ಶಾಂತ ಸಭಾ ಎಲ್ಲಾs
ಚಂದಾಗಿ ಕೇಳರೀs
ದೈವಕೂಡಿರಿಲ್ಲೀs
ಆಹಾ ದೈವಕೂಡಿರಿಲ್ಲೀs
ಮಾಳಿಂಗರಾಯಾ ಗುರುವಿನ ಭಕ್ತೀs
ಮಾಡಿದ ಭವದಲ್ಲೀs || ಮಾಳಿಂಗರಾಯ ….. . . ||

ಬನ್ನಿ ಸಾವಿರ ಬಾಗಿ ಕುರಿಗಳ ಕಾಯ್ತಿದ್ದೊs
ಬೀಜಗುಂತಿ ಮ್ಯಾಲೀs
ನಿತ್ಯ ಕಾಲದಲ್ಲಿ ಭಕ್ತಿ ಮಾಡತಿದ್ದೊs
ಸಿರಡೋಣ ಮಠದಲ್ಲೀs
ಒಂದಾನೊಂದ ದಿನ ಮುಗಿದ ಮೇಲೇs
ಬರಗಾಲ ಬಿದ್ದಿತಲ್ಲೀs
ಆಹಾ ಬರಗಾಲ ಬಿದ್ದಿತಲ್ಲೀs
ಬರಗಾಲ ಬಿದ್ದಾಗ ಮೇಗರಾಜ ಬಂದಿಲ್ಲs
ಮರತ್ಯ ಮಂಡಲದಲ್ಲೀs || ಬರಗಾಲ ….. . . ||

ತ್ಯವರೀನ ದೊಡ್ಡಿ ಹಳದಾಗ ಮಾಳಪ್ಪs
ತಾನು ಹಾಕ್ಯಾನಲ್ಲೀs
ಬಂಬು ಒತ್ತೀನ ಬಾಯಲ್ಲಿ ದೊಡ್ಡೀs
ಹಾಕೀದ ತಾನಲ್ಲೀs
ಕಾಲಗಳತಿದ್ದೋ ನಾಮ ನುಡಿಯತಿದ್ದೋs
ಕೇಳರಿ ಮಾಳಪ್ಪ ಅಲ್ಲೀs
ಆಗ ಕೇಳರಿ ಮಾಳಪ್ಪ ಅಲ್ಲೀs || ಕೇಳರಿ ….. . . ||

ಭಕ್ತಿ ನೋಡ್ಬೇಕಂತ ಭಗವಂತ ಬಂದಾನೋs
ಭವ ಮಂಡಲದಲ್ಲೀs
ಜಂಗಮರ ವೇಷಾ ತೊಟ್ಟು ದೇವರಾs
ಸಾಗಿ ಬಂದಾನಲ್ಲೀs
ಬಾಳ ಹಸುವ ಅಗ್ಯಾವಂದೋs
ತಾನು ಅಂದಾನಲ್ಲೀs
ಹಾಲು ಅನ್ನಾ ಮೊಸರ
ಉಣಸಿ ಮಾಳಪ್ಪಾs
ಶರಣ ಹೊಂದ್ಯಾನಲ್ಲೀs
ಅವನಿಗೆ ಶರಣ ಹೊಂದ್ಯಾನಲ್ಲೀs
ಅರುವುಳ್ಳ ಮಾಳಿಂಗರಾಯ ತನ್ನ ಮನಸ್ಸಿನಲ್ಲೀs
ತಾನು ಅಂದಾನಲ್ಲೀs || ಅರುವುಳ್ಳ ….. . . ||

ಸಾದೂರ ವೇಷದಲ್ಲಿ ಬಂದ ಜಂಗಮ ಅಲ್ಲೀs
ಮಾಳಪ್ಪ ಅಂದಾನಲ್ಲೀs
ಮೂರು ದಿನದಾಗ ಮರತ್ಯಕ ಮಳಿಮಾರs
ಬರ್ತಾವೋ ಕೇಳೋ ಇಲ್ಲೀs
ಮಳಿಯ ಬಂದರ ಕುರಿಗಳ ಎಲ್ಲಾs
ಹರಕೊಂಡ ಹೋಗ್ತಾವಲ್ಲೀs
ತಮ್ಮಾ ಹರಕೊಂಡ ಹೋಗ್ತಾವಲ್ಲೀs
ಲಾಗ ಬೇಗದಿಂದ ಹಳದಿಂದ ದೊಡ್ಡಿ ನೀನುs
ತ್ಯವರೀಗ್ಹಾಕೊ ಅಲ್ಲೀs || ಲಾಗ ….. . . ||

ಇಷ್ಟ ಮಾತ ಕೇಳಿ ಗುರುಧ್ಯಾನ ಮಾಡತನೋs
ಮಾಳಪ್ಪ ಹೇಳ್ತಾನಲ್ಲೀs
ಮೂರು ತಿಂಗಳ ಮರತ್ಯಾಕ ಮಳಿಮಾರs
ಇಲ್ಲೇಳಂದಾನಲ್ಲೀs || ಮೂರು ….. . . ||

ಇಷ್ಟು ಮಾತು ಸ್ವಚ್ಛ ಕೇಳಿ ಶಂಕರಾs
ಮಾಯಿ ಆದಾನಲ್ಲೀs
ಆಗ ಮಾಯಿ ಆದಾನಲ್ಲೀs
ಲಾಗಬೇಗದಿಂದ ಸಾಗಿ ಹೋದಾನೋs
ಕೈಲಾಸ ಗಿರಿಯಲ್ಲೀs  || ಲಾಗ ….. . . ||

ಮೇಘ ರಾಜನ ಕರಸಿ ಹೇಳತಾನs
ಹೋಗಂದ ಮರತ್ಯದಲ್ಲೀs
ಕರಾ ಮುಗಿದ ಮೇಲೆ ರಾಜಾ ಅಂತಾನs

ಕೇಳರಿ ಮಾದೇವಗಲ್ಲೀs
ಸಿಡಲ ಮಿಂಚ ಗುಡಗ ಗಾಳಿಯ ದೇವರs
ಇಲ್ಲೇಳ ನನ ಬಲ್ಲೀs
ದೇವಾ ಇಲ್ಲೇಳ ನನಬಲ್ಲೀs
ಮೂರ ತಿಂಗಳಾ ಮುಗಿದ ಮ್ಯಾಲ ನಾವುs
ಹೋಗುವೆ ಮರತ್ಯದಲ್ಲೀs  || ಮೂರ ….. . . ||

ಇಷ್ಟು ಮಾತು ಸ್ವಚ್ಚಾಗಿ ತಿಳಕೊಂಡಾs
ಶಂಕರ ಮನದಲ್ಲೀs
ಧನ್ಯ ಧನ್ಯ ಸಿದ್ಧ ಹೆಚ್ಚಿನ ಮಾಳಿಂಗರಾಯಾs
ಮರತ್ಯ ಲೋಕದಲ್ಲೀs
ಮಾಳಪ್ಪನಂತಾ ಬಕ್ತಿವಾನ ಯಾರುs
ಇಲ್ಲಪ್ಪ ಲೋಕದಲ್ಲೀs
ಮಾದೇವ ತಿಳದಪ್ಪ ಮನದಲ್ಲೀs
ಮೂರು ತಿಂಗಳ ಕಾಲ ಗಳಿಯುತಾನs
ಕೈಲಾಸ ಗಿರಿಯಲ್ಲೀs  || ಮೂರ ….. . . ||

ಮೂರ ತಿಂಗಳಿಗಿ ಮೂರ ದಿವಸಾs
ಕಡಿಮಿ ಇದ್ದಾವಲ್ಲೀs
ಆಗ ಶಂಕರಾ ಮರತ್ಯಾಕ ಇಳದಾನs
ಬಂಬೂ ಹೊತ್ತಿನಲ್ಲೀs || ಆಗ ….. . . ||

ಇದ್ದಕ್ಕಿದ್ದಂಗ ರೂಪ ತೊಟ್ಟ ನಿತ್ತಾನs
ಕೇಳರಿ ದೇವರಲ್ಲೀs
ದೇವರ ಗುರುತು ಹಿಡಿದು
ದೇವರ ಪಾದಕ ಹೊಂದ್ಯಾನಲ್ಲೀs || ದೇವರ ….. . . ||

ಆಶೀರ್ವಾದ ಮಾಡಿ ಭಗವಂತ ಹೇಳತಾನs
ಸಿದ್ಧ ಮಾಳಪ್ಪಗಲ್ಲೀs
ಬಾರಪ್ಪ ಮಗನೆ ಹಳ್ಳದಿಂದ ದೊಡ್ಡಿ ನೀನುs
ಯಾಕ ತಗದಿದಿಲ್ಲೀs
ಹಳದಿಂದ ದೊಡ್ಡಿ ತ್ಯವರಿಗಿ ಹಾಕೀದೀs
ಯಾಕ ಹಾಕಿದಿಲ್ಲೀs
ಮಗನೇ ಯಾಕ ಹಾಕಿದಿಲ್ಲೀs
ಅಷ್ಟರೊಳಗ ಕೂಗ್ಯಾಡಿ ಮಾಳಣ್ಣs
ದೇವರಿಗಿ ಹೇಳ್ಯಾನಲ್ಲೀs || ಅಷ್ಟರೊಳಗ  ….. . . ||

ಮೂರ ದಿನದಾಗ ಮರತ್ಯಕ ಮಳಿಗಳs
ಬಂದ ಸುರಿತಾವಿಲ್ಲೀs
ಅದರ ಕಾರಣ ಹಳದಿಂದ ದೊಡ್ಡಿs
ತೈವರಗಿ ಹಾಕಿನಿಲ್ಲೀs
ಇಷ್ಟ ಮಾತ ತಿಳಿಕೊಂಡ ಶಂಕರಾs
ತನ್ನ ಮನದಲ್ಲೀs
ದೇವರು ತನ್ನ ಮನದಲ್ಲೀs
ಧನ್ಯ ಧನ್ಯ ಸಿದ್ಧ ಹೆಚ್ಚಿನ ಮಾಳಿಂಗರಾಯs
ಮರತ್ಯ ಲೋಕದಲ್ಲೀs || ಧನ್ಯ  ….. . . ||

ಸಿದ್ಧರಲ್ಲಿ ಸಿದ್ಧಾ ಹೆಚ್ಚಿನ ಸಿದ್ಧಾs
ನಿನ್ನ ಭಕ್ತಿಗಿ ಮೆಚ್ಚಿದ್ಯೊ ಇಲ್ಲೀs
ಏನು ಬೇಡತಿ ಬೇಡಪ್ಪಾ ಮಗನs
ಬೇಡಿದ್ದ ಕೊಡುವೆ ಇಲ್ಲೀs
ಇಷ್ಟು ಮಾತು ತಾನು ಕೇಳಿ ಮಾಳಿಂಗರಾಯಾs
ಮಾತು ಆಡ್ಯಾನಲ್ಲೀs
ದೇವಗ ಮಾತು ಆಡ್ಯಾನಲ್ಲೀs
ಬೇಕಾದಷ್ಟು ಕೊಟ್ಟಿದಿ ಬ್ಯಾಡಾದ್ದಷ್ಟು ಬಿಟ್ಟಿದ್ದೀs
ಕೇಳೊ ಭಗವಂತ ಇಲ್ಲೀs || ಬೇಕಾದಷ್ಟು ….. . . ||

ನಿನ ಪಾದದ ಹೊರತು ನನಗs
ಅಂದಾನ ಮಾಳಪ್ಪಲ್ಲೀs
ಇಷ್ಟ ಅಂದಾಗ ಶಿವಶಂಕರ ತಾನುs
ಹಸ್ತಿಟ್ಟ ತೆಲಿಮ್ಯಾಲೀs || ಇಷ್ಟ ಅಂದಾಗ ….. . . ||

ಆಶೀರ್ವಾದ ಮಾಡಿ ಹೋಗಿ ಬರ್ತೇವಂದs
ಕೇಳ್ರಿ ದೇವರಲ್ಲೀs
ಆಗ ಕೇಳ್ರಿ ದೇವರಲ್ಲೀs
ಆಗಿಂದಾಗೆ ಮಾಯಾಗಿ ಹೋಗ್ಯಾನುs
ಕೈಲಾಸ ಗಿರಿಯಲೀs || ಆಗಿಂದಾಗೆ ….. . . ||

ಗುರುವಿನ ಹೊರತು ಸದ್ಗತಿ ಯಾರಿಗಿಲ್ಲs
ಅಂತ ತಿಳಿದಾನದಲ್ಲೀs
ತಿಳಿದು ಮಾಳಿಂಗರಾಯ ಗುಣ ಆಳದು ನಡದಾನs
ಮರತ್ಯ ಲೋಕದಲ್ಲೀs || ತಿಳದು….. . . ||

ಹಾಲಮತಕ ಮೇಲ ಗದ್ದಗಿ ಹುಲಜಂತಿs
ಅಡಿವೆಪ್ಪ ಹೇಳ್ಯಾನಲ್ಲೀs
ಸಿದ್ಧ ಮಾಳಪ್ಪನ ಚರಣ ಕಮಲದಲ್ಲೀs
ಕಾಲ ಕಳದಾನಲ್ಲೀs || ಸಿದ್ಧ ….. . ||

* * *

ಶಿವನ ಶಿವಸ್ಥಾನ ಕೈಲಾಸಕಿತ್ತೋs
ಮುಕ್ಕಣ್ಣ ಶಿವರಾಯ್ನ ಹಂತೇಕ ಬಂತೋs
ಮಾಳಿಂಗ ಮಧ್ಯ ಸೊರಗಾಕ ನಡಿತೋs
ಶಿವನ ಗದ್ದಗಿ ಶಿವಸ್ಥಾನಾs
ಮಾಳಿಂಗರಾಯ್ಗ ಬತ್ತೋs

ಢಮರು ಹೋಗಿ ಅಲ್ಲಿ ಡೊಳ್ಳಾದೀತೋs
ಮಾಯಿ ಮೂರತಿ ಮೊದಲಿಗೆ ಇತ್ತೋs
ದೇವರ ಕತಿ ಕೇಳರಿ ಕುತ್ತೋs

ಜಗ್ಗ ಜಾಗುಟೆ ಮುತ್ತಿನ ಪಲ್ಲಕ್ಕಿs
ಅದರೊಳಗೆ ಬತ್ತೋs
ಹದಿನೆಂಟನೇ ಯುಗಾ ಹೆಸರಿಗೆ ಬತ್ತೋs
ಕಲಿಯುಗ ಇದು ನಾಮವೆ ಆಯ್ತೋs
ಸತ್ಯ ಕಡಿಮೆ ಯಾಗುತ ನಡಿತೋs
ಅಸತ್ಯ ಕಾಲದಲ್ಲಿ ಬೊಬ್ಬುಲಿ ವನದs
ಕೀರ್ತಿ ಮುಂದ ನಡಿತೋs

ಸಿದ್ಧ ಮಾಳಪ್ಪನ ಮಹಿಮಾದ ಮಾತೋs
ಸಾರಿ ಹೇಳತೇವ ಕೇಳರೆಪ್ಪ ಕುಂತೋs
ಅನೇಕ ಪವಾಡ ಮಾಡ್ಯಾನಂತೋs
ಪ್ರಪಂಚ ಮಾಡಿ ಪಾರಮಾರ್ಥ ಗೈದಾನs
ಹೆಚ್ಚಿನ ಸತ್ಯವಂತೋs

ಮರತ್ಯ ಮಂಡಲದಲ್ಲಿ ಕೀರ್ತಿ ಸಾರಿತೋs
ಶಿವನಲ್ಲಿ ನಾಮಾ ಪ್ರಕಟವಾಯ್ತೋs
ಭಕ್ತಿ ನೇಮದಲ್ಲಿ ಬತ್ತೋs
ದೇವಿ ನಮ್ಮಯ ದೇವರಿಗೆ ಶಬ್ಧs
ಅಲ್ಲಿಂದ ಸುರುವಾಯೋs

* * *

ಹರಿಯ ಇದ್ದರ ಸಹಿತs
ಗುರುಬೇಕೊ ಅವಗs
ಭವಕ ಬಂದ ಮ್ಯಾಲೀs
ಆಹಾ ಭವಕ ಬಂದ ಮ್ಯಾಲೀs
ಸದ್ಗುರುವಿನ ಹೊರತs
ಸುಖಾ ಸಿಗುವುದಿಲ್ಲೋs
ಸರವ ಲೋಕದಲ್ಲೀs || ಸದ್ಗುರುವಿನ….. . ||

ಹತ್ತು ಅವತಾರ ತಾಳಿದ ವಿಷ್ಣುs
ಭೂಮಂಡಲದಲ್ಲೀs
ಪ್ರತ್ಯೇಕವತಾರದಲ್ಲೀs
ಒಬ್ಬೊಬ್ಬ ಗುರುವಿನs
ಪಡಕೊಂಡೊ ಕ್ಷಣದಲ್ಲೀs
ವಿಷ್ಣು ದೇವರಾ ವಿಠ್ಠಲನಾಗೀs
ನಿಂತೊ ವಿಠ್ಠಾಂಗಿ ಮ್ಯಾಲೀs
ಪಾಂಡುರಂಗ ನಿಂತೊ ವಿಠ್ಠಾಂಗಿ ಮ್ಯಾಲೀs
ಮತ್ಯಾವ ಗುರುವಿನ ಪಡಿಬೇಕೊ ಅಂದಾನೋs
ತನ್ನ ಮನದಲ್ಲೀs || ಮತ್ಯಾವ ….. ||

ಸಿದ್ಧರಲ್ಲಿ ಸಿದ್ಧಾ ಹೆಚ್ಚಿನ ಸಿದ್ಧಾs
ಬೀಜಗುಂತಿ ಮ್ಯಾಲೀs
ಅವನ ಹಂತೇಲಿ ಹೋಗ್ಬೇಕೊ ಅಲ್ಲೀs
ಬೀಜಗುಂತಿ ಮ್ಯಾಲೀs
ಅವನ ಹಂತೇಲಿ ಹ್ವಾದರ ಗುರು ನನಗs
ಭೇಟ್ಟಿಯಾದನಲ್ಲೀs

13_83_ABHMK-KUH

ಅಹಾ ಭೇಟ್ಟಿಯಾದನಲ್ಲೀs
ಹೆಂಗ ಹೋಗಬೇಕೋs
ಏನ ಮಾಡಬೇಕೋs
ವಿಚಾರ ಮಾಡ್ಯಾನಲ್ಲೀs || ಹೆಂಗ ….. ||

ಬಡವ ಬ್ರಾಹ್ಮಣಾ ಆದಾನೊ ತಾನs
ಗಿಳಿ ಸ್ವರೂಪದಲ್ಲೀs
ತಾಳ ವಿನಮ್ರದಂಗ ನುಡಿಯತಾವೋs
ಮಾಯಾ ರೂಪದಲ್ಲೀs
ಬಿಟ್ಟು ಪಂಢಾರಪುರ ಹೊಂಟೊ ನಿರ್ಧಾರಾs
ನಿಜ ದ್ಯಾಸದಲ್ಲೀs
ಪಾಂಡುರಂಗ ನಿಜದ್ಯಾಸದಲ್ಲೀs
ಬಂದು ದೇವರಾ ಜತ್ತಿ ನಾರ್ಯಾಣಪೂರಾs
ಹುಲಜಂತಿ ಮಠದಲ್ಲೀs || ಬಂದು….. ||

ಸಿದ್ಧ ಮಾಳಪ್ಪಗ ನಾಲ್ಕು ಮಂದಿ ಮಕ್ಕಳುs
ಧರಮರಿದ್ದರಲ್ಲೀs
ಬಂದ ಜನರಿಗಿ ದಾನ ಮಾಡತಿದ್ರೋs
ಬೀಜ ಗುಂತಿ ಮ್ಯಾಲೀs || ಬಂದ . . . . ||

ಬಡವ ಬ್ರಾಹ್ಮಣನಾಗಿ ಪಾಂಡುರಂಗ ಹೋಗ್ಯಾನs
ಕೇಳರಿ ಧರಮರ ಬಲ್ಲೀs
ಅವನು ಕೇಳರಿ ಧರಮರ ಬಲ್ಲೀs
ನಾಕು ಮಂದಿ ಧರಮರು ದಾನ ಮಾಡುದಕs
ಬಂದಾರೊ ಅವರಲ್ಲೀs
ಪಾಂಡುರಂಗ ಅಲ್ಲೀs
ಚಿನ್ನದಾನ ಜ್ಞಾನದಾನ ಇದ್ದರ ತಮ್ಮಾs
ದಾನ ಮಾಡಿರಿ ಇಲ್ಲೀs || ಚಿನ್ನದಾನ . . . . ||

ಇಷ್ಟ ಮಾತ ಕೇಳಿ ಧರ್ಮರು ಹೇಳ್ತಾರs
ಪಾಂಡುರಂಗಗಲ್ಲೀs
ಬೀಜಗುಂತಿ ಬೈಲಾಗ ತಂದಿ ಮಾಳಿಂಗರಾಯ್ನs
ಹಂತೇಲಿ ಹೋಗರಲ್ಲೀs
ಅವ್ನ ಹಂತೇಲಿ ಹ್ವಾದರ ಅಲ್ಲೀs

ಬೇಕಾದ್ದ ಸಿಗುವುದಲ್ಲೀs
ಚಿನ್ನದಾನಾ ಜ್ಞಾನದಾನಾ ತಂದಿ ಮಾಳಿಂಗರಾಯಾs
ತಾನು ಮಾಡ್ತಾನಲ್ಲೀs
ಇಷ್ಟು ಮಾತು ತಾನು ಕೇಳಿ ಪಾಂಡುರಂಗs
ಹೊಳ್ಳಿ ನಿತ್ತಾನಲ್ಲೀs
ಆಗ ಹೊಳ್ಳಿ ನಿತ್ತಾನಲ್ಲೀs
ಅರುವುಳ್ಳ ಮಾಳಪ್ಪ ಅರುವ ಆದಿತೋs
ಬೀಜಗುಂತಿ ಮ್ಯಾಲೀs ||ಅರುವುಳ್ಳ . . . . ||

ಎನ್ನ ಭಕ್ತಿಗಿ ದೇವರು ಬಂದಾನಂತs
ತಿಳಕೊಂಡ ಮನದಲ್ಲೀs
ಮಾಳಣ್ಣ ತಿಳಕೊಂಡ ಮನದಲ್ಲೀs
ಬೀಜಗುಂತಿ ಮ್ಯಾಲ ಮಾಯಾಗಿ ಎದ್ದಾನs
ಬಬ್ಬುಲಿ ಬನದಲ್ಲೀs ||ಬೀಜಗುಂತಿ . . . . ||

ಕೊಳ್ಳಾಗ ಹೂವೀನ ಬೇಡಿಯ ಧರಿಸಿs
ಕರಾ ಜೋಡ್ಸ್ಯಾನಲ್ಲೀs
ಕರಾ ಜೋಡ್ಸಿ ತಾನು ದೀಡ ನಮಸ್ಕಾರಾs
ತಾನು ಹಾಕ್ಯಾನಲ್ಲೀs
ಅಷ್ಟರೊಳಗ ಪಾಂಡುರಂಗ ಬಂದಾನೋs
ಮಧ್ಯ ಹಳದಲ್ಲೀs
ಆಗ ಮಧ್ಯ ಹಳದಲ್ಲೀs
ಸಿದ್ಧ ಮಾಳಪ್ಪನ ನಮಸ್ಕಾರ ಹೋಗಿತೋs
ಪಾಂಡುರಂಗನ ಪಾದ ಹಿಡಿಯತಾನs
ಕೇಳರಿ ಮಾಳಪ್ಪಲ್ಲೀs ||ಪಾಂಡುರಂಗನ . . . . ||

ಅನಂತರೂಪಾ ಭಗವಾನ ಹೇಳ್ತಾನs
ಹಿಂಗ್ಯಾಕೊ ನೀನಿಲ್ಲೀs
ಬಡವ ಬ್ರಾಹ್ಮಣಾ ಇದ್ದೀನಿ ನಾನುs
ಹೊಂಟಿದ್ದೆ ಹಳ್ಳಿ ಮ್ಯಾಲೀs
ನನ್ನ ಪಾದ ನೀ ಹಿಡಿತ್ಯಾಕೊ ಶರಣಾs
ಬಿಡಬೇಕಂದಾನಲ್ಲೀs
ನಿನ್ನಂತ ಶರಣಾ ನನ್ನಂತ ಬಡವರs

ಪಾದ ಹಿಡಿಯಬಾರ್ದೊ ಇಲ್ಲೀs
ತಮ್ಮಾ ಪಾದ ಹಿಡಿಯಬಾರ್ದೊ ಇಲ್ಲೀs
ಇಷ್ಟ ಅಂದಾಗ ಸಿದ್ಧ ಮಾಳಪ್ಪಾs
ಅಂತಾನೊ ತಾನಲ್ಲೀs ||ಇಷ್ಟ. . . . ||

ನಿನ್ನ ಹಸ್ತಾ ನನ್ನ ತೆಲಿಮ್ಯಾಲ ಇಟ್ಟರs
ಪಾದ ಬಿಡ್ತೀನಿಲ್ಲೀs
ಇಷ್ಟು ಮಾತ ಕೇಳಿ ಪಾಂಡುರಂಗs
ಮುಗಳ ನಗೆ ನಕ್ಕಾನಲ್ಲೀs
ಹೆಂತಾ ಮಾಳಿಂಗರಾಯ ಸತ್ಯವಾನ ಸಿದ್ಧs
ಹೆಚ್ಚಿನಾವ ಮರತ್ಯದಲ್ಲೀs
ಹೌದು ಹೆಚ್ಚಿನಾವ ಮರತ್ಯದಲ್ಲೀs
ರೂಪ ತೋರಿ ಪಾಂಡುರಂಗ ತಾನುs
ಹಸ್ತಿಟ್ಟ ತೆಲಿಮ್ಯಾಲೀs ||ರೂಪ . . . . ||

ಹಸ್ತಿಟ್ಟ ಪಾಂಡುರಂಗ ಮಾಳಪ್ಗ ಹೇಳ್ತಾನs
ಕೇಳರಿ ಆವಾಗಲ್ಲೀs
ಅವನು ಕೇಳರಿ ಆವಾಗಲ್ಲೀs
ಸೂರ್ಯ ಚಂದರಾ ಇರುತಾನಕ ಅವರಾs
ಹಾಲ ಹಳದಲ್ಲೀs
ನೆಲಗಂಗಿ ಹರಿಯುತನಕ ಮಾಳಪ್ಪಾs
ಇದೆ ಜಾಗದಲ್ಲೀs
ಕಲಿಯುಗದಲ್ಲಿ ನಂದು ನಿಂದು ಭೆಟ್ಟಿ
ದೀಪಾವಳಿ ಹಬ್ಬದಲ್ಲೀs ||ಕಲಿಯುಗದಲ್ಲಿ . . . . ||

ಕಾಲಾನುಕಾಲಾ ವಂಶಪರಂಪರಾs
ಭೇಟ್ಟಿಯಾಗುದಿಲ್ಲೀs
ತಮ್ಮಾ ಭೆಟ್ಟಿಯಾಗದಿಲ್ಲೀs
ಇಷ್ಟು ಮಾತು ವರ ಕೊಟ್ಟು ಪಾಂಡುರಂಗs
ಕುಸಿಯಾದ ಮನದಲ್ಲೀs ||ಇಷ್ಟು . . . . ||

ಪಾಂಡುರಂಗ ಕರ್ಕೊಂಡು ಹೋಗ್ಯಾನs
ಬಬ್ಬುಲಿ ವನದಲ್ಲೀs
ಆಗ ಬಬ್ಬುಲಿ ವನದಲ್ಲೀs
ಕಂಬಳಿ ಗದ್ದಗಿ ಮೇಲೆ ಪಾಂಡುರಂಗs
ಮೂರುತ್ಯಾದನದಲ್ಲೀs ||ಕಂಬಳಿ . . . . ||

ಕತಿಯ ಉಳಿದಿತೊ ದೇವರ ಮಾತೋs
ಹೇಳುವೆ ಜನರಲ್ಲೀs
ಆಹಾ ಹೇಳುವೆ ಜನದಲ್ಲೀs
ಸಿದ್ಧ ಮಾಳಪ್ಪನ ಚರಣಾ ಕಮಲದಲ್ಲೀs
ಅಡಿವೆಪ್ಪ ಇರತಾನಲ್ಲೀs ||ಸಿದ್ಧ . . . . ||

* * *