯನ್ನು ಹಂತ ಹಂತವಾಗಿ ಕೈಬಿಟ್ಟು ನೇರ ಖರೀದಿದಾರನಾಗುವುದು. ಈ ನಿಟ್ಟಿನಲ್ಲಿ ಅಗತ್ಯವಿರುವ  ನೀತಿ, ನಿಯಮಗಳನ್ನು ಹೊಂದುವುದು.

(ಉ) ಅಡಿಕೆಯನ್ನು ಬಳಸುತ್ತಿರುವ ವಿವಿಧ ರಾಜ್ಯಗಳ ವಿವಿಧ ರೀತಿಯ ಸಹಕಾರಿ ಸಂಘಗಳೊಂದಿಗೆ ವ್ಯವಹಾರಿಕ ಒಪ್ಪಂದಗಳನ್ನು ಮಾಡಿಕೊಂಡು ಕೊಡುಕೊಂಡುಕೊಳ್ಳುವ ವ್ಯವಸ್ಥೆಗಿಳಿಯುವುದು.

(ಊ) ಅಡಿಕೆಯ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಅಗತ್ಯವಿರುವ ಉದ್ದಿಮೆಯನ್ನು ಸಹಕಾರಿ ನೆಲೆಯಲ್ಲೇ ಉತ್ಪಾದನಾ ಪ್ರದೇಶಗಳಲ್ಲಿ ಹೊಂದುವುದು. ಇದಕ್ಕಾಗಿ ಬೆಳೆಗಾರರನ್ನು ಪ್ರೇರೇಪಿಸುವುದು.

(ಎ) ಅಡಿಕೆ ಬೆಳೆಗಾರರಿಗೆ ಕಾಲಕಾಲಕ್ಕೆ ಅಗತ್ಯವಿರುವ ಮಾಹಿತಿಗಳನ್ನೆಲ್ಲ ಒದಗಿಸಲು ಒಂದು ಪ್ರತ್ಯೇಕ ಸಂಶೋಧನಾ ಪೀಠವನ್ನು ಹೊಂದುವುದು. ಇದರೊಂದಿಗೆ ಬೆಳೆಗಾರರಿಗೆ ಅಗತ್ಯ ತರಬೇತು ಮತ್ತು ಶಿಕ್ಷಣವನ್ನು ನೀಡುವುದು.

(ಏ)  ಅಡಿಕೆಯಿಂದು ಅಂತರಾಷ್ಟೀಯ ಉತ್ಪನ್ನವಾಗಿರುವುದರಿಂದ ಅಡಿಕೆಯ ರಫ್ತುಗಾಗಿ ಶ್ರಮಿಸುವುದು, ಇದರೊಂದಿಗೆ ಆಂತರಿಕ ಮಾರುಕಟ್ಟೆಯ ವಿಸ್ತರಣೆಗಾಗಿ ಪ್ರಚಾರವನ್ನು ಕೈಗೊಳ್ಳುವುದು.

(ಐ) ಕ್ಯಾಂಪ್ಕೋದೊಂದಿಗೆ ಈ ಎಲ್ಲಾ ಸಂಸ್ಥೆಗಳು ಒಗ್ಗೂಡಿ ಅಡಿಕೆ ಮಾರುಕಟ್ಟೆಯ ಬಹುಪಾಲನ್ನು ತಮ್ಮದಾಗಿಸಿಕೊಳ್ಳವುದು.

(ಒ) ಅಡಿಕೆ ಮಾರುಕಟ್ಟೆಯಿಂದು ಖಾಸಗಿ ಹತೋಟಿಯಲ್ಲಿದೆ ಎಂದರೆ ಅಡಿಕೆಯನ್ನಿಂದು ಬಳಕೆ ಮಾಡಿತಿರುವ ಪ್ರದೇಶದಲ್ಲಿ ಇದರ ವ್ಯವಹಾರ ಖಾಸಗಿ ವಲಯದಲ್ಲಿದೆ ಎಂಬುದು, ಆದ್ದರಿಂದಲೇ ಅಡಿಕೆ ವ್ಯವಹಾರದಲ್ಲಿರುವ ಸಹಕಾರಿ ಸಂಘಗಳಿಂದು ಈ ಮಾರಕಟ್ಟೆಯನ್ನು ತಮ್ಮದಾಗಿಸಿಕೊಳ್ಳಬೇಕಾದ ಅನಿವಾರ್ಯತೆಯಿರುವುದು ಈ ದಿಕ್ಕಿನಲ್ಲಿ ಇವು ಚಲಿಸಿದಲ್ಲಿ ಬಳಕೆದಾರ ಪ್ರದೇಶಗಳಿಗೆ ನೇರವಾಗಿ ಉತ್ಪನ್ನ ತಲುಪಿದಂತೆ, ಈ ವ್ಯವಸ್ಥೆ ಬಳಕೆದಾರ ಮತ್ತು ಉತ್ಪಾದಕರ ನಡುವೆ ಈಗಿರುವ ಅಂತರವನ್ನು ತಗ್ಗಿಸಿ ಬಳಕೆದಾರರಿಂದು ಕೊಡುತ್ತಿರುವ ಬೆಲೆಯ ಬಹುಪಾಲು ಉತ್ಪಾದನಿಗೆ ದೊರಕಿ ಸಹಕಾರಿ ವ್ಯವಸ್ಥೆಯೂ ಅಭಿವೃದ್ಧಿಯಾಗಬಹುದು.

(ಓ) ಅಡಿಕೆ ಮಾರಾಟ ವ್ಯವಸ್ಥೆಯಲ್ಲಿರುವ ಸಹಕಾರಿ ಸಂಸ್ಥೆಗಳಿಂದು ಒಗ್ಗೂಡಿ ಕಾಲಕಾಲಕ್ಕೆ ನಮ್ಮಲ್ಲಾಗುವ ಅಡಿಕೆ ಉತ್ಪಾದನ, ಮಾರುಕಟ್ಟೆಗಾಗುತ್ತಿರುವ ಪೂರೈಕೆ, ಬೇಡಿಕೆ ಬಳಕೆದಾರರ ರುಚಿ ಇತ್ಯಾದಿಗಳ ಅಧ್ಯಯನವನ್ನು ಕೈಗೊಳ್ಳಬೇಕು.

(ಔ) ಬಳಕೆದಾರ ಪ್ರದೇಶದಲ್ಲಿ ಅಡಿಕೆ ವ್ಯವಹಾರಸ್ಥರೊಡನೆ ಉತ್ತಮ ಬಾಂಧವ್ಯವನ್ನು ಹೊಂದಿ ವಾರ್ಷಿಕವಾಗಿ ಅಡಿಕೆಗೊಂದು ನಿರ್ಧಿಷ್ಟ ಬೆಲೆಯನ್ನು ನಿಗಧಿಪಡಿಸುವತ್ತ ದಿಟ್ಟ ಹೆಜ್ಜೆ ಇಡಬೇಕು. ಈ ನಿಟ್ಟಿನಲ್ಲಿ ಸೌಹಾರ್ದಕೂಟಗಳನ್ನೇರ್ಪಡಿಸಿ ಬೆಳೆಗಾರರನ್ನು ಸೇರಿಸಿ ವಿಚಾರ ವಿಮರ್ಶೆಗಳಾಗಬೇಕು.

ಭಾರತದಿಂದ ಅಡಿಕೆಯ ರಪ್ತು

ವಿಶ್ವದ ಅಡಿಕೆ ಬೆಳೆಯ ಒಟ್ಟು ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತವು ಮೊದಲನೇ ಸ್ಥಾನದಲ್ಲಿದ್ದು , ಅದರಂತೆ ಇದರ ಬಳಕೆಯಲ್ಲೂ ಆಗ್ರಸ್ಥಾನದಲ್ಲಿದೆ. ಭಾರತವು ಅನಾದಿಕಾಲದಿಂದಲೂ ಅಲ್ಪಪ್ರಮಾಣದ ಅಡಿಕೆಯನ್ನು ರಪ್ತು ಮಾಡುತ್ತಲಿದ್ದು, ಇದರಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆಯನ್ನಿನ್ನೂ ಸಾಧಿಸಿಲ್ಲ. ವಿದೇಶಗಳಲ್ಲಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಹೆಚ್ಚು ಕಡಿಮೆ ನಿಷೇಧಿಸಿರುವುದರಿಂದ ದೇಶವಿಂದು ಅಡಿಕೆಯ ರಫ್ತಿನಲ್ಲಿ ಬೆಳವಣಿಗೆಯನ್ನು ಸಾಧಿಸಿಲ್ಲವೆಂಬ ವಿಚಾರ ನಮ್ಮ ಮಾರುಕಟ್ಟೆ ವಲಯಗಳಲ್ಲಿದೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ಮುಖ್ಯವಿಚಾರವೆಂದರೆ ಭಾರತದಲ್ಲಿ ಈ ತನಕ ವಾರ್ಷಿಕವಾಗಿ ಉತ್ಪಾದನೆಯಾದ ಅಡಿಕೆ ಪ್ರಮಾಣವು ಆಂತರಿಕ ಬಳಕೆಗೆ ಸಾಲದೇ ಹೋಗಿದ್ದು, ಪರಿಣಾಮವಾಗಿ ಪ್ರತ್ಯಕ್ಷ ಮತ್ತು ಪರೋಕ್ಷದಾರಿಯಲ್ಲಿ ಅದು ಆಮದಿಗೆ ದಾರಿ ಮಾಡಿಕೊಟ್ಟಿದ್ದು, ಇದರಿಂದಾಗಿ ರಫ್ತಿನ ಬಗ್ಗೆ ಚಿಂತನೆ ಮತ್ತು ಆಸಕ್ತಿ ಕಂಡು ಬರಲಿಲ್ಲವೇ ಎಂಬುದು.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಿಂದ ಆಗುತ್ತಿದ್ದ ಅಡಿಕೆಯ ರಫ್ತು ಹೆಚ್ಚು ಕಡಿಮೆ ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯ ಬಳಕೆಗಾಗಿ ಮಾತ್ರ ಸೀಮಿತವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆಯ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿರುವುದರಿಂದ, ಅಡಿಕೆಯಿಂದು ವಿದೇಶೀ ಮಾರುಕಟ್ಟೆಗಳ ಆಕರ್ಷಣೆಗೊಳಗಾಗುತ್ತಿದೆ. ಭಾರತವಿಂದು ಅಂತರಾಷ್ಟೀಯ ಮಾರುಕಟ್ಟೆಗೆ ಇಡಿ ಅಡಿಕೆ, ಹೋಳಡಿಕೆ, ಪುಡಿಅಡಿಕೆ, ಪಾನ್ ಮಸಾಲ, ಗುಟ್ಕಾ, ಪರಿಮಳಯುಕ್ತ ಯಾ ಸುಗಂಧ ಸುಪಾರಿ, ವಿವಿಧ ರೀತಿಯ ಸಿಹಿ ಭರಿತ ಮೌಲ್ಯವರ್ಧಿತ ಅಡಿಕೆ ಇತ್ಯಾದಿಗಳನ್ನು ರಫ್ತು ಮಾಡುತ್ತಿದ್ದು, ಇವುಗಳ ಒಟ್ಟಾರೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಲ್ಪ ಪ್ರಮಾಣದ ಹೆಚ್ಚಳವಾಗುತ್ತಿದೆ. ದೇಶದಿಂದ ರಫ್ತಾಗುತ್ತಿರುವ ಅಡಿಕೆಯ ವ್ಯವಹಾರವನ್ನು ಹೆಚ್ಚು ಕಡಿಮೆ ಖಾಸಗಿ ವಲಯದವರೇ ಕೈಗೊಳ್ಳುತ್ತಿದ್ದು, ಇಲ್ಲಿ ಸಹಕಾರಿ ವ್ಯವಸ್ಥೆಯ ಪಾಲು ಅತ್ಯಲ್ಪ.

೧೯೪೭ರ ಮೊದಲು ಆಂತರಿಕವಾಗಿ ಅಡಿಕೆಯ ಕೊರತೆಯನ್ನೆದುರಿಸುತ್ತಿದ್ದ ಭಾರತ, ಆಮದಿನ ಮೂಲಕ ಅದನ್ನು ಸರಿದೂಗಿಸುತ್ತಿದ್ದರೂ, ಬರ್ಮಾ, ಕೆನ್ಯಾ, ಫಿಜಿದ್ವೀಪ ಸಮೂಹ ಇತ್ಯಾದಿ ರಾಷ್ಟ್ರಗಳಿಗೆ ಅಲ್ಲಿ ನೆಲೆಸಿದ್ದ ಭಾರತೀಯರ ಬೇಡಿಕೆಗೆ ಅನುಗುಣವಾದ ರಫ್ತನ್ನು ಕೈಗೊಳ್ಳುತ್ತಿತ್ತು.

ಅಡಿಕೆಯರಫ್ತಿನಪ್ರಮಾಣ:

೧೯೩೬ ರಿಂದ ೧೯೪೦ರ ಸಮಯದಲ್ಲಿ ಭಾರತವು ಸುಮಾರು ೬೩೪೪ ಟನ್‌ಗಳಷ್ಟು ಅಡಿಕೆಯನ್ನು ರಫ್ತು ಮಾಡಿತ್ತು ಮತ್ತು ೧೯೪೬–೪೭ರಲ್ಲಿ ಅದು ಸುಮಾರು ೬೭೫ ಟನ್‌ಗಳಷ್ಟಾಗಿತ್ತು. ಆ ಬಳಿಕ ಈ ಪ್ರಮಾಣವು ಕುಸಿಯುತ್ತಾ ಹೋಗಿ ೧೯೫೪–೫೫ರ ವೇಳಗೆ ಸುಮಾರು ೧೨೬ ಟನ್‌ಗಳಿಗಿಳಿಯಿತು, ನಂತರದ ವರ್ಷಗಳಲ್ಲಿ ಅದು ಏರುಪೇರಾಗುತ್ತಾ  ಹೋಗಿ ೧೯೮೪–೮೫ರಲ್ಲಿ ಸುಮಾರು ೭೮೩ ಟನ್‌ಗಳಷ್ಟಾಗಿತ್ತು. ಬಳಿಕ ಇಲ್ಲಿ ಏರಿತಗಳು ಕಂಡು ಬಂದು ೧೯೯೪–೯೫ರಲ್ಲಿ ಅತ್ಯದಿಕ ಪ್ರಮಾಣವಾದ ೮೨೩ ಟನ್‌ಗಳಿಗೇರಿತ್ತು. ಆ ಬಳಿಕ ಅದು ಇಳಿಮುಖವಾಗುತ್ತಾ ಹೋಗಿ ೧೯೯೯–೨೦೦೦ದಲ್ಲಿ ಸುಮಾರು ೩೫೦ ಟನ್‌ಗಾಳಾಗಿತ್ತು. ಭಾರತದಿಂದ ಅಂತರಾಷ್ಟೀಯ ಮಾರುಕಟ್ಟೆಗೆ ಪೂರೈಕೆಯಾದ ಅಡಿಕೆಯ ಪ್ರಮಾಣದ ಬಗ್ಗೆ ಅಂಕಿ-ಅಂಶಗಳನ್ನು ಪಟ್ಟಿ ೧೨ರಲ್ಲಿ ಕೊಡಲಾಗಿದ್ದು, ಅದು ನಮ್ಮ ರಫ್ತಿನಲ್ಲಾದ ಏರುಪೇರಿನ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು ಅಧಿಕ ಪ್ರಮಾಣದಲ್ಲಿ ವಿದೇಶಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಈ ಬಗ್ಗೆ ಖಚಿತ ಅಂಕಿ-ಅಂಶಗಳು ದೊರಕದೆ ಇರುವುದರಿಂದ ಒಟ್ಟಾಗಿ ರಫ್ತಾಗುತ್ತಿರುವ ಅಡಿಕೆ ಪ್ರಮಾಣವೆಷ್ಟು ಎಂಬುದನ್ನು ಕಂಡು ಕೊಳ್ಳಲು ಅಸಾಧ್ಯ. ಇದರೊಂದಿಗೆ ಪರೋಕ್ಷದಾರಿಯಲ್ಲಿ ಅಡಿಕೆಯು ಅನಾದಿಕಾಲದಿಂದಲೂ ನೆರೆ ಹೊರೆಯ ರಾಷ್ಟಗಳಿಗೆ ಪೂರೈಕೆಯಾಗುತ್ತಿತ್ತು ಎಂಬುದನ್ನು ಮಾರುಕಟ್ಟೆ ವಲಯವು ತಿಳಿಸುತ್ತಿದ್ದು, ಈ ಎಲ್ಲಾ ವಿಚಾರಗಳು ಅಡಿಕೆಯ ಒಟ್ಟು ರಫ್ತಿನ ನಿಜ ಚಿತ್ರಣವನ್ನು ಕೊಡಲಾರದ ಮಟ್ಟದಲ್ಲಿದೆ. ಹೀಗಿದ್ದರೂ ಅಡಿಕೆಯಿಂದು ಪ್ರತ್ಯಕ್ಷವಾಗಿ ಯಾವ್ಯಾವ ರಾಷ್ಟಗಳಿಗೆ ಚಲಿಸುತ್ತದೆ, ಯಾವ್ಯಾವ ವಿಧದಲ್ಲಿ ಎಷ್ಟು ಪ್ರಮಾಣದಲ್ಲಿ ಎಂಬ ವಿಚಾರಗಳನ್ನು ಲಭ್ಯವಿರುವ ಅಂಕಿ-ಅಂಶಗಳ ಆಧಾರದಲ್ಲಿ ನಾವಿಂದು ತಿಳಿದುಕೊಳ್ಳಬಹುದು.

ಪಟ್ಟಿ ೧೨
ಭಾರತದ ಅಡಿಕೆ ರಫ್ತು ೧೯೫೪೫೫ ರಿಂದ ೧೯೯೯೨೦೦೦
ಪ್ರಮಾಣ (ಟನ್‌ಗಳಲ್ಲಿ) ಮೌಲ್ಯ (‘೦೦೦ ರೂಪಾಯಿಗಳಲ್ಲಿ)

ವರ್ಷ ಪ್ರಮಾಣ ಮೌಲ್ಯ
೧೯೫೪–೫೫

೧೨೬

೫೩೫

೫೫–೫೬

೧೩೪

೫೮೬

೫೬–೫೭

೧೬೫

೭೫೨

೫೭–೫೮

೧೯೯

೯೯೦

೫೮–೫೯

೨೦೧

೧೩೩೯

೫೯–೬೦

೨೦೮

೧೨೬೯

೬೦–೬೧

೧೫೧

೯೭೩

೬೧–೬೨

೧೨೩

೮೬೧

೬೨–೬೩

೧೧೦

೮೬೨

೬೩–೬೪

೯೬

೭೨೫

೬೪–೬೫

೨೧೫

೧೪೮೦

೬೫–೬೬

೩೫೨

೨೮೨೮

೬೬–೬೭

೨೨೦

೧೯೩೭

೬೭–೬೮

೨೬೩

೨೨೬೫

೬೮–೬೯

೩೩೮

೩೦೫೩

೬೯–೭೦

೨೨೬

೨೦೭೧

೭೦–೭೧

೨೫೨

೨೩೯೭

೭೧–೭೨

೨೯೨

೨೭೧೬

೭೨–೭೩

೨೨೧

೧೯೩೪

೭೩–೭೪

೪೧೦

೩೩೫೯

೭೪–೭೫

೫೨೫

೫೩೦೫

೭೫–೭೬

೫೬೦

೫೩೫೪

೭೬–೭೭

೬೦೩

೬೬೩೪

೭೭–೭೮

೫೨೨

೬೮೧೦

೭೮–೭೯

೬೧೩

೮೧೦೬

೭೯–೮೦

೬೧೯

೮೨೪೩

೮೦–೮೧

೩೭೦

೭೩೬೫

೮೧–೮೨

೫೭೯

೧೩೦೬೩

೮೨–೮೩

೬೯೫

೧೪೪೫೧

೮೩–೮೪

೫೩೫

೧೧೪೪೩

೮೪–೮೫

೭೮೩

೨೦೦೨೦

೮೫–೮೬

೪೦೭

೧೩೬೮೫

೮೬–೮೭

೫೦೬

೧೫೬೪೯

೮೭–೮೮

೭೪೮

೨೦೩೨೯

೮೮–೮೯

೬೬೯

೧೬೯೭೩

೮೯–೯೦

೩೩೦

೧೨೬೯೫

೯೦–೯೧

೩೫೫

೧೭೨೭೭

೯೧–೯೨

೬೫೮

೪೫೭೧೩

೯೨–೯೩

೬೨೯

೪೫೧೬೮

೯೩–೯೪

೫೨೫

೩೪೨೮೭

೯೪–೯೫

೮೨೩

೬೦೦೦೨

೯೫–೯೬

೪೦೬

೩೬೦೭೬

೯೬–೯೭

೫೧೩

೪೧೯೦೮

೯೭–೯೮

೬೬೪

೩೬೫೫೦

೯೮–೯೯

೫೩೩

೪೬೮೯೨

೯೯–೨೦೦೦

೩೫೩

೪೬೭೮೧

ಮೂಲ: ಡಿ.ಜಿ.ಸಿ.ಐ. ಮತ್ತು ಎಸ್. ಕೋಲ್ಕತ್ತ.

ಅಡಿಕೆಯರಫ್ತುನದಿಕ್ಕು

ಭಾರತವಿಂದ ಬೇರೆ ಬೇರೆ ರಾಷ್ಟ್ರಗಳಿಗೆ ಅಡಿಕೆಯನ್ನು ವಿವಿಧ ರೂಪಗಳಲ್ಲಿ ರಪ್ತು ಮಾಡತ್ತಿದ್ದು ಇದರ ಪ್ರಮಾಣವು ರಾಷ್ಟ್ರದಿಂದ ರಾಷ್ಟ್ರಕ್ಕೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಭಾರತದ ಅಡಿಕೆಗೆ ಇಂಗ್ಲೆಂಡ್‌, ನೇಪಾಳ, ಸೌದಿ ಅರೇಬಿಯಾ, ಸಿಂಗಾಪುರ, ಮಾಲ್ವೀಸ್‌, ದಕ್ಷಿಣ ಆಫ್ರಿಕ ಮುಖ್ಯ ಗ್ರಾಹಕರಾಗಿದ್ದು ಇವುಗಳೊಂದಿಗೆ ರಶ್ಯಾ, ಆಸ್ಟ್ರೇಲಿಯಾ, ತಾಂಜಾನಿಯ, ಫಿಲಿಪೈನ್ಸ್, ಸಂಯುಕ್ತ ಅರಬ್‌ ಸಂಸ್ಥಾನ, ಅಮೇರಿಕಾ, ಮಾಲ್ವಿ, ಕೆನಡಾ, ಬಾಂಗ್ಲ ಮುಂತಾದ ರಾಷ್ಟ್ರಗಳೂ ಭಾರತದಿಂದ ಅಡಿಕೆಯನ್ನಿಂದು ಆಮದು ಮಾಡಿಕೊಳ್ಳುತ್ತಿವೆ. ಭಾರತದಿಂದ ರಫ್ತಾಗುತ್ತಿರುವ ಅಡಿಕೆಯಲ್ಲಿ ಇಡಿ ಅಡಿಕೆ, ಪುಡಿಅಡಿಕೆ ಮತ್ತು ಹೋಳಡಿಕೆ ಅಲ್ಲದೆ ಪಾನ್‌ ಮಸಾಲ, ಗುಟ್ಕಾ ಮತ್ತು ಸುಗಂಧ ಸುಪಾರಿಯೂ ಸೇರಿದ್ದು ಇವುಗಳಿಗೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇಡಿಕೆಯಿದ್ದು, ಈ ಬಗ್ಗೆ ಅಂಕಿ-ಅಂಶಗಳನ್ನು ಮುಂದೆ ಕೊಡಲಾಗಿದೆ.