ಮಾಳಿಂಗರಾಯಗs
ನಾಕ ಮಂದಿ ಧರಮರುs
ಹುಟ್ಯಾರ ಸರಿಯಾಗೀss
ವಂಶ ಬೆಳಿಸುವದಕಾಗೀss
ರೆಬ್ಬರಾಯ ಬೀರಮುತ್ಯಾs
ಕಣಮುತ್ಯಾ ಸೋಮರಾಯಾ
ಈ ಹಾಲಜಂತಿ ಧರಮರಿಗೀss
ಹೂವಪ್ಪ ಹೆಗ್ಗರಾಯ
ಮಾದಪ್ಪ ಕಾಮರಾಯಾs
ಕನ್ಯಕೊಟ್ರೊ ಅವರೀಗಿs

ಹಾಕ್ಯಾರ ಹಂದ್ರಾs
ಮದವಿಯ ಜಂಬ್ರಾs
ಹುಲಜಂತಿ ಊರಿಗೀs
ಸುತ್ತ ನಾಡಿನಿಂದ
ಭಕ್ತರು ಬೀಗರು
ಬಂದಾರೊ ಮದುವೀಗೀs

ಮುತ್ತ ಮಾಣಿಕಾ
ಮುಯ್ಯ ತಂದಾರವರೀಗೀs
ಬಾಜಾ ಭಜಂತ್ರಿ
ವಾಲಗದ ಜಾತ್ರಿs
ಗರದಿಯ ಮದುವೀಗೀs
ಅರಿಷಿಣ ಹಚ್ಚಿ
ಅಕ್ಕಿಕಾಳ ಒಗಿತಾರs
ಶುಭ ಮೂರ್ತಿಗೀs

ನೆರದ ಮಂದಿಯಲ್ಲಾs
ಹರದ ಹ್ವಾದಿತೋs
ತಮ್ಮತಮ್ಮ ಊರೀಗೀs
ಗುರುವ ಬೀರಣಾ
ಶಿಷ್ಯ ಮಾಳಣಾ
ಹರುಷಾದ್ರೋ ಮನಸೀಗೀs
ನೀವು ಕೇಳಿರಿ ನಿಜವಾಗೀs

ಮಾಳಿಂಗರಾಯ ಕರ್ಕೊಂಡ ತಂದಾನs
ನಾಕು ಮಂದಿ ಸ್ವಸ್ತ್ಯಾರಿಗೀs
ಪತಿಯು ದೇವರೆಂದು
ತಿಳಿದ ನಡಿಯರೆಂದು
ಹೇಳ್ಯಾನ ಅವರೀಗೀs

ಹೇಳಿ ಮಾಳಪ್ಪಾs
ಸಾಗಿ ಹ್ವಾದಪ್ಪಾs
ಬೀಜದ ಗುಂತೀಗೀs
ಬೀಜದ ಗುಂತೀಗೀ ಕೇಳರಿ
ಕುರಿಗಳ ದಡ್ಡೀಗೀs

ದ್ಯಾಮಾಯಿ ಕಾಮಾಯಿs
ಕೋಮಾಯಿ ಸ್ವಾಮಾಯಿs
ಹುಲಜಂತಿ ಊರೀಗೀs
ಕೊಡಾ ಹೊತ್ತ
ನಿತ್ಯ ನೀರ ತರತಾರೋs
ತಮ್ಮ ಮನಿಗೀs

ಏಕದಂಡಗಿ ಪದಮಣ್ಣ ಯೋಗೀs
ಕಂಡಾರ ಸಿಂದಗೀಗೀs
ಕೇಳರೆಪ್ಪ ಇದ್ದನವ ಯೋಗೀs
ಹೇಳ್ತೇವ ಹಾಡಿs
ಇದ್ದಕ್ಕಿದಂಗ ನುಡಿs
ಮುಂದಿನ ಸಂದೀಗೀs
ಏಕದಂಡಗಿ ಪದುಮಣ್ಣ ಒಡಿಯಾರs
ಕತಿ ಹೇಳುವೆ
ನಾ ಕೂಗೀs

* * *

ಸತ್ಯ ಶರಣರ
ಕತಿ ಭಾಗ ವರಣಾs
ಗಣ್ಯರ ಸಿಂದಗೀ ಕತನಾs

ಏಕದಂಡಗಿ ಇದ್ದೊ ಪದುಮಣ್ಣಾs
ಸಾರಂಗ ಮನಿ ಗುರವೀನಾs
ಪದುಮಣ್ಣಾ ಗುರುವಿನ ಪಡದಾನಾs
ಗುರುವಿನ ಗುಲಾಮ ಆದಾನಾs
ಸಾವಿರಾರು ಆಕಳು
ಕಟ್ಟಿ ಸಲುಹ್ಯಾನಾs
ಹಾಲಿನಲ್ಲಿ ಹೆಂಡಿ ಕಲಸ್ಯಾನಾs
ಮೂರು ಸಾವಿರ
ಕುಳ್ಳು ತಯ್ಯಾರ ಮಾಡಿ
ನಿತ್ಯ ಕಾಲದಲ್ಲಿ ಉರಿಸ್ಯಾನಾs

ಲೆಕ್ಕ ಇಲ್ಲದೇs
ಬರತಿತ್ತೋ ಜನಾs
ಎಷ್ಟೋ ಗಂಗಾಳs
ಕುದಿತಿತ್ತೋ ಅನ್ನs
ದಾಸೋಹ ನಡಿತಿತ್ತು
ದಿನಾ ದಿನಾs
ಪದುಮಣನಾs
ಬೆಳದಿತು ವಾಯೋಣಾs

ರಾಕ್ಷೆಸರನು ಹಿಡದು ಕಟ್ಯಾನಾs
ಹನ್ನೆರಡು ವರುಷs
ಸಾರಂಗ ಗುರುವಿನs
ಸೇವಾ ಮಾಡ್ಯಾನಾs
ಅವ ಸಂಪೂರ್ಣಾs
ದೆವ್ವ ಕಟ್ಟಿ ದೆವ್ವಾಳಿದ
ಪದುಮಣ್ಣಾs
ಗುರುವಿಗಿ ಹೇಳಿ ಹೊಂಟಾನಾss

ಒಂಟಿ ದೀವಟಗಿ
ಮುಂದ ಹಚ್ಯಾನಾs
ಒಂಟಿ ದಂಡಗಿ
ಪಲ್ಲಕ್ಕಿ ಏರ್ಯಾನಾs || ಒಂಟಿ ದೀವಟಗಿ ….. . . . ||

ಭೂಮಿ ಬಿಟ್ಟು
ಅಂತರ್ಲೆ ನಡದಾನಾs
ನೋಡಿದ ಜನಾs
ಧನ್ಯ ಧನ್ಯ ಅಂದರಾs

ಪದುಮಣ್ಣ ಕಾಶಿ
ದಾರಿ ಹಿಡದಾನಾs
ಮಾಳಿಂಗರಾಯನ
ನಾಲ್ಕು ಮಂದಿ ಸ್ವಸ್ತ್ಯಾರುs
ಒಯ್ಯುದಕ ಬಂದಾರು ನೀರನ್ನಾs
ಒರತಿ ಒಡೆದು
ನೀರು ತುಂಬುದ್ರೊಳಗೆ
ಪದುಮಣ್ಣ ಅಂತರ್ಲೆ ನಡದಾನಾs
ನುಡಿ ಅಂತಾರು
ಸ್ವಸ್ತ್ಯಾರು ಅವನಾs
ಇವ ಹೆಂತs
ಹೆಚ್ಚಿನವ ಶರಣಾs || ನುಡಿ ….. . . . ||

ಮಾವನಕಿಂತ ಹೆಚ್ಚಿನವs
ಅದಾನ ಅಂದಾರಾs
ಇವರ ಮಾತನ್ನs
ಮಾಳಣ್ಣ ತಿಳದಾನಾs
ಆಗ ಮಾಳಣ್ಣs
ಭಂಡಾರ ತೂರ್ಯಾನಾs
ಭಂಡಾರ ತೂರಿ
ಮ್ಯಾಲಿಂದ ಮ್ಯಾಲೇs
ಪಲ್ಲಕ್ಕಿ ಮಾಳಣ್ಣ ನಿಲ್ಲಸ್ಯಾನಾs
ಅರುವುಂಟಿ ಆಗೀs
ಪದುಮಣ್ಣ ಯೋಗೀs
ಇಳದು ಮೆಲ್ಲಕ ಬಂದಾನಾs
ನೀನು ಹೆಚ್ಚಿನs
ಶರಣ ಅಂದಾನಾs
ಮಾಳಪ್ಪನ ಪಾದಕ ಎರಗ್ಯಾನಾs || ನೀನು ….. . . . ||

ಸಾಷ್ಟಾಂಗ ಹಾಕಿದಾನೊ ಶರಣಾs
ಮಾಳಣ್ಣ ಗುರುಗೋಷ್ಠಿ ಹೇಳ್ಯಾನಾs
ಪದುಮಣ್ಣನ ನಾ ನತ್ವ ತಗದಾನಾs
ಶರಣ ಮಾಡಿ
ಹೊಳ್ಳಿ ಹೋಗೂದು
ಸ್ವಸ್ತ್ಯಾರು ಕಣಮುಟ್ಟ
ಅವರು ಕಂಡರೇನಾs

ಅಷ್ಟರಲ್ಲಿ ಸಸ್ತ್ಯಾರ ಬಲ್ಲಿ
ಬಂದ ನಿಂತs
ಶರಣ ಮಾಳಣ್ಣಾs
ಸುಮ್ನ ನಡಿರಿ
ಮುಂದಕ ಅಂದಾನಾs
ನಾಲ್ಕುಕೊಡಗಳ
ಅಂತರ್ಲೆ ನಡಸ್ಯಾನಾs || ಸುಮ್ನ ….. . . . ||

ಸ್ವಸ್ತ್ಯಾರು ನಡದ್ರು ಸುಮ್ಮನಾs
ಕೊಡಗಳನು ಅಂತರ್ಲೆ ನಡೆಸಿs
ಅರಮನೆ ಹೊಗಿಸ್ಯಾನಾs
ಆದ ಚಮತ್ಕಾರಾs
ತಿಳಕೊಂಡ್ರು ಮಜಕೂರಾs

ನಾಲ್ಕು ಮಂದಿ ಹೆಣ್ಣ ಬಾಲೆರುs
ಪದಮಣ್ಣನಕ್ಕಿಂತ
ಹೆಚ್ಚಿನ ಶರಣೆಂದುs
ಪಾದಕ ಹೊಂದಿ
ಮಾಫಿ ಬೇಡ್ಯಾರಾs
ಅವರ ಮನದಂದು
ತಗದು ಅಜ್ಞಾನಾs
ತಿಳಿಸಿ ಕೊಟ್ಟ
ಮಾಡ್ಯಾನೊ ಸುಜ್ಞಾನಾs
ಧನ್ಯ ಧನ್ಯ
ಹೆಚ್ಚಿನವ ಶರಣಾs
ಮೂರು ಲೋಕಕೇನಾss
ಮೂರು ಲೋಕಕ
ಮಿಗಿಲ ಅನಿಸ್ಯಾನಾs
ಸ್ವಸ್ತ್ಯಾರ್ಗಿ ತಿಳಿಸಿಕೊಟ್ಟ ಜ್ಞಾನಾs
ಸಿದ್ಧಿ ಚಮತ್ಕಾರ ಮಾಡುವುದರಲ್ಲೀs
ಸುಖವಿಲ್ಲ ಎಳ್ಳಷ್ಟು ಅಂದಾನಾs
ಮೋಕ್ಷದ ಮಾರ್ಗ ಅವರಿಗಿ
ಮಾವ ತಿಳಿಸಿ ಕೊಟ್ಟಾನಾs
ಹುಲಜಂತಿಗೆ ವಾಸ ಮಾಡ್ಯಾನಾs
ಕೈಲಾಸ ಭವನ ಅನಸ್ಯಾನಾs

ಅಡಿವೆಪ್ಪ ಮಾರಾಯಾs
ಮಾಡಿ ಕವನಾs
ಪದಮಣ್ಣನ ಕತಿ
ಕೇಳ್ರಿ ಜನಾs
ಮಾಳಣ್ಣ ತಗದ
ಅವರ ಅಜ್ಞಾನಾs

* * *

ಜಾತ ಮುತ್ತಿನ ಮಾತs
ಜಾಣರು ಕೇಳ್ರೆಪ್ಪಾs
ಕುಳಿತಂತ ಪಂಡಿತರಾs
ಆಹಾs ಕುಳಿತಂತ ಪಂಡಿತರಾs
ಸಿದ್ಧ ಮಾಳಿಂಗರಾಯs
ಬೀಜಗುಂತಿ ಬಿಟ್ಟು
ಸಾಗಿನಿ ಬಂದವರಾss || ಸಿದ್ಧ ….. . . . ||

ರೆಬರಾಯ ಬೀರಮುತ್ಯಾs
ಕಣಮುತ್ಯಾ ಸ್ವಾಮರಾಯಾs
ಮಕ್ಕಳ್ನ ಕರದವರಾs

ಎಳ ಮಂದಿ ಗೆಳೆಯಾರುs
ಏಳ್ನೂರು ಕಾಲಾಳs
ಶಿಷ್ಯರ್ನ ಕರದವರಾss || ಏಳು ಮಂದಿ ….. . . . ||

ಹೌಳ ಮುತ್ತಿನ ಪಲ್ಲಕ್ಕಿ ಹೊರಗೆ
ತಾವೇ ತಗದವರಾs
ಮಾಳಣ್ಣ ತಾವೇ ತಗದವರಾs
ಹಚ್ಚ ಹದ್ನಾರ ಗೊಂಡಿ
ಮುಚ್ಚ ಮುನ್ನಾರು ಗೊಂಡಿ
ಸಡಗರ ಮಾಡಿದವರಾss || ಮುಚ್ಚ ….. . . . ||

ಹೊನ್ನರಿಕ್ಕದಾ ಗೊಂಡೆಯ ಹಿಡಿದು
ಪಲ್ಲಕ್ಕಿ ಏರವರಾs
ಹೋರಿ ಹೋರಿ ಆಳs
ಹೊತ್ತ ಅಲ್ಲೀs
ವಾಲಗ ನುಡಿಸವರಾs || ಹೋರಿ ….. . . . ||

ಬೋರ್ಯಾಮ ವಾಲಗs
ಮಾಡುತ್ತ ಜನಾs
ಸಾಗಿನಿ ನಡದವರಾs
ಹಸರ ಹಳದೀ ಪರಾರಿ ಹಚ್ಚೀs
ಸಾಗೀನಿ ನಡದವರಾss

ಒಡ್ಡಿಯ ಓಲಗ ಶಿವಸ್ಥಾನs
ಗರ್ದಿಲಿ ಹೊಂಟವರಾs
ಹುಲಜಂತಿ ಗ್ರಾಮವ
ಬಿಟ್ಟು ಮಾಳಿಂಗರಾಯಾs
ಸಾಗಿನೀ ನಡದವರಾss  || ಹುಲಜಂತಿ ….. . . . ||

ಅಲ್ಲೆಲ್ಲಿ ವಸ್ತಿಗಳವುತ ಮಾಳಣ್ಣs
ಸಾಗಿನೀ ನಡದವರಾs
ಕಳ್ಳರ ಕವುಟಿನಿ ಕಂಡವರಾs
ಕಳ್ಳರ ಕವುಟೀs
ಭೂಮ್ಯಾಗ ಮಾಳಿಂಗರಾಯs
ಹೋಗಿಯ ನಿಂತಾನರೀss || ಕಳ್ಳರ ಕವುಟಿ ….. . . . ||

ಹಗಲ ಪಂಚಗಳ್ಳರು ಅಲ್ಲೀs
ಸಾಗಿಯ ಬಂದಾರರೀs
ಸಿಂದಿಯ ಬಣದಿಂದ
ಬಾಣ ಬಿಡತಾರೋs
ಮಾಳಪ್ಪನ ದಂಡ ಮ್ಯಾಲರೀss || ಸಿಂದಿಯ ….. . . . ||

ಮಾಯದಿಂದ ಮಾಳಪ್ಪಾ ಭಂಡಾರs
ಅಲ್ಲಿಯ ತೂರ್ಯಾನರೀs
ಆಗ ಅಲ್ಲಿಯ ತೂರ್ಯಾನರೀs
ಬಂದಿರೋ  ಬಾಣಾs
ಮಾಯಾಗಿ ಹೋಗ್ತಾವs
ಕೇಳರೆಪ್ಪ ಆಗss || ಬಂದಿರೋ ….. . . . ||

ಅಷ್ಟು ಕಳ್ಳರs
ಕಣ್ಣ ಹೋದಾವುs
ಕೇಳರೆಪ್ಪ ಆಗರೀs
ಸಿದ್ಧ ಮಾಳಿಂಗರಾಯ
ಸಾಗಿ ಹೋಗ್ಯಾನೋs
ಹಿರವಳ್ಳಿ ದಡಿಮ್ಯಾಗೋss || ಸಿದ್ಧ ….. . . . ||

ಕಳ್ಳರು ಅಂತಾರs
ನಮೋ ನಮೋ ಗುರುವೇs
ಹೆಚ್ಚಿನ ಸಿದ್ಧಂದರೀs
ನೀನು ಹಿಚ್ಚಿನ ದೇವರಂದರೀs
ಕಣ್ಣ ಕೊಟ್ಟರ ನಾವುs
ನಿನ್ನ ದಂಡಿನ್ಯಾಗs
ಬರ್ತೇವ ಈಗಂದರೀs || ಕಣ್ಣ ….. . . . ||

ಅರುವ ಆಗಿ ಮಾಳಪ್ಪ
ಅಲ್ಲಿಂದ ಭಂಡಾರ ತೂರ್ಯಾನರೀs
ಭಂಡರ ತೂರಿದಾಗ
ಕಳ್ಳರ ಕಣ್ಣಾs
ಆಗಲ್ಲಿ ಬಂದಾವರೀss  || ಭಂಡಾರ  ….. . . . ||

ಧನ್ಯ ಧನ್ಯ ಸಿದ್ಧs
ಹೆಚ್ಚಿನ ಮಾಳಿಂಗರಾಯs
ನಾಮೆ ನುಡಿದಾರರೀs
ಮಾಳಪ್ಪ ಮಾಳಪ್ಪ ಎಂಬುತs
ಸ್ಮರಣೆ ಮಾಡ್ಯಾರರೀs || ಮಾಳಪ್ಪ  ….. . . . ||

ಹಿರವಳ್ಳಿ ದಂಡಿಮ್ಯಾಗ
ಬಂದು ಕಳ್ಳರುs
ಪಾದಕ ಹೊಂದ್ಯಾರರೀs
ಸಿದ್ಧ ಮಾಳಿಂಗರಾಯ
ಕಳ್ಳರ್ಗಿ ಆಶೀರ್ವಾದs
ತಾನುವ ಮಾಡ್ಯಾನರೀs || ಸಿದ್ಧ ….. . . . ||

ಕಳತಾನ ಗುಣಗಳ ಬಿಡಿಸಿs
ಬೋಧೆ ಮಾಡ್ಯಾನರೀs
ಅಲ್ಲಿಯೇ ಬೋಧೆ ಮಾಡ್ಯಾನರೀs
ಜ್ಞಾನುಳ್ಳ ಶಿಷ್ಯರ್ನ
ಮಾಡಿಸಿ ಕಳ್ಳರ್ಗಿs
ತಾನುವ ಬಿಟ್ಟಾನರೀs || ಜ್ಞಾನುಳ್ಳ ….. . . . ||

ಅಷ್ಟರಲ್ಲಿ ಹಿರುವಳ್ಳಿಯಲ್ಲೀs
ಹೊಳಿ ಭೋಗರದೀತರೀs
ಭೋಗರಿಯುತ ಗಂಗಮ್ಮ ತಾಯಿs
ತಾನುವ ನಡದಾಳರೀs
ಸಿದ್ಧ ಮಾಳಿಂಗರಾಯಾs
ಕಂಬಳಿ ಹಾಸಿs
ಹೊಳಿಗಳ ದಾಟ್ಯಾನರೀs
ಆಗ ಹೊಳಿಗಳ ದಾಟ್ಯಾನರೀs
ಇಪ್ಪತ್ತನಾಕ ಸಾವಿರ ದಂಡಿಗೀs
ನೀರ್ಮ್ಯಾಲ ನಡೆಸ್ಯಾನರೀs || ಇಪ್ಪತ್ತನಾಕ ….. . . . ||

11_83_ABHMK-KUH

ಮುಂಡಗನೂರ ಬಿರದ ಮಡ್ದಿಮ್ಯಾಲs
ಮೂರೂತಿ ಆಗ್ಯಾನರೀss
ಅಲ್ಲಿಂದ ಮುಂದ
ಕ್ವಾಣೂರ ಮಠಕs
ಸಾಗಿಯ ಬಂದಾನರೀs || ಅಲ್ಲಿಂದ ….. . . . ||

ಕ್ವಾಣೂರ ಮಠದಾಗ
ದೇಗೊಂಡ ಗೌಡಾs
ಅಲ್ಲೇ ಇದ್ದಾನರೀs
ಚಾಡಿಕ್ವಾರ ಮೋಡಿಕ್ವಾರ
ಬಂಗಾಲಿ ಮಂದೀs
ಅಲ್ಲೇ ಕೂಡಿತರೀs
ಕುಟಿಲ ಸಿದ್ಧರ್ನ ಮಾಳಿಂಗರಾಯಾs
ನಮೋ ನಮೋ ಮಾಡ್ಯಾನರೀs
ಏಳು ಬಂಡಿ ಅಲ್ಲಿ
ತುಂಡ ಮಾಡಿ ಮಾಳಪ್ಪs
ತಾನೇ ಒಗದಾನರೀs || ಎಳುಬಂಡಿ ….. . . . ||

ಚಮೂಲಿ ರಂಗಾs
ಹೊಯ್ತಾನ ಹೆಂಗ್ಯಾs
ನೋಡೂಣು ಬರ್ಯೆಂದರೀs
ಜನರೆಲ್ಲ ನೋಡೂಣ ಬರ್ಯೆಂದರೀs
ಏಳು ಮೂಲಿs
ತಿರುಗ್ಯಾಡಿ ನೋಡಿದ್ರs
ಮಾಳಪ್ಪ ಕಾಣ್ತಿದ್ದರೀs || ಎಳು….. . . . ||

ಧನ್ಯ ಧನ್ಯ ಸಿದ್ಧs
ಹೆಚ್ಚಿನ ಮಾಳಿಂಗರಾಯs
ಸಿದ್ಧರು ಅಂದಾರರೀs
ಅಷ್ಟು ಸಿದ್ಧರುs
ಮಾಳಪ್ಪನ ಪಾದಕs
ಬಂದು ಹೊಂದ್ಯಾರರೀs || ಅಷ್ಟು ….. . . . ||

ಗಿರಿವೊಂದ ಕ್ವಾಣೂರs
ಮಠದಾಗ ಮಾಳಪ್ಪs
ಕೊಂಡದಲ್ಲಿ ಜಿಗಿದಾನರೀs
ಮುಂಡಗನೂರ ನರಗಲ್ಲ ಪಡಿಮ್ಯಾಲ
ಉದಯ ಆಗ್ಯಾನರೀs || ಮುಂಡಗನೂರ ….. . . . ||

ಭೂಮಿಯಲ್ಲಿ ಮಾಯಾಗಿ ಮಾಳಪ್ಪಾs
ಮ್ಯಾಲ ತೋರ್ಯಾನರೀs
ಜನರೆಲ್ಲ ಧನ್ಯ ಧನ್ಯ ಸಿದ್ಧ
ಅಂತ ನಾಮೆ ನುಡದಾರರೀs|| ಜನರೆಲ್ಲ ….. . . . ||

ಚಿನಗುಂಡಿ ಹಿರಿಕುರುಬs
ಎಮ್ಮಿಟ್ಟ ಎಮಗಾರs
ನೆರಿಬಾನ ತಂದಾನರೀs
ಒಂದೇ ಎಡಿಯಾನ
ಬಾನ ಮಾಳಿಂಗರಾಯs
ಎಲ್ಲರಿಗೂ ಉಣಿಸ್ಯಾನರೀs || ಒಂದೇ ….. . . . ||

* * *