ತತ್ವಗುಣಾದಿ ಶರಣಾಗ್ಬೇಕೋs
ದುರಿತ ಕರ್ಮ ನೀಗಬೇಕೋss || ತತ್ವ ಗುಣಾದಿ ….. . . . ||

ಸುಳ್ಳ ಗದ್ದಲಾss ಮಾಡಿ ಕಲಲಾss
ಸುಳ್ಳವಾದ್ಯಾಕೋss || ತತ್ವ ಗುಣಾದಿ ….. . . . ||

ಜಕ್ಕಪ್ಪ ಮಾಳಪ್ಪs
ಬಂದ್ರೋ ಭವಕೋss
ಕೇಳ ಮರತ್ಯಾಕೋss
ತಂದಿ ಸಮಾಧಿ
ಹೊಂದ್ಯಾಗ ಇದ್ರೋss
ಸಣ್ಣ ಬಾಲಕ್ರೋss
ತಾಯಿ ಕಣ್ಣಾವಾss
ಇದ್ಳು ಪಡದವ್ವಾss
ಮಕ್ಕಳ ಬಲ್ಯಾಕೋss || ತತ್ವ ಗುಣಾದಿ ….. . . . ||

ಉಂಬರ ಜಂಬುವ ಸ್ಥಳಕೋss
ಉಂಬಳ ಠಾಣೆಕೋss
ತುಕ್ಕಪ್ಪರಾಯ ಆದ ನಾಯಕೋss
ಅದೇ ಜಾಗಕೋss
ಅಣ್ಣ ಜಕ್ಕಣ್ಣಾss
ತಮ್ಮ ಮಾಳಣ್ಣಾss
ತಂದಿ ಬಲ್ಯಾಕೋss || ತತ್ವ ಗುಣಾದಿ ….. . . . ||

ತಮ್ಮ ಸೋಮರಾಯಾs
ಮಾಡ್ಯಾನ ದುಃಖೋss
ಉರಳಿ ನೆಲಕೋss
ಎದ್ದ ಬಂದಲ್ಲೀs
ಹದ್ದ ಬಡಿದೊತೋss
ಎನಗ ಹಿಂಗ್ಯಾಕೋss
ದುಃಖ ಮಾಡ್ಯಾಳಾss
ತಾಯಿ ಕಣ್ಣಾವಾss
ಮಕ್ಕಳ ಬಲ್ಯಾಕೋss || ತತ್ವ ಗುಣಾದಿ ….. . . . ||

ಐಕ್ಯ ಆಗಿದ
ಗಂಡನ ಸುದ್ದೀss
ತಿಳಾದ್ಳು ಮನಕೋss
ಅಮೃತಬಾಯಿ
ಪ್ರಾಣ ಬಿಟ್ಟಳೋss
ತನ್ನ ಸ್ಥಳಕೋss
ಹೆಂತ ಹಣೆಯ ಬರಾss
ಬ್ರಹ್ಮ ಬರದರಾss
ಗೋಳ ಮರತ್ಯಕೋss || ತತ್ವ ಗುಣಾದಿ ….. . . . ||

ಅರವ ಆಗಿ ಬಂದೋs
ಗುರುವ ಉಂಬಳ ಠಾಣೆಕೋss
ಅಮೃತಬಾಯಿ ಸುದ್ದಿ ತಿಳಿಸ್ಯಾನೋss
ಸೋಮ್ರಾಯನ ಬಲ್ಲೆಕೋss
ಸುದ್ದಿ ಕೇಳ್ಯಾರ ಅವರುs
ಬೋರ್ಯಾಡಿ ಅಳತಾರೋss
ಸುದ್ದಿ ಕೇಳ್ಯಾರ ಎಲ್ಲರು
ಬೋರ್ಯಾಡಿ ಅಳತಾರss
ಹೆಂತಾ ಕೆಡಕೋss || ತತ್ವ ಗುಣಾದಿ ….. . . . ||

ಹೆಂತ ಹಣೆಬರಾss
ಬ್ರಹ್ಮ ಬರದಿದೀss
ಕಳವಿದಿ ಮರತ್ಯಾಕೋss
ಆಳಾಪ ಮಾಡೀs
ಅಳತಾನ ಸೋಮರಾಯs
ಗುರುವಿನ ಬಲ್ಯಾಕೋss
ಮಕ್ಕಳಿಬ್ಬರs
ಹುಚ್ಚ ಆದರಾss
ಕುಂತ್ರೋ ಬಲ್ಯಾಕೋ || ತತ್ವ ಗುಣಾದಿ ….. . . . ||

ಸಮಾಜಕ್ಹೇಳಿ ಹ್ವಾದೋ ಗುರುವs
ಸೋನಾರಿ ಸ್ಥಳಕೋss
ಎರಡು ಮಕ್ಕಳುs
ತೆಕ್ಕಿಗಿ ಬಿದ್ದೋss
ಕಣ್ಣವ್ವನ ಬಲ್ಯಾಕೋss
ಮಕ್ಕಳು ಗೊಂಡಳಾss
ಕಣ್ಣೀರು ಸುರಸ್ಯಳಾ ತಾಯೀs
ಗಂಡನ ಬಲ್ಯಾಕೋss || ತತ್ವ ಗುಣಾದಿ ….. . . . ||

ಮಾಯಾದ ಬಜಾರs
ಯಾರಿಗಿ ಬಿಟ್ಟಲ್ಲೋss
ಮಾನವ ಜಲ್ಮಕೋss
ಜಾತ ಜೋತಿs
ಜಕ್ಕಪ್ಪ ಮಾಳಪ್ಪs
ಬೆಳದ್ರು ಮರತ್ಯಾಕೋss
ಭಕ್ತಿ ಮಾಡ್ಯಾರ ಅವರುs
ಕೀರ್ತಿ ಪಡದರಾss
ಈ ಭವಕೋss || ತತ್ವ ಗುಣಾದಿ ….. . . . ||

ಭವದ ಕೈಲಾಸs
ಹುಲಜಂತಿ ವಾಸಾs
ವಾಯೇನ ಜಾಗಕೋss
ಮಾಳಿಂಗರಾಯ ವಾಸ ಮಾಡ್ಯನೋss
ಬಬ್ಬುಲಿ ಬನಕೋss
ಕೇಳರಿ ದೈವ ಎಲ್ಲಾss
ಅಡಿವೆಪ್ಪ ಹೇಳ್ಯಾರ ಕುಲ್ಲಾss
ತಿಳಿಸಿ ಜಾಗಕೋss || ತತ್ವ ಗುಣಾದಿ ….. . . . ||

* * *

ಕೇಳರಿ ಸರ್ವಜನಾs
ತುಕ್ಕಪ್ಪರಾಯನ ಕಥನಾs
ಉಂಬ್ಳೆ ಠಾಣೆಕ ಹಟ್ಟಿ ಒಗೆದಾನಾs
ಬಾಣ ಹೊಡಿಕೊಂಡ ಬಿಟ್ಟೊ ತನ್ನ ಪ್ರಾಣಾs
ಅಳತಾನ ಸೋಮರಾಯಾs
ಕಣ್ಣೀರ ಸುರಸ್ಯಾನಾs
ಅಳಕೋತ ಕರಕೋತs
ಅಣ್ಣಗ ಸೋಮರಾಯಾs
ಸಮಾಧಿ ಒಳಗ ಇಟ್ಟಾನಾs

ಎರಡು ಮಕ್ಕಳ ತೆಕ್ಕೆಗಿ ಹಾಯ್ಕೆಂಡು
ಬೋರ್ಯಾಡಿ ಅಳತಾನಾs
ಸೋಮರಾಯ ಬೋರ್ಯಾಡಿ ಅಳತಾನಾs
ಕೆಟ್ಟ ಆದೀತs
ಅವ್ಗ ಹೈರಾಣಾs
ಬಾಯಾಗ ಹೊಡಕೊಂಡ ಮಣ್ಣಾs

ಅಲ್ಲಿ ಕೇಳವರು ದಿಕ್ಕ ಯಾರಣ್ಣಾs
ಜಕ್ಕಣ್ಣಾ ಬೋರ್ಯಾಡಿ ಅಳತಾನಾs
ಮಾಳಣ್ಣ ಚೀರ್ಯಾಡಿ ಕೂಗ್ಯಾನಾs
ಭೂಮಿ ಮ್ಯಾಲ ಬಿದ್ದು ಮಣ್ಣಾs
ಬಗಟತಾನಾs
ಕೆಟ್ಟ ಆದಿತs
ಅವಗ ಹೈರಾಣಾs

ಹಣಿ ಹಣಿ ಬಡಕೊಂಡುs
ಕಣ್ಣಬಾಯಿ ಅಳತಾಳುs
ನಡಿಸ್ಯಾಳು ದುಃಖ ರೋಜನಾs
ಕೆಟ್ಟ ಯಾಳೆ ಇತ್ತು ಆ ದಿನಾs
ಹಟ್ಟಿ ಮುರುದು ಆಯ್ತು ಸ್ಮಶಾನಾs

ಕೋರಿಶೆಟ್ಟಿ ಬಂದೊ ಕಲ್ಲಣ್ಣಾs
ಕಲ್ಲಣ್ಣ ಬಂದು ನೋಡ್ಯಾನಾs
ನೋಡಿ ಕಣ್ಣೀರ ಸುರಸ್ಯಾನಾs

ಹೆಂತ ಹಣಿಬರಾ ಬ್ರಹ್ಮ ಬರದಾನಾs
ಇಂದಿಗಿ ಅಗಲ್ಯಾರು ಅಣ್ಣ ತಮ್ಮರಾs
ಅರವುಂಟ ಆಗಿ ಅಮೃತಬಾಯಿs
ಬಿಟ್ಟಳು ಕೇಳರಿ ತನ್ನ ಪ್ರಾಣಾs

ಕೆಟ್ಟ ಕಾಡು ಕಾಲ ಆ ದಿನಾs
ಅರು ಆಗಿ ಗುರು ಬಂದಾನಾs
ಬಂದ ಕಣಮುಟ್ಟ ತಾ ನೋಡ್ಯಾನಾs
ಶಿಷ್ಯಗ ತಿಳಿಸಿ ತಾ ಹೇಳ್ಯಾನಾs

ಸೋಮ್ರಾಯ್ನ ಗುರುವ ತಿಳಿಸ್ಯಾನಾs
ಅಮೃತಬಾಯಿ ಸುದ್ಧಿ ತಿಳಿದ ಮ್ಯಾಲs
ಮತ್ತಷ್ಟು ನಡಿಸ್ಯಾರ ರೋಜನಾs
ಅಣ್ಣ ತಮ್ಮರು ಯಾರಿಗೇನ ಮಾಡಿದೇವುs
ದೇವರ ಹಿಂಗ್ಯಾಕ ಮುನದಾನಾs
ಜಕ್ಕಪ್ಪ ಮಾಳಪ್ಪ ಕಂದನಾs
ಗುರು ಬಂದು ಅಪ್ಪಿ ಕೊಂಡನಾs

ಎಲ್ಲಾರ್ಗಿ ಪಡಸಿ ಸಮಾಧಾನಾs
ಶಿಷ್ಯಗ ಗುರುವ ತಿಳಿಸ್ಯಾನಾs
ಸೋಮ್ರಾಯ್ನ ಸಮಾಧಾನ ಪಡಿಸ್ಯಾನಾs

ಧರಿಯೊಳು ಮೆರೆಯುವ ಗ್ರಾಮ ಹುಲಜಂತಿs
ಮಾಳಿಂಗರಾಯನ ಠಿಕಾಣಾs
ಅಡಿವೆಪ್ಪ ಮಾರಾಯ್ರ ಕವನಾs
ಸುಲದ ತಿಂದಂಗ ಬಾಳೀ ಹಣ್ಣಾs

ಮೂಲಿ ಮೂಲಿಗಿ ಹೊಯ್ತು ವಾಯೇಣಾs
ಹಾಲಮತ ಪುರಾಣಾs
ಮಾಳಿಂಗರಾಯನ ಕಥನಾs
ಸಮಾಧಾನ ಕುಂತ ಕೇಳ್ರಿ ಜನಾs

* * *

ಅಣ್ಣ ತುಕ್ಕಪ್ಪರಾಯs
ಸಮಾಧಿ ಹೊಂದಿದ ಬಳಿಕs
ಸೋಮರಾಯನುs
ಜಾತ ಜೋತಿ ಜಕ್ಕಪ್ಪ ಮಾಳಪ್ಪs
ಎರಡೂ ಮಕ್ಕಳನ್ನೂ ತಕ್ಕೊಂಡು
ತನ್ನ ಸತಿಯಳಾದ
ಕಣ್ಣವ್ವನ ಹಿಂಬಾಲಗೊಂಡು
ಏಳನೂರು ಗೋವುಗಳನ್ನs
ಮುಂದ ಹಾಯ್ಕೊಂಡು
ಆ ಯೋಳುನೂರು ಬ್ಯಾಡ್ರ ಇದ್ದ ಠಿಕಾಣಾs
ಕಳ್ಳರ ಕವಟಿ
ಅಂದ್ರ ಸಧ್ಯದಲ್ಲಿರುವುದು
ಭಂಡಾರ ಕವುಟಾ
ತಾಲೂಕ ದಕ್ಷಿಣ ಸೊಲ್ಲಾಪುರ
ಆ ಕಳ್ಳರ ಕವುಟಗಿ ಮಂದೆ
ತಾನು ಆ ಭೀಮಾನದಿಯನ್ನು ದಾಟಿ
ಸಾಗಿ ಎಲ್ಲಿಗೆ ಬರ್ತಾಯಿದ್ದಾನs
ಸೀನಾ ತಲಗಾವಿ ಎಂಬ ಗ್ರಾಮಕs
ಆ ಸೀನಾ ತಲಗಾವಿ ಗ್ರಾಮದಲ್ಲಿ
ಬಂದು ವಸ್ತಿ ಕೊಟ್ಟು ಆನಂತರ
ಡೋಣಗಾಂವ  ಮೇಲಿಂದ ಹಾಯ್ದು
ಈ ಸಧ್ಯದಲ್ಲಿರುವ ಸೊಲ್ಲಾಪುರಾ
ಆ ಸೊಲ್ಲಾಪುರಕ ಆಗ
ಸಾಳೇರಹಟ್ಟಿ ಅಂತ ಕರೀತಾ ಇದ್ರು
ಆ ಸಾಳ್ಯಾರಹಟ್ಟಿಯಲ್ಲಿ
ಒಂದು ವಸ್ತಿ ಕೊಟ್ಟು
ಸೋಮರಾಯ ಎಲ್ಲಿ ಹೋಗ್ತಾನs
ಮಾಳಿಂಗರಾಯನ ಕರ್ಕೊಂಡುs
ಹಿರೇಗುಬ್ಬಿ ಚಿಟಗುಬ್ಬಿs
ಹಿರೇಗುಬ್ಬಿ ಚಿಟಗುಬ್ಬಿs
ಈಗ ಚೇಣಕಾಪುರ ಅಂತs
ಊರ ಐತೀs
ಆ ಹಿರೇಗುಬ್ಬಿ ಚಿಟಗುಬ್ಬಿ
ಮೇಲಿಂದ ಹಾಯ್ದು
ಪ್ರತಿಯೊಂದು ಊರಿಗೀ
ಪ್ರತಿಯೊಂದು ಹಳ್ಳೀಗೀ
ಮುಕ್ಕಾಂ ಕೊಟುಗೋತ ಸಾಗೀ
ಬಾಲಗುಬ್ಬಿ ಬಂಗಾರ ಕಿಣಗೀ
ನಿಟ್ಟೂರಾ ನಿಲಂಗಾs
ಹಾಲಹವುಲಿ ಶಾಲಬಿದರಿ
ಶಾಡಬಾಬಾನ ಗುಡ್ದ ಅಂದ್ರs
ಗಂಗೀನಾಡ ಹಾಲಹೌಲಿ ನಾಡs
ಶಾಲಬಿದರಿ ನಾಡ ಶಾಡಬಾಬಾನ ಗುಡದಲ್ಲೀs
ಶಾಡನ್ನು ಹುಲ್ಲಿತ್ತು
ಅಲ್ಲಿ ಜಿರಿಪಿಕ್ಕಿದ್ದ ನೀರಿತ್ತು
ಅಲ್ಲೊಂದು ತೋಡೆ ದಿವ್ಸ
ವೇಳೆ ಹೋಗತೈತಂದು
ಸೋಮರಾಯ ತಿಳಿಕೊಂಡs