ಅಜ್ಞಾನ ಹುಡುಗರು
ಕೂಡೆವಪ್ಪಾ ಇಲ್ಲೀss
ದಿಮಿಟ್ಟ ಹಾಡ್ತೇವು
ನೆರದ ಸಭೆಯಲ್ಲೀss
ಶಾಂತರಾಗಿ ಕೇಳರೆಪ್ಪ ಇಲ್ಲಿ
ಜಾತ ಜೋತಿ
ಜಕಪ್ಪ ಮಾಳಪ್ಪನs
ಕತಿ ಕೇಳರಿ ಇಲ್ಲಿss
ಶಾಡಬಾಬಾನ ಗುಡದಾಗ ಅಲ್ಲೀss
ಗೋರಕು ವಿದ್ಯಾ
ಕಲ್ತಾರ ಅಲ್ಲೀss
ಗುರುವ ಸೋನಾರ ಸಿದ್ಧನಲ್ಲೀs
ಒಡ್ಡಿವಾಲಗ ಶಿವಸ್ಥಾನದ
ಕಂಅಳಿ ಇತ್ತೋss
ಕೇಳ್ರಿ ದಿಲ್ಲಿಯಲ್ಲೀss
ಹೂಗಾರ ಮುದ್ದವ್ವನ
ಗುರುತದಿಂದಲ್ಲೀss
ಶಾಡಬಾಬಾನ ಗುಡ್ಡs
ಬಿಟ್ಟು ಹೋದಾರ ಅಲ್ಲೀss
ದಿಲ್ಲಿ ಬಾದಶಾರ ಮನೆಯಲ್ಲೀss
ಬೆಂಕ್ಯಾಗಿ ಉರಿಯುವುದು
ಕಂಬಳಿ ಗದ್ದಿಗಿ
ಮೇಲಿ ಮರತ್ಯದಲ್ಲೀss
ಸುಲ್ತಾನ ಬಾಶಾನ ಪಟ್ಟಣದಲ್ಲೀss
ಮಾತು ಸೋಜಿಗಾಯ್ತೋs
ಮುಸಲ್ಮಾನರಲ್ಲೀss
ಶಿವನ ಶಿವಗಣ
ಬಂತೋ ಅಲ್ಲೀss
ಸಿದ್ಧ ಮಾಳಪ್ಪಗ
ಪಟ್ಟಾಭಿಷೇಕ ಮಾಡ್ಸಿ
ಕುಂಡ್ರಸ್ಯಾರ ಗಾದಿ ಮ್ಯಾಲೀss
ಹರನಪುರಾ ಎಮ್ಬ ಪಟ್ಟಣ
ಕಟ್ಯಾರ ಅಲ್ಲೀss
ಕಮ್ಟಾಣೆ ಎಂಬ ಕೆರಿ
ಹೊಡಿಸ್ಯಾರ ಅಲ್ಲೀss
ಮುಂದ ಬರುವ ದಿನದಲ್ಲಿ
ಆಗ ಮಾಳಿಂಗರಾಯ
ಯಜ್ಞ ಹೂಡಿದಾನೋss
ಕೇಳ್ರಿ ಪಟ್ಟಣದಲ್ಲೀss
ಯಜ್ಞ ಸಮಾರಂಭ ಭಾಗದಲ್ಲೀss
ಬ್ರಹ್ಮ ವಿಷ್ಣು ಮಹೇಶೂರರಲ್ಲೀss
ಸಾಗಿ ಬಂದ್ರು ಕೇಳ್ರಿ ಮೃತ್ಯುದಲ್ಲೀss
ಸಿದ್ಧ ಮಾಳಿಂಗರಾಯ್ಗ
ವರದಾನ ಕೊಟ್ಟಾರs
ಕೇಳರಿ ಅವರಲ್ಲೀss
ಮೂರು ಮಂದಿ ಕೂಡಿs
ವರ ಕೊಟ್ಟಾರೋ ಅಲ್ಲೀss
ಮುಂದ ಬರುವ ಕಾಲದಲ್ಲೀss
ರಾಯಕೀಯ ದಾನ ಮಾಡ್ರಿ ಇಲ್ಲೀss
ನಿಮ ನಿಮ ಗುರುವಿನs
ಕೂಡಿಕೊಂಡುs
ಹೋಗ್ಬೇಕಂದಾರ ಅಲ್ಲೀss
ಇಷ್ಟು ಮಾತ್ರ ವರs
ಕೊಟ್ಟಾರ ಅಲ್ಲೀss
ಸಾಗಿ ಹೋದಾರೋs
ತಮ್ಮ ತಮ್ಮ ಸ್ಥಾನದಲ್ಲೀss
ಮಾಳಪ್ಪನ ಕತಿ
ಕೇಳ್ರಿ ಇಲ್ಲೀs
ಇದ್ದಂತ ರಾಜ್ಯಕೆ
ದಾನ ಮಾಡೀs
ತಾನು ಬಂದ ಬೇಗದಲ್ಲೀss
* * *
ತನ್ನ ಮೂಲ ಸ್ಥಳಕs
ತಂದಿಗಿ ಭೆಟ್ಟಿಯಾಗುದಕs
ಕಮ್ಟನ ಕೆರಿಯಾಗ
ಮಾಡ್ಯಾರ ಜಳಕಾs
ಜರತಾರಿ ಮಂದೀಲೇs
ಸುತ್ಯಾರ ಕಡಕಾs
ಹೋಗಿ ಬಿದ್ದಾರ ತಾಯಿs
ಕಣ್ಣವ್ವನ ಪಾದಕs
ಆಶೀರ್ವಾದ ಮಾಡಿ ತಾಯಿ
ಎತ್ಯಾಳ ಮ್ಯಾಲಕs
ಹರನಪುರ ಎಂಬs
ಪಟ್ಟಣ ಸ್ಥಳಕs
ಯಜ್ಞ ಕಾರ್ಯಗಳ
ಮುಗಸ್ಯಾರ ಕಡಕs
ಹೊಂಟ ನಿಂತ್ರೊs
ಅವರು ಉಂಬ್ಳೆಠಾಣೇಕs
ತಂದಿ ವಚನಾs
ಪೂರ್ಣ ಮಾಡುದಕs
ಮಾಳಪ್ಪ ಹೊರಟಾನೊs
ತನ್ನ ಮೂಲ ಸ್ಥಳಕs
ತಂದಿಗಿ ಭೆಟ್ಟಿಯಾಗುದಕs
ಎಲ್ಲಾರು ಕೂಡಿ ಬಂದೋs
ಭೀಮಾ ನದಿ ದಡಕs
ಭೋರ್ಗರಿತಿತ್ತೊ ನದಿ
ನಟ್ಟ ನಡ ಬರಕs
ಹೋಗಿ ನಿಂತ್ರೊ
ಭೀಮಾs ನದಿಯ ದಂಡ್ಯಕs
ಎರಡು ಹರಗೋಲಾ
ಬಿಟ್ರೊ ಹೊಳಿಯಾಕಾs
ಜಕ್ಕಪ್ಪ ಮಾಳಪ್ಪs
ಕುಂತ್ರೊ ಮೆಲ್ಲಕs
ದೇವಿ ನಮ್ಮಯ ನಾಮs
ನುಡದಾರೋ ಕಡಕs
ಜಯಘೋಷ ಮಾಡುತ ಜನಾs
ಹೊಂಟರು ಮೆಲ್ಲಕs
ತಾಯಿ ಕಣ್ಣವ್ವ ಕುಂತ್ಳೋ
ಮಾಳಪ್ಪನ್ಹಂತೇಕs
ಪಾದ ತೊಯ್ಯಲಾರ್ದೆ
ಪಾರಾದ್ರೊ ಕಡಿಯಾಕs
ಜಕ್ಕಪ್ನ ಹರಗೋಲ
ಬಂತು ನಡಬರಕs
ಹಡಗ ಮುಳಗಿ ಹೋಯ್ತೋs
ಸಪ್ತ ಪಾತಾಳಕs
ಗುರುವ ಭರಮಲಿಂಗ ಇದ್ದೋs
ಅದೇ ಸ್ಥಳs
ಹೋಗಿ ಬಿದ್ದಾನೋ ತನ್ನs
ಗುರುವಿನ ಪಾದಕs
ಭಕ್ತಿಗಿ ಎಂದ ಬರ್ತಿs
ಯಾವ ಟಾಯಮಕs
ಹೇಳಿ ಹೋಗ ತಮ್ಮಾs
ನುಡದಾನ ಕಡಕs
ಭಕ್ತೀಲೀ ಬರತೇನ ಗುರವೇs
ಮುಂದಿನ ವರುಷಕs
ಹೇಳಿ ಹೊಂಟ
ಜಕ್ಕಪ್ಪ ಮ್ಯಾಲಕs
ತಾಯಿ ಕಣಬಾಯಿ ಮ್ಯಾಲs
ಮಾಡ್ತಾಳ ದುಃಖs
ಕಣ್ಣೀರ ಸುರಸ್ಯಾಳ
ಸಣ್ಣ ಮಗನ ಬಲ್ಯೆಕs
ಮಾಳಪ್ಪ ಹೇಳ್ತಾನs
ತಾಯೀ ಚರಣಕs
ಅಣ್ಣ ಹೋಗ್ಯಾನೊ ತಾಯಿs
ಗುರುವಿನ ಹಂತೇಕs
ಸದ್ಯೆ ಅಣ್ಣ
ಈಗ ಬರತಾನ ಮ್ಯಾಲಕs
ಅಷ್ಟರಲ್ಲಿ ಬಂದಾs
ಜಕ್ಕಪ್ಪ ಮ್ಯಾಲಕs
ತಾಯಿ ಕಣ್ಣವ್ವ ಹರ್ಷs
ಆದ್ಳೋ ಮನಕs
ಎಲ್ಲಾರೂ ಕೂಡಿ ಬಂದ್ರೋs
ಉಂಬ್ಳೆ ಠಾಣೇಕs
ತಂದಿ ತುಕ್ಕಪ್ಪರಾಯ್ನs
ಬಿದ್ರೋ ಪಾದಕs
ಗುರುಮನಿ ಹುಲಜಂತಿs
ಮಾಳಪ್ನ ಸ್ಥಳಕs
ಅಡಿವೆಪ್ನ ಮಾರಾಯ್ರುs
ತಿಳಿಸ್ಮಾರ ಕೌತುಕs
ತ್ವಾಳ ಹೊಕ್ಕಾಂಗ ಕುರಿs
ಹಿಂಡಿನ ತಳಕss
ಗಂಟಲು ಒಡದು ನೆಂತ್ರಾss
ಜಿಗಿದಂಗ ಕಡಿಯಾಕss
* * *
ಮಾಳಪ್ಪ ಹೊಂಟಾನೋs
ತನ್ನ ಮೂಲ ಸ್ಥಳಕs
ತಂದಿಗಿ ಭೆಟ್ಠಿಯಾಗುದಕs
ಅರುವಿಟ್ಟು ನಡಿಬೇಕೋs
ಗುರವಿಗೆ ಮುಟ್ಟೀs
ಅರವಿಟ್ಟು ನಡದರs
ಮಾನವ ಜನ್ಮ ಗಟ್ಟೀs
ಬಲ್ಲಿದ ಗುರುವಿನಾಗಬೇಕು ಭೆಟ್ಟೀs
ಗುರುತು ಹಿಡಿದು ಗುರುವಾಕ್ಯs
ತಿಳಕೊಂಡು ನಡದವ್ಗs
ಮುಕ್ತಿ ಆಗೋದು ಗಟ್ಟೀs
ಏಳು ಅವತಾರ ಸಿದ್ಧ
ಮಾಳಪ್ಪನ ಗಟ್ಟೀs
ಏಳ್ಕೋಟಿ ಮಂತ್ರಾs
ಮೊದಲೆ ಹುಟ್ಟೀs
ಮೃತ್ಯದೊಳಗ ಹುಟ್ಟಿದಾವೊ ಗಟ್ಟೀs
ಜಾತ ಜೋತಿ
ಜಕ್ಕಪ್ಪ ಮಾಳಪ್ಪs
ತಮ್ಮ ಗುರುವಿನ
ಪಾದ ಮುಟ್ಟೀs
ಹರನಾಪೂರ ಎಂಬ
ಪಟ್ಟಣ ಕಟ್ಟೀs
ಹನ್ನೆರಡು ವರುಷಾ
ರಾಜಕಿಗಟ್ಟೀs
ಮಾಡಿ ಬಂದ್ರೊ
ಕೇಳ ಜಟ್ಟ ಪಟ್ಟೀs
ಇಪ್ಪತ್ನಾಲ್ಕು ಸಾವಿರs
ದಂಡ ಹಿಂಬಾಲ ಗೊಂಡುs
ಭೀಮಾ ನದಿಯ ದಾಟೀss
ಬಂದ ನೋಡ್ಯಾರ ಅವರುs
ಉಪದ್ಯಾರ ಹಟ್ಟೀs
ತಂದಿ ತುಕ್ಕಪ್ಪರಾಯಾಗs
ಆದಾರ ಭೆಟ್ಟೀs
ತಂದೀದು ಹೋಗಿ
ಪಾದ ಮುಟ್ಟೀs
ತಂದಿಯ ವಚನಾs
ಪೂರ್ಣ ಮಾಡಬೇಕಂತs
ವಿಚಾರ ಮಾಡ್ಯಾರೋ ಗಟ್ಟೀss
ಬ್ಯಾಡರ ಊರ ಇತ್ತೋs
ಕಳ್ಳರ ಕವಟೀs
ಅವುಸರ ಮಾಡಿ ದಂಡೀs
ಭೀಮಾ ನದಿಯ ದಾಟೀs
ಹೋಗಿ ಹೊಕ್ಕರು
ಕಳ್ಳರ ಕವಟೀs
ಹೋಗಿ ನೋಡುದ್ರಾಗs
ಕಳ್ಳರು ಸಿಗಲಿಲ್ಲs
ದಂಡರ್ ಕಳ್ಳ
ಕವಟಿ ದಾಟೀss
ಗಜೇಂದ್ರಗಡದ ಏರ್ಯಾರ ಕ್ವಾಟೀs
ಕಳ್ಳರು ಅಲ್ಲಿಂದ
ಅವಸರ್ಲೇ ದಾಟೀs
ಕಾಳಿಕಾ ದೇವಿಗೆ ಹೋಗಿ
ಆಗ್ಯಾರ ಭೆಟ್ಟೀs
ಜಕ್ಕಪ್ಪ ಮಾಳಪ್ಪ ಹೋಗಿ
ದರ್ಶನ ಮಾಡ್ಯಾರೋs
ದೇವಿ ಪಾದ ಮುಟ್ಟೀs
ದೇವಿ ಆಶೀರ್ವಾದ
ಪಡದಾರೋ ಗಟ್ಟೀs
ಪನಾಳ ಜೋತಿಬಾನಾ
ಆದಾರ ಭೆಟ್ಟೀs
ಜೋತಿಬಾನ ಪಾದ
ಹೋಗಿ ಮುಟ್ಟೀs
ಆಶೀರ್ವಾದ ಪಡದ ಬಂದs
ನೋಡ್ಯಾರ ಊರ ಮಂಗ್ಯಾನಹಟ್ಟೀs
ಎಳ್ನೂರ ಕಂಬದ
ದೇಗುಲ ಕ್ವಾಟೀs
ಕಂದದಿ ಒಬ್ಬ ಬ್ಯಾಡ
ನಂಬಿದ ಗಟ್ಟೀs
ದಂಡಾಗಿ ನಿಂತ್ರೋs
ಸುತ್ತು ಗಟ್ಟೀs
ಒಬ್ಬೊಬ್ಬ ಬ್ಯಾಡನ್ನs
ಹಿಡ್ಕೊಂಡು ತಂದಾರs
ಹೊರಗ ಸಾಲ
ದವಣಿ ಕಟ್ಟೀs
ಬ್ಯಾಡರ ಕತ್ತವ
ಕೊಯ್ದಾರು ಮೆಟ್ಟೀs
ತಂದಿ ಮುಂದ ತಂದು
ಇಟ್ಟಾರ ಬುಟ್ಟೀs
ಚಂಡಿನ ಮ್ಯಾಲ ಕಟ್ಯಾರs
ಚಕ್ಕರ ಗಟ್ಟೀs
ಚಕ್ಕರ ಗಟ್ಟಿ ಏರಿ
ಶರಣ ಮಾಳಪ್ಪಾs
ಮುಂದ ನುಡಿ
ಮಾಡ್ಯಾನೋ ಗಟ್ಟೀs
* * *
ಬಾರಾ ವರುಷ ತಪ
ಬೀರಣ ದೇವರ ಮಾಡೀs
ಆಮೇಲ ಮಾದೇವs
ಬಂದಾನ ಓಡೀs
ವರಗಳ ನೀನು ಬೇಡಂದs
ಲಗು ಮಾಡೀs
ಸಾಯಲಾರ್ದಂತ ಶಿಶುಮಗನ್ನs
ಕೊಡು ಅಂದs
ಇರಲಿ ಚಿರಂಜಿ ಜೋಡೀs
ಇನ್ನ ಬಾರಾ ವರುಷ
ತಪಮಾಡತಿರೋs
ಆಮೇಲ ಶಿಷ್ಯಾನs
ಕೊಡತೇನ ನೋಡೀs
ಹಾಲ ಹಟ್ಟಿಮ್ಯಾಲs
ಹಾನ ಜೋಡೀs
ಜಕ್ಕಪ್ಪ ಮಾಳಪ್ಪ
ಶಿಕಾರಿ ಆಡುತs
ಬರತಾರೊ ನೋಡೀs
ಹನ್ನೆರಡ ವರ್ಷ ತಪಾs
ಅವಸರ್ಲಿ ಮುಗಿಸಿ
ಡೋಣಜ ಕೆರಿಯಲ್ಲೀs
ಬಂದಾನ ಓಡೀs
ದಂಡೀ ಶಿಕಾರಿ ಹುಡಕ್ಯಾಡೀs
ಎರಳಿಯಾಗಿ ಗುರು ಹಾಯ್ದಾನ
ಮಾಳಿಂಗರಾಯಾ
ಎರಳಿಗಿ ಗುರುಮಾಡೀs
ಎರಳಿ ಹೆಗ್ಗೇರಿ
ಕೆರಿಯಲ್ಲಿ ಜಿಗಿದು
ಮಾಳಪ್ನ ತೇಜಿ
ಸಿಕ್ಕಾವ ಓಡೀs
ಗುರುವ ಹಿಡಿಕೊಂಡs
ಲಗುಮಾಡೀs
ಮೋಸ ಮಾಡಿ
ಅವ್ಗ ಹಿಡಕೊಂಡs
ಗುರುವ ಡೋಣಜ
ಕೆರೆ ನೋಡೀs
ಜಕ್ಕರಾಯ ತಿರುಗಿ ಹ್ವಾದಾs
ತಾಯಿ ಕಡಿ ಓಡೀs
ಮಾಳಪ್ಪ ಹೋಗ್ಯಾನ
ಎರಳಿಯ ಕೂಡೀs
ಕಣ್ಣವ್ವ ದುಃಖ ಮಾಡಿ
ಹೊರಳ್ಯಾಡೀs
ಆಕಾಶವಾಣಿಯಿಂದs
ಮಾಳಪ್ಪ ಹೇಳ್ಯಾನs
ತಾಯಿ ಇದ್ದೀನಿ
ಗುರುವಿನ ಕೂಡೀs
ಹನ್ನೆರಡ ಸಾವಿರ ದಂಡs
ಎಳ ಬಂಡಿ ಅನ್ನಾ
ಜಕ್ಕರಾಯ ತಂದಾs
ಅವುಸಾರ ಮಾಡೀs
ಕಣ್ಣಬಾಯಿ ದಂಡಿನೊಳಗ ಕೂಡೀs
ಅಷ್ಟು ಜನ
ಬಾಳ ಹರುಷದಿಂದs
ಗುರುವಿನ ಭೆಟ್ಟಿ ಮಾಡೀs
ಗುರುವ ಶಿಷ್ಯರs
ಮಾತ ನಡದಾವೋs
ಮಾಳಪ್ಪ ವಚನಾ
ಕೊಟ್ಟಾನ ನೋಡೀs
ಗುರುವಿಗಿ ನಡಿಯಂದs
ಲಗುಮಾಡೀs
ಭವದೊಳಗ ಗುಡಿ ಕಟ್ಟಸ್ತೇನs
ಸಿಡಿಯಾಣ ಗ್ರಾಮಕs
ನೆನಿಯ ನೋಡೀs
ಬೀರಣ ದೇವರs
ಬಾಳ ಹರುಷದಿಂದs
ಸಿಡಿಯಾಣ ಗ್ರಾಮಕs
ನೆಲದಾನ ನೋಡೀs
ಮಾಳಿಂಗರಾಯ ಗುರುವಿನ
ಭಕ್ತಿ ಮಾಡೀs
ನಾನಾ ಪರಿಯಿಂದ ದುಡಿದಾಗs
ಪದಗಳು ಸಿಕ್ಕಿಲ್ಲ
ಅವನ ಜೋಡೀs
ಗುರುವಿಗಿ ಇಟ್ಟಾನೋs
ಸಿಡಿಯಾಣದಲ್ಲೀs
ತಾಯಿಗಿ ಹೇಳ್ಯಾನೋs
ಒಡಲಿನ ನುಡೀs
ಗುರುವ ಸಿಕ್ಕಾನೋs
ನನ ಜೋಡೀs
ಬಾಳ ದಿನಕ
ಮಾಳಿಂಗರಾಯ ಉಳದಾನs
ಹುನ್ನೂರ ಗ್ರಾಮ ನೋಡೀs
* * *
Leave A Comment