ಅಡಿಕೆ ಮಾರಾಟದಲ್ಲಿ ಸಂಘದ ಪಾತ್ರ:

ಸಂಘದ ಆರಂಭದಿಂದಲೂ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದಲೇ ಕೆಲಸ ಕಾರ್ಯಗಳು ನಡೆಯುತಿದ್ದು, ಇದು ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಮಾರುಕಟ್ಟೆಯಲ್ಲಿ ವಿಕ್ರಿಯಾಗಿತ್ತಿರುವ ಒಟ್ಟು ಅಡಿಕೆಯ ಬಹುಪಾಲು ತನ್ನ ಹತೋಟಿಯಲ್ಲಿಟ್ಟುರುವುದನ್ನು ಪಟ್ಟಿ ರ ಮೂಲಕ ನಾವಿಂದು ಕಂಡುಕೊಳ್ಳಬಹುದು. ಈ ರೀತಿಯದ್ದಾದ ವ್ಯವಹಾರದಿಂದಾಗಿ ಸಂಘವು ಅಧಿಕ ಪ್ರಮಾಣದ ಲಾಭಾಂಶವನ್ನು ನಿರಂತರವಾಗಿ ಕಂಡುಕೊಳ್ಳತ್ತಿದೆ.

ಪಟ್ಟಿ
ಮಾರುಕಟ್ಟೆ ವಿಕ್ರಯದಲ್ಲಿ ಸಂಘದ ಪಾಲು (ಶೇಕಡಾವಾರು)

ಸಂಸ್ಥೆ

೧೯೯೦-೯೧

೯೫-೯೬

೯೬-೯೭

೯೭-೯೮

೯೮-೯೯

೯೯-೨೦೦೦

ಶಿರಸಿ

೬೪

೬೩

೬೪

೬೩

೬೧

೬೨

ಸಿದ್ಧಾಪುರ

೪೦

೪೭

೪೦

೪೩

೪೦

೪೧

ಯಲ್ಲಾಪುರ

೩೭

೪೫

೩೫

೪೪

೪೩

೪೩

ಮೂಲ: TSSವಾರ್ಷಿಕ ವರದಿಗಳು.

ಸಂಸ್ಥೆಯಬೆಳವಣಿಗೆಗೆಇರುವಅವಕಾಶಗಳು:

ಟಿ.ಎಸ್. ಎಸ್. ತಾನು ಹೊಂದಿರುವ ಉದ್ದೇಶಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗುತ್ತಿದ್ದರೂ, ಬದಲಾಗುತ್ತಿರುವ ಅಡಿಕೆ ಕ್ಷೇತ್ರಕ್ಕನುಗುಣವಾಗಿ ಇಲ್ಲಿ ಇನ್ನಷ್ಟು ಬೆಳವಣಿಗೆಗಳಾಗಬೇಕಾಗಿದೆ. ಈ ದೃಷ್ಟಿಯಿಂದ ಇದಿಂದು ತನ್ನ ಚಟುವಟಿಕಗಳನ್ನು ಇನ್ನಷ್ಟು ವಿಸ್ತರಿಸಬೇಕಾದ ಅಗತ್ಯವಿದೆ. ಇದಕ್ಕಾಗಿ ತನ್ನ ಸದಸ್ಯರ ಸಂಖ್ಯೆಯನ್ನು ಇನ್ನಷ್ಟು ಏರಿಸಬೇಕು. ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿಕರನ್ನು ಸದಸ್ಯರನ್ನಾಗಿಸಲು ಕ್ರಾಂತಿಕಾರಿ ಹೆಜ್ಜೆಯಿಡಬೇಕು. ಸಹಕಾರಿ ಮಾರಾಟ ವ್ಯವಸ್ಥೆಯಿಂದಾಗುವ ಲಾಭ ಮತ್ತು ಈಗಿನ ಬದಲಾಗುತ್ತಿರುವ ಪರಿಸರದಲ್ಲಿ ಸಹಕಾರಿ ಸಂಸ್ಥೆಯ ಅಗತ್ಯತೆಯ ಬಗ್ಗೆ ಕೃಷಿಕರಿಗೆ ಮನವರಿಕೆ ಮಾಡಬೇಕು. ಇದರೊಂದಿಗೆ ಅಡಿಕೆ ವ್ಯವಹಾರವನ್ನು ಕೇವಲ ದಲ್ಲಾಳಿ ರೂಪದಲ್ಲಿ ಕೈಗೊಳ್ಳುವುದರ ಬದಲು ಅದನ್ನಿಂದು ಬಳಕೆದಾರ ಪ್ರದೇಶಗಳಲ್ಲಿ ಮಾರಾಟ ಮಾಡುವತ್ತ ಚಲಿಸಬೇಕು. ಈ ರೀತಿಯ ವ್ಯವಹಾರ ಸಂಸ್ಥೆಗೆ ಅಸಾಧ್ಯವಾದ ಮಾತಲ್ಲ. ಈ ನಿಟ್ಟಿನಲ್ಲಿ ಸಂಸ್ಥೆಯು ಇನ್ನು ಮುಂದೆಯಾದರೂ ದಿಟ್ಟ ಹೆಜ್ಜೆಯನ್ನಿಟ್ಟಲ್ಲಿ ಸಹಕಾರಿ ಚಳುವಳಿಯ ಬೆಳವಣಿಗೆಗೆ ನವಚೈತನ್ಯ ಬಂದು ಬೇಳಗಾರರ ರಕ್ಷಣೆಯಾಗಬಹುದು. ಇವೆಲ್ಲದರೊಂದಿಗೆ ಸಂಸ್ಥೆ ಅಡಿಕೆಯ ಬದಲಿ ಬಳಕೆ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳಲು ತನ್ನದೇ ಆದ ಸಂಶೋಧನಾ ಪೀಠವನ್ನು ಹೊಂದಲೇಬೇಕು. ಅಡಿಕೆ ಕ್ಷೇತ್ರಕ್ಕೆ ಧಾರಾಣೆ ರೂಪದಲ್ಲಿ ಕಾಲಕಾಲಕ್ಕೆ ಸಮಸ್ಯೆಗಳು ಬರುತ್ತಿರುವುದರಿಂದ ಸಂಸ್ಥೆಯು ಇನ್ನಾದರೂ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗೆ ಸ್ವಂತ ನೆಲೆಯಲ್ಲಿ ಇಳಿಯಲೇಬೇಕು. ಈ ರೀತಿಯದ್ದಾದ ಹೆಜ್ಜೆಗಳನ್ನು ಟಿ.ಎಸ್. ಎಸ್. ಇನ್ನು ಮುಂದೆ ಇಟ್ಟಿಲ್ಲಿ ಬೆಳವಣಿಗೆ ಮತ್ತು ಪ್ರಗತಿಯೊಂದಿಗೆ ಕೃಷಿಕರ ಜೀವನ ಮಟ್ಟವೂ ಸುಧಾರಿಸಿ ಜಿಲ್ಲೆಯ ಮತ್ತು ರಾಜ್ಯದ ಆರ್ಥಿಕ ಆಭಿವೃದ್ಧಿಯನ್ನು ಸಾಧಿಸಬಹುದು.

ಮಲೆನಾಡು ಅಡಿಕೆ ಮಾರಾಟದ ಸಹಕಾರಿ ಸಂಘ ನಿಯಮಿತ (MAMCO’s):

ದೇಶದ ಅಡಿಕೆ ಕೃಷಿಯಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಪ್ರಮುಖ ಸ್ಥಾನವಿದೆ. ಈ ಜಿಲ್ಲೆಗಳ ಅಡಿಕೆ ಕೃಷಿಕರು ಇನ್ನುಳಿದ ಅಡಿಕೆ ಬೆಳೆಯುವ ಕರ್ಣಾಟಕದ ಜಿಲ್ಲೆಗಳಂತೆ ಅಡಿಕೆ ಮಾರಾಟಕ್ಕಾಗಿ ಸಹಕಾರಿ ಸಂಸ್ಥೆಯೊಂದರ ಅಗತ್ಯವಿದೆಯೆಂಬುದನ್ನು ಕಳೆದ ಶತಮಾನದ ಆದಿಯಲ್ಲೇ ಕಂಡುಕೊಂಡರು. ಆ ಸಮಯದಲ್ಲಿ ಈ ಜಿಲ್ಲೆಗಳ ಅಡಿಕೆ  ಮಾರುಕಟ್ಟೆಯು ಖಾಸಗಿ ದಲ್ಲಾಳಿಗಳ ಮತ್ತು ವರ್ತಕರ ಕಪಿಮುಷ್ಠಿಯಲ್ಲಿ ನಲುಗಿತ್ತು. ಅದೇ ಸಂದರ್ಭದಲ್ಲಿ ಬೆಳೆಗಾರರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಮತ್ತು ಮಲೆನಾಡು ಅಭಿವೃದ್ಧಿ ಸಮಿತಿಯ ಗಮನಕ್ಕೆ ಈ ವಿಚಾರವನ್ನು ತಂದು, ಜಿಲ್ಲೆಗಳ ಸಹಕಾರಿ ಧುರೀಣರೆಲ್ಲಾ ಒಗ್ಗೂಡಿ ಕಾಫಿ ಬೋರ್ಡಿನ ಮಾದರಿಯಲ್ಲೇ ತಮ್ಮದೇ ಆದ ಸಂಸ್ಥೆಯೊಂದನ್ನು ಹೊಂದಲು ಅಂದಿನ ಶಿವಮೊಗ್ಗ ಜಿಲ್ಲಾಧಿಕಾರಿಯಾದ ಶ್ರೀ ಎಂ. ಶೇಷಾದ್ರಿಯವರಲ್ಲಿ ಈ ಬಗ್ಗೆ ವಿನಂತಿಸಿದರು.ಪರಿಣಾಮವಾಗಿ ೧೦-೯-೧೯೩೯ರಂದು ತೀರ್ಥಹಳ್ಳಿಯಲ್ಲಿ ಶ್ರೀ ಕಾಸರವಳ್ಳಿ ನಾಗಭೂಷಣರಾವ್ ಅವರ ನೇತೃತ್ವದಲ್ಲಿ ಸಭೆಯೊಂದು ಸೇರಿ ಸಹಕಾರಿ ಸಂಸ್ಥೆಯೊಂದನ್ನು ಹುಟ್ಟುಹಾಕಲು ನಿರ್ಣಯಕೈಗೊಂಡು ೮-೧೧-೧೯೩೯ರಂದು ಸಂಘವು ನೋಂದಣಿಗೊಂಡಿತು. ಅಂದು ಸ್ಥಾಪನೆಗೊಂಡ ಸಹಕಾರಿ ಸಂಘಟನೆಯನ್ನು “ಮಲೆನಾಡು ಅಡಿಕೆ ಮಾರಾಟದ ಸಹಕಾರಿ ಸಂಘ ನಿ.” ಎಂದು ನಾಮಕರಣ ಮಾಡಿ, ಇದಿಂದು “ಮಾಮ್ ಕೋಸ್” ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಒಂದು ದೂರದೃಷ್ಟಿಯನ್ನು ಹೊಂದಿದ ಈ ಸಂಸ್ಥೆಯು ಆರಂಭಗೊಂಡಾಗ ಅದರ ಸದಸ್ಯರ ಸಂಖ್ಯೆ ಕೇವಲ ೬೫೯ ಮತ್ತು ಆಗಿದ್ದ ಪಾಲು ಹಣ ೧೬,೦೩೧ ರೂಪಾಯಿಗಳು, ಕ್ರಮೇಣ ಸಂಸ್ಥೆಯು ಅಭಿವೃದ್ಧಿಗೊಂಡು ೧೯೯೮–೯೯ರಲ್ಲಿ ಅದರ ಸಂಖ್ಯೆ ೧೧,೭೯೪ಕ್ಕೇರಿ ತನ್ನ ಪಾಲು ಬಂಡಾವಾಳವನ್ನು ೧,೨೮,೧೨,೩೭೦ ರೂಪಾಯಿಗಳಿಗೇರಿಸಿತು.

ಸಂಘವು ಕೃಷಿಕರು ಬೇಳೆದ ಅಡಿಕೆ ಮತ್ತು ಉತ್ಪನ್ನಗಳ ಮಾರಾಟಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಮಾರುಕಟ್ಟೆ ಸೌಲಭ್ಯ, ಬೆಳೆಗಾರರ ಉತ್ಪನ್ನಗಳ ಉಚಿತ ದಾಸ್ತಾನು ಮತ್ತು ಬೆಳೆಗಾರನ ಒಪ್ಪಿಗೆಗನುಗುಣವಾಗಿ ಉತ್ಪನ್ನದ ಮಾರಾಟ, ಮುಂಗಡ ಪಾವತಿ ಮತ್ತು ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಕೊಡುವ ಉದ್ದೇಶವನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ.

ತನ್ನ ಕಾರ್ಯಚಟುವಟಿಕೆಗಳಲ್ಲಿ ದೀರ್ಘ ಅನುಭವವನ್ನು ಹೊಂದಿರುವ ಮಾಮ್ ಕೋಸ್, ಆರಂಭದಿಂದ ಈ ತನಕ ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡುತ್ತಾ ಪರಸ್ಪರ ಸೇವೆ, ವಿಶ್ವಾಸ ಮತ್ತು ಸಹಕಾರಿ ಮನೋಭಾವವನ್ನು ಎತ್ತಿಹಿಡಿದು, ತನ್ನ ಮೂಲ ಉದ್ದೇಶಗಳನ್ನು ಮರೆಯದೆ, ಯಾವ ಬೆಳೆಗಾರರನ್ನೂ ಅಲಕ್ಷಿಸದೆ ಬೆಳವಣಿಗೆಯನ್ನು ಕಂಡುಕೊಂಡಿದ್ದು, ತಾನು ಹಮ್ಮಿಕೊಂಡಿರುವ ಎಲ್ಲಾ ಕಾರ್ಯಗಳಲ್ಲೂ ಯಶಸ್ಸನ್ನು ಸಾಧಿಸುವುದರೊಂದಿಗೆ ಕೃಷಿಕರ ಆಕಾಂಕ್ಷೆಗಳಿಗೂ ಸ್ಪಂದಿಸಿದೆ ಎಂಬುದನ್ನು ಪಟ್ಟಿ ರಲ್ಲಿ ತೋರಿಸಿರುವ ಅಂಕಿ-ಅಂಶಗಳ ಆಧಾರದಲ್ಲಿ ನಾವು ತಿಳಿದುಕೊಳ್ಳಬಹುದು.

ಪಟ್ಟಿ
ಮಾಮ್ಕೋಸ್ ಬೆಳವಣಿಗೆ (೧೯೩೯೪೦ ೧೯೯೮೯೯)

ವಿಷಯ

ಸದಸ್ಯ

ಪಾಲು ಹಣ (ರೂ.)

ಬಂದ ಅಡಿಕೆ ಮೂಟೆ

ಲಾಭ (ರೂ.)

೧೯೩೯–೪೦ ೬೫೯ ೧೬೦೩೧ ೫೧೨೧ ೩೮೬೭
೫೯–೬೦ ೨೩೪೯ ೧೧೦೫೫೦ ೨೩೧೧೩ ೧೦೨೬೫೦
೬೯–೭೦ ೩೪೭೪ ೩೧೬೦೮೦ ೩೪೯೩೪ ೩೦೯೦೬೮
೭೯–೮೦ ೬೧೭೫ ೬೧೭೨೯೦ ೫೧೪೧೬ ೩೧೩೪೭೭
೮೯–೯೦ ೭೩೨೯ ೩೧೩೧೫೩೮ ೭೦೦೦೪ ೬೪೩೮೭೫
೯೦–೯೧ ೭೬೧೫ ೩೮೦೮೦೯೮ ೮೬೧೦೩ ೩೪೮೪೨೦೭
೯೧–೯೨ ೮೦೭೯ ೩೫೯೬೨೩೦ ೮೬೨೨೨ ೭೭೪೩೮೮೮
೯೨–೯೩ ೪೪೯೪ ೪೧೦೩೦೫೦ ೮೯೫೪೭ ೧೦೬೯೪೯೧೯
೯೩–೯೪ ೯೦೦೧ ೫೧೦೦೭೭೦ ೧೦೪೩೧೮ ೧೩೫೮೫೮೫೮
೯೪–೯೫ ೯೫೩೫ ೬೨೩೯೦೩೦ ೧೦೧೩೫೬ ೧೬೦೫೧೬೩೭
೯೫–೯೬ ೧೦೧೬೭ ೭೬೨೨೬೭೦ ೧೨೨೭೨೫ ೧೯೨೦೭೯೭೮
೯೬–೯೭ ೧೦೧೬೬ ೯೧೯೩೯೫೦ ೧೧೨೧೮೩ ೧೯೦೩೨೧೪೭
೯೭–೯೮ ೧೧೧೫೮ ೧೧೦೨೪೫೦೦ ೧೩೨೪೯೪ ೧೯೯೧೮೧೬೯
೧೯೯೮–೯೯ ೧೧೭೯೪ ೧೨೮೧೨೩೭೦ ೧೧೯೯೧೦ ೨೧೫೯೧೨೩೮

ಮೂಲ: ಮಾಮ್‌ಕೋಸ್ ೫೭ನೇ ವಾರ್ಷಿಕ ವರದಿ ೧೯೯೮–೯೯.

ಮಾಮ್‌ಕೋಸ್ ಆರಂಭದಿಂದ ಈ ತನಕ ತನ್ನ ಬೆಳೆವಣಿಗೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಈ ನಿಟ್ಟಿನಲ್ಲಿ ಅದಿಂದು ಹೊಂದಿರುವ ಹತ್ತು ಶಾಖೆಗಳು ಮತ್ತು ಇಪ್ಪತ್ತು ಕಮಿಷನ್ ಏಜೆನ್ಸಿಗಳ ಸಹಕಾರ ಮತ್ತು ಸಾಧನೆಗಳನ್ನು ಮೆಚ್ಚಲೇಬೇಕು. ಸಂಘವು ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಬೀರೂರು, ತರಿಕೆರೆ, ಭದ್ರಾವತಿ, ಚೆನ್ನಗಿರಿ ಮತ್ತು ಹೊಸನಗರಗಳಲ್ಲಿ ಶಾಖೆಗಳನ್ನು ಹೊಂದಿದ್ದು ಇವುಗಳ ಪೈಕಿ ಕೊಪ್ಪ ಮತ್ತು ಶೃಂಗೇರಿ ಶಾಖೆಗಳನ್ನು ಬಿಟ್ಟು ಉಳಿದೆಲ್ಲಾ ಶಾಖೆಗಳಿಗೆ ಬರುವ ಅಡಿಕೆ ಪ್ರಮಾಣ ಗಣನೀಯವಾದದ್ದು. ಸಂಘವು ಹೊಂದಿರುವ ಕಮಿಷನ್‌ಏಜೆನ್ಸಿಗಳ ಪೈಕಿ ಜಯಪುರ, ಕಮ್ಮರಡಿ, ಕಳಸ, ಬಸವಾನಿ, ನಗರ, ಮೇಗರವಳ್ಳಿ, ಹುಂಚ ಮತ್ತು ಹರಿಹರಪುರಗಳಲ್ಲಿ ಮಾರಾಟಕ್ಕೆ ಬರುವ ಅಡಿಕೆ ಮೂಟೆಗಳ ಸಂಖ್ಯೆ ಅಧಿಕವಾಗಿದ್ದು, ಕೋಣಂದೂರು, ಕೊಡೂರು, ಉತ್ತಮೇಶ್ವರ, ಬಿದರಗೋಡು, ನಿಟ್ಟೂರು, ಕಲ್ಲೋಣಿಗಳಲ್ಲಿ ಇದು ಸಾಮಾನ್ಯಮಟ್ಟದ್ದಾಗಿದೆ.

ಒಟ್ಟಾರೆಯಾಗಿ ಮಲೆನಾದು ಅಡಿಕೆ ಮಾರಾಟ ಸಹಕಾರ ಸಂಘ ಕಳೆದ ೬೧ ವರ್ಷಗಳಿಂದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಅಡಿಕೆ ಬೆಳೆಗಾರರ ರಕ್ಷಣೆಗಾಗಿ ಹೋರಾಡುತ್ತಿದ್ದು, ಇಲ್ಲಿಂದು ಅಡಿಕೆಯ ಉತ್ಪಾದನೆ ದೇಶದ ಇನ್ನಿತರೇ ಪ್ರದೇಶಗಳಲ್ಲಿ ಕಂಡು ಬರುತ್ತಿರುವಂತೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಮಾಮ್‌ಕೋಸ್‌ನ ಬೆಳವಣಿಗೆಗೆ ಇನ್ನಷ್ಟು ವಿಸ್ತರಿಸಬೇಕು. ಇದಕ್ಕಾಗಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ಶಾಸಗಿ ಮಂಡಿಗಳಲ್ಲಿಂದು ನಡೆಯುತ್ತಿರುವ ವ್ಯವಹಾರದ ಬಹುಪಾಲನ್ನು ತನ್ನೆಡೆಗೆ ಆಕರ್ಷಿಸಬೇಕು. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿರುವಂತೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಅಡಿಕೆ ಮಾರಾಟ ವ್ಯವಸ್ಥೆಯಲ್ಲಿ ಖಾಸಗಿ ವ್ಯಪಾರಸ್ಥರ ಯಾ ದಲ್ಲಾಳಿಗಳ ಪಾಲು ಅಧಿಕವಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದಲ್ಲಿ ಅಡಿಕೆ ಕ್ಷೇತ್ರ ಇನ್ನಷ್ಟು ಸಮಸ್ಯೆಗಳನ್ನೆದುರಿಸಬೇಕಾಗಬಹುದು.

ಆದ್ದರಿಂದ ಮಾಮ್‌ಕೋಸ್‌ ಈಗ ಕೈಗೊಳ್ಳುತ್ತಿರುವ ದಲ್ಲಾಳಿ ವ್ಯವಹಾರವನ್ನು ಕೈಬಿಟ್ಟು ಅಡಿಕೆಯನ್ನು ಬಳಕೆದಾರ ಪ್ರದೇಶಗಳಿಗೆ ತಲುಪಿಸುವ ಮತ್ತು ಮಾರಾಟ ವ್ಯವಸ್ಥಗಿಳಿಯಲೇಬೇಕು. ಇದರೊಂದಿಗೆ ಅಡಿಕೆಯ ಬದಲಿ ಬಳಕೆಗಳ ಬಗ್ಗೆ ಸಂಶೋಧನೆ ಮತ್ತು ಮಾರುಕಟ್ಟೆ ಅಭಿವೃದ್ಧಿಗಾಗಿ ಅಧ್ಯಯನ ಇತ್ಯಾದಿಗಳನ್ನು ಕೈಗೊಳ್ಳಲು ತನ್ನದೇ ಆದ ಅಧ್ಯಯನ ಕೇಂದ್ರದಿಂದ ಬೆಳೆಗಾರರನ್ನ ರಕ್ಷಿಸಬೇಕು. ಇವೆಲ್ಲದರೊಂದಿಗೆ ಬೆಳೆಗಾರರಿಗೆ ಸಹಕಾರಿ ಆಂದೋಲನದ ಮಹತ್ವವನ್ನು ತಿಳಿ ಹೇಳಬೇಕು, ಇದಕ್ಕೆ ಅಗತ್ಯವಿರುವ ಶಿಕ್ಷಣ, ಮಾಹಿತಿ ಮತ್ತು ತರಬೇತು ಅವರಿಗೆ ಒದಗಿಸಿ ಅಡಿಕೆ ಕ್ಷೇತ್ರದ ರಕ್ಷಣೆಗಾಗಿ ಕ್ರಾಂತಿಕಾರಿ ಹೆಜ್ಜೆಯಿಡಬೇಕು.

ಕ್ಯಾಂಪ್ಕೋ

೧೯೭೦ರ ದಶಕದ ಆದಿಬಾಗದಲ್ಲಿ ಅಡಿಕೆ ಧಾರಣೆ ನಿರಂತರವಾಗಿ ಕುಸಿಯಲಾರಂಭಿಸಿ, ೧೯೭೦ರಲ್ಲಿದ್ದ ಕ್ಚಿಂಟಾಲೊಂದರ ರೂಪಾಯಿ ೬೦೦, ೧೯೭೩ಕ್ಕಾಗುವಾಗ ಕ್ವಿಂಟಾಲೊಂದರ ರೂಪಾಯಿ ೩೦೦ಕ್ಕಿಳಿಯಿತು. ಇದರಿಂದಾಗಿ ಅಡಿಕೆ ಬೆಳೆಗಾರರು ದಿಕ್ಕೆಡುವುದರೊಂದಿಗೆ, ಇದರ ವ್ಯವಹಾರದಲ್ಲಿ ವ್ಯಾಪಾರಸ್ಥರೂ ಸರ್ವವನ್ನೂ ಕಳಕೊಳ್ಳುವಂತಾಯಿತು. ಪರಿಣಾಮವಾಗಿ ಅಡಿಕೆ ವ್ಯವಹಾರಕ್ಕೆ ಇಳಿಯಲು ವ್ಯಾಪಾರಸ್ಥರು ಹಿಂಜರಿದರು. ಧಾರಣೆ ಕುಸಿತದಿಂದ ತತ್ತರಿಸಿದ ಕ್ಷೇತ್ರದ ಧ್ವನಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿಧಾನ ಸಭೆ ಮತ್ತು ದೆಹಲಿಯ ಲೋಕಸಭೆಗಳಲ್ಲೂ ಮೊಳಗಿತು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಯುತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿದ್ದ, ಸಹಕಾರಿ ಧುರೀಣ ಶ್ರೀ ವಾರಣಾಸಿ ಸುಬ್ರಾಯ ಭಟ್ಟರು ಈ ಕ್ಷೇತ್ರವನ್ನು ರಕ್ಷಿಸುವುದು ತನ್ನ ಆದ್ಯ ಕರ್ತವ್ಯವೆಂದು, ಸದ್ರಿ ಸಮಿತಿಯಲ್ಲಿ ತನ್ನ ಸಹೋದ್ಯೋಗಿಯಾಗಿದ್ದ ಶ್ರೀ ಬಿ. ಆರ್. ಕಾಮತ್ ರ ಒಡಗೂಡಿ ಕೃಷಿಕರನ್ನೆಲ್ಲ ಒಗ್ಗೂಡಿಸಿ ನಿರ್ಧಾರ ಒಂದಕ್ಕೆ ಬರುವ ಉದ್ದೇಶಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿರುವ ಕೇಂದ್ರೀಯ ಅಡಿಕೆ ಸಂಶೋಧನಾ ಕೇಂದ್ರದಲ್ಲಿ ಸಮ್ಮೇಳನ ಒಂದನ್ನು ಹಮ್ಮಿಕೊಂಡರು. ಈ ಸಮ್ಮೇಳನವನ್ನು ಶ್ರೀ ಕ್ಷೇತ್ರ ಧರ್ಮಾಧಿಕಾರಿಗಳಾದ ಡಾ| ವೀರೆಂದ್ರ ಹೆಗ್ಗೆಡೆಯವರು ಉದ್ಘಾಟಿಸಿ ವಿಚಾರ ವಿಮರ್ಶೆಗ ಚಾಲನೆ ನೀಡಿದರು. ಅದೇ ಸಮಯದಲ್ಲಿ ಶಿವಮೊಗ್ಗದಲ್ಲೂ ಅಡಿಕೆ ಬೆಳೆಗಾರರ ಸಮಾವೇಶವೊಂದು ನಡೆಯಿತು. ಈ ಸಮ್ಮೇಳನದಲ್ಲಿ ರಾಜ್ಯ ಸರಕಾರದ ಮಂತ್ರಿಗಳು ಮತ್ತು ಶಾಸಕರು, ಲೋಕಸಭಾ ಸದಸ್ಯರು ಮತ್ತು ಸಹಕಾರಿ ಮುಖಂಡರುಗಳು ಭಾಗವಹಿದ್ದರು. ಈ ಎರಡು ಸಮ್ಮೇಳನಗಳೊಂದಿಗೆ ಇನ್ನಿತರೇ ಪ್ರದೇಶಗಳಲ್ಲೂ ಸಮಾವೇಶಗಳು ಜರಗಿತ್ತು. ಈ ಎಲ್ಲಾ ಸಮ್ಮೇಳನಗಳ ಮುಖಂಡತ್ವವನ್ನು ವಹಿಸಿದ್ದ ಶ್ರೀ ವಾರಣಾಸಿ ಸುಬ್ರಾಯ ಭಟ್ಟರು ಮತ್ತವರ ಒಡನಾಡಿಗಳು ಒಟ್ಟು ಸೇರಿ ಅಂತಿಮವಾಗಿ ಅಡಿಕೆ ಮಾರುಕಟ್ಟೆಯನ್ನು ಬಲಪಡಿಸಲು ಒಂದು ಸಹಕಾರಿ ಸಂಸ್ಥೆಯ ಅಗತ್ಯವಿದೆಯೆಂಬುದನ್ನು ಮನಗಂಡು ಸರಕಾರದೊಂದಿಗೆ ಈ ವಿಚಾರವನ್ನು ಚರ್ಚಿಸಿ ಈ ದಿಕ್ಕಿನತ್ತ ಚಲಿಸುವ ನಿರ್ಧಾರವನ್ನು ಕೈಗೊಂಡು ಅದಕ್ಕಿರುವ ಪೂರಕ ವಾತಾವರಣವನ್ನು ಸೃಷ್ಟಿಸಿದರು. ಇದಕ್ಕನುಗುಣವಾಗಿ ಕ್ಯಾಂಪ್ಕೋ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸುವ ಉದ್ದೇಶದಿಂದ ಅದರ ನಿಬಂಧನೆಗಳನ್ನು ಸಿದ್ಧಪಡಿಸಿ ಕರ್ನಾಟಕ ಮತ್ತು ಕೇರಳ ಸರಕಾರಗಳ ಸಹಭಾಗಿತ್ವದಲ್ಲಿ ಬೆಳೆಗಾರರದ್ದಾದ ಸಂಸ್ಥೆಯನ್ನು ಸ್ಥಾಪಿಸಲು ಅಂತಿಮ ನಿರ್ಧಾರಕ್ಕೆ ಬಂದು ಇದರ ಪ್ರವರ್ತಕರ ಮೊದಲ ಸಭೆ ೩೦-೪-೧೯೭೩ರಂದು ಮಂಗಳೂರಲ್ಲಿ ಜರಗಿತು.

ಅಡಿಕೆ ಧಾರಣೆಯು ಕುಸಿದು ಮಾರುಕಟ್ಟೆ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದ ಬೆಳೆಗಾರ ಪ್ರದೇಶದ ಕೃಷಿಕರು ಒಂದು ದೃಢ ನಿರ್ಧಾರಕ್ಕೆ ಬರಲು ಶ್ರಮಿಸುತ್ತಿದ್ದ ಈ ಸಮಯದಲ್ಲಿ ಕರ್ನಾಟಕ ಸರಕಾರವು (ಆಗಿನ ಮೈಸೂರು) ಅಡಿಕೆ ಕ್ಷೇತ್ರವೆದುರಿಸುತ್ತಿರುವ ಸಮಸ್ಯೆ ಮತ್ತಿತರೇ ವಿಚಾರಗಳ ಬಗ್ಗೆ ಅಧ್ಯಯನ ನಡೆಸಲು ಒಂದು ಉನ್ನತ ಮಟ್ಟದ ಸಮಿತಿಯನ್ನು ೧೯೭೨ರ ಸೆಪ್ಟಂಬರ್ ನಲ್ಲಿ ರಚಿಸಿತ್ತು. ಆ ಸಮಿತಿಯ ಮುಖ್ಯಸ್ಥರಾದ ಕೇಂದ್ರೀಯ ಅಡಿಕೆ ಮತ್ತು ಸಂಬಾರ ಪದಾರ್ಥಗಳ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಟಿ.ಟಿ. ಪೌಲೋಸ್ ಅವರ ನೇತೃತ್ವದಲ್ಲಿ ದೇಶದಾದ್ಯಂತ ಅಡಿಕೆಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಆಧ್ಯಯನ ಕೈಗೊಂಡು ತನ್ನ ಅಂತಿಮ ವರದಿಯನ್ನು ಮಾರ್ಚ್ ೧೯೭೩ರಲ್ಲಿ ಸರಕಾರಕ್ಕೆ ಸಲ್ಲಿಸಿತು. ಶ್ರೀ ಪೌಲೋಸ್ ಸಮಿತಿಯು ಅಡಿಕೆ ಮಾರುಕಟ್ಟೆಯ ಸುಧಾರಣೆಗಾಗಿ ಒಂದು ಬಲವಾದ ಕೇಂದ್ರೀಯ ಕಾರ್ಯಶಾಲೆಯನ್ನು ಸಾರ್ವಜನಿಕ ಸ್ವಾಮ್ಯದಲ್ಲಿ ಅಥವಾ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿಸುವಂತೆ ಸರಕಾರಕ್ಕೆ ಸಲಹೆ ನೀಡಿತು.

ಒಂದೆಡೆಯಲ್ಲಿ ಸಹಕಾರಿಗಳ ಪ್ರಯತ್ನ ಇನ್ನೊಂದೆಡೆಯಲ್ಲಿ ಸಮಿತಿಯ ಸಲಹೆ ಇವೆರಡೂ ಒಂದಕ್ಕೊಂದು ಸರಿಹೊಂದಿ ಅಡಿಕೆ ಬೆಳೆಗಾರರ ಮತ್ತು ಮಾರುಕಟ್ಟೆಯ ಹಿತದೃಷ್ಟಿಯಿಂದ ಪರಿಚ್ಛೇದ ೭ ಕರ್ನಾಟಕ ಸಹಕಾರ ಸಂಘಗಳ ಕಾನೂನು ೧೯೫೯ ಮತ್ತು ಪರಿಚ್ಛೇದ ೪(೨) ಬಹುರಾಜ್ಯ ಸಹಕಾರ ಸಂಘಗಳ ಕಾನೂನು ೧೯೪೨ಕ್ನನುಗುಣವಾಗಿ ೧೧-೭-೧೯೭೩ರಂದು ಕ್ಯಾಂಪ್ಕೋದ ಜನನವಾಯಿತು ಪ್ರಕೃತ ಕ್ಯಾಂಪ್ಕೋವು ಬಹುರಾಜ್ಯ ಸಹಕಾರ ಸಂಘಗಳ ಕಾನೂನು ೧೯೮೪ಕ್ಕನುಗುಣವಾಗಿ ಕಾರ್ಯ ನಿರ್ವಹಿಸುತ್ತದೆ.

ಕ್ಯಾಂಪ್ಕೋ ಸಂಸ್ಥೆ ಒಂದು ಕೋಟಿ ರೂಪಾಯಿಗಳ ಮೂಲ ಬಂಡವಾಳದೊಂದಿಗೆ ಆರಂಭಗೊಂಡಾಗ ಅದರಲ್ಲಿ ತಲಾ ೩೭.೫ ಲಕ್ಷ ರೂಪಾಯಿಗಳನ್ನು ಕರ್ನಾಟಕ ಮತ್ತು ಕೇರಳ ಸರಕಾರಗಳು ಪಾಲುಬಂಡವಾಳದ ರೂಪದಲ್ಲಿ ನೀಡಿದವು. ಉಳಿದ ೨೫ ಲಕ್ಷ ರೂಪಾಯಿಗಳನ್ನು ಅಡಿಕೆ ಬೆಳೆಗಾರರು ಮತ್ತು ಸಹಾಕಾರಿ ಸಂಘಗಳ ಮೂಲಕ ಕ್ರೋಢೀಕರಿಸಲಾಗಿತ್ತು. ಸಂಸ್ಥೆಯ ಆರಂಭಗೊಂಡಾಗ ಅದರ ಮುಖ್ಯ ಉದ್ದೇಸವು ಅಡಿಕೆ ಬೆಳೆಗಾರರಿಗೆ ಒಂದು ಯೋಗ್ಯ ಬೆಲೆಯನ್ನು ದೊರಕಿಸಿಕೊಡುವುದು ಮತ್ತು ಉತ್ಪಾದಕ ಮತ್ತು ಬಳಕೆದಾರನ ನಡುವಿನ ಅಂತರವನ್ನು ಕಡಿಮೆಗೊಳಿಸುವುದಾಗಿತ್ತು. ಈ ಉದ್ದೇಶವನ್ನು ಈಡೇರಿಸಲು ಸಂಸ್ಥೆಯು ಆರಂಭದಿಂದಲೇ ದೃಢ ಹೆಜ್ಜೆಯನ್ನಿಟ್ಟು ಅಡಿಕೆಯ ಖರೀದಿಯನ್ನು ನೆರವಾಗಿ ಸದಸ್ಯ ಬೆಳೆಗಾರರಿಂದ ಮತ್ತು ಸದಸ್ಯ ಸಹಕಾರಿಕಗಳು ಸಂಘಗಳಿಂದ ಮಾಡಿ ಯಶಸ್ಸಿನತ್ತ ಸಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ೮ ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಿತು. ಇದರೊಂದಿಗೆ ಬಳಕೆದಾರ ಪ್ರದೇಶಗಳಾದ ಬೊಂಬಾಯಿ, ನಾಗಪುರ, ಲಕ್ನೋ ಮತ್ತು ದೆಹಲಿಗಳಲ್ಲಿ ಮಾರಾಟ ಪ್ರತಿನಿಧಿಗಳನ್ನು ನೇಮಕ ಮಾಡಿ ಅಡಿಕೆ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸಲು ಶ್ರಮಪಟ್ಟಿತು. ಇಷ್ಟು ಮಾತ್ರವಲ್ಲದೆ ತನ್ನ ಆರಂಭದ ವರ್ಷದ ವ್ಯವಹಾರದಲ್ಲಿ ಅಡಿಕೆಗೆ ವಿದೇಶಿ ಮಾರುಕಟ್ಟೆಯನ್ನು ಕಂಡು ಹಿಡಿಯಲೂ ವ್ಯವಸ್ಥೆಯನ್ನು ಹಮ್ಮಿಕೊಂಡು ವಿದೇಶಿ ಮಾರುಕಟ್ಟೆಯಲ್ಲಿ ಸುಗಂಧ ಸುಪಾರಿಗೆ ಬೇಡಿಕೆಯಿದೆಯೆಂಬುದನ್ನು ಅರಿತು ಮುಂದಿನ ಸಾಲಿನಲ್ಲಿ ಸುಗಂಧ ಸುಪಾರಿಯ ತಯಾರಿಕೆಗಾಗಿ ಒಂದು ಉದ್ದಿಮೆಯನ್ನು ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಂಡಿತ್ತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಕರ್ನಾಟಕ ರಾಜ್ಯ ಕೃಷಿಯುತ್ಪನ್ನ ಮಾರುಕಟ್ಟೆ ನಿಗಮ, ಮಾರುಕಟ್ಟೆ ಸಮಿತಿ ಮತ್ತು ಕೇಂದ್ರೀಯ ತೋಟಕಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಗಳೊಡಗೂಡಿ ಮಾರುಕಟ್ಟೆ ಸಮೀಕ್ಷೆ ಮತ್ತು ಅಡಿಕೆಯ ಬದಲಿ ಉಪಯೋಗಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ಮಾಡಿತ್ತು. (ಕ್ಯಾಂಪ್ಕೋ ವಾರ್ಷಿಕ ಸಾಮಾನ್ಯ ಸಭೆ ೧೯೭೩–೭೪ರ ವರದಿ) ಈ ರೀತಿಯಾಗಿ ಆರಂಭದಿಂದಲೇ ಕ್ರಾಂತಿಕಾರಿ ಯೋಜನೆಗಳನ್ನು ಕೈಗೆತ್ತಿಕೊಂಡು ಅಡಿಕೆ ಮಾರುಕಟ್ಟೆಗಳಿದ ಕ್ಯಾಂಪ್ಕೋ ಸಂಸ್ಥೆ ಕಾಲಕ್ರಮೇಣ ದೇಶದ ಅಡಿಕೆ ಮಾರಾಟ ವ್ಯವಸ್ಥೆಯಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ರೂಪಗೊಂಡು ಇದಿಂದು ಅಡಿಕೆ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ತನ್ನ ಬೆಳವಣಿಗೆಯ ಪಥದಲ್ಲಿ ಹಲವು ಬಾರಿ ಏಳು ಬೀಳುಗಳನ್ನು ಕಂಡ ಸಂಸ್ಥೆ ಅಡಿಕೆ ಕ್ಷೇತ್ರದ ರಕ್ಷಣೆ ತನ್ನ ಆದ್ಯತೆ ಎಂದು ಮನಗಂಡು ನಾನಾರೀತಿಯ ಸಮಸ್ಯೆಗಳು ಬಂದರೂ ಎದೆಯೊಡ್ಡಿ ಎದುರಿಸುತ್ತಿದ್ದು, ಇದರಿಂದಾಗಿ ಬೆಳೆಗಾರರು ಮತ್ತು ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಕಳೆದ ೨೮ ವರ್ಷಗಳಲ್ಲಿ ಸಂಸ್ಥೆಯು ಅಡಿಕೆ ಕ್ಷೇತ್ರದ ಬೆಳವಣಿಗೆಗಾಗಿ ಪಟ್ಟ ಶ್ರಮ ಮಾಡಿದ ಹೋರಾಟ ಇವೆಲ್ಲವನ್ನು ಅದು ಕೈಗೊಂಡ ಕಾರ್ಯಗಳು ಮತ್ತು ಅದರ ವ್ಯವಹಾರಗಳಿಂದ ಅರಿತುಕೊಳ್ಳಬಹುದು.

ಕ್ಯಾಂಪ್ಕೋ ಸಂಸ್ಥೆಯ ಬೆಳವಣಿಗೆ:
ಸದಸ್ಯರುಮತ್ತುಪಾಲುಬಂಡವಾಳ:

ಒಂದು ಕೋಟಿ ರೂಪಯಿಗಳ ಪಾಲು ಬಂಡವಾಳಗಳೊಂದಿಗೆ ಆರಂಭಗೊಂಡ ಸಂಸ್ಥೆಯ ಪಾಲುಬಂಡವಾಳವು ೧೯೯೮–೯೯ಕ್ಕಾಗುವಾಗ ಸುಮಾರು. ೧೧ ಕೋಟಿಗಳಿಗಿಂತಲೂ ಅಧಿಕವಾಗಿದ್ದು, ಇದರೊಂದಿಗೆ ಈ ಸಂಸ್ಥೆಯು ಆರಂಭಗೊಂಡಾಗ ಇದ್ದ ೩೫೭೬ ಸದಸ್ಯರ ಸಂಖ್ಯೆ ಇದೀಗ ಸುಮಾರು ೬೭೦೦೦ಕ್ಕೇರಿದೆ. (ಪಟ್ಟಿ ).

ಪಟ್ಟಿ
ಕ್ಯಾಂಪ್ಕೋ ಸಂಸ್ಥೆಯ ಬೆಳವಣಿಗೆ (೧೯೭೩೭೪ ೧೯೯೮೯೯)

ವಿಷಯ

೧೯೭೩

೧೯೮೩

೧೯೯೦

೧೯೯೧

೧೯೯೨

೧೯೯೩

೧೯೯೪

೧೯೯೫

೧೯೯೬

೧೯೯೭

೧೯೯೮–೯೯

ಸದಸ್ಯರ ಸಂಖ್ಯೆ ೩೫೭೬ ೨೦೯೬೦ ೪೪೯೪೦ ೪೯೨೭೩ ೫೩೩೫೪ ೫೭೫೭೮ ೬೦೪೩೭ ೬೩೮೫೭ ೬೬೦೬೩ ೬೬೬೩೪ ೬೬೮೬೯
ಅಧಿಕೃತ ಪಾಲು ಹಣ ಲಕ್ಷ ರೂ. ಗಳಲ್ಲಿ ೧೦೦ ೧೨೦೦ ೨೫೦೦ ೨೫೦೦ ೨೫೦೦ ೨೫೦೦ ೨೫೦೦ ೨೫೦೦ ೨೫೦೦ ೨೫೦೦ ೨೫೦೦
ಅಡಿಕೆ ಖರೀದಿಶಾಖೆಗಳು ೩೬ ೫೨ ೫೯ ೫೯ ೬೭ ೮೩ ೮೮ ೯೧ ೯೬ ೧೦೬
ಮಾರಾಟ ಶಾಖೆಗಳು ೧೩ ೧೭ ೧೭ ೧೭ ೨೦ ೧೪ ೧೧ ೧೨ ೧೨ ೧೨
ನಿವ್ವಳ ಲಾಭ (ಲಕ್ಷ ರೂ. ಗಳಲ್ಲಿ) ೧.೦೧ ೧೧೯.೬೦ ೮೬೮.೮೬ ೧೦೯.೬೮ ೩೧೬.೨೦ ೩೮೪.೦೭ ೧೧೦.೮೦ ೧೮೩.೦೯ ೧,೦೮೦.೮೫
ನಷ್ಟ (ಲಕ್ಷ ರೂ. ಗಳಲ್ಲಿ) ೪೭೪.೧೮ ೫೭.೯೭

ಸೂಜನೆ: ಖರೀದಿ ಶಾಖೆಗಳಲ್ಲಿ ಉಪಶಾಖೆಗಳು ಸೇರಿವೆ.
ಮೂಲ: ಕ್ಯಾಂಪ್ಕೋ ವಾರ್ಷಿಕ ವರದಿ ೧೯೯೮–೯೯

ಅಡಿಕೆವ್ಯವಹಾರದಲ್ಲಿಕ್ಯಾಂಪ್ಕೋ:

ಅಡಿಕೆ ಮಾರುಕಟ್ಟೆಗೆ ಕ್ಯಾಂಪ್ಕೋವು ೧೯೭೩ರ ನವೆಂಬರ್ ನಲ್ಲಿ ಪ್ರವೇಶಿಸಿ ಆ ಸಾಲಿನಲ್ಲಿ ಅದು ನಡೆಸಿದ ಅಡಿಕೆ ವ್ಯವಹಾರದ ಮೊತ್ತ ರೂಪಾಯಿ ೧೦೧.೪೦ ಲಕ್ಷಗಳಾಗಿತ್ತು. ಕ್ರಮೇಣ ತನ್ನ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುತ್ತಾ ಹೋದ ಸಂಸ್ಥೆ ಪ್ರಕೃತ ೪೪ ಅಡಿಕೆ ಖರೀದಿ ಕೇಂದ್ರಗಳನ್ನು ಕರ್ನಾಟಕ, ಕೇರಳ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಹೊಂದಿದ್ದು, ಇದರೊಂದಿಗೆ ೬೨ ಉಪಕೇಂದ್ರಗಳು ಮತ್ತು ೧೨ ಮಾರಾಟ ಕೇಂದ್ರಗಳನ್ನು ದೇಶದ ನಾನಾ ಭಾಗಗಳಲ್ಲಿ ಹೊಂದಿ ದೇಶದ ಒಟ್ಟಾರೆ ಅಡಿಕೆ ವ್ಯವಹಾರದ ಶೇಕಡಾ ೧೦ನ್ನು ತನ್ನದಾಗಿಸಿಕೊಂಡಿದೆ. ಕ್ಯಾಂಪ್ಕೋದ ವ್ಯವಹಾರ ಚತುತತೆಯಿಂದಾಗಿ ೧೯೭೩ರಿಂದೀಚೆಗೆ ಅಡಿಕೆ ಮಾರುಕಟ್ಟೆಯು ಚೇತರಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಪಟ್ಟ ಶ್ರಮದ ಬಗ್ಗೆ ಅದು ನಡೆಸಿದ ವ್ಯವಹಾರಗಳಿಂದ ನಾವು ತಿಳಿದುಕೊಳ್ಳಬಹುದು. (ಪಟ್ಟಿ ೧೦).

ಪಟ್ಟಿ ೧೦
ಕ್ಯಾಂಪ್ಕೋದ ಅಡಿಕೆ ಖರೀದಿ ಮತ್ತು ಮಾರಾಟ ಪ್ರವೃತ್ತಿ ೧೯೭೩೭೪ ರಿಂದ ೨೦೦೦೨೦೦೧

ವರ್ಷ

ಖರೀದಿ ಪ್ರಮಾಣ (ಟನ್‌ಗಳಲ್ಲಿ)

ಖರೀದಿ ಮೌಲ್ಯ (ಕೋಟಿ ರೂ.)

ಮಾರಾಟ (ಟನ್‌ಗಳಲ್ಲಿ)

ಮೌಲ್ಯ (ಕೋಟಿ ರೂ.)

೧೯೭೩–೭೪

೫೦೪೮

೩.೫೮

೧೫೩೩

೧.೦೧

೭೪–೭೫

೮೧೩೭

೫.೬೭

೭೬೩೬

೫.೫೮

೭೫–೭೬

೧೧೧೮೬

೭.೯೮

೯೧೩೯

೬.೬೮

೭೬–೭೭

೧೭೭೧೨

೧೩.೩೯

೧೮೫೭೭

೧೫.೦೯

೭೭–೭೮

೧೯೪೧೫

೧೪.೫೭

೧೯೫೨೦

೧೫.೭

೭೮–೭೯

೧೯೦೮೪

೧೯.೨೨

೧೮೮೩೫

೨೦.೧೨

೭೯–೮೦

೨೨೪೮೯

೨೭.೫

೨೨೯೮೦

೩೦.೪೨

೮೦–೮೧

೨೩೯೫೭

೩೭.೯೬

೨೧೬೩೬

೩೬.೬೭

೮೧–೮೨

೨೫೮೧೧

೩೫.೩೭

೨೫೧೧೩

೩೯.೫

೮೨–೮೩

೨೭೯೪೬

೩೫.೩೪

೨೬೧೯೦

೩೭.೯೧

೮೩–೮೪

೨೧೭೬೯

೩೪.೧೧

೨೭೩.೭೦

೪೭.೩೧

೮೪–೮೫

೨೪೩೧೧

೫೮.೦೫

೨೩೧೦೫

೬೧.೭೨

೮೫–೮೬

೨೫೪೯೨

೫೭.೬೩

೨೫೪೯೫

೬೬.೦೬

೮೬–೮೭

೨೯೧೨೧

೫೩.೮೧

೨೬೭೪೯

೫೬.೫೫

೮೭–೮೮

೨೫೦೬೩

೫೨.೩೫

೨೫೫೧೨

೫೩.೫೮

೮೮–೮೯

೨೫೬೦೧

೫೮.೨

೨೬೦೧೭

೬೫.೮

೮೯–೯೦

೨೨೨೦೭

೬೩.೦೬

೨೩೮೮೩

೬೭.೦೯

೯೦–೯೧

೧೯೦೭೫

೭೫.೬೪

೧೯೯೭೩

೮೫.೬೪

೯೧–೯೨

೧೬೧೫೧

೧೦೦.೦೬

೧೪೪೫೮

೯೯.೮೪

೯೨–೯೩

೧೫೫೪೯

೯೧.೪೭

೧೬೨೮೪

೧೦೮.೩೯

೯೩–೯೪

೧೭೯೫೭

೯೪.೬೭

೧೮೬೫೨

೧೦೮.೯೨

೯೪–೯೫

೨೪೨೧೭

೧೫೮.೬೭

೨೩೨೯೭

೧೬೧.೭೭

೯೫–೯೬

೨೫೨೧೬

೧೮೧.೦೬

೨೪೪೭೨

೧೯೦.೬೨

೯೬–೯೭

೨೭೯೨೩

೨೩೦.೦೩

೨೬೦೫೨

೨೨೩.೨೮

೯೭–೯೮

೨೭೧೩೩

೨೨೧.೪೨

೨೩೮೪೪

೨೦೭.೯೧

೯೮–೯೯

೨೮೬೯೩

೨೮೨.೪೬

೩೧೩೨೭

೩೧೪.೧೮

೯೯–೨೦೦೦

೨೩೫೭೬

೩೦೯.೩೦

೨೦೯೫೪

೨೮೬.೪೪

೨೦೦೦–೦೧

೩೫೦೪೯

೩೨೫.೦೭

೩೧೫೬೫

೩೧೧.೨೮

ಮೂಲ: ರತಿನಂ ವರದಿ – ೨೦೦೧.