ಸತ್ಯ ಧರ್ಮರs ಮೆರಗೋs
ಹಾಡಿನ ಭೇದೆಲ್ಲಿದ್ದಾವೋs
ಯಾವ ಜಾಗದ
ಮೇಲೊ ಗುರುವs
ಯಾವ ಠಾಣೆದ ಮೇಲೋs
ಏನು ಮದುವೇ ಮೆರಗೋs
ಗ್ರಾಮನೇಳು ಹುಲಜಂತ್ಯಾಗೋs

ಮಾಳಿಂಗರಾಯನ ಮಡದೇನೋs
ತೆಂಬದ ಲಕ್ಷ್ಮೀ ಇದ್ದಾಳೋs
ತೆಂಬದ ಲಕ್ಷ್ಮೀ ಇದ್ದಾಳೋs
ಕಾಲಗಳವುತಾಳಲ್ಲೋs
ಕಾಲಗಳವುತಾಳಲ್ಲೋs
ವ್ಯಾಳೆಗಳೆಯುತಾಳಲ್ಲೀs
ಒಂದಾನೊಂದ ದಿನದಲ್ಲೀs
ಒಂದನ್ಹೇಳ ಒಂದ ಕೈಯಲ್ಲೀs
ಮಾಯಕೋರ ಮಾಳಪ್ಪಾs
ಬೀಜದಗುಂತಿ ಬೈಲಾಗೋs
ಬೀಜದಗುಂತಿ ಬೈಲಾಗೋs
ವ್ಯಾಳೆಗಳಿತಾನಲ್ಲೀs

ಆ ಗಿಣಿಯಾಗದ ಒಳಗೇನೋs
ಮಾಳಿಂಗರಾಯನ ಮಡದೇನೋs
ತೆಂಬದ ಲಕ್ಷೀ ಇದ್ದಳೋss
ರನ್ನದ ಕೊಡ ಅವ್ಳು ಹೊತ್ತಾಳೋs
ರನ್ನದ ಕೊಡಗಳ ಹೊತ್ತಾಳಲ್ಲೀs
ಚಿನ್ನದ ಸಿಂಬೆ ಗೊಂಡಾಳೋs
ರಾಜವಾಡೆ ಬಿಟ್ಟಾಳೋs
ರಾಜ ಅಂಗಳದಿಂದ ಹಾಯ್ದಾಳೋs
ರಾಜ ಬೀದೀಲಿ ಹಾಯ್ದಾಳೋs
ಹುಲಿ ಮುಖದ ಆಗಸೀಲಿ ಹಾಯ್ದಾಳೋs
ಹುಲಿ ಮುಖದ ಆಗಸೀಲಿ ಹಾಯ್ದಾಳಲ್ಲೀs
ಎಲ್ಲಿಗಿ ಬರುವುತಾಳಲ್ಲೀs
ಹಾಲ ಹಳ್ಳದ ಒಳಗೇನಲ್ಲೀs
ಮೇಲ ಮಡಗೋಳಿದ್ದಾವೋs
ಮೇಲಿನ ಮಡದ ಒಳಗೇನೋs
ವರ್ತಿ ಹೊಡೆಯುತಾಳಲ್ಲೋs
ವರ್ತಿ ಹೊಡೆಯುತಾಳ ತಾಯೀs
ಮೂರ ಬಗಸಿ ನೀರೇನೋs
ಸೀತಾಳ ಮಗವು ತಾಳಲ್ಲೋs

ರನ್ನದ ಕೊಡಗಳ ಹೊತ್ತಾಳೋs
ತನ್ನ ಮನಿಗಿ ಬಂದಾಳೋs
ಅಷ್ಟರೊಳಗೋ ಮಾರಯಾs
ಭಾಗ್ಯದ ಹಟ್ಟಿ ಮ್ಯಾಲೇನೋs
ಮಾಯಿಕೋರ ಮಾಳಪ್ಪಗೋs
ಅರವು ಸಂಜ್ಯಾಣಾದಾವೋs

ಅರವು ಸಂಜ್ಯಾಣದರಲ್ಲೀ
ಉರದ ಬೆಂಕಿ ಆದಾನೋs
ಉರದ ಬೆಂಕಿ ಆದಾನು ದೇವರs
ತರಿವೇನ ಕೆಂಡನಾದಾನೋs
ಬಾಯಿಲಿ ಉರಿಗೋಳು ಜಿಗದಾವೋs
ಕಣ್ಣಿಲಿ ಕಿಡಿಗೋಳು ಜಿಗದಾವೋs

ಹೆಂಗ ಮಾಡಲೆಂದನು ಮಾಳಪ್ಪಾs
ಎಂತ ಮಾಡಲೆಂದಾನೋs
ಹಗಲ ಹನ್ನೆರಡ ತಾಸೇನೋ
ವ್ಯಾಳೇ ಗಳೆಯುತಾನೇನೋs
ಚೆಂಜಿ ಒಂಬತ ತಾಸೀಗೀs
ಸಿರಿ ಬರುವ ವ್ಯಾಳೀಗೀs

ಬಾಗಿ ದೊಡ್ಡಗಿ ಬಂದಾನೋs
ಬಾಗಿ ದೊಡ್ದಗಿ ಬಂದಾನಲ್ಲೀs
ಕುರಿಗಳ ದೊಡ್ಡಗಿ ಹಾಕ್ಯಾನೋs
ಹಂತ ವ್ಯಾಳೇದ ಒಳಗೇನೋs
ಹೋಮದ ಕಂಬಳಿ ಹೊತ್ತಾನೋs
ಹೋಮದ ಕಂಬಳಿ ಹೊತಾನವನುs
ನೇಮದ ಬೆತ್ತಾ ಹಿಡಿದಾನವನುs

ಬೀಜಗುಂತಿ ಮ್ಯಾಲೇನೋs
ಗುರುವಿನ ಹೆಸರ ಗೊಂಡಾನೋs
ಗುರುವಿನ ಧ್ಯಾನಾ ಮಾಡ್ಯಾನವನುs
ಮಟ್ಟನೆ ಮಾಯ ಆದಾನೋs
ಜಿತ್ತ ನಾರಾಯಣಪುರದಾಗೋs
ಗ್ರಾಮ ನೇರ ಹುಲಜಂತ್ಯಾಗೋs

ತನ್ನ ಮನಿಯ ಮಂದೇನೋs
ಉದಯ ಆಗಿ ನಿಂತಾನೋs
ಉದಯ ಆಗಿ ನಿಂತಾನ ದೇವರs
ನುಡದಾನೋs
ಮಾತಾಡ್ಯಾನೋs

ಬಾರ ಬಾರ ಹಡದವ್ವಾs
ತೆಂಬದ ಊರ ಒಳಗೇನುs
ತೆಂಬದ ಊರ ಒಳಗೇನವ್ವಾs
ತೆಂಬದ ಗೌಡ ಇದ್ದಾರ
ತೆಂಬದ ಗೌಡ ಇದ್ದಾರವ್ನs
ಮರಣ ಆದಾವ ಅಂದಾನೋs

ಅಷ್ಟರೊಳಗೊ ಮಾರಾಯಾs
ಮಾಳಿಂಗರಾಯನ ಮಡದೇನೋs
ಆಡಿಗಿ ಮಾಡುತ ಕುಂತಳೋs
ಆಡಗಿ ಮಾಡುತ ಕುಂತಾಳಲೀs
ಗಂಡನ ಮಾತ ಕೇಳ್ಯಾಳೋs
ಪತಿಯ ಮಾತ ಕೇಳ್ಯಾಳೋs

ಅಡಿಗಿ ಮಾಡುದ ಬಿಟ್ಟಾಳೋs
ಪತಿಗೆ ಹೇಳದೆ ಹೊಂಟಾಳೋs
ಓಡಿ ಓಡಿ ಹೊಂಟಾಳೋs
ಸಿದ್ಧ ಮಾಳಿಂಗರಾಯನೋs
ಎರಡು ಹುಲಿ ಕರದಾನೋs
ಕರದ ಹೇಳುತಾನಲ್ಲೇs
ಬರ್ರೀ ಬರ್ರೀ ಹುಲಿಗೊಳ್ಯಾs
ನೀವು ಹೋಗಲೆ ಬೇಕಲ್ಲಾs
ತೆಂಬದ ಊರಿಗೆ ನೋಡಪ್ಪಾs
ಹಚ್ಚಿ ಬರಬೇಕಪ್ಪಾs

ಎರಡು ಹುಲಿಗೊಳಿದ್ದುವುs
ತಾಯಿ ಬೆನ್ನ ಹತ್ಯಾವೋs
ಮಾಳಿಂಗರಾಯನ ಮಡದೇನೋs
ಸಾಗಿ ಮಾರ್ಗ ಹಿಡದಾಳೋs
ರಾಯ ಮಾರ್ಗ ಹಿಡದಳೋs
ರವ್ವನೇ ಮಾಡುತಾಳಲ್ಲೋs

ಎಳದಲ್ಲಿ ಎಳಿಗಾಳೇನೋs
ಸುಳದಲ್ಲಿ ಸುಳಿಗಾಳೇನೋs
ಪರಮಗಾಳಿ ಸುಳದಾಳೋs
ಗಾಳಿ ಕಿತ್ತಿ ಮುಂದಾದಾಳೋs

ಬೆಳ್ಳನೆ ಬೆಳಗ ಆದಾವಲ್ಲೀs
ಬೆಳ್ಳಿ ಮೂಡಲ ಹರದಾವಲ್ಲೀs
ಬೆಳ್ಳಿ ಮೂಡಲ ಹರದಾವೋs
ಸೂರ್ಯ ಉದಮಾನಾದಾರೋs

ತೆಂಬದ ಊರಿಗಿ ಹೋಗ್ಯಾಳೋs
ತೆಂಬದ ಊರ ಒಳಗೇನೋs
ಗೌಡನ ಮನಿಯ ಮುಂದ ದೇವೀs
ಹೋಗಿ ನಿಂತಿರುತಾಳಲ್ಲೋs

ಅವರ ತಂದಿ ಇದ್ದಾನೋs
ಮಂಚದ ಮ್ಯಾಲ ಕುಂತಾನೋs
ತನ್ನ ಮಗಳಿಗಿ ನೋಡ್ಯಾನೋs
ವಿಚಾರ ಮಾಡುತಾನಲ್ಲೀs

ಮುಗಳಿಗಿ ಮಾತ ಆಡ್ಯಾನೋs
ಬಾರ ಬಾರ ಏ ಮಗಳs
ಬಂದ ಕಾರಣ ಹೇಳಿಲ್ಲs

ಮಾಳಿಂಗರಾಯನ ಮಡದೇನೋs
ತಂದಿಗಿ ಹೇಳುತಾಳಲ್ಲೀs
ಏ ನನ ತಂದಿ ನೀವು ಬರ್ರೀs
ನಮ್ಮ ರಾಯರ ಇದಾರೋs
ನುಡದಾರವರು
ಮಾತಾಡ್ಯಾರೋs

ತೆಂಬದ ಊರ ಒಳಗೇನಪ್ಪಾs
ತೆಂಬದ ಗೌಡ ಇದ್ದಾರಪ್ಪಾs
ಅವ್ನ ಮರಣ ಆದಾವಂದಾರೋs
ಇಷ್ಟ ಮಾತ ಕೇಳೆನೆಪ್ಪ
ನಾ ಇಲ್ಲಿಗಿ ಬಂದಿನೆಂದಾಳೋs

ತೆಂಬದ ಗೌಡ ಇದ್ದಾರೋs
ವಿಚಾರ ಮಾಡುತಾನಲ್ಲೇs
ನೆರೆಮನಿ ಹೊರಮನಿ ಬಾಲ್ಯಾರ್ಗಿ
ಕರದ ಹೇಳುತಾನಲ್ಲ್ಲೀss

ಬನ್ನಿ ಬನ್ನಿ ತಂಗ್ಯಾರಾs
ಉಡಿ ತುಂಬಲೇ ಬೇಕಲ್ಲs
ನೆರೆಮನಿ ಹೊರಮನಿ ಬಾಲ್ಯಾರುs
ಉಡಿ ತುಂಬುತಾರಲ್ಲೀs

ತೆಂಬದ ಗೌಡ ಇದ್ದರೋs
ಮಗಳಿಗೆ ಮಾತ ಆಡ್ಯಾರೋ
ಬಾರ ಬಾರ ಮಗಳs
ಹೋಗಿ ಬಾರವ್ವಾs

ಮಾಳಿಂಗರಾಯನ ಮಡದೇನೋs
ಉರದ ಬೆಂಕಿ ಆದಳೋs
ತರವದಿ ಕೆಂಡನಾದಾಳೋs
ಅತ್ತಿ ಆಲದ ಒಳಗೇನೋs
ಹೋಗಿ ಬರತೇನಂದಾಳೋss

ಹೊಳ್ಳಿ ಮಾರಿ ಮಾಡ್ಯಾಳೋs
ಹೊಳ್ಳಿ ಮಿಖಾ ನೋಡಿದ್ರೋs
ಬೆನ್ನುರಿ ಬಿಚ್ಚುತಾವೇನೋs
ಮೂರ ಬಗಸಿ ನೀರೇನೋs
ಬೆನ್ನಿಲಿ ಬೀಳು ತಾವಲ್ಲೋs

* * *

ಕುಂತ ಕೇಳರಿ
ಶಾಣ್ಯಾ ಪಂಡಿತರಾs
ಹೇಳ್ತೇವ ಮಾಳಿಂಗರಾಯನs
ಕತಿ ಸಾರಾs

ಮಾಳಿಂಗರಾಯಾs
ಮರತ್ಯಾಕ ಬಂದವರಾs
ಮರತ್ಯಲೋಕದಾಗs
ಲಿಂಗ ಬೀರಪ್ಪನs
ಭಕ್ತಿ ಮಾಡಿದವರಾs

ತೆಂಬದ ಗ್ರಾಮದಲ್ಲಿ
ಲಕ್ಷ್ಮೀ ಅವರಾs
ತತ್ಕಾಲದಲ್ಲಿ ಐಕ್ಯ
ಆಗಿ ಹೋದವರಾs
ಮಾಳಿಂಗರಾಯಾ ಮನದಲ್ಲಿs
ತಿಳದಾರಾs
ಮನದಲ್ಲಿ ತಿಳಿದು
ಮುಗಳ ತಿಳಿದು
ಮುಗಳ ನಗಿಯ ನಕ್ಕುs
ಕಾಲ ಕಳದಾರಾs

ಇಲ್ಲಿಂದ ಕೇಳರಿ
ಮುಂದ ಕತಿ ಸಾರಾs
ಸೋಮ್ರಾಯ ಕಾಕಾ
ವಿಚಾರ ಮಾಡ್ತ್ಯಾರಾs
ತುರುಬಿ ಹಟ್ಟಿ
ಊರಿಗಿ ಹೋದರಾs
ತುರಬ ಹಟ್ಟಿಯಲ್ಲಿ
ಕೋರಿಚಂದರಗs
ಭೆಟ್ಟಿಯಾದಾರs
ಭೆಟ್ಟಿಯಾಗಿ ಕನ್ಯಾ
ಗಟ್ಟಿ ಮಾಡ್ಯಾರಾs
ಅಲ್ಲಿಂದ ತಾವು
ಹೊಳ್ಳಿ ಬಂದಾರಾs

ಬೀರಲಿಂಗನ ತಾವೇ ಕರಿಸ್ಯಾರಾs
ಎಳಮಂದಿ ಗೆಳೆಯರು
ಏಳ್ನೂರು ಕಾಲಾಳುs
ಅಲ್ಲೇ ಮಾಡ್ಯಾರಾs

ತುರಬಿ ಹಟ್ಟಿಯಲ್ಲಿ
ಸಾಗಿ ಹೋಗ್ಯರಾs
ಶುಭ ಮೂರ್ತ ದಿನಾ
ತಾವೇ ನೋಡ್ಯಾರಾs
ಕೋರಿ ಚಂದ್ರಾಯ್ನs
ತಾವೇ ಕರಸ್ಯಾರಾs
ಅವರ ಮಗಳು
ಈರವ್ವ ಶರಣಿನ
ಮುಂದ ತಂದಾರಾs

ನೂಲ ಸುತ್ತಿ
ಅಕ್ಕಿಕಾಳ ಒಗದಾಎರಾs
ಸತಿ-ಪತಿ ಸದಗತಿ
ಅಂತ ಹೇಳ್ಯಾರಾs
ಇಚ್ಛಾ ಭೋಜನ
ತಾವು ಮಾಡ್ಯಾರಾs
ನೆರದ ಮಂದಿಯೆಲ್ಲಾ
ಹರದ ಹ್ವಾದಿತೋs
ಕೇಳರಿ ಮಜಕೂರಾs

ಇಲ್ಲಿಗಿ ಒಂದ ಸಂದ
ಮುಗಸೇವ ಪೂರಾs
ಮಾಳಿಂಗರಾಯನ ಲಗ್ಗನ ವಿಸ್ತಾರಾs
ಅಡಿವೆಪ್ಪ ಮಾರಾಯ್ರ ತಿಳಿಸ್ಯಾರಾs
ಕಂದ ಹುಡುಗರು
ಬಂದ ಹಾದಿದಾರೋs
ಹೇಳಿದ ಕತಿಸಾರಾs

* * *

ಸಿಡಿಯಾಣ ಶಿಮನಿs
ಹುನ್ನೂರು ಗುರುಮನಿs
ಹುಲಜಂತಿ ಚಿನ್ನ ಮಹಿಮೋs
ಆಹಾs ಹುಲಜಂತಿs
ಚಿನ್ನ ಮಹಿಮೋs
ಹಾಲಮತಕ ಮೇಲs
ಗಿರಿಯ ಅನಿಸಿತೋss
ಕ್ವಾಣಗನೂರ ದಮ್ಮೋss || ಹಾಲಮತಕs ….. . . . ||

ಜಿತ್ತ ನಾರಾಯಣ
ಪುರದಲ್ಲಿ ಮಾಳಪ್ಪನs
ಮಡದಿ ಇದ್ದಳಮ್ಮೋss
ಸುತ್ತಿನ ಸ್ಥಳಕಾಗಿ
ಚಿಂತಿ ಮಾಡುತಾಳೋs
ಈರವ್ವ ಶರಣಾಮ್ಮೋss
ಒಂದ ಕಾಲದಲ್ಲೀs
ಒಂದು ದಿವಸದಲ್ಲೀs
ಅತ್ತೀ ಸಂಗಡ ತಾನು
ಊಟಕ್ಕುಂತಳಮ್ಮೋss
ಬೀಜಗುಂತಿ ಮ್ಯಾಲ
ಮಾಳಿಂಗರಾಯಾಗs
ಅರುವ ಆಗಿತಮ್ಮೋss || ಬೀಜಗಾಂತಿ ….. . . . ||

ಅರುವ ಆಗಿs
ಸಿದ್ಧ ಮಾಳಪ್ಪ ಮನಿಗೀss
ಸಾಗಿ ಬಂದಾನೊ ಧರಮೋs
ಅರಮನಿ ಮುಂದ
ಬಂದು ನಿತ್ತs
ತಾನು ಮಾತು
ಆಡ್ಯಾನೊ ತಮ್ಮೋss
ಹೇಸಿಗಿ ತುಳದಿದಿ
ಅಂತ ತಾಯಿಗೀs
ಹೊಳ್ಳಿ ಹೊಡದಾನೋs
ಎಡಿಗಳ ಬಿಟ್ಟು
ಸಾಗಿ ಬಂದಳೋss
ಈರಪ್ಪ ಶರಣಮ್ಮೋss || ಎಡಿಗಳ ….. . . . ||

ತನ್ನ ಜಡಿಯಲಿಂದs
ಗಂಡನ ಪಾದಾs
ತಾನೇ ಒರಿಸ್ಯಾಳಮ್ಮೋss
ಆಗ ಮಾಳಿಂಗರಾಯಾs
ನಕ್ಕು ಮಾತಾಡತಾನೋs
ತೋರ್ಸ್ಯಾನ ತನ್ನ ಮಹಿಮೋss
ಹುಚ್ಚಿದೇವಿ ನೀನು
ಹಿಂದಕ್ಕ ಸರದು
ಕೂದ್ಲ ಜಾಡ್ಸು ಸುಮ್ನೋss
ಈಗ ಕೂದ್ಲ ಜಾಡ್ಸು ಸುಮ್ನೋss
ಕೂದ್ಲ ಜಾಡ್ಸಿದಾಗ
ನಾಲ್ಕು ಮಲ್ಲಿಗಿ ಹೂವs
ಉಡಿಯಾಗ ಮೂಡ್ಯಾವಮ್ಮೋss || ಕೂದ್ಲ ….. . . . ||

ನಾಲ್ಕು ಮಲ್ಲಿಗಿ ಹೂವ
ಬಕ್ಷಣ ಮಾಡಂತs
ತಿಳಿಸಿದಾನ ಧರಮೋss
ಪತಿಯ ಪಾದಕs
ಸತಿಯ ಎರಗತಾಳs
ಈರವ್ವ ಶರಣಮ್ಮೋss

ಒಂದ್ಹಿಡಿ ಭಂಡಾರ
ಕೊಟ್ಟು ಮಾಳಪ್ಪs
ಹೊಳ್ಳಿ ಹ್ವಾದ
ಧರಮೋss
ಆಗ ಹೊಳ್ಳಿ ಹ್ವಾದ ಧರಮೋss
ನಾಲ್ಕು ಮಲ್ಲಿಗಿ ಹೂವ
ಬಕ್ಷಣ ಮಾಡ್ಯಾಳs
ಈರವ್ವ ಶರಣಮ್ಮೋss || ನಾಲ್ಕು ….. . . . ||

ನಾಲ್ಕು ಮಲ್ಲಿಗಿ
ನಾಲ್ಕು ಮಂದಿ ಧರ್ಮರs
ಹುಟ್ಟಿ ಬಂದರಮ್ಮೋss
ರೆಬ್ಬರಾಯ ಬೀರಮುತ್ಯಾs
ಕಣಮುತ್ಯಾ ಸೋಮರಾಯs
ಹುಟ್ಟಿದಾರೋ ಧರಮೋss || ರೆಬ್ಬರಾಯ ….. . . . ||

ದೇಶಕ ಅಧಿಕವಾದ
ವಾಸುಳ್ಳ ಹುಲಜಂತೀs
ಹೆಚ್ಚಿಂದೈತಿ ಮಹಿಮೋss
ಈಗ ಹೆಚ್ಚಿಂದೈತಿ ಮಹಿಮೋss
ರತ್ನದ ಕಂಬಳಿ
ಬೆಳಕದ ಮುಂದs
ಮಾಳಿಂಗರಾಯನ ಮಹಿಮೋss || ರತ್ನದ ….. . . . ||

ಅದೇ ಧರಮರಿಗಿ
ಏಳು ಮಂದಿ ಧರಮರು
ಜನಿಸಿ ಬಂದರಮ್ಮೋss
ಏಳು ಮಂದಿ ಧರಮರಿಗಿs
ಸಾವಿರ ಕಂಬಳೀs
ಲೆಕ್ಕ ಆಯ್ತೋ ತಮ್ಮೋss || ಏಳು ಮಂದಿ ….. . . . ||

ಅಂದಿನಿಂದ ಹಿಡಕೊಂಡs
ಇಂದಿನ ಒರೆಗೆs
ಇದ್ದಾರಪ್ಪೋ ಧರಮೋs
ವಂಶಸ್ತ್ರು ಇದ್ದಾರಪ್ಪೋ ಧರಮೋss
ಒಡೆಯರು ಆಗಿ
ಬಾಳೆ ಮಾಡತಾರs
ಹಾಲಜಂತಿ ಅವರ ಗ್ರಾಮೋss || ಒಡೆಯರು ….. . . . ||

ಹಾಲಮತಕ ಮೇಲs
ಗದ್ದಗಿ ಹಾಲಜಂತಿs
ಮಾಳಿಂಗರಾಯನ ಮಹಿಮೋss
ಮಹಿಮಾ ತಿಳಿದ
ಅಡಿವೆಪ್ಪ ಒಡೆಯರು
ತಿಳಿಸಿದಾರೊ ಮರ್ಮೋss || ಮಹಿಮಾ ….. . . . ||

* * *