ಕೇಳಪ್ಪಾ ಕೇಳೋs
ಹೆಂಗಾಯ್ತೊ ಕಂಬಳೀs
ಶಾಂತಿ ಸಾಗರ ಕಂಬಳೀs
ಶಾಂತ ಮನಸ್ಸಿಲಿಂದs
ಬದುಕುತ ನಡದವಗs
ವರವ ಆದೀತ ಕಂಬಳೀs

ಮೂಲ ಮಂತ್ರಕ ಮೇಲಾದ ಕಂಬಳೀs
ಕಾಲಕ ಸರಿಯಾಗಿ ಬಂದದ ಕಂಬಳೀs
ಕೈಲಾಸದಾಗ ಕಂಬಳೀs
ಮಾದೇವನ ಭಕ್ತಿಗಿ ಮೆಚ್ಚಿ ಗದ್ದಿಗೀs
ಮೊದಲಾಗಿತೊ ಕಂಬಳೀs

ಸ್ಥಳಕ ಸುದ್ದಾಗಿ ಇರುವ ಕಂಬಳೀs
ಜಕ್ಕಪ್ಪ ಮಾಳಪ್ಪ ಹೊರುವ ಕಂಬಳೀs
ಯಾವ ಬಟ್ಟಾ ಇಲ್ಲದ ಕಂಬಳೀs
ಹಾವಾಗಿ ಹರಿತ್ತಿತ್ತೋs
ಬೆಂಕ್ಯಾಗಿ ಉರಿತಿತ್ತೋs
ಚೇಳಾಗಿ ಚಿಮ್ಮುತಿತ್ತೋ ಕಂಬಳೀs

ಕೃತಾಯುಗದಾಗ ಜಡಿಯ ಕಂಬಳೀs
ತ್ರೇತಾಯುಗದಾಗ ಹೋಮದ ಕಂಬಳೀs
ಕೇಳಿರೆಪ್ಪಾ ಬೆಂಕಿ ವರಣ ಕಂಬಳೀs
ಜಪ್ಪಿಸಿ ನಡದವ್ಗ ಜತನಾಗಿ ಸಿಕ್ಕೀತೋs
ಹಾಲಮತದ ಕಂಬಳೀs

ಸಿದ್ಧ ಮಾಳಪ್ಪ ಹೊರುವ ಕಂಬಳೀs
ಬೀಜಗುಂತಿ ಮ್ಯಾಲ ಇದ್ದ ಕಂಬಳೀs
ಬೀಸ್ಯಾಡಿ ಮಳೀಯ ತಂದ ಕಂಬಳೀs
ಹಿಂಡ ಸಿದ್ಧರ ಬಂದಿ ಬಿಡಿಸಿದ
ಪುಂಡ ಮಾಳಪ್ಪನ ಕಂಬಳೀs
ಪುಂಡ ಮಾಳಪ್ಪನ ಹೊರುವ ಕಂಬಳೀs

ಮಾನಗೇಡಿ ಕೈಯಾಗ ದೊರಿಲಾರ್ದ ಕಂಬಳೀs
ಹುಲಜಂತಿ ಈಶ ಹೊರುವ ಕಂಬಳೀs
ಹುಲಜಂತಿ ಮಠದಾಗಾಡಿವೆಪ್ಪ ಮಾರಾಯ್ಗ
ವರಾ ಕೊಟ್ಟ ಕಂಬಳೀs

* * *