ಮಾಳಣ್ಣಾ ಬೀರಣ್ಣಾs
ಗುರುವ ಶಿಷ್ಯರ ವರಣಾs   || ಮಾಳಣ್ಣ ….. . . . ||

ಮಾಳಿಂಗರಾಯ ಮನಿಗಿನಿಯಾದೋs
ಮಾನವರಲ್ಲಿ ಪರಿಪೂರ್ಣಾs
ಬೀರ ದೇವರ ನೋಡತಿದ್ದೋs
ತೆರದ ಉಗ್ರಗಣ್ಣs

ಭಕ್ತಿ ಪರೀಕ್ಷೆ ಮಾಡುದಕ್ಕಾಗೀs
ಸತ್ವ ಪರೀಕ್ಷೆ ಮಾಡುದಕ್ಕಾಗೀs
ಬೇಡಿ ಕುಂತೋs
ಹೂ ಕಾಯಿ ಹಣ್ಣs
ತರತೇನಂದನೋs
ಭಾಷೆ ಕೊಟ್ಟನೋs   || ತರತೇನಂದನೊ ….. . . . ||

ಹೊಂಟ ನಡದೋ ಮಾಳಣ್ಣs
ಗುರುವಿನ ಪಾದಕs
ಶರಣ  ಮಾಡೀs
ಬಿಟ್ಟ ಸಿರಾಡೋಣಾs
ಜಿತ್ತನಾರಾಯಣಪೂರs
ತಾಯಿಯ ಠಿಕಾಣಾs
ತಾಯಿ ಕಣಬಾಯಿಯ ಬಲೀs
ವರಗಳ ಬೇಡ್ಯಾನಾs
ಬೊಟ್ಟೊ ಸಿಡಿಯಾಣs
ಗುರುವ ಬಂದಾನಾs || ಬಿಟ್ಟೊ….. . . . ||

ಅಡ್ಡ ಗಟ್ಟಿದೊ ಬೀರಣ್ಣಾs
ಅಡ್ಡಗಟ್ಟಿ ಹೇಳಿದ ಗುರುವs
ಪಾಂಡವರ ಕೋಟಿ ವರನಾs
ಹೇಳಿ ಹ್ವಾದ ಕಾಡ್ಬೇಕಂದೋs
ವಿಷದ ಮಳಿ ಕರದಾನಾs
ಬೋರಿ ನದಿಯ ಭೋಗರಸಿs
ವಿಷಾ ತುಂಬಿ ಬಿಟ್ಟಾನs
ಮಾಳಪ್ಪ ಹೋಗ್ಯಾನೊs
ದಡಿ ಮ್ಯಾಲ ನಿಂತಾನಾs || ಮಾಳಪ್ಪ ….. . . . ||

ಬಂದು ನುಡಿದು ಮಾಳಣ್ಣs
ಗಂಗಾದೇವಿಗಿ ವರಗಳ ಬೇಡೀs
ಹೊಳಿಯ ತುಂಡ ಗೆಡಿಸ್ಯಾನs
ಹಾವು ಚೋಳು
ಮೈಮ್ಯಾಲ ಬಂದಾರs
ಕಲಲಲಾ ನಕ್ಕಾನs
ಹೆಂತಾ ಲೀಲಾ ಗುರವೇ ನಿಂದೂs
ಪಾರ ಮಾಡ ಅಂದಾನs
ಹಾವಿಗಿ ಹಿಡಿದಾನs
ಕೊರಳಿಗಿ ಹಾಕ್ಯಾನಾs || ಹಾವಿಗಿ ….. . . . ||

ಹೊಂಟ ನಡದ ಮಾಳಣ್ಣs
ರಿಕ್ಕ ಚೋಳಿನ
ಉಂಗರ ಮಾಡೀs
ಬೆರಳಲ್ಲಿ ಸಿಗಸ್ಯಾನs
ಅನೇಕ ಪರೀಲಿ
ಕಾಡಿದ್ರ ಗುರುವs
ಪಾರಾಗಿ ನಡದಾನಾs
ಪಾಂಡವರ ಕೋಟಿಗಿ ಬಂದಾನೊs
ಕೀಲೀಯ ಕಡದಾನs
ಭಂಡಾರ ಹೊಡದಾನೋs
ಬಾಗಿಲ ತೆದಾನೋs || ಭಂಡಾರ ….. . . . ||

ಒಳಗ ಹೊಕ್ಕೋ ಮಾಳಣ್ಣs
ಹುಳ ಮುಟ್ಟಲಾರ್ದ ಹೂವಾs
ತಕ್ಕೊಂಡು ನಡದಾನಾs
ನಾಗರ ಬಾವಿ ಮ್ಯಾಲ ಬಂದೋs
ನಾಗಗ ನೋಡ್ಯಾನಾs
ಕುರುಡ ಇದ್ದ ನಾಗೇಂದ್ರರಾಯ್ಗs
ಕಣ್ಣವೆ ಕೊಟ್ಟಾನಾs
ಬಾವ್ಯಾಗಿಳಿದಾನs
ತೀತಾಳಗೊಂಡಾನಾs || ಬಾವ್ಯಾಗಿಳಿದಾನs….. . . . ||

ಮ್ಯಾಲ ಬಂದಿದ್ದೊ ಮಾಳಣ್ಣs
ಧರ್ಮರಾಜನಿಗೆ ಹೊಯ್ಕಾಳ ಹೇಳಿs
ಬಂದಿಖಾನಿ ಬಿಡಸ್ಯಾನಾs
ಹಿಂಡ ಸಿದ್ಧರ
ಬಂದಿಯ ಬಿಡಸೀs
ಪಾರಾಗಿ ಬಂದಾನಾs
ನಾನಾ ಪರಿಲೇs
ಕಾದಿದ್ರೆ ಗುರುವs
ಪಾರಾಗಿ ಬಂದಾನಾs
ಸಿಡಿಯಾಣಕ ಬಂದಾನೋs
ಭಕ್ತಿ ಮಾಡ್ಯಾನೋs || ಸಿಡಿಯಾಣಕ ….. . . . ||

ಭವ ಗೆದ್ದಿದ್ದೋ ಮಾಳಣ್ಣಾs
ಹುಟ್ಟಿ ಬಂದೊ ಹುಲಜಂತಿಗಿs
ಮಾಡಿದಿ  ಠಿಕಾಣಾs
ಹಳ್ಳ ನೆಳ್ಳ
ಆರಂಭ ನೋಡೀs
ಬಂದು ತಾನು ನೆನದಾನಾs
ಅಡಿವೆಪ್ಪ ಮಾರಾಯ್ಗ ತಾನೂ
ವರಗಳ ನೀಡ್ಯಾನಾs
ನಿಶಾನಿ ಹಚ್ಯಾನಾs || ವರಗಳ ….. . . . ||

* * *

ಮೆರಿಬೇಕಂದಿದ್ದೋ ಮಾಳಣ್ಣಾs
ಮೂರು ಲೋಕದಾಗs
ಮೂಡಿ ಮಾಳಿಂಗರಾಯs
ಮೃತ್ಯಕ್ಕೆ ಬಂದವರಾs
ಹುಟ್ಟಿಯ ಬಂದವರಾs
ಜಗವೆಲ್ಲ ಪವಾಡ ಮಾಡಿದವರಾs

ಸತ್ಯುಳ್ಳ ಭೂಮಿ
ಸಿರಡೋಣ ಮಠದಲ್ಲೀs
ಗುರುಗಳ ಇದ್ದವರಾs
ಪಾಂಡೂರ ಕ್ವಾಟೀs
ಹೂ ಕಾಯಿ ತಂದೂs
ಭಕ್ತಿನಿ ಮಾಡಿದವರಾs
ಬೇಡಿದ ಭಕ್ತರಿಗೆs
ಭಾಗ್ಯ ಕೊಟ್ಟು ತಾವುs || ಬೇಡಿದ….. . . . ||

ಕೀರ್ತೀನೇ ಪಡದವರಾs
ಹುಟ್ಟಿಯ ಬಂದವರಾs
ಜಗವೆಲ್ಲಾ ಉದ್ಧಾರ ಮಾಡಿದವರಾs

ಬನ್ನಿಗಿ ಸಾವಿರs
ಕುರಿಗಳು ಮಾಳಣ್ಣಾs
ತಾವೆ ಕಾದವರಾss
ಬೀಜಗುಂತಿ ಮ್ಯಾಲ ದಡ್ಡೀs

ತಾವೆ ಹಾಕಿದವರಾss
ಹಟ್ಯಾನ ಕೆರಿಯಾ
ಬೈಲಾಗ ಮರಿಗಳs
ಹಟ್ಟಿನೆ ಹಾಕಿದವರಾs
ಹಟ್ಟಿಗೆ ಬಂದವರಾs
ಜಗವೆಲ್ಲ ಪವಾಡ ಮಾಡಿದವರಾs

ಎರಡು ಹುಲಿ ಮರಿ
ಮಾಳಿಂಗರಾಯಾs
ತಾವೇ ಸಾಕಿದವರಾs
ಕುರಿ ಕಾಯ್ಲಾಕ
ಹುಲಿಗಿ ಹಚ್ಚೀs
ಸಾಗಿ ನಡದವರಾs

ಎಡವಿದ ಕಲ್ಲs
ಮುಳ್ಳಿನ ಸೇವಾs
ಮಾಳಪ್ಪ ಮಾಡಿದವರಾs
ಹುಟ್ಟಿಯ ಬಂದವರಾs
ಜಗವೆಲ್ಲ ಪವಾಡ ಮಾಡಿದವರಾs

ಗುರುವಿನ ಮಾತs
ಕೇಳಿ ಮಾಳಿಂಗರಾಯs
ಸಾಗಿ ನಡದವರಾs
ಬಡ ಬಗ್ಗರಿಗಿ ಮಾಳಿಂಗರಾಯಾs
ಬೇಕಾದ್ದ ಕೊಟ್ಟವರಾs
ನಾರ್ಯಾಣ ಪುರದಾಗs
ಬಂದು ದೇವರಾs
ಮೆಟ್ಟ ಮಾಡಿದವರಾs || ಹುಟ್ಟಿಯ ….. . . . ||

* * *

ಬೀರಣಾss ಮಾಳಣಾss
ಸದ್ಗುರುವೆ ಕಾಪಾಡ್ರಿ ನಮ್ಮನಾs
ನಿಮ್ಮ ಹಂತೀಲೆs
ಬಂದೆವ ನಾವಾs
ಕೇಳಿರಪ್ಪಾ ಕತೀ ಸಿದ್ಧಮಾಳಪ್ಪನಾs
ಮಾಳಿಂಗನ ಮಾಡುವೆ ಧ್ಯಾನಾs
ಹೇಳುವೆ ನಾ ಕೀರ್ತನಾss || ಬೀರಣಾss ….. . . . ||

10_83_ABHMK-KUH

ಹುಲಿ ಗುಡ್ಡಕೆ

ಹೋಗಿದ್ದೊ ಮಾಳಣ್ಣಾs
ಹುಲಿಯಾಗಿ ಕೊಗ್ಯಾನ
ಗುಡದಾಗೇನಾss
ಗುಡಗಿನ ಸಪ್ಪಳ ಕೇಳೀs
ಹುಲಿ ಬಂತೇನಾs
ನೋಡಿದೋ ತಾ ಮಾಳಣಾss || ಬೀರಣಾss ….. . . . ||

ಹುಲಿ ಹಾಲ ತಾ
ಹಿಂಡಿಕೊಂಡಾನಾss
ಹುಲಿಗಿ ವರವಾ
ತಾ ಕೊಟ್ಟಾನಾss
ವರುಷಕೆ ಒಮ್ಮೆ
ಫಲ ಆಗು ನೇಮs
ಹೇಳಿದೊ ತಾ ಮಾಳಣಾss || ಬೀರಣಾss ….. . . . ||

ಎರಡ ಹುಲಿ ಮರಿ
ತಗೊಂಡಾನಾss
ಸರಪಾಗಿ ಗುರುವ
ನಿಂತ ನೋಡ್ಯಾನಾss
ಮಾಯಾಗಿ ಗುರವ
ಮರಳಿ ಬಂದಾನಾss
ತಿಳಿದಿದ್ದೋ ತಾ ಮಾಳಣಾss || ಬೀರಣಾss ….. . . . ||

ಸಿಡಿಯಾಣ ಮಠಕೆ
ತಾ ಬಂದಾನಾss
ಗುರುವಿಗಿ ತಾ ಉಣಸ್ಯಾನಾs
ತಂದ ಹುಲಿ ಗಿಣ್ಣಾs
ಗುರವ ಬೀರಣಾs
ವರವಲ್ಲಿ ಕೊಟ್ಟಾನಾss
ಶ್ರೇಷ್ಟಂದ ನೀ ಮಾಳಣಾss || ಬೀರಣಾss ….. . . . ||

ನಾರಾಣಪೂರಕೆ ತಾ ಬಂದಾನಾs
ಹುಲಿ ಉಗರ ತಗದು
ಅಗಸಿ ಕಟ್ಟಸ್ಯಾನಾss
ಹುಲಿ ಮುಖದಾಗ
ಶ್ರೀ ಹುಲಜಂತಿ ಅನಿಸಿ
ನೆಲಸಿದೊ ತಾ ಮಾಳಣಾss || ಬೀರಣಾss ….. . . . ||

ಅಡಿವೆಪ್ಪ ಮಹಾರಾಯಾ
ಹೇಳಿದ ವರನಾs
ನಿತ್ಯ ಮಾಡಿರೆಂದೋs
ಬೀರಪ್ನ ಧ್ಯಾನಾss
ಧ್ಯಾನದಲ್ಲಿ ಮಾನಾ
ದೊರಿತದ ಅಂದಾನಾss
ಮಾಡಂದೋ ತಾ ಕೀರ್ತನಾss || ಬೀರಣಾss ….. . . . ||

* * *

ತನುಮನ ಧನವಿನ್ನs
ಗುರವಿಗರ್ಪಣ ಮಾಡೋss
ಅನುಮಾನ ಇನ್ಯಾಕೋss
ಅನುಮಾನ ಮಾಡಿದರs
ಅನಕೂಲಾಗುದಿಲ್ಲಾss
ಸಣಕುಲ ಇದಕ್ಯಾಕೋss

ರಜಪ್ನ ಮಗನs
ದೂರಮಾಡಿ ನೀs
ಸತ್ವ ಹಿಡಿಯಬೇಕೋss
ಸತ್ವ ಪರಿಪೂರ್ಣ ಮಾಡಿಕೊಂಡು
ಮಾಳಪ್ನ ನೆನಿಯಬೇಕೋss
ಮಹಾಜ್ಞಾನಿ ಪುರುಷ ಮಾಳಪ್ನss
ಮೂರು ಲೋಕ

ಹೊಗಳಬೇಕೋss
ಕಾಮ ಕ್ರೋಧ ಮದ
ಮತ್ಸರ ಎಲ್ಲಾs
ತುಳದ ಎಲ್ಲಾs
ತುಳದ ಬಿಟ್ಟ ತಳಕೋss || ಕಾಮ ….. . . . ||

ಸತ್ವ ಗುಣದಲೀ ಸಾಧಿಸಿಕೊಂಡುs
ಮುತ್ಯಾನ ಮುಕ್ತಿ ಪಥಕೋs
ಮುಕ್ತಿ ಪತಾಕಿ ಕೋರಿ
ನಿಶಾನಿ ಮಾಡಿs
ಮೆರಸ್ಯಾನ ಮರತ್ಯಾಕೋss

ಭಾವ ಭಕ್ತಿ ಎಂಬ
ಭಂಡಾರ ಭವದಾಗs
ಬೀರಣ್ಣ ಎಲ್ಲಾ ಜನಕೋss
ಉದ್ಧಾರ ಮಾಡ್ಯಾನೋss
ಹಾಲಮತಾ ಶಿವಮತಾs
ಹಾರಿಮತಾ ಜನಕೋss || ಉದ್ಧಾರ ….. . . . ||

ಹಿಂಡ ಸಿದ್ಧರಗೀs
ಬಂದಿ ಬಿಡಸ್ಯಾನೋss
ಹೆಂತ ಶರಣ ಠಳಕೋss
ಶರಣದಲ್ಲಿ ಮಹಾ ಶರಣ
ಅನಿಸಿಕೊಂಡs
ತೋರಿದ ತನ್ನ ಬೆಳಕೋss
ನಡೆ ನುಡಿ ತೊಡಿ
ಸುದ್ದಾಗಿ ಇಡರೆಂದೋss
ಹೇಳಿದ ಭವ ಜನಕೋss
ಜಗ ಜನಾರ್ಧನs
ತಿಳಕೊಂಡ ನಡಿರೆಂದೋss
ಹೇಳಿ ಹ್ವಾದ ಚೊಕ್ಕೋss || ಜಗ ….. . . . ||

ಹುಲಿಯ ಬಾಯಿಲೇs
ವೇದ ಓದಿಸೀs
ತೋರಿದ ಅಷ್ಟು ಜನಕೋss
ವೇದ ಓದಿಸೀs
ಶ್ರವಣ ಮಾಡಿಸೀs
ತೋರಿದ ನಿಜ ಬೆಳಕೋss
ಪ್ರಾಂಥದೊಳು ಪ್ರಸಿದ್ಧ ಹುಲಜಂತೀs
ಮಾಳಿಂಗರಾಯನ ಸ್ಥಳಕೋss
ಮುತ್ಯಾ ಮಾಳಪ್ಪನs
ಚರಣ ಕಮಲದಲ್ಲೀs
ಅಡಿವೆಪ್ಪನ ಬೆಳಕೋss || ಮುತ್ಯಾ ….. . . . ||

* * *