ಕಾಂತ ಕೇಳ್ರಿ ಕುಳಿತಂತ ಪಂಡಿತರಾs
ಪಾಂಡುರಂಗನ ಇದ್ದ ಕತಿಸಾರಾs
ಮಾಳಪ್ನ ಹಂತೇಲಿ ಬಂದವರಾs
ಬಬ್ಬುಲಿ ವನದಲ್ಲಿ ಪಾಂಡುರಂಗ ತಾನುs
ಮೂರ್ತಿ ಆದವರಾs

ಆಷಾಡ ಏಕಾದಸಿ ದಿವ್ಸಕ್ಕಂದರಾs
ಬೆಳತನಕಾ ದೇವರ ಕತಿಯ ಮಾಡ್ಯಾರಾs
ಸೂರ್ಯ ಉದಯದಲ್ಲಿ ಎದ್ದಾರಾs
ಜಾವ ಜಳಕ ಮಾಡಿ ನೇಮ ನಿಷ್ಠೆಗಳs
ತಾವೇ ಮುಗಸ್ಯಾರಾs

ದ್ವಾದಸಿಯ ದಿನಗಳ ಕಂಡಾರಾs
ಸಿದ್ಧ ಮಾಳಿಂಗರ್ಯ ಮಕ್ಕಳ್ಗಿ ಕರಸ್ಯಾರಾs
ಸ್ವಲ್ವ ಸ್ವಲ್ವ ಹಿಟ್ಟಕ್ಕಿ ತರಸ್ಯಾರಾs
ಒಬ್ಬ ಪಾಂಡುರಂಗನ ಪುರತೈಕ ಆಡಗೀs
ತಾವೇ ಮಾಡ್ಯಾರಾs

ಪಾಂಡುರಂಗ ತಾನು ಮಾಡ್ಯಾನ ವಿಚಾರಾs
ಭಕ್ತಿ ನೋಡ್ಬೇಕೊ ಅಂದಾನೊ ದೇವರಾs
ಮಾಳಪ್ಗ ಹೇಳ್ಯಾರಾs
ನಿನ್ನ ಪಟ್ಟಣದಲ್ಲಿ ಎಷ್ಟು ಜನಾ ಐತೀs
ಕರ್ಸಬೇಕೊ ಅಂದಾರಾs

ಅಷ್ಟು ಜನಾ ಇಲ್ಲಿ ಬರ್ಬೇಕಂದರಾs
ಅಷ್ಟು ಜನಕ ಊಟಾ ಹಾಕ್ಬೇಕಂದರಾs
ಇಷ್ಟ ಮಾತ ಮಾಳಪ್ಗ ಹೇಳ್ಯಾರಾs

ಮಾಳಿಂಗರಾಯನ ಮಕ್ಕಳು ಹುಚ್ಚಾಗೀs
ಬೆರಳಲ್ಲಿ ಕಚ್ಯಾರಾs
ಒಬ್ಬನ ಅಡಿಗಿ ನಾವು ಮಡಿದೇವಂದಾರಾs
ಊರೀಗಿ ಊಟಾ ಹೆಂಗ ಆದೀತಂದಾರಾs
ನಾಕು ಮಂದಿ ಹುಚ್ಚಾಗಿ ನಿಂತಾರಾs

ಮಾಳಿಂಗರಾಯ ಎದ್ದು ಪಾಂಡುರಂಗಗs
ತಾವೇ ಹೇಳ್ಯಾರಾs
ನಿನ್ನ ಆಶೀರ್ವಾದ ಬೇಕೇಳಂದಾರಾs
ಊರಾನ ಜನರೀಗಿ ಕರಸ್ಸೇವಂದರಾs
ಅಷ್ಟರಲ್ಲಿ ಪರದಾನ್ಗಿ ಕರಸ್ಯಾರಾs
ಅಷ್ಟ ಉತ್ತರಾ ಕೃಷ್ಣ ಪರದಾನಿಗೀs
ಕರಸಿ ಹೇಳಿದರಾs

ಮಾಳಪ್ನ ಮಾತ ಪರದಾನಿ ಕೇಳ್ಯಾರಾs
ಹುಲಜಂತಿ ಮಠಕ್ಕ ಸಾಗಿ ಬಂದಾರಾs
ಊರೆಲ್ಲ ಬಡದಾನೊ ಡಂಗುರಾs
ಡಂಗುರ ಬಡದಾಗ ಊರಾನ ಜನ ಎದ್ದುs
ಸಾಗಿ ಬಂದಾರಾs

ಏಳು ಸಾವಿರ ಜನಾ ಬನಕ ಬಂದಾರಾs
ಬೊಬ್ಬುಲಿ ಬನದಲ್ಲಿ ಮೂರುತ್ಯಾದಾರಾs
ಮಾಳಪ್ಗ ಮಾಡ್ಯಾರ ನಮಸ್ಕಾರಾs
ಯಾಕ ಕರದೀದಿ ತಂದಿ ನೀ ನಮಗs
ಹೇಳ್ಬೇಕ ಅಂದಾರಾs

ಸಿದ್ಧ ಮಾಳಪ್ಪ ಹೇಳ್ತಾನೊ ದೇವರಾs
ಊಟಕ್ಕ ಕುಳ್ಳಬೇಕೊ ನೀವು ಬಾಲಕರಾs
ಅಷ್ಟು ಜನಾ ಊಟಕ್ಕ ಕುಂತಾರಾs
ಪಾಂಡುರಂಗಗ ಮಾಡಿದ ಅಡಗೀs
ಒಯ್ದು ನೀಡತಾರಾs

ಸ್ವಲ್ವ ಎಡಿದು ಕೇಳ್ರಿ ಮಜಕೂರಾs
ಏಳು ಸಾವಿರ ದಂಡಿಂದು ಊಟ ತಯ್ಯಾರಾs
ಆಗಿಂದಾಗ ಆದೀತ ತಯ್ಯಾರಾs
ಒಬ್ಬಾನ ಆಡಿಗ್ಯಾಗ ಏಳು ಸಾವಿರ ಜನಾs
ಊಟಾ ಮಾಡ್ಯಾರಾs

ಮಾಳಪ್ಪ ತನ್ನ ಮಹಿಮಾ ತೋರ್ಯಾರಾs
ಏಳು ಸಾವಿರ ಜನ್ಕ ಊಟಾ ಬಡಿಸ್ಯಾರಾs
ಜನಾ ಎಲ್ಲಾ ಊಟಾ ಮಾಡ್ಯಾರಾs
ಉಂಡ ಸಂತೃಪ್ತರಾಗಿ ಜನರುs
ಸೀತಾಳ ಮುಗಸ್ಯಾರಾs

ಹೆಂಗ ಇತ್ತ ಅಡಗಿ ಹಂಗ್ಯಾಕಂದರಾs
ನಾಕ ಮಂದಿ ಮಕ್ಕಳು ಹುಚ್ಚಾಗಿ ನೋಡ್ಯಾರಾs
ಮಾಳಪ್ಪ ಮಕ್ಕಳ್ಗಿ ಕರದಾರಾs
ಉಳಿದ ಎಡಿ ಇದು ಎಂಜಲಾಯ್ತಂತs
ತಾವೇ ತಿಳಿಸ್ಯಾರಾs

ಅಡಿಗಿ ಒಯ್ದ ನೀರಿನಲ್ಲಿ ಅಂದಾರಾs
ನೀರಿನಲ್ಲಿ ನೀವು ಬಿಡಬೇಕಂದರಾs
ಮೀನ ಮಸಳೀಗಿ ಹಾಕಬೇಕೆಂದರಾs
ತಂದಿ ಹೇಳಿದಂಗ ಉಳಿದಿರೊ ಆಡಗೀs
ತಾವೇ ಹೊಂಡಾರಾs

ನೀರ ಮಡವಿನ್ಯಾಗ ತಾವೇ ಹೋಗ್ಯಾರಾs
ಉಳಿದಿದ್ದ ಆದಗಿ ಒಯ್ದು ಚೆಲ್ಯಾರಾs
ಮೀನ ಮಸಳಿಗಿ ಆನಂದ ಮಾಡ್ಯಾರಾs
ಮತ್ತೊಮ್ಮೆ ಸಾಮಾನು ತರಸೀs
ಪಂಚಾಮೃತ ಆಡಗಿಯ ಮಾಡ್ಯಾರಾs

ಪಾಂಡುರಂಗ ತಾನು ಅಂತಾನು ದೇವರಾs
ನಾಕ ಮಂದಿ ಧರಮರಗಿ ಕರದಾರಾs
ನನ್ನ ಸಂಗಾಟ ಕೂಡಬೇಕಂದರಾs
ನಾಕ ಮಂದಿ ಧರಮರ ಸಿದ್ಧ ಮಾಳಪ್ಗs

ಪಂಕ್ತಿಗಿ ಕುಂಡ್ರಸ್ಯಾರಾs
ಪಂಕ್ತಿಗಿ ಕರಕೊಂಡ ಊಟ ಮಾಡ್ಯಾರಾs
ಪಾಂಡುರಂಗ ಅಲ್ಲಿ ಸೀತಾಳ ಮುಗಸ್ಯಾರಾs

ಧನ್ಯ ಧನ್ಯ ಹೆಚ್ಚಿನ ಅವ ದೇವರಾs
ಸಿದ್ಧರಲ್ಲಿ ಸಿದ್ಧಾ ಹೆಚ್ಚಿನ ಸಿದ್ಧಾ ನೀನುs
ಇದ್ದೆಪ್ಪಾ ಮಾಳಪ್ಪ ದೇವರಾs
ಇದೇ ಜಾಗದಲ್ಲಿ ಕೇಳಪ್ಪ ಮಜಕೂರಾs
ಸೂರ್ಯಾ ಚಂದ್ರ ಇರೂತನಕವರಾs
ದಾಸೋಗಿ ನಡದಿತ ಅಂದಾರಾs
ಇಷ್ಟು ಮಾತು ವರ ಕೊಟ್ಟು ಪಾಂಡುರಂಗs
ಇಲ್ಲೆ ನೆಲದಾರಾs

ನೆಲದು ಮಾತ ಆಡ್ಯಾರಾs
ಮಾಳಪ್ಪ ನಿನ್ನ ಕೆಲ್ಸ ಏನು ಅಂದಾರಾs
ಮಾಳಪ್ಪ ದೇವರ್ಗಿ ಹೇಳತಾರಾs
ದಿನಂಪ್ರತಿ ಕುರಿ ಹಿಂದ ಕಾಯ್ತೋನು ದೇವರಾs
ಕೇಳಿ ಅಂದಾರಾs

ಹಗಲ ಹನ್ನೆರಡು ತಾಸ ಕುರಿಗಳಂದಾರಾs
ಕಾಯ್ದು ನಾನು ಹೊಳ್ಳಿ ಬರ್ತೇನಂದರಾs
ಬೆಳತನಕ ಕೇಳಪ್ಪಾ ಮಜಕೂರಾs
ಸಾವಿರ ಏಳ್ನೂರು ಒಂದ ಲಿಂಗದ ಭಕ್ತಿ
ಮಾಡ್ತೇನಿ ಅಂದಾರಾs
ಎಷ್ಟು ಕಾಲ ಹಿಂಗ ಗತಿಸ್ಯಾವಂದಾರಾs
ನಿತ್ಯ ಮಾಡುತ ನಡದೇನಂದಾರಾs
ಪಾಂಡುರಂಗ ಹುಚ್ಚಾಗಿ ನಿಂತಾರಾs

ಸಿದ್ಧ ಮಾಳಪ್ಪಗ ಪಾಂಡುರಂಗs
ಮತ್ತ ಕೇಳ್ಯಾರಾs
ಒಂದ ಲಿಂಗ ನನ್ಗ ಕೊಡಬೇಕಂದಾರಾs
ನಾನು ಲಿಂಗನ ಸೇವಾ ಮಾಡ್ತೀನದಾರಾs
ಮಾಳಪ್ಪ ದೇವರ್ಗಿ ಅಂತಾರಾs
ನೀನೇ ಲಿಂಗಾ ನಾನೇ ಶಿಷ್ಯಾs
ಇದ್ದೀನಿ ಅಂದಾರಾs

14_83_ABHMK-KUH

ಲಿಂಗ ಇಲ್ಲದೆ ಹುರುವೆ ಕೂಡಲೆಪ್ಪ ಅಂದಾರಾs
ಆಗ ಪಾಂಡುರಂಗ ಮಾತ ಆಡ್ಯಾರಾs
ಲಿಂಗ ನೀನು ಕೊಡಬೇಕಂದಾರಾs
ಲಿಂಗ ಕೊಡದಿದ್ರ ನಾನು ಹೋಗೋದಿಲ್ಲs
ಕೇಳಪ್ಪ ಅಂದಾರಾs

ಸತ್ವ ಪರೀಕ್ಷಾ ಮಾಡುತ ನಿಂತಾರಾs
ಮಾಳಿಂಗರಾಯ ಮಾಡಿ ವಿಚಾರಾs
ಗುರುವಿನ ಧ್ಯಾನ ಮಾಡ್ಯಾರಾs
ಗುರುವಿನ ಧ್ಯಾನ ಮಾಡಿ ಲಿಂಗಬೀರಪ್ಪಗs
ತಾವೇ ಕರದಾರಾs

ಬೀರದೇವರು ಸಾಗಿ ಬಂದಾರಾs
ಮಾಳಿಂಗರಾಯಗ ತಿಳಿಸಿ ಹೇಳ್ಯಾರಾs
ಪಾಂಡುರಂಗಗ ತೋರ್ಸಬೇಕಂದಾರಾs
ಹೊನ್ನ ಹಗರಣಿ ದಡಿ ಮ್ಯಾಗ ಮುರುಗುಂಡಿs
ಗ್ರಾಮ ಅಂದಾರಾs
ಮುಗುಂಡಿಯಲ್ಲಿ ಇರ್ತೇನಂದಾರಾs
ಪಾಂಡುರಂಗಗ ಕಳುಹಬೇಕಂದಾರಾs

ಮಾಳಪ್ಪ ಹೊಳ್ಳಿ ಬಂದರಾs
ಗುರುವ ಆಡಿದಂಗ ಪಾಂಡುರಂಗಗ ಹೇಳೀs
ಕರಕೊಂಡ ನಡದಾರಾs
ಏಳಂಪುರ ಮ್ಯಾಲಿಂದ ಹಾಯ್ದಾರಾs
ಸೊನ್ಯಾಳ ಗುಡ್ಡದ ಮ್ಯಾಲೆ ನಿಂತಾರಾs
ಅಷ್ಟರಲ್ಲಿ ತೋರಿದ ಅವತಾರಾs

ಉಗ್ರ ಮಿಂಚ ಆಗಿ ಬೀರಣ್ಣ ದೇವರಾs
ಕೋಲ ಮಿಂಚ ಹೊಡವರಾs
ಕೈ ಮಾಡಿ ಮಾಳಪ್ಪs
ದೇವ್ರ ತೋರ್ಸ್ಯಾರಾs

ಪಾಂಡುರಂಗ ಓಡಿ ಓಡಿ ಹ್ಯಾದಾರಾs
ಮುಟಗೀಲಿ ಲಿಂಗಾ ಹಿಡದಾರಾs
ಮೂರು ಲೋಕ ಬ್ರಹ್ಮಾಂಡ ಅಳಗ್ಯಾಡೆದಾಗs
ಕೇಳರಿ ಮಜಕೂರಾs

ಲಿಂಗ ಬರಲಿಲ್ಲಾ ಮ್ಯಾಲಕ ಪೂರಾs
ಲಿಂಗಕ ಸ್ಥಾಪನೆ ಅಲ್ಲೇ ಮಾಡ್ಯಾರಾs
ಮುರುಸಿದ್ಧಂತ ಹೆಸರಿಟ್ಟ ಕರಾದಾರಾs
ಹನ್ನೆರಡ ವರ್ಷ ಬೀರಲಿಂಗನ ಸೇವಾs
ಪಾಂಡುರಂಗ ಮಾಡ್ಯಾರಾs

ಮಾಳಪ್ಪನಿಂದ ಲಿಂಗ ಪಡದಾರಾs
ಅದೇ ಲಿಂಗ ತೆಲಿಮ್ಯಾಲಿ ಹೊತ್ತಾರಾs
ಸುಳ್ಳನಂದ್ರ ತಿಳಕೋರಿ ಮಜಕೂರಾs
ತಲಿಮ್ಯಾಲ ಲಿಂಗ ಹೊತ್ತ ಪಾಂಡುರಂಗs
ಕಂಡಾರ ಪಂಢರಪುರಾs

ಕಡೋಳ್ಗಿರಿಯಾಗ ಕಾಲ ಗಳದಾರಾs
ಅನೇಕ ಪವಾಡ ಅಲ್ಲೇ ಮಾಡ್ಯಾರಾs
ಮಾಳಪ್ಗ ತಾವೇ ಕರಿಸ್ಯಾರಾs
ಪಂಚಗಂಗಿಗೆ ಹೋಗಿ ಮಾಳಿಂಗರಾಯಾs
ಹೊಳ್ಳಿ ಬಂದಾರಾs
ಹೊಳ್ಳಿ ಬಂದು ತಾವು ಮೆಟ್ಟ ಮಾಡ್ಯಾರಾs
ಹುಲಜಂತಿ ಗ್ರಾಮಕ ಸ್ಥಾಯಿಕ ಉಳದಾರಾs
ಪಾಂಡುರಂಗ ಕಡೋಲಿ ಬಿಟ್ಟಾರಾs
ಪಂಢರಪುರದಲ್ಲಿ ಇಟ್ಟಗಿ ಕಲ್ಲಿನ ಮ್ಯಾಲs
ವಿಠಲ ಅನಿಸ್ಯಾರಾs

ಹೆಂತ ಮಜಕೂರಾ ಮಾಳಪ್ಪಂದು ಕತಿ ಸಾರಾs
ಅಡಿವೆಪ್ಪ ಮಾರಾಯ್ರು ತಿಳಿಸಿ ಹೇಳ್ಯಾರಾs
ಹಾಲಮತಕ ಜಾಗದಾಗ ಬೆಳೆಸ್ಯಾರಾs
ಸಿದ್ಧ ಮಾಳಪ್ಪನ ಚರಣ ಕಮಲದಲ್ಲೀs
ಕಾಲ ಕಳದಾರಾs

* * *

ಹವಳ ಮುತ್ತಿನ್ಯಾಂಗ ಏಳಮಂದಿ ಗೆಳಿಯಾರುs
ಮಾಳಪ್ನ ಹಂತೇಲಿs ||ಹವಳ . . . . ||

ಸಿದ್ಧ ಮಾಳಿಂಗರಾಯ್ನ ಸಂಗಾಟಾ ಇರತಿದ್ರೋs
ಸಿರಡೋಣ ಮಠದಲೀs  ||ಸಿದ್ಧ . . . . ||

ನಿತ್ಯ ಕಾಲದಲ್ಲಿ ಗುರುವಿನ ಭಕ್ತೀs
ಮಾಳಪ್ಪ ಮಾಡ್ತಿದಲ್ಲೀs
ತನ್ನ ಮೈಯಾಗಿಂದು ಚರ್ಮ ತಗದ ತಾನುs
ಚಮ್ಮಂಗಿ ಮಾಡಿದಲ್ಲೀs ||ತನ್ನ . . . . ||

ಹೊಟ್ಯಾನ ಕರಳಾ ತಗದು ಮಾಳಿಂಗರಾಯs
ಸ್ವಚ್ಛ ತೊಳದಾನದಲ್ಲೀs
ಆಗ ಸ್ವಚ್ಚ ತೊಳದಾನಲ್ಲೀs
ಹೊಟ್ಯಾನ ಕರಳ ಹೊರಗ ತಗದ ಒಳಗs
ತಾನು ಹಾಕ್ತಿದ್ದಲ್ಲೀs  ||ಹೊಟ್ಯಾನ . . . . ||

ಟಕಳಗಿ ಹೆಗ್ಗರಾಯ ಇಂಡಿಯ ನಿಂಗರಾಯs
ಕುಬ್ಸಂಗಿ ಕಾಮರಾಯ ಅಲ್ಲೀs
ತದ್ದಡಗಿ ಎಳಿಮುತ್ಯಾ ಹುಂಜಗೀಯ ಈರಮುತ್ಯಾs
ಕೇಳರಿ ಇದ್ದಾರಲ್ಲೀs
ತ್ವಾರಗಿ ಎಂಬುವ ಗ್ರಾಮದ ಚೌರs
ಮುತ್ಯಾ ಇದ್ದಾನಲ್ಲೀs
ಮಂಗ್ಳಾಡ ದೇವ್ಗಿರಿ ಇದ್ದಾನಲ್ಲೀs
ಏಳ ಮಂದಿ ಗೆಳೆಯರು ಸಿದ್ಧಮಾಳಪ್ಪನs
ಭಕ್ತಿ ನೋಡ್ಯಾರಲ್ಲೀs ||ಏಳ . . . . ||

ಧನ್ಯ ಧನ್ಯ ದೇವ್ರಂತಾ ಮಾಳಿಂಗರಾಯs
ಮರತ್ಯ ಲೋಕದಲ್ಲೀs
ಆಗಾಗ ಲೀಲೆ ಅವ್ನು ಮಾಡುತ ನಡದಾನs
ಹೆಂತಾ ಸೋಜಿಕಿಲ್ಲೀs ||ಆಗಾಗ . . . . ||

ಅಷ್ಟರಲ್ಲಿ ಬೀರಲಿಂಗ ಅಂತಾನೋs
ಕೇಳರಿ ಗೆಳೆಯಾರ್ಗಲ್ಲೀs
ಆಗ ಕೇಳಿರಿ ಗೆಳೆಯಾರ್ಗಲ್ಲೀs
ಅವನಂಗ ನೀವು ದುಡಿಯೂತ ನಡಿರೋs
ಗುರುವಿನ ಸಾನಿಧ್ಯದಲ್ಲೀs ||ಅವನಂಗ . . . . ||

ಹರ ಮನಿದರ ಗುರು ಕಾಯಾವ ಬ್ಯಾರೆಂತs
ತಿಳಿಸ್ಯಾನ ಅವರಿಗಲ್ಲೀs
ಗುರುವಿನ ಹೊರತು ಸದ್ಗತಿಯಾರಿಗಿಲ್ಲs
ಕೇಳೋ ಭವದಲ್ಲೀs ||ಗುರುವಿನ  . . . . ||

ನಿತ್ಯ ಕಾಲದಲ್ಲಿ ಅನೇಕ ರೂಪದ
ಚರ್ಚೆ ಮಾಡ್ಯಾರಲ್ಲೀs
ಅವರು ಕಾಲಗಳದಲ್ಲೀs
ಕೆಟ್ಟ ದಿನಮಾನ ಬಂದಾವ ಅಂತಾs
ಮಾಳಪ್ಪ ತಿಳದಾನದಲ್ಲೀs ||ಕೆಟ್ಟ  . . . . ||

ಲಾಗ ಬೇಗದಿಂದ ಗುರುವಿನ ಕರಕೊಂಡುs
ಸಾಗಿ ನಡದಾನದಲ್ಲೀs
ಪಡುವಲ ನಾಡಲ್ಲಿ ಗೌರಿಯ ಮಠಕ್ಕs
ಮೆಟ್ಟ ಮಾಡ್ಯನಲ್ಲೀs
ಗೌರಿ ಮಠ ಎಂಬುದು ಸದ್ಯ ಕಾಲದಲ್ಲೀs
ಹುನ್ನೂರಿರತದಲ್ಲೀs
ಹುನ್ನೂರು ಗ್ರಾಮದಲ್ಲಿ ಲಿಂಗಬೀರ ಕಂತೀs
ಕಳದಾನದಲ್ಲೀs ||ಹುನ್ನೂರು . . . . ||

ಆಗ ಮಾಳಿಂಗರಾಯಾ ಗುರುವಿನ ಶೋಕಾs
ಮಾಡುತ ನಡದಾನಲ್ಲೀs
ಬೊಬ್ಬಲಿ ಬನದಾಗ ಕಂತೀ ಕಳಿಬೇಕಂತs
ವಿಚಾರ ಮಾಡ್ಯಾನಲ್ಲೀs ||ಬೊಬ್ಬಲಿ  . . . . ||

ಅರುವುಳ್ಳ ಮಾಳಣ್ಣ
ಅರುವ ಹಿಡದ ನಡದಾನೋs
ಮರತ್ಯ ಮಂಡಲದಲ್ಲೀs

ಅವನು ಮರತ್ಯ ಮಂಡಲದಲ್ಲೀs
ಶ್ರಾವಣ ಅಮಾಸಿ ಆಯ್ತವಾರ ದಿನಾs
ವಿಚಾರ ಮಾಡ್ಯಾನಲ್ಲೀs ||ಶ್ರಾವಣ  . . . . ||

ಬಂದು ಬಳಗಕ ಹೇಳಿ ಕಳಸ್ಯಾನೋs
ಕೇಳರಿ ಆವಾಗs
ಅನೇಕ ದೇಶದ ಅನೇಕ ದೇವರುs
ಬಂದರೊ ಜಗದಲ್ಲೀs
ಆಗ ಬಂದಾರೊ ಜಗದಲ್ಲೀs
ಹವುಳ ಮುತಿನ ಬನಶೆಟ್ಟಿ ಸಾವುಕಾರ್ಗs
ಕರ್ದು ಹೇಳ್ಯಾನಲ್ಲೀs ||ಹವುಳ  . . . . ||

ಬಾರಪ್ಪಾ ಸಾಹುಕಾರ ಸದ್ಯ ಕಾಲದಲ್ಲೀs
ಹೋಮಾ ಹೂಡುವೆ ಇಲ್ಲೀs
ಹೋಮದ ಸಾಹಿತ್ಯಾ ತರಬೇಕಂತs
ತಿಳಿಸಿ ಹೇಳ್ಯಾನಲ್ಲೀs
ಹವುಳ ಮುತ್ತಿನ ಬನಶೆಟ್ಟಿ
ಮೈಲೀರ್ಗಿ ಮಲಶೆಟ್ಟಿ
ಒಳ್ಳೇದಂದಾದರಲ್ಲೀs
ಅವರು ಒಳ್ಳೇದಂದಾದರಲ್ಲೀs
ಲಾಗ ಬೇಗದಿಂದ ಕೊಂಕಣ ಕೇರ್ಯಾಗs
ಹೋಗಿ ತಂದಾರಲ್ಲೀs ||ಲಾಗ . . . . ||

ಸಿದ್ಧ ಮಾಳಿಂಗರಾಯ ಏಳ ಕೀಲಿನs
ಬಣವಿ ಒಟ್ಯಾನಲ್ಲೀs
ಬೆಂಕಿ ಇಲ್ಲದೆ ಬಣವೀಗಿ ಬೆಂಕೀ
ತಾನೂ ಹಚ್ಚಾನಲ್ಲೀ ||ಬೆಂಕಿ . . . . ||

ನಾಡಾಗಿನ ಜನಾ ನೋಡಿ ಅವ್ರುs
ಧನ್ಯ ಅಂದಾರಲ್ಲೀs
ಆಗ ಧನ್ಯ ಅಂದಾರಲ್ಲೀs
ಆಷ್ಟರೊಳಗ ಅಣ್ಣ ಜಕ್ಕಪ್ಪರಾಯs
ಆಗ ಬಂದಾನಲ್ಲೀs

ಅಣ್ಣನ ಮಡದಿ ಬಾಕಾಬಾಯಿs
ತಾನು ಬಂದಾಳಲ್ಲೀs
ನಾಕ ಮಂದಿ ಧರಮರುs
ಏಳ ಮಂದಿ ಗೆಳಿಯರುs
ಜನಾ ಕೂಡ್ಯಾರಲ್ಲೀs
ಎಳ್ನೂರ ಕಾಲಾಳ ಹನ್ನೆರ್ಡ ಸಾವಿರs
ಶಿಷ್ಯರ ಕೂಡ್ಯಾರಲ್ಲೀs
ಆಗ ಶಿಷ್ಯರು ಕೂಡ್ಯಾರಲ್ಲೀs
ಮದ್ಯರಾತ್ರಿಯಲ್ಲಿ ಸಮಾಧಿ ತಗಿತೇನಂತs
ತಾನು ಹೇಳ್ಯಾನಲ್ಲೀs ||ಮಧ್ಯರಾತ್ರಿಯಲ್ಲಿ . . . . ||

ಎಷ್ಟೊ ಜನ ತಾವು
ದುಃಖ ಸಾಗರದಲ್ಲೀs
ಮುಳಗ್ಯಾರೊ ತಾವಲ್ಲೀs
ಶೋಕ ಮಾಡುತ ಜನಾ
ಬಂದ ಆಳತಾರೋs
ಬಬ್ಬುಲಿ ಬನದಲ್ಲೀs
ಹಿಂದ ಆರತಾಸ ಮುಂದ ಆರತಾಸs
ರಾತ್ರಿಯಾದಿತಲ್ಲೀs
ರಾತ್ರಿ ಬರತಿ ಆದಿತಲ್ಲೀs
ಸಿದ್ಧ ಮಾಲಿಂಗರಾಯ ಜೀವಂತ ಸಮಾಧಿ
ತಾನು ಹೊಂದ್ಯನಲ್ಲೀs ||ಸಿದ್ಧ . . . . ||

ಹಾಲಮತಕ ಮೇಲ ಗದ್ದಗಿ ಹುಲಜಂತೀs
ಅಡಿವೆಪ್ಪ ಹೇಳ್ಯಾನಿಲ್ಲೀs
ಸಿದ್ಧ ಮಾಳಿಂಗರಾಯ್ನ ಚರಣ ಕಮಲದಲ್ಲೀs
ಕಾಲಗಳದಾನಲ್ಲೀs ||ಸಿದ್ಧ . . . . ||

ಹುಲಜಂತಿ ಊರ ಮತಿಕೊಟ್ಟ ಮಾಳಣ್ಣs
ಜಾಹೀರ ಜಗದಲ್ಲೀs
ಆಹಾ ಜಾಹೀರ ಜಗದಲ್ಲೀs
ಹಾಡಿನ ಮೇಳದವರು ವರವ ಬೇಡತೇವುs
ಆತನ ಪಾದದಲ್ಲೀs ||ಹಾಡಿನ . . . . ||

* * *